ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸಿಎಂ ಆದ ಮೇಲೆ ಹಲವಾರು ಕ್ರಾಂತಿಕಾರಿ ಬದಲಾವಣೆಗಳಾಗುತ್ತಿವೆ. ಅತ್ಯಾಚಾರ, ರಸ್ತೆಯಲ್ಲಿ ಪೋಲಿ ಪುಂಡರ ಹಾವಳಿ, ಗೂಂಡಾಗಿರಿ ವಿರುದ್ಧ ಪೊಲೀಸ್ ಆಕ್ಷನ್ ಸೇರಿದಂತೆ ಹಲವು ದಿಟ್ಟ ಕ್ರಮ ಕೈಗೊಂಡಿದ್ದ ಯೋಗಿ ಆದಿತ್ಯನಾಥ್ ಇದೀಗ ಇನ್ನೊಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ. ಜಾತಿ ಹೆಸರಿನ ಬೋರ್ಡು, ಹೆಸರು ಸೇರಿದಂತೆ ಜಾತಿಗಳ ವೈಭವೀಕರಣಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.
ಪೊಲೀಸ್ ಇಲಾಖೆಯಿಂದ ಆರಂಭ..!
ಉತ್ತರ ಪ್ರದೇಶದಲ್ಲಿ ಎಫ್‌ಐಆರ್, ಬಂಧನ ಮೆಮೊ, ಇತರ ಪೊಲೀಸ್ ದಾಖಲೆಗಳಲ್ಲಿ ಇನ್ನು ಮುಂದೆ ಜಾತಿಯನ್ನು ಉಲ್ಲೇಖಿಸುವಂತಿಲ್ಲ. ಅಂದ್ರೆ ಇದುವರೆಗೆ ಪೊಲೀಸ್ ದಾಖಲೆಗಳಲ್ಲಿ ಯಾರಾದರೂ ದೂರು ಕೊಟ್ಟರೆ ಅವರ ಜಾತಿ, ಉಪಜಾತಿಗಳನ್ನು ಎಂಟ್ರಿ ಮಾಡಲಾಗುತ್ತಿತ್ತು. ಇನ್ನು ಮುಂದೆ ಎಫ್‌ಐಆರ್, ಬಂಧನ ಮೆಮೊ, ಇತರ ಪೊಲೀಸ್ ದಾಖಲೆಗಳಲ್ಲಿ ಇನ್ನು ಮುಂದೆ ಜಾತಿಯನ್ನು ಉಲ್ಲೇಖಿಸುವಂತಿಲ್ಲ. ಪೊಲೀಸ್ ಠಾಣೆಯ ನೋಟಿಸ್ ಬೋರ್ಡ್‌ಗಳು, ವಾಹನಗಳು ಮತ್ತು ಫಲಕಗಳಿಂದ ಜಾತಿ ಸಂಕೇತಗಳು, ಘೋಷಣೆಗಳನ್ನು ತಕ್ಷಣ ತೆಗೆದು ಹಾಕಬೇಕು.
ಜಾತಿ ವೈಭವೀಕರಣದ ರ್ಯಾಲಿಗಳಿಗೂ ನಿಷೇಧ..!
ಜಾತಿ ಆಧಾರಿತ ರ‍್ಯಾಲಿಗಳನ್ನು ನಿಷೇಧಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದರ ಉಲ್ಲಂಘನೆಯನ್ನು ಗಮನಿಸಲು ಪೊಲೀಸರಿಗೆ ಆದೇಶಿಸಲಾಗಿದೆ. ಇನ್ನು ಜಾತಿ ಹೆಸರಿನ ಸಂಘಟನೆಯ ಬೋರ್ಡುಗಳು, ಕಾರುಗಳ ಮೇಲೂ ಜಾತಿ ಹೆಸರು ಇರುವಂತಿಲ್ಲ. ವಿಶೇಷವಾಗಿ ಊರು ಅಥವಾ ಬಡಾವಣೆಗಳಲ್ಲಿ ʻಇದು ಇಂತಹವರ ಜಾತಿಗೆ ಸೇರಿದವರ ಊರು ಅಥವಾ ಬಡಾವಣೆʼ ಎಂಬ ಫಲಕಗಳಿರುತ್ತಿದ್ದವು. ಕರ್ನಾಟಕದವರಿಗೆ ಇದು ಹೊಸದಾದರೂ, ಉತ್ತರ ಪ್ರದೇಶದಲ್ಲಿ ಅದು ನಾರ್ಮಲ್ ಆಗಿತ್ತು. ಇನ್ನು ಮುಂದೆ ಅಂತಹ ಬೋರ್ಡುಗಳೂ ಇರುವಂತಿಲ್ಲ.
ಅಟ್ರಾಸಿಟಿ, ಶೈಕ್ಷಣಿಕ ದಾಖಲೆಗಳಲ್ಲಿ ತೆಗೆಯುತ್ತಿಲ್ಲ..!
ಹಾಗೆಂದು ಸಂಪೂರ್ಣವಾಗಿ ತೆಗೆಯಲು ಸಾಧ್ಯವೂ ಇಲ್ಲ. ಹೀಗಾಗಿ ಜಾತಿನಿಂದನೆ ಕೇಸು ಸೇರಿದಂತೆ ಜಾತಿ ಆಧರಿಸಿದ ದೂರುಗಳಲ್ಲಿ ಜಾತಿಯ ಹೆಸರು ಇರುತ್ತದೆ. ಕೊಲೆ, ಕಳ್ಳತನ, ಅತ್ಯಾಚಾರ, ದರೋಡೆ, ಗೂಂಡಾಗಿರಿಯಂತಹ ಕೇಸುಗಳಲ್ಲಿಯೂ ಇರುತ್ತಿದ್ದ ಜಾತಿಯ ಉಲ್ಲೇಖ ತೆಗೆಯಲಾಗುತ್ತಿದೆ. CCTNSನಿಂದ ಜಾತಿ ತೆಗೆದು ಹಾಕುವ ನಿಟ್ಟಿನಲ್ಲಿ ಕ್ರೈಂ ಆಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್‌ನಿಂದ ‘ಜಾತಿ’ ಕಾಲಂ ತೆಗೆಯಲಾಗುತ್ತದೆ. ಬದಲಿಗೆ ತಂದೆ ಅಥವಾ ತಾಯಿಯ ಹೆಸರನ್ನು ಗುರುತಿಗಾಗಿ ದಾಖಲಿಸಲಾಗುತ್ತದೆ. ಜಾತಿ ಕಾಲಂ ಖಾಲಿ ಬಿಡಲಾಗುತ್ತದೆ.
ತಾಂತ್ರಿಕ ಬದಲಾವಣೆಯವರೆಗೆ ಜಾತಿ ಕಾಲಂ ಅನಿವಾರ್ಯವಲ್ಲ, ಖಾಲಿ ಬಿಡಬೇಕು. ಇನ್ನು ವಾಹನಗಳಿಂದ ಜಾತಿ ಗುರುತು ತೆಗೆಯುವಿಕೆ: ಜಾತಿಯನ್ನು ಸೂಚಿಸುವ ಸ್ಟಿಕರ್‌ಗಳಿಗೆ ಮೋಟಾರು ವಾಹನ ಕಾಯ್ದೆಯಡಿ ಶಿಕ್ಷೆ ವಿಧಿಸಲಾಗುತ್ತಿದೆ ಜಾತಿ ರ‍್ಯಾಲಿಗಳ ನಿಷೇಧ: ಜಾತಿ ಆಧಾರಿತ ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಮಾತ್ರ ಜಾತಿಯ ಉಲ್ಲೇಖ ಕಾನೂನು ಅಗತ್ಯವಾಗಿರುವುದರಿಂದ ವಿನಾಯಿತಿ ನೀಡಲಾಗಿದೆ.
ಅಂದಹಾಗೆ ಇದು ಶೈಕ್ಷಣಿಕ ದಾಖಲೆಗಳಿಗೆ ಅನ್ವಯವಾಗುತ್ತಿಲ್ಲ.



