ಯುವ ರಾಜ್ ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಅವರ ನಡುವಿನ ವೈವಾಹಿಕ ಸಮರದಲ್ಲಿ ಕೇಳಿ ಬರುತ್ತಿರುವುದು ನಟಿ ಸಪ್ತಮಿ ಗೌಡ ಹೆಸರು. ಅದು ಶ್ರೀದೇವಿ ಭೈರಪ್ಪ ಅವರ ಆರೋಪ. ಇತ್ತ ಯುವ ಪರ ವಕೀಲರು ಕೂಡಾ ಶ್ರೀದೇವಿ ಭೈರಪ್ಪ ಒಬ್ಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧದಲ್ಲಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇಷ್ಟಕ್ಕೂ ಆಗಿರುವುದೇನೆಂದರೆ.. ಶ್ರೀದೇವಿ ಪ್ರಕಾರ ಆ ನಟಿಯ ಜೊತೆ ಅಗತ್ಯಕ್ಕಿಂತ ಹೆಚ್ಚು ಕ್ಲೋಸ್ ಆಗಿದ್ದಾರೆ ಯುವ. ಆಕೆ ಜೊತೆ ಅಫೇರ್ ಇಟ್ಟುಕೊಂಡಿದ್ದಾರೆ. ನೋಟಿಸ್‌ನಲ್ಲಿ ಕೂಡಾ ಆಕೆಯ ಹೆಸರು ಪ್ರಸ್ತಾಪವಾಗಿದೆ. ಲೀಗಲ್ ನೋಟಿಸ್‌ನಲ್ಲಿ ಸಪ್ತಮಿ ಗೌಡ ಅವರ ಹೆಸರೂ ಇದೆ. ಯುವ ಮತ್ತು ಶ್ರೀದೇವಿ ಅವರ ಡೈವೋರ್ಸ್ ಕೇಸ್ ಇರೋದು ಫ್ಯಾಮಿಲಿ ಕೋರ್ಟಿನಲ್ಲಿ. ಕೌಟುಂಬಿಕ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ದೊರಕಿರುವ ಲೀಗಲ್ ನೋಟಿಸ್ʻನಲ್ಲಿ ಸಪ್ತಮಿ ಗೌಡ ಹೆಸರನ್ನು ಉಲ್ಲೇಖಿಸಲಾಗಿದೆ. ಒಂದಲ್ಲ.. ಐದಾರು ಬಾರಿ ಸಪ್ತಮಿ ಗೌಡ ಅವರ ಹೆಸರು ಕಂಡು ಬಂದಿದೆ.
ಆದರೆ, ಯುವ ಪರ ವಕೀಲರ ಪ್ರಕಾರ ಇದರಲ್ಲಿ ಸತ್ಯಾಂಶ ಇಲ್ಲ. ಯುವ ಚಿತ್ರಕ್ಕೆ ನಾಯಕಿಯಾಗಿದ್ದವರು ಸಪ್ತಮಿ ಗೌಡ. ಯುವ ಜೊತೆ ರೊಮ್ಯಾನ್ಸ್ ಇತ್ತು. ಆ ಸಂದರ್ಭದಲ್ಲಿನ ಫೋಟೋ, ವಿಡಿಯೋಗಳನ್ನೇ ಅವರಿಬ್ಬರ ಮಧ್ಯೆ ಅಫೇರ್ ಇದೆ ಎಂಬಂತೆ ಬಿಂಬಿಸಲಾಗುತ್ತಿದೆಯೇ ಹೊರತು, ಅಂತಹುದ್ದೇನಿಲ್ಲ ಎನ್ನುತ್ತಾರೆ.
ಅಲ್ಲದೆ ಶ್ರೀದೇವಿ ನೋಟಿಸ್‌ನಲ್ಲಿ ಯುವ ಅವರು ಗಂಡಸೇ ಅಲ್ಲ ಎಂದಿದ್ದಾರಂತೆ. ಹೀಗಿರುವಾಗ ಅಕ್ರಮ ಸಂಬಂಧ ಸಾಧ್ಯವೇ ಎನ್ನುವುದು ಯುವ ಪರ ವಕೀಲರ ಸಿರಿಲ್ ಪ್ರಸಾದ್ ಅವರ ಪ್ರಶ್ನೆ.
ಇದೇ ವಿಚಾರಕ್ಕೆ ಯುವ ಪರ ವಕೀಲರು ತಾವು ನೀಡಿರುವ ನೋಟಿಸ್‌ನಲ್ಲಿ ಶ್ರೀದೇವಿ ಅವರ ಮೇಲೆ ಅಕ್ರಮ ಸಂಬಂಧದ ಆರೋಪವನ್ನೂ ಮಾಡಿದ್ದಾರೆ. ರಾಧನ್ನ ಎಂಬ ವ್ಯಕ್ತಿ ಹೆಸರು ಉಲ್ಲೇಖಿಸಿದ್ದಾರೆ. ಆತ ಶ್ರೀದೇವಿಯ ಬಾಯ್ ಫ್ರೆಂಡ್ ಅಂತೆ.
ಯುವ ವಕೀಲರ ಪ್ರಕಾರ ಮದುವೆಗೆ ಮೊದಲಿನಿಂದಲೂ ಆಕೆಗೆ ಒಬ್ಬ ಪ್ರಿಯಕರ ಇದ್ದ. ಮದುವೆ ಆದ ಮೇಲೂ ಕೂಡಾ ಹಲವು ಬಾರಿ ಆತನ ಮನೆಗೆ ಹೋಗಿ ಬರುತ್ತಿದ್ದ ಶ್ರೀದೇವಿ, ರಾತ್ರಿ ಜಗಳ ಮಾಡಿಕೊಂಡು ಹೋಗಿ, ಬೆಳಗ್ಗೆ ಅಳುತ್ತಾ ಕಣ್ಣೀರು ಹಾಕ್ಕೊಂಡು ಮನೆಗೆ ವಾಪಸ್ ಬರುತ್ತಿದ್ದರು. ಇನ್ನು ಸಪ್ತಮಿ ಗೌಡ ತೆಲುಗು ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ಯುವ ಡೈವೋರ್ಸ್ ಪ್ರಕರಣದಿಂದ ಅಂತರ ಕಾಯ್ದುಕೊಂಡಿದ್ದಾರೆ.



