ಇಷ್ಟು ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ಪಟಾಲಂ ಜೊತೆಗಿದ್ದ ದರ್ಶನ್ ಬೇರೆ ಜೈಲಿಗೆ ಶಿಫ್ಟ್ ಆಗೋದು ಪಕ್ಕಾ ಆಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡೋದಕ್ಕೆ ನ್ಯಾಯಾಲಯ ಅನುಮತಿ ಕೊಟ್ಟಿದೆ. ಆರೋಪಿಗಳ ಸ್ಥಳಾಂತರಕ್ಕೆ ಚೀಫ್ ಸೂರ್ಪಡೆಂಟ್ ಅವರಿಂದ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು.
ರೇಣುಕಾಸ್ವಾಮಿ ಮರ್ಡರ್ ಕೇಸಿನಲ್ಲಿ ಆರೋಪಿ ನಂ.2 ಆಗಿರುವ ದರ್ಶನ್ ಬಳ್ಳಾರಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಆದರೆ, ಧನರಾಜ್ ಧಾರವಾಡ ಜೈಲಿಗೆ ಹೋಗ್ತಿದ್ದಾನೆ. ಜಗದೀಶ್ & ಲಕ್ಷಣ್ ಶಿವಮೊಗ್ಗ ಜೈಲಿಗೆ, ವಿನಯ್ ವಿಜಯಪುರ ಜೈಲಿಗೆ, ನಾಗರಾಜ್ ಕಲಬುರಗಿ ಜೈಲಿಗೆ, ಪ್ರದೂಷ್ ಬೆಳಗಾವಿ ಜೈಲಿಗೆ ಶಿಫ್ಟ್ ಆಗುತ್ತಾರೆ.
ಸದ್ಯಕ್ಕೆ ಸುದ್ದಿ ಎಲ್ಲ ಟಿವಿ ಚಾನೆಲ್ಲುಗಳಲ್ಲೂ ಹೈಲೈಟ್ ಆಗುತ್ತಿದೆ. ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ನೀಡಿದ ಪ್ರಕರಣದಿಂದ ರಾಜ್ಯ ಸರಕಾರಕ್ಕೆ ತೀವ್ರ ಮುಜುಗರ ಅನುಭವಿಸುತ್ತಿದೆ. ರಾಜಾತಿಥ್ಯದ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ. ಜೈಲಿನಲ್ಲಿ ರಾಜಾತಿಥ್ಯ ಪಡೆದಿರುವ ದರ್ಶನ್‌ರ ಫೋಟೊ ಮತ್ತು ವಿಡಿಯೊ ವೈರಲ್ ಆಗಿದೆ. ಈ ಸಂಬಂಧ ಜೈಲು ಅಧೀಕ್ಷಕರ ದೂರು ಆಧರಿಸಿ ಮೂರು ಪ್ರಕರಣ ದಾಖಲಿಸಲಾಗಿದೆ. ಸುದ್ದಿ ವಾಹಿನಿಗಳಲ್ಲಿ ಇದೇ ಚರ್ಚೆ.
ಈ ಬಗ್ಗೆ ಹುಟ್ಟುಹಬ್ಬ ಆಚರಿಸಿಕೊಂಡ ಸುಮಲತಾ ಅಂಬರೀಷ್ ಅವರಿಗೆ ಪ್ರಶ್ನೆ ಕೇಳಿದಾಗ ನಾನು ಮೀಡಿಯಾದವ್ರಿಗೂ ಒಂದು ಪ್ರಶ್ನೆ ಕೇಳ್ತೀನಿ ಎನ್ನುತ್ತಾ.. ದರ್ಶನ್ ಅವರ ಬೆನ್ನಿಗೆ ನಿಂತು ಮಾತನಾಡಿದ್ದಾರೆ. ದರ್ಶನ್ ಅಲ್ಲಿದ್ದಾನೆ ಅನ್ನೋ ಕಾರಣಕ್ಕಾಗಿ ನೀವು ಅಂದ್ರೆ ಮೀಡಿಯಾದವರು ಇಷ್ಟೆಲ್ಲ ಫೋಕಸ್ ಮಾಡ್ತಿದ್ದೀರ ಎಂದಿದ್ದಾರೆ.
ಜೈಲಿನಲ್ಲಿ ಹೀಗೆ ನಡೆಯುತ್ತಿರೋದು ಇದೇನು ಮೊದಲಲ್ಲ. ನಾವು ಈ ರೀತಿಯ ಪ್ರಕರಣ ಇದೇ ಫಸ್ಟ್ ಅನ್ನೋದನ್ನ ನೋಡಬೇಕು. ಈ ಬಗ್ಗೆ ನಾನು ಮಾತನಾಡಿದ್ರೆ ಕಾಂಟ್ರವರ್ಸಿ ಆಗಬಹುದು. ದರ್ಶನ್ ಅವರು ನನಗೆ ಆಪ್ತರು. ಬಹಳ ಹತ್ತಿರದವರು. ಲಲ್ಲಿ ಹಣ ಕೊಟ್ರೆ ಏನು ಸೌಲಭ್ಯ ಬೇಕಾದ್ರೂ ಸಿಗುತ್ತೆ. ಈ ಆರೋಪವನ್ನ ಐಪಿಎಸ್ ಅಧಿಕಾರಿ ಡಿ.ರೂಪಾ ಅವರೇ ಈ ಹಿಂದೆನೂ ತಿಳಿಸಿಕೊಟ್ಟಿದ್ದಾರೆ. ಇದು ಪರಪ್ಪನ ಅಗ್ರಹಾರದಲ್ಲಿ ಅಷ್ಟೇ ಆಗಿಲ್ಲ. ಪ್ರಪಂಚದಾದ್ಯಂತ ಜೈಲುಗಳಲ್ಲಿ ಇಂತಹ ಭ್ರಷ್ಟಾಚಾರ ನಡೀತಿದೆ. ಅಮೆರಿಕಾದ ಜೈಲಲ್ಲೂ ಡ್ರಗ್ಸ್, ಸಿಗರೇಟ್ ಎಲ್ಲಾ ಸಿಗುತ್ತೆ. ಇದು ಸರಿ ಅಂತಾ ನಾನು ಹೇಳಲ್ಲ. ಇದು ಸಿಸ್ಟಂನಲ್ಲಿ ಇರೋ ಸಮಸ್ಯೆ ಎಂದು ಸುಮಲತಾ ಅಂಬರೀಶ್ ಎಂದಿದ್ದಾರೆ ಸುಮಲತಾ.
ದರ್ಶನ್ ಫೋಟೋ ತೆಗೆದವನಿಗೆ ಗೂಸಾ ಮೇಲೆ ಗೂಸಾ : ವೈರಲ್ ಆಗಿರುವ ಫೋಟೋವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ ವ್ಯಕ್ತಿ ರೌಡಿ ಶೀಟರ್ ವೇಲು ಎಂದು ಗುರುತಿಸಲಾಗಿದೆ. ಈ ವೇಲು ರೌಡಿ ವಿಲ್ಸನ್ ಗಾರ್ಡನ್ ನಾಗನ ಸಹಚರ ದೇ ತಿಂಗಳ 22ರಂದು ಸಂಜೆ ಕೊಲೆ ಆರೋಪಿ ನಟ ದರ್ಶನ್, ಸಹಚರ ನಾಗರಾಜ್, ರೌಡಿ ಶೀಟರ್‌ಗಳಾದ ವಿಲ್ಸನ್ ಗಾರ್ಡನ್ ನಾಗ ಹಾಗೂ ರೌಡಿ ಕುಳ್ಳ ಸೀನ ಈ ನಾಲ್ವರು ಕಾರಾಗೃಹದ ಆವರಣದಲ್ಲಿ ಕುರ್ಚಿಯಲ್ಲಿ ಕುಳಿತು ಹರಟುತ್ತಿದ್ದರು. ಈ ವೇಳೆ ದರ್ಶನ್ ಒಂದು ಕೈಯಲ್ಲಿ ಸಿಗರೇಟ್ ಮತ್ತೊಂದು ಕೈಯಲ್ಲಿ ಟೀ ಕಪ್ ಹಿಡಿದುಕೊಂಡು ಚರ್ಚೆಯಲ್ಲಿ ತೊಡಗಿದ್ದರು. ಆಗ ರೌಡಿ ವೇಲು ಮೊಬೈಲ್‌ನಲ್ಲಿ ಫೋಟೋ ತೆಗೆದು, ತನ್ನ ಪತ್ನಿಗೆ ವಾಟ್ಸಾಪ್‌ನಲ್ಲಿ ಕಳುಹಿಸಿದ್ದ. ಯಾರಿಗೂ ಕಳಿಸಬೇಡ.. ತೋರಿಸಬೇಡ ಎಂದು ಹೇಳಿದ್ದರೂ.. ವೈರಲ್ ಆಗಿದೆ. ಜೈಲಿನಲ್ಲಿ ವೇಲುಗೆ ಸಖತ್ ಗೂಸಾಗಳು ಬಿದ್ದಿವೆಯಂತೆ.



