ಯುವ ರಾಜ್ ಕುಮಾರ್. ಡಾ.ರಾಜ್ ಕುಟುಂಬದಿಂದ ಚಿತ್ರರಂಗಕ್ಕೆ ಬರುತ್ತಿರುವ 6ನೇ ಹೀರೋ. ಡಾ.ರಾಜ್, ಶಿವಣ್ಣ, ರಾಘವೇಂದ್ರ, ಪುನೀತ್ ಹಾಗೂ ವಿನಯ್ ನಂತರ ದೊಡ್ಮನೆಯಿಂದ ಬರುತ್ತಿರುವ ಹೀರೋ ನಂ.6. ಈ ಹೀರೋ ಮೆರವಣಿಗೆಯ ದಿಬ್ಬಣ ಶುರುವಾಗುತ್ತಿರೋದು ಮಾರ್ಚ್2ಕ್ಕೆ. ಚಾಮರಾಜನಗರದಿಂದ.
ಯುವ ಚಿತ್ರದ ಸೆನ್ಸೇಷನ್ ಶುರುವಾಗ್ತಾ ಇದೆ. ಮಾರ್ಚ್ 2ರಿಂದ ಆರಂಭವಾಗ್ತಿದೆ. ಮಾರ್ಚ್ 29ಕ್ಕೆ ಎಂಟ್ರಿ ಕೊಡಲಿರೋ ಯುವನ ದರ್ಶನಕ್ಕೆ ವೇದಿಕೆ ರೆಡಿಯಾಗಿದೆ. ಯುವ ಪರ್ವದ ಆರಂಭ ಚಾಮರಾಜನಗರದಲ್ಲಿ. ಮಾರ್ಚ್ 02ರಿಂದ ‘ಯುವ ‘ ಘರ್ಜನೆ ಆರಂಭವಾಗಲಿದೆ. ಚಾಮರಾಜನಗರ ಟೆಂಪಲ್ ಮೈದಾನದಲ್ಲಿ ಹಾಡಿನ ದಿಬ್ಬಣ, ಮೆರವಣಿಗೆ ಎಲ್ಲವೂ ನಡೆಯಲಿದೆ.
ಚಾಮರಾಜನಗರ. ಅಣ್ಣಾವ್ರ ಕಾಡು ಇರುವುದು ಇದೇ ಜಿಲ್ಲೆಯಲ್ಲಿ. ಗಾಜನೂರು ಇರುವುದು ಇದೇ ಜಿಲ್ಲೆಯಲ್ಲಿ. ಅಲ್ಲಿಂದಲೇ ಮೆರವಣಿಗೆ ಹೊರಡಲಿದೆ. ಮಾರ್ಚ್ 2ಕ್ಕೆ ಚಾಮರಾಜನಗರ. ಮಾರ್ಚ್ 16ಕ್ಕೆ ಹೊಸಪೇಟೆ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಇನ್ನೂ 3 ಸ್ಥಳಗಳನ್ನು ಫಿಕ್ಸ್ ಮಾಡಲಾಗಿದ್ದು, ಶೀಘ್ರದಲ್ಲೇ ಆ ಸ್ಥಳಗಳೂ ಹಾಗೂ ಡೇಟ್ಸ್ ಘೋಷಣೆಯಾಗಲಿದೆ.
ಹೊಂಬಾಳೆ ವಿಜಯ್ ಕಿರಗಂದೂರು ನಿರ್ಮಾಣದ ಯವ ಚಿತ್ರವನ್ನು ನಿರ್ದೇಶಿಸಿರುವುದು ಸಂತೋಷ್ ಆನಂದರಾಮ್. ಸಪ್ತಮಿ ಗೌಡ ಹೀರೋಯಿನ್. ಇನ್ನುಳಿದಂತೆ ದೊಡ್ಮನೆ ಹುಡುಗನ ಎಂಟ್ರಿಗೆ ಯಾರೆಲ್ಲ ಜೊತೆಯಾಗಲಿದ್ದಾರೆ ಎನ್ನುವುದನ್ನು ಹಂತ ಹಂತವಾಗಿ ತಿಳಿಸಲು ಮುಂದಾಗಿದೆ ಯುವ ಟೀಂ.
ಒಟ್ಟಿನಲ್ಲಿ ಇಡೀ ಚಿತ್ರರಂಗವೇ ಯುವನನ್ನು ಅದ್ಧೂರಿಯಾಗಿ ಸ್ವಾಗತ ಮಾಡಲು ಸಿದ್ಧವಾಗಿದೆ.



