ಎಕ್ಕ ಚಿತ್ರದ ಶೂಟಿಂಗ್ ಪ್ಲಾನ್ ಆಗಿದೆ. ಇದು ಯುವರಾಜ್ ಕುಮಾರ್ ಅಭಿನಯದನ 2ನೇ ಸಿನಿಮಾ. ಇಲ್ಲಿವರೆಗೂ ಚಿತ್ರೀಕರಣದ ಮುಂಚಿನ ಸಿದ್ಧತೆ ನಡೆದಿದ್ದು, ಅಧಿಕೃತವಾಗಿ ನವೆಂಬರ್ 25ರಿಂದ ಶೂಟಿಂಗ್ ಶುರುವಾಗುತ್ತಿದೆ. ಸಿನಿಮಾ ತಂಡ ವಿಡಿಯೋ ಒಂದರ ಮೂಲಕ ಸಿನಿಮಾ ಅಪ್ ಡೇಟ್ ಕೊಟ್ಟಿದೆ. ಗುನ್ನಿ ಕಟ್, ಛಬ್ಬಿಸ್ ಕಟ್ ಅನ್ನುವ ಹಿನ್ನೆಲೆಯ ಸಂಗೀತದ ಈ ವಿಡಿಯೋ ಬೇರೆ ತರದ ಫೀಲ್ ಕೊಡುತ್ತಿದೆ. ಯಾವ ಲೋಕೇಷನ್‌ನಿಂದ ಚಿತ್ರೀಕರಣ ಶುರು ಆಗುತ್ತದೆ ಅನ್ನುವ ಮಾಹಿತಿ ಬಂದಿಲ್ಲ.
ಎಕ್ಕ ಚಿತ್ರಕ್ಕೆ ರೋಹಿತ್ ಪದಕಿ ಡೈರೆಕ್ಷನ್ ಮಾಡುತ್ತಿದ್ದಾರೆ. ವಿಕ್ರಮ್ ಹತ್ವಾರ್ ಜೊತೆಗೂಡಿ ಈ ಕಥೆಯನ್ನು ರೋಹಿತ್ ಪದಕಿ ಬರೆದಿದ್ದಾರೆ. ಎಕ್ಕ ಚಿತ್ರದ ನಾಯಕನಿಗೆ ನಾಯಕಿ ಯಾರು ಅನ್ನುವ ಪ್ರಶ್ನೆ ಇದೆ. ಆದರೆ, ಅದಕ್ಕೆ ಉತ್ತರ ಇನ್ನು ಹೊರ ಬಂದಿಲ್ಲ. ಆದರೆ ಹೊಸ ಮುಖ ಎಂದು ಚಿತ್ರತಂಡ ಹೇಳುತ್ತಿದೆ. ಈಗಾಗಲೇ ಅಡಿಷನ್ ಕೆಲಸಗಳು ನಡೆದಿದ್ದು ಆಯ್ಕೆಯೂ ಆಗಿದೆ ಎನ್ನುವ ಮಾಹಿತಿ ಇದೆ.
ಈಗಾಗಲೇ, ದಯವಿಟ್ಟು ಗಮನಿಸಿ, ರತ್ನನ್ ಪ್ರಪಂಚ ಚಿತ್ರಗಳನ್ನು ಮಾಡಿರೋ ರೋಹಿತ್ ಪದಕಿ ಎಕ್ಕ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಎಕ್ಕ ಚಿತ್ರತಂಡದ ಸದಸ್ಯರೊಬ್ಬರು ಹೇಳುವ ಹಾಗೇ, ಈ ಚಿತ್ರದ ಕಥೆ ಡಿಮ್ಯಾಂಡ್ ಮಾಡಿದ ಕಾರಣ ಶಿವಾಜಿನಗರದ ರೆಸಲ್ ಮಾರ್ಕೆಟ್ನಲ್ಲಿ ಎಕ್ಕ ಚಿತ್ರದ ಕಲರ್ಫುಲ್ ಫೋಟೋಶೂಟ್ ಮಾಡಲಾಗಿದೆ. ಯುವ ರಾಜ್‌ಕುಮಾರ್ ಔಟ್ ಅಂಡ್ ಔಟ್ ಮಾಸ್ ಲುಕ್ಲ್ಲಿ ಕಾಣಿಸಿಕೊಂಡಿದ್ದು ರತ್ನ ಎಂಬ ಹೆಸರು ಈ ಎಕ್ಕ ಕಥೆಗೆ ಲಿಂಕ್ ಆಗುತ್ತೆ ಅಂತಾರೆ.
ಸಹಜವಾಗಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ಗಾಗಿ ಸ್ಟುಡಿಯೋ ಅಥವಾ ಅದ್ದೂರಿ ಸೆಟ್ಗಳನ್ನು ಹಾಕಿ ಚಿತ್ರೀಕರಿಸಲಾಗುತ್ತದೆ. ಆದ್ರೆ ಎಕ್ಕ ಚಿತ್ರತಂಡ ರಿಯಲಿಸ್ಟಿಕ್ ಜಾಗದಲ್ಲಿ ತಮ್ಮ ಚಿತ್ರದ ಫಸ್ಟ್ ಲುಕ್ನ ಶೂಟಿಂಗ್ ಮಾಡಿರೋದು ವಿಶೇಷ. ಇನ್ನು ಈ ಎಕ್ಕ ಅನ್ನೋ ಟೈಟಲ್ ಸಿಕ್ಕಿದ್ದು ಅಪ್ಪು ಅವರ ಜಾಕಿ ಸಿನಿಮಾದ ಎಕ್ಕ ರಾಜ ರಾಣಿ ಹಾಡಿನಿಂದ. ಆ ಪದವನ್ನು ಟೈಟಲ್ ಆಗಿ ಇಡಲಾಗಿದೆ. ಏಕೆ, ಏನು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್. ಎಕ್ಕ ಚಿತ್ರ ಇಂದಿನ ಸೊಸೈಟಿಯಲ್ಲಿ ನಡೆಯುತ್ತಿರುವ ಕೆಲ ಮಾಫಿಯಾ ಜೊತೆ ಲವ್ ಸ್ಟೋರಿ ಸಿನಿಮಾ ಅನ್ನೋದು ಡೈರೆಕ್ಟರ್ ರೋಹಿತ್ ಪದಕಿ ಮಾತು. ನವೆಂಬರ್ 28ರಂದು ಚಾಮರಾಜಪೇಟೆಯಲ್ಲಿರೋ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಎಕ್ಕ ಸಿನಿಮಾಗೆ ಮುಹೂರ್ತ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.
ಯುವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ಬೆಳ್ಳಿತೆರೆ ಮೇಲೆ ವಿಜೃಂಭಿಸಿದ ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ಅವರೀಗ ಔಟ್ ಅಂಡ್ ಔಟ್ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ ‘ಎಕ್ಕ’. ಆಯುಧ ಪೂಜೆಯ ಹಬ್ಬದಂದು ಎಕ್ಕ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಿತ್ತು. ಪಿಆರ್‌ಕೆ ಪ್ರೊಡಕ್ಷನ್ಸ್ ಮಾಲೀಕರಾದ ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ ಫಿಲ್ಮ್ಸ್ ಸಂಸ್ಥೆಯವರಾದ ಜಯಣ್ಣ ಮತ್ತು ಭೋಗೇಂದ್ರ ಹಾಗೂ ಕೆಆರ್‌ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಸೇರಿ ಎಕ್ಕ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.



