ಡಾ.ರಾಜ್ ಅವರ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವ ರಾಜ್‌ಕುಮಾರ್, ಪತ್ನಿ ಶ್ರೀದೇವಿ ಭೈರಪ್ಪ ಡೈವೋರ್ಸ್ ಕೇಸ್ ಎಲ್ಲಿಗೆ ಬಂತು ಎಂಬ ಪ್ರಶ್ನೆಗೆ ಉತ್ತರ, ಮೊದಲು ಕೌನ್ಸೆಲಿಂಗ್.. ಆಮೇಲೆ ಹಿಯರಿಂಗ್.. ಎಂದಷ್ಟೇ. ಜೊತೆಗೆ ಶ್ರೀದೇವಿ ಹಾಕಿರುವ ಓಪನ್ ಚಾಲೆಂಜ್. ಶ್ರೀದೇವಿ ತಮ್ಮ ವಿರುದ್ಧದ ಸುಳ್ಳು ಆರೋಪಗಳನ್ನು ಸುಳ್ಳು ಎಂದು ಸಾಬೀತು ಪಡಿಸುವವರಗೆ ಬಿಡುವುದಿಲ್ಲವಂತೆ.
ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವ ರಾಜ್‌ಕುಮಾರ್, ಪತ್ನಿ ಶ್ರೀದೇವಿ ಭೈರಪ್ಪ ಅವರಿಂದ ವಿಚ್ಚೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ಮೆಟ್ಟಿಲೇರಿದ ದಿನದಿಂದ ಈವರೆಗೆ ಪರಸ್ಪರ ಆರೋಪ ಪ್ರತ್ಯಾರೋಪಗಳೂ ಆಗಿವೆ. ಯುವ ಸರಿ ಇಲ್ಲ, ಆತನಿಗೆ ನಟಿ ಸಪ್ತಮಿ ಗೌಡ ಅವರ ಜೊತೆ ಸಂಬಂಧ ಇದೆ ಎಂದು ಶ್ರೀದೇವಿ ವಾದಿಸುತ್ತಿದ್ದಾರೆ. ಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲೂ ಸಪ್ತಮಿ ಗೌಡ ಹೆಸರು ಇದೆ. ಅದನ್ನು ಪ್ರಶ್ನಿಸಿ ಸಪ್ತಮಿ ಗೌಡ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ನಡುವೆ ಶ್ರೀದೇವಿ ಭೈರಪ್ಪ ಅವರ ಕ್ಯಾರೆಕ್ಟರೇ ಸರಿ ಇಲ್ಲ ಎಂದು ಯುವ ಪರ ವಕೀಲರು ದೂರಿದ್ದಾರೆ. ಮತ್ತೊಂದೆಡೆ ಆಡಿಯೋ ಸ್ಫೋಟವಾಗಿದೆ. ಆ ಆಡಿಯೋದಲ್ಲಿ ಸಪ್ತಮಿ ಗೌಡ ಎನ್ನಲಾಗಿರುವ ಯುವತಿ ಯಾರೋ ನಿರ್ಮಾಪಕರಿಗೆ ಕ್ಷಮೆ ಕೇಳುತ್ತಿರುವ ಪರಿ ವೈರಲ್ ಆಗಿದೆ. ಇದರ ನಡುವೆ ಯುವ ರಾಜ್‌ಕುಮಾರ್ ಅವರ ವಿಚ್ಛೇದನದ ಅರ್ಜಿಯ ವಿಚಾರಣೆ ಫ್ಯಾಮಿಲಿ ಕೋರ್ಟ್‌ನಲ್ಲಿ ನಡೆದಿದೆ.
ಯುವ ರಾಜ್‌ಕುಮಾರ್ ಸಲ್ಲಿಸಿರುವ ವಿಚ್ಛೇದನದ ಅರ್ಜಿಗೆ ಜೂನ್ 6 ರಂದು ಶ್ರೀದೇವಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಆಕ್ಷೇಪಣೆ ಸಲ್ಲಿಕೆ ಬಳಿಕ ವಾದ ಮಂಡನೆಗೆ ಶ್ರೀದೇವಿ ಪರ ವಕೀಲೆ ದೀಪ್ತಿ ವಾದ ಮಾಡಲು ಅವಕಾಶ ಕೋರಿದ್ದಾರೆ. ಆದರೆ, ನ್ಯಾಯಾಧೀಶರು ಸಮ್ಮತಿ ಇದಕ್ಕೆ ನೀಡಿಲ್ಲ. ಪ್ರಕರಣವನ್ನ ನ್ಯಾಯಾಲಯ ಮೀಡಿಯೇಷನ್ ಕೌನ್ಸಿಲಿಂಗ್‌ಗೆ ರೆಫರ್ ಮಾಡಿರುವ ಕೋರ್ಟ್, ಮೀಡಿಯೇಷನ್ ಕೌನ್ಸಿಲಿಂಗ್ ಮುಗಿದ ಬಳಿಕ ಇಬ್ಬರ ತೀರ್ಮಾನವನ್ನ ಕೇಳುವುದಾಗಿ ತಿಳಿಸಿದೆ. ಆನಂತರವಷ್ಟೇ ಆಕ್ಷೇಪಣೆಯ ವಾದ ಆಲಿಸುವುದಾಗಿ ಹೇಳಿದೆ.
ಮೀಡಿಯೇಷನ್ ಕೌನ್ಸಿಲಿಂಗ್‌ಗೆ ಆಗಸ್ಟ್ 23 ರಂದು ದಿನಾಂಕ ನಿಗದಿಯಾಗಿದ್ದು, ಕೌನ್ಸಿಲಿಂಗ್ ವರದಿ ಆಧಾರದ ಮೇಲೆ ಮುಂದಿನ ವಿಚಾರಣೆ ನಡೆಯಲಿದೆ. ಇತ್ತ ಶ್ರೀದೇವಿ ಭೈರಪ್ಪ, ಅಮೆರಿಕಕ್ಕೆ ತೆರಳಿದ್ದು, ಮುಂದಿನ ಶಿಕ್ಷಣ ಮಾಡುವುದಾಗಿ ಹೇಳಿದ್ದಾರೆ.
ಕಳೆದ 15 ದಿನದಿಂದ ನಾನು ಕರ್ನಾಟಕದಲ್ಲಿ ನನ್ನ ಕುಟುಂಬದ ಜೊತೆ ಇದ್ದಾಗ, ನನ್ನ ಖಾಸಗಿ ಬದುಕನ್ನು ಗೌರವಿಸಿ, ನನ್ನ ಘನತೆಯನ್ನು ಕಾಪಾಡುವಲ್ಲಿ, ಅತ್ಯಂತ ಸೂಕ್ಷ್ಮ ಮತ್ತು ಜವಾಬ್ದಾರಿಯುತ ನಡೆ ತೋರಿದ ಮಾಧ್ಯಮದ ಪ್ರತಿಯೊಬ್ಬರಿಗೂ ನಾನು ಪ್ರಾಮಾಣಿಕವಾಗಿ ನನ್ನ ಹೃದಯಾಂತರಾಳದಿಂದ ಧನ್ಯವಾದ ಹೇಳಲು ಬಯಸುತ್ತೇನೆ. ಕಳೆದ ದಶಕಗಳಿಂದ ನನ್ನ ಜೊತೆಯಾಗಿದ್ದ ನನ್ನ ಸ್ನೇಹಿತರ ಬಳಗ, ಕೆಲವು ದಿನಗಳ ಹಿಂದಿನ ಸುಳ್ಳಿನ ಸರಮಾಲೆಗೆ ಬಲಿಯಾದದ್ದು ತೀರ ದುರದೃಷ್ಟಕರ ಎಂದಿರುವ ಶ್ರೀದೇವಿ ಭೈರಪ್ಪ ತಮ್ಮೊಂದಿಗೆ ಶಕ್ತಿಯಾಗಿ ನಿಂತ ಕುಟುಂಬ, ಸ್ನೇಹಿತರು, ಚಲನಚಿತ್ರರಂಗದವರು ಹಾಗೂ ತಮ್ಮ ವಿದ್ಯಾರ್ಥಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಹಾರ್ವರ್ಡ್‌ನಲ್ಲಿ ನಾನೊಂದು ಶೈಕ್ಷಣಿಕ ಯೋಜನೆಯನ್ನು ಶುರುಮಾಡಿದ್ದು, ಆ ಕಾಯಕವನ್ನು ಮುಂದುವರಿಸಲು ನಾನು ಅಮೆರಿಕಾಗೆ ಹಿಂತಿರುಗುತ್ತಿದ್ದೇನೆ ಎಂದಿರುವ ಶ್ರೀದೇವಿ ಭೈರಪ್ಪ ನನ್ನ ಮೇಲೆ ಮಾಡಿರುವ ಪ್ರತಿಯೊಂದು ಸುಳ್ಳು ಆರೋಪದಿಂದ ಮುಕ್ತಳಾಗುವವರೆಗೆ ನನ್ನ ದಾರಿಗೆ ಏನೇ ಎದುರಾದರೂ ಹೆದರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲಿಗೆ ಈ ಪ್ರಕರಣ ಇಲ್ಲಿಗೇ ಮುಗಿಯುವುದಿಲ್ಲ. ಈಗ ಸುಳ್ಳು ಹೇಳಿದ್ದು ಯಾರು? ಸಾಬೀತು ಪಡಿಸಬೇಕಿರೋದು ಯಾರು? ಯಾರ ಬಳಿ ಯಾವ್ಯಾವ ಸಾಕ್ಷಿಗಳಿವೆ.. ಈ ಎಲ್ಲದಕ್ಕೂ ಕೋರ್ಟ್ ಉತ್ತರ ಕೊಡಲಿದೆ.



