ಯುವ (Yuva). ಕನ್ನಡಿಗರು ಬಹು ನಿರೀಕ್ಷೆಯಿಂದ ಕಾಯುತ್ತಿರೋ ಚಿತ್ರ. ಸಿನಿಮಾ ಘೋಷಣೆಯಾದ ದಿನವೇ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದ ಹೊಂಬಾಳೆ (Hombale films), ತನ್ನ ಈ ಹಿಂದಿನ ಸಂಪ್ರದಾಯವನ್ನ ಚಾಚೂತಪ್ಪದೆ ಪಾಲಿಸಿ ಸಿನಿಮಾ ರಿಲೀಸ್ ಮುಂದೂಡಿದೆ. ಯುವ ರಾಜಕುಮಾರನನ್ನು ನೋಡುವುದಕ್ಕೆ ಅಭಿಮಾನಿ ದೇವರುಗಳು ಇನ್ನೂ 3 ತಿಂಗಳು ಹೆಚ್ಚುವರಿಯಾಗಿ ಕಾಯಬೇಕು.
ಯುವ ರಾಜ್ಕುಮಾರ್ (Yuva rajkumar) ನಾಯಕನಾಗಿ ಎಂಟ್ರಿ ಕೊಡುತ್ತಿರುವ ಚೊಚ್ಚಲ ಸಿನಿಮಾ ‘ಯುವ’ ರಿಲೀಸ್ ಡೇಟ್ ಮುಂದೂಡಿಕೆ ಆಗಿದ್ದು, 2024, ಮಾರ್ಚ್ 28ಕ್ಕೆ ‘ಯುವ’ ಸಿನಿಮಾ ಬಿಡುಗಡೆಯಾಗುತ್ತಿದೆ. ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಯುವ ಸಿನಿಮಾದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಸಿನಿಮಾದ ಮುಹೂರ್ತದ ನಡೆದ ದಿನವೇ ಹೊಂಬಾಳೆ, ಬಿಡುಗಡೆ ದಿನಾಂಕವನ್ನೂ ಘೋಷಣೆ ಮಾಡಿತ್ತು. ‘ಯುವ’ ಸಿನಿಮಾವನ್ನು ಡಿಸೆಂಬರ್ 22ಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ ಈಗ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಿದೆ.
ಯುವ’ಸಿನಿಮಾವು ಡಿಸೆಂಬರ್ 22ಕ್ಕೆ ಬದಲಿಗೆ 2024ರ ಮಾರ್ಚ್ 28ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಹೊಸ ಪೋಸ್ಟರ್ ಮೂಲಕ ಸಿನಿಮಾದ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಸೆಪ್ಟೆಂಬರ್ 29ಕ್ಕೆ ಬಿಡುಗಡೆ ಆಗಬೇಕಿದ್ದ ಪ್ರಭಾಸ್ (Prabhas ) ನಟನೆಯ ‘ಸಲಾರ್’(salar) ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟು, ಡಿಸೆಂಬರ್ 22ಕ್ಕೆ ಬಿಡುಗಡೆ ಆಗುತ್ತಿರುವ ಕಾರಣ, ‘ಯುವ’(Yuva) ಸಿನಿಮಾವನ್ನು ಮಾರ್ಚ್ 28ಕ್ಕೆ ಬಿಡುಗಡೆ ಮಾಡುವ ನಿರ್ಧಾರವನ್ನು ನಿರ್ಮಾಣ ಸಂಸ್ಥೆ ಮಾಡಿದೆ.
ಮಾರ್ಚ್ ತಿಂಗಳು ದೊಡ್ಮನೆ ಅಭಿಮಾನಿಗಳಿಗೆ ವಿಶೇಷ. ಯಾಕಂದ್ರೆ ಮಾರ್ಚ್ 17ರಂದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ (powr star Puneeth rajkumar birth day) ಹುಟ್ಟುಹಬ್ಬ. ಹೀಗಾಗಿ ಅಂದು ಅಭಿಮಾನಿಗಳ ತಮ್ಮದೇ ಶೈಲಿಯಲ್ಲಿ ಸಂಭ್ರಮಿಸುತ್ತಾರೆ. ಇದಾದ 11 ದಿನಗಳ ಬಳಿಕ ಸ್ಯಾಂಡಲ್ವುಡ್ಗೆ ಯುವ ರಾಜ್ಕುಮಾರ್ ಗ್ರ್ಯಾಂಡ್ ಎಂಟ್ರಿಯಾಗಲಿದೆ.
ಯುವ ಚಿತ್ರದಲ್ಲ ಯುವ ರಾಜಕುಮಾರ್ ಎದುರು ಸಪ್ತಮಿ ಗೌಡ (sapthammi gowda) ನಾಯಕಿಯಾಗಿ ನಟಿಸಿದ್ದಾರೆ. ಹೊಂಬಾಳೆ ಬ್ಯಾನರ್ ಸಿನಿಮಾಗಳ ರಿಲೀಸ್ ಡೇಟ್ ಘೋಷಣೆಯಾಗುವುದು ಹಾಗೂ ಪೋಸ್ಟ್ ಪೋನ್ ಆಗುವುದು ಹೊಸದಲ್ಲ. ಅದೇ ಸಂಪ್ರದಾಯವನ್ನು ಯುವ ಚಿತ್ರದಲ್ಲೂ ಪಾಲಿಸಿಕೊಂಡು ಬರಲಾಗಿದೆ. ಹೊಂಬಾಳೆಯವರು ಕಾಂತಾರ, ಮಾಸ್ಟರ್ ಪೀಸ್, ರಾಜಕುಮಾರ ಬಿಟ್ಟರೆ ಮಿಕ್ಕ ಯಾವ ಚಿತ್ರವನ್ನೂ ಹೇಳಿದ ದಿನಾಂಕಕ್ಕೆ ರಿಲೀಸ್ ಮಾಡಿಲ್ಲ. ಪ್ರತಿ ಚಿತ್ರವೂ ಹೇಳಿದ ದಿನಕ್ಕಿಂತ ತಿಂಗಳುಗಳಷ್ಟೇ ಅಲ್ಲ, ವರ್ಷಗಟ್ಟೆ ಮುಂದಕ್ಕೆ ಹೋಗಿದೆ.
ಈಗ ಸಲಾರ್ ಚಿತ್ರ 2022ರಲ್ಲೇ ರಿಲೀಸ್ ಆಗುವ ನಿರೀಕ್ಷೆ ಇತ್ತು. 2023ರ ರಿಲೀಸ್ ಡೇಟ್ ಕೂಡಾ ಮುಂದೂಡಲ್ಪಟ್ಟು, ಈಗ ಯುವ ರಿಲೀಸ್ ದಿನಾಂಕದಂದು ರಿಲೀಸ್ ಆಗುತ್ತಿದೆ.



