ಪ್ರೀತ್ಸಿ ತಪ್ಪೇನಿಲ್ಲ ಅಂತಾರೆ. ಆದರೆ ಪ್ರೀತಿ ಮಾಡಿಯೇ ಮೋಸ ಹೋಗ್ತಾರೆ. ಒಂದು ವಯಸ್ಸು ದಾಟಿದ ಮೇಲೆ ಆಗುವ ಪ್ರೀತಿ, ಮೆಚ್ಯೂರ್ಡ್ ಲವ್ (Matured love Story) ಅಂತಾರೆ. ಹದಿಹರೆಯದ ಪ್ರೇಮಿಗಳಿಗೆ ಹೇಳುವ ಬುದ್ದಿವಾದದಲ್ಲಿ ಅದೂ ಒಂದು. ಒಂದ್ ಇಪ್ಪತ್ತೈದು ದಾಟಿದ್ ಮೇಲೆ ಲವ್ ಮಾಡಿ. ಯೋಚನೆ ಮಾಡುವ ಶಕ್ತಿ ಬಂದಿರುತ್ತೆ ಅಂತಾ. ಆದರೆ ಪ್ರೀತಿಗೆ ಅದೇನು ಶಕ್ತಿ ಇದೆಯೋ.. ಯಾರನ್ನ ಬೇಕಾದರೂ ಯಾಮಾರಿಸುತ್ತೆ. ಇಲ್ಲೊಂದು ಪ್ರಕರಣ ನಡೆದಿದೆ. ಪ್ರೀತಿಯಲ್ಲಿ ಮೋಸ ಹೋದ ಮಹಿಳೆಯ ವಯಸ್ಸು 63. ಮೋಸ ಮಾಡಿದವನ ವಯಸ್ಸು 70. ಅವನೂ ಅಜ್ಜ. ಆಕೆಯೂ ಅಜ್ಜಿ.
ಬೆಂಗಳೂರಿನಲ್ಲಿ 63 ವರ್ಷದ ವೃದ್ಧೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ತನ್ನನ್ನು ಪ್ರೀತಿಸಿ ಮದ್ವೆಯಾಗೋದಾಗಿ ವಂಚಿಸಿದ್ದಾನೆಂದು ಅಜ್ಜಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಾರ್ವಜನಿಕರಿಗೆ ನ್ಯಾಯ ಕೊಡಿಸಬೇಕಾದ ಪೊಲೀಸರೇ ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸರ ಮುಂದೆ ವೃದ್ಧೆ ಮನವಿ ಮಾಡಿಕೊಂಡಿದ್ದಾರೆ. ಇನ್ನು ದಯವಾಣಿ (63) ಎನ್ನುವ ವೃದ್ದೆಗೆ ಪ್ರೀತಿಸಿ ವಂಚನೆ ಆಗಿದೆಯೆಂದು ದೂರು ನೀಡಿದವರಾಗಿದ್ದಾರೆ. ಮತ್ತೊಂದೆಡೆ, ಲೋಕನಾಥನ್ ಎಂಬ ವೃದ್ಧ ಪ್ರೀತಿಸಿ ವಂಚನೆ ಮಾಡಿದ್ದಾರೆಂದು (Matured love Story) ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ವಾಕಿಂಗ್ ಲವ್ ಸ್ಟೋರಿ : ವೃದ್ಧರಿಬ್ಬರು ವಾಯ ವಿಹಾರ ಮಾಡುವಾಗ ಪರಿಚಯ ಆಗಿತ್ತಂತೆ. ಇತ್ತೀಚಿನ ಹಲವು ಸಿನಿಮಾ, ಧಾರವಾಹಿಗಳನ್ನು ನೋಡಿ ಇಬ್ಬರ ಪರಿಚಯವೂ ಪ್ರೀತಿಗೆ ತಿರುಗಿತ್ತು. ಹಲವು ತಿಂಗಳು ಪ್ರೇಮಿಗಳಂತೆ ಸಿನಿಮಾ, ಪಾರ್ಕ್ ಎಂದು ವೃದ್ಧ ಪ್ರೇಮಿಗಳು (Matured love Story) ಓಡಾಟ ಮಾಡಿದ್ದಾರೆ. ಅಜ್ಜ-ಅಜ್ಜಿ ಇಬ್ಬರೂ ಒಂದೇ ಏರಿಯಾದವರು. ಇಬ್ಬರದ್ದೂ ಸರಿ ಸುಮಾರು 5 ವರ್ಷದ ಲವ್ ಸ್ಟೋರಿ (Grand paa grand maa love story) . ಇವರಲ್ಲಿ ಅಜ್ಜ ಲೋಕನಾಥ್ ಅವರ ಮಗನಿಗೆ ಮದುವೆಯಾಗಿತ್ತು. ಡೈವೋರ್ಸ್ ಕೂಡಾ ಆಗಿತ್ತು. ಲೋಕನಾಥ್ ಮಗನಿಗೆ ಹೆಣ್ಣು ಹುಡುಕಿ, ಮತ್ತೆ ಮದುವೆ ಮಾಡಿ.. ಅನಂತರ ತಾವಿಬ್ಬರೂ ಮದುವೆಯಾಗೋಣ ಎನ್ನುವುದು ದಯಾಮಣಿ ಕೊಟ್ಟಿದ್ದ ಸಲಹೆ. ಮುಂದಿನ ತಿಂಗಳು ಮದುವೆಗೆ ಎಲ್ಲಾ ಸಿದ್ಧತೆ ನಡೀತಿತ್ತು. ಈ ನಡುವೆ ನಾವೂ ಮದುವೆಯಾಗೋಣ ಅಂತಾ ಹೇಳಿದ್ದ ತಾತನಿಗೆ ದಯಾಮಣಿ ಹೇಳಿದ್ದಾಳೆ. ಈ ವೇಳೆ ಲೋಕನಾಥ್ ಮದುವೆಗೆ ತಿರಸ್ಕರಿಸಿದ್ದಾನೆ. ಮಗನ ಮದುವೆ ಆಗ್ಲಿ, ನಮ್ಮ ಮದುವೆ ಬೇಡ ಎಂದಿದ್ದನು. ಅಲ್ಲದೇ ಕೆಲ ದಿನಗಳಿಂದ ದಯಾಮಣಿಯನ್ನ ಅವೈಡ್ ಮಾಡಲು ಶುರು ಮಾಡಿದ್ದನು. ಇದರಿಂದ ಮನನೊಂದು ದಯಾಮಣಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕರೆದಾಗ ಹೋಗಲಿಲ್ಲ ಎಂಬುದೇ ಸಮಸ್ಯೆಯ ಮೂಲ : ಇಬ್ಬರೂ ಪ್ರೀತಿ ಮಾಡುತ್ತಿದ್ದಾಗ, ಪ್ರೀತಿ ಪರಾಕಾಷ್ಠೆಯಲ್ಲಿದ್ದಾಗ ಅಜ್ಜ ಒಮ್ಮೆ ಮನೆಗೆ ಕರೆದಿದ್ದನಂತೆ. ಯಾವುದೋ ಕೆಲಸವಿದ್ದ ಕಾರಣ ಅಜ್ಜಿ ಹೋಗೋಕೆ ಆಗಿಲ್ಲ. ಅಲ್ಲಿಂದಲೇ ಸಮಸ್ಯೆ ಶುರುವಾಯ್ತು. ಅಜ್ಜ ರೇಗುವುದಕ್ಕೆ ಶುರು ಮಾಡಿದ್ದ ಎನ್ನುತ್ತಿವೆ ಮೂಲಗಳು. ಈಸ್ಟ್ ಝೋನ್ ವುಮೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮದ್ವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ವೃದ್ದನ ವಿರುದ್ದ ದೂರು ದಾಖಲಿಸಲಾಗಿದೆ.



