ಜಗವೇ ಒಂದು ರಣರಂಗ..
ರಣರಂಗ ಚಿತ್ರದ್ದು. ಹೀರೋ ಶಿವಣ್ಣ. ಹೀರೋಯಿನ್ ಸುಧಾರಾಣಿ.
ಈಗ..
ಬದುಕು ಒಂದು ರಣರಂಗ. ಯುವ ಚಿತ್ರದ್ದು. ಹೀರೋ ಯುವ ರಾಜಕುಮಾರ್. ಹೀರೋಯಿನ್ ಸಪ್ತಮಿ ಗೌಡ. ಹೀರೋ ಯುವ ತಾಯಿ ಅದೇ ರಣರಂಗದ ಸುಧಾರಾಣಿ.
ನೆನಪಾಗುವುದಕ್ಕೆ ಹಲವು ಕಾರಣಗಳಿವೆ.
ಯುವ ಚಿತ್ರ ಗೆದ್ದಿದ್ದಾಗಿದೆ. ಮೊದಲ ವಾರವೇ ಅದ್ಬುತ ಕಲೆಕ್ಷನ್ ಹಾಗೂ ಪ್ರೇಕ್ಷಕರ ಒಪ್ಪಿಗೆಯ ವೋಟು ಪಡೆದಿರುವ ಯುವ ಹಿಟ್ ಆಗುವ ಎಲ್ಲ ಸೂಚನೆಗಳೂ ಇವೆ. ಚಿತ್ರದಲ್ಲಿನ ಕಥೆ, ಚಿತ್ರಕಥೆ, ಡೈಲಾಗುಗಳು ಹಿಟ್ ಆಗುತ್ತಿವೆ. ಇದರ ನಡುವೆ ಚಿತ್ರದಲ್ಲಿನ ಫ್ಯಾಮಿಲಿ, ತಂದೆ-ಮಗನ ಸೆಂಟಿಮೆಂಟ್ ಕೂಡಾ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ನಡುವೆಯೇ ಪ್ರೇಕ್ಷಕರು ಮೆಚ್ಚಿಕೊಂಡಿದ್ದ ಮತ್ತೊಂದು ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ.
ಬದುಕೇ ಒಂದು ರಣರಂಗ.. ಹಾಡಿನ ಲಿರಿಕಲ್ ವಿಡಿಯೋ ಹೊರಬಂದಿದೆ. ಯುವ ಚಿತ್ರದಲ್ಲಿ ತಂದೆ ಸಾಲದ ಸುಳಿಗೆ ಸಿಲುಕಿ ಮನೆ ತೊರೆದು ಹೋದಾಗ.. ಯುವ ಕುಟುಂಬವನ್ನು ಸಾಕುವ, ತಂದೆಯನ್ನು ಹುಡುಕುವ ಕೆಲಸದಲ್ಲಿ ನಿರತನಾಗುತ್ತಾನೆ. ಹೀಗಿರುವಾಗಲೇ.. ಸಂಚಿನಿಂದ ರಸ್ಲಿಂಗ್ ಸ್ಪರ್ಧೆ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿದ್ದ ಯುವ ನಿರ್ದೋಷಿಯಾಗಿ ಮತ್ತೆ ರಸ್ಲಿಂಗ್ ಅಖಾಡಕ್ಕಿಳಿಯುತ್ತಾನೆ. ಒಂದು ಕಡೆ ಡೆಲಿವರಿ ಬಾಯ್ ಕೆಲಸ.. ಮತ್ತೊಂದು ರಸ್ಲಿಂಗ್ ಪ್ರಾಕ್ಟೀಸ್.. ಮಗದೊಂದು ಕಡೆ ತಂದೆಗಾಗಿ ಹುಡುಕಾಟ.. ಎಲ್ಲವನ್ನೂ ಹೃದಯ ಮುಟ್ಟುವಂತೆ ಹಾಡಿನ ರೂಪದಲ್ಲಿ ತೋರಿಸಲಾಗಿದೆ. ಅದುವೇ.. ಬದುಕೇ ಒಂದು ರಣರಂಗ.
ಚಿತ್ರದ ಸಾಹಿತ್ಯವೂ ಅಷ್ಟೆ. ಸೋಲಿನಿಂದ ಎದೆಗುಂದುವವರಿಗೆ ಸ್ಫೂರ್ತಿ ತುಂಬುವಂತಿದೆ. ಸಾಹಿತ್ಯ ನೀಡಿರುವುದು ನಿರ್ದೇಶಕ ಸಂತೋಷ್ ಆನಂದರಾಮ್. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಹಾಡಿಗೆ ಧ್ವನಿಯಾಗಿರುವುದು ವ್ಯಾಸರಾಜ್ ಸೋಸಲೆ.
ಹಾಡಿನ ಸಾಹಿತ್ಯದ ಮೊದಲ ಸಾಲು ನೋಡಿದವರಿಗೆ ಥಟ್ಟನೆ ರಣರಂಗ ಸಿನಿಮಾದ ಜಗವೇ ಒಂದು ರಣರಂಗ ಹಾಡು ನೆನಪಾದರೆ ಅಚ್ಚರಿ ಇಲ್ಲ. ಆದರೆ.. ಇದು ಆ ರೀತಿ ಅಲ್ಲ. ಇದು ಜೀವನವೇ ಒಂದು ರಣರಂಗ ಎಂಬ ರೀತಿ ಬೇರೆಯದೇ ರೀತಿಯ ಕಥೆಯೂ ಇದೆ. ಹಾಡೂ ಡಿಫರೆಂಟ್ ಆಗಿದೆ.
ರಣರಂಗದಲ್ಲಿ ಹೀರೋನ ಬದುಕು ಬೀದಿಗೆ ಬೀಳುವುದಕ್ಕೆ ಕಾರಣರಾಗಿರುವವರ ವಿರುದ್ಧ ಸೇಡು ತೀರಿಸಿಕೊಂಡು ತಾಯಿಯನ್ನು ಉಳಿಸಿಕೊಳ್ಳುವ ಹೋರಾಟವಿದ್ದರೆ.. ಯುವದಲ್ಲಿರೋದು ಬದುಕನ್ನೇ ಗೆಲ್ಲುವ ಛಲದಂಕ ಮಲ್ಲನ ಹೋರಾಟದ ಕಥೆ.
ಎರಡೂ ಚಿತ್ರಗಳಲ್ಲಿ ಇರುವ ಒಂದೇ ಒಂದು ಕಾಮನ್ ಅಂಶವೆಂದರೆ.. ರಣರಂಗದ ಹೀರೋ ಶಿವಣ್ಣ. ಆ ಶಿವಣ್ಣನ ತಮ್ಮನ ಮಗ ಯುವ ಈ ಚಿತ್ರಕ್ಕೆ ಹೀರೋ. ಅಲ್ಲಿ ಶಿವಣ್ಣನ ಎದುರು ನಾಯಕಿಯಾಗಿದ್ದ ಸುಧಾರಾಣಿ, ಇಲ್ಲಿ ಹೀರೋಗೆ ತಾಯಿಯಾಗಿದ್ದಾರೆ.
ಯುವ ಚಿತ್ರದಲ್ಲಿ ತಂದೆ ಸಾಲದ ಸುಳಿಗೆ ಸಿಲುಕಿ ಮನೆ ತೊರೆದು ಹೋದಾಗ.. ಯುವ ಕುಟುಂಬವನ್ನು ಸಾಕುವ, ತಂದೆಯನ್ನು ಹುಡುಕುವ ಕೆಲಸದಲ್ಲಿ ನಿರತನಾಗುತ್ತಾನೆ. ಹೀಗಿರುವಾಗಲೇ.. ಸಂಚಿನಿಂದ ರಸ್ಲಿಂಗ್ ಸ್ಪರ್ಧೆ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿದ್ದ ಯುವ ನಿರ್ದೋಷಿಯಾಗಿ ಮತ್ತೆ ರಸ್ಲಿಂಗ್ ಅಖಾಡಕ್ಕಿಳಿಯುತ್ತಾನೆ. ಒಂದು ಕಡೆ ಡೆಲಿವರಿ ಬಾಯ್ ಕೆಲಸ.. ಮತ್ತೊಂದು ರಸ್ಲಿಂಗ್ ಪ್ರಾಕ್ಟೀಸ್.. ಮಗದೊಂದು ಕಡೆ ತಂದೆಗಾಗಿ ಹುಡುಕಾಟ.. ಎಲ್ಲವನ್ನೂ ಹೃದಯ ಮುಟ್ಟುವಂತೆ ಹಾಡಿನ ರೂಪದಲ್ಲಿ ತೋರಿಸಲಾಗಿದೆ. ಅದುವೇ.. ಬದುಕೇ ಒಂದು ರಣರಂಗ.



