ದೊಡ್ಮನೆ ಹುಡುಗನ ಮೊದಲ ಸಿನಿಮಾ ಸಂಚಲನ ಸೃಷ್ಟಿಸಿದೆ. ಸೃಷ್ಟಿಸ್ತಾ ಇದೆ. ರಿಲೀಸ್ ಆಗೋದು ಮಾರ್ಚ್ ಅಂತ್ಯಕ್ಕೆ. ಇನ್ನೊಂದೇ ತಿಂಗಳು ಅಷ್ಟೆ. ಇಷ್ಟೂ ಸುದ್ದಿ ಮಾಡ್ಲಿಲ್ಲ ಅಂದ್ರೆ ಹೆಂಗೆ.. ಯುವ. ಯುವರಾಜ್ ಕುಮಾರ್ ನಟಿಸುತ್ತಿರೋ ಮೊದಲ ಸಿನಿಮಾ ಸದ್ದು ಮಾಡೋಕೆ ಶುರು ಮಾಡಿದೆ. ಕನ್ನಡ ಚಿತ್ರರಂಗವೇ ಕುತೂಹಲದಿಂದ ಎದುರು ನೋಡುತ್ತಿರುವ ಯುವ ಸಿನಿಮಾ ಮಾರ್ಚ್ 28ಕ್ಕೆ ರಿಲೀಸ್ ಆಗುತ್ತಿದೆ. ಇದೀಗ ಯುವ ಚಿತ್ರದ ಆಡಿಯೋ ರೈಟ್ಸ್ 3 ಕೋಟಿಗೆ ಸೇಲ್ ಆಗಿರುವ ಸುದ್ದಿ ಹೊರ ಬಿದ್ದಿದೆ. ಕನ್ನಡದ ಪ್ರತಿಷ್ಠಿತ ಆಡಿಯೋ ಸಂಸ್ಥೆಯಲ್ಲಿ ಒಂದಾದ, ಆನಂದ್ ಆಡಿಯೋ ಯುವ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದೆ. ಇದು ಅಧಿಕೃತವೇ ಎಂಬ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದರೂ, ಸುದ್ದಿ ಖಚಿತ.
ದಶಕಗಳಿಂದ ಸ್ಟಾರ್ ಪಟ್ಟವನ್ನ ಅಲಂಕರಿಸಿರುವ ನಾಯಕರ ಸಿನಿಮಾದ ಹಾಡುಗಳೇ 2 ಕೋಟಿ ಗಡಿ ದಾಟುವುದು ಕಷ್ಟವಾಗಿರುವಾಗ ಯುವ ರಾಜಕುಮಾರ್ ಮೊದಲ ಸಿನಿಮಾ ಅಡಿಯೋ ರೈಟ್ಸ್ 3 ಕೋಟಿಗೆ ಸೇಲ್ ಆಗಿ ದಾಖಲೆ ಬರೆದಿದೆ.
ಸಂತೋಷ್ ಆನಂದ್ ರಾಮ್ ಯುವ ಸಿನಿಮಾ ನಿರ್ದೇಶನ ಮಾಡಿದ್ದು, ಹೊಂಬಾಳೆಯವರು ನಿರ್ಮಾಣ ಮಾಡಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದ ಯುವ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದೆ. ಕಾಂತಾರದ ಸಪ್ತಮಿ ಗೌಡ ಚಿತ್ರಕ್ಕೆ ಹೀರೋಯಿನ್.
ಎಷ್ಟು ಹಾಡುಗಳಿವೆ ಅನ್ನೋದು ಗೊತ್ತಿಲ್ಲ. ಯಾರು ಹಾಡಿದ್ಧಾರೆ, ಯಾರು ಬರೆದಿದ್ದಾರೆ ಅನ್ನೋದು ಕೂಡಾ ಹೊರಗೆ ಗೊತ್ತಾಗಿಲ್ಲ. ಅಷ್ಟೇ ಯಾಕೆ, ಯುವ ಮತ್ತು ಸಪ್ತಮಿ ಬಿಟ್ರೆ ಬೇರೆ ಯಾರೆಲ್ಲ ನಟಿಸಿದ್ಧಾರೆ ಅನ್ನೋದು ಕೂಡಾ ಸೀಕ್ರೆಟ್ ಆಗಿಯೇ ಇದೆ. ಕೇವಲ ಹೊಂಬಾಳೆ, ಸಂತೋಷ್ ಆನಂದರಾಮ್, ಯುವ ರಾಜಕುಮಾರ್ ಮೊದಲ ಸಿನಿಮಾ ಅನ್ನೋ ಕಾರಣಕ್ಕೇ ನಡೆದಿರೋ ಭರ್ಜರಿ ವ್ಯಾಪಾರ ಇದು. ದಟ್ಸ್ ಇಟ್.



