ಇಂದಿರಾ, ಅಟಲ್, ಮೋದಿ, ಮನಮೋಹನ್ ಸಾಲಿಗೆ ಸೇರುತ್ತಿದ್ದಾರೆ ಯೋಗಿ ಆದಿತ್ಯನಾಥ್. ಯೋಗಿ ಆದಿತ್ಯನಾಥ್ ಅವರಿಗೀಗ 53 ವರ್ಷ. ಅಜಯ್ ಮೋಹನ್ ಸಿಂಗ್ ಬಿಷ್ತ್ ಎಂದರೆ ಯೋಗಿ ಆದಿತ್ಯನಾಥ್ ಅವರೇ ತಿರುಗಿ ನೋಡುವುದಿಲ್ಲವೇನೋ.. ಅದು ಅವರ ಪೂರ್ವಾಶ್ರಮದ ಹೆಸರು. ಅಷ್ಟರಮಟ್ಟಿಗೆ ಯೋಗಿ ಎಂಬ ಹೆಸರಿಗೆ ದೇಶದ ಜನ ಅಡಿಕ್ಟ್ ಆಗಿ ಹೋಗಿದ್ದಾರೆ. ಅಂತಹ ಯೋಗಿಯ ಲವ್ ಲೈಫ್ ಸ್ಟೋರಿ ಸಿನಿಮಾ ಆಗ್ತಾ ಇದೆ.
ಉತ್ತರಾಖಂಡ್‌ನ ಪಂಚೂರ್ ಅನ್ನೋ ಹಳ್ಳಿಯಲ್ಲಿ ಜನಿಸಿದ ಯೋಗಿಗೆ ಒಬ್ಬ ಅಕ್ಕ, ಇಬ್ಬರು ತಂಗಿಯರು. ನಾಲ್ವರು ತಮ್ಮಂದಿರು. 26 ವರ್ಷದ ಯುವಕರಾಗಿದ್ದಾಗ ಸನ್ಯಾಸತ್ವ ಸ್ವೀಕರಿಸಿದವರು ನಂತರ ಮಹಂತ ಪಟ್ಟಕ್ಕೇರಿದರು. ಈಗ ಯೋಗಿ ಆದಿತ್ಯನಾಥ್ ಲೈಫ್ ಸ್ಟೋರಿ ಸಿನಿಮಾ ಆಗುತ್ತಿದೆ. ಇನ್ನು ಲವ್ ಎಂಬ ವಿಷಯ ಎಲ್ಲಿದೆ.. ಎಂಬ ಬಗ್ಗೆ ಸಿನಿಮಾ ನಿರ್ಮಾಪಕರು ಕುತೂಹಲದ ಉತ್ತರ ಕೊಟ್ಟಿದ್ದಾರೆ. ಯೋಗಿ ಲವ್ ಎಂದರೆ ಅದು ಆಧ್ಯಾತ್ಮ. ಧರ್ಮ. ಉಳಿದಂತೆ ಯೋಗಿ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ ಎನ್ನುವುದು ಚಿತ್ರತಂಡದ ಹೇಳಿಕೆ.
ಭಾರತದಲ್ಲಿ ಹಲವು ರಾಜಕೀಯ ಕಥೆ ಸಿನಿಮಾಗಳಾಗಿವೆ. ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಹಾಗೂ ನರೇಂದ್ರ ಮೋದಿ. ಈ ಪ್ರಧಾನಿಗಳ ಕಥೆಗಳ ಸಿನಿಮಾ ಆಗಿವೆ. ಲಾಲ್ ಬಹದ್ದೂರ್ ಶಾಸ್ತ್ರಿ ಸಾವಿನ ರಹಸ್ಯ ಕುರಿತಂತೆ ಸಿನಿಮಾಗಳಾಗಿವೆ. ಇನ್ನು ಸಿಎಂ ಆಗಿದ್ದ ಎನ್‌ಟಿ ರಾಮರಾವ್, ಎಂಜಿ ರಾಮಚಂದ್ರನ್, ಜಯಲಲಿತಾ, ವೈಎಸ್ ರಾಜಶೇಖರ ರೆಡ್ಡಿ, ಮೊದಲಾದ ಮುಖ್ಯಮಂತ್ರಿಗಳ ಬಗ್ಗೆಯೂ ಸಿನಿಮಾಗಳಾಗಿವೆ. ಮಹಾರಾಷ್ಟ್ರದ ಬಾಳಾ ಠಾಕ್ರೆ ಕುರಿತಂತೆಯೂ ಸಿನಿಮಾ ಆಗಿವೆ.
ಕರ್ನಾಟಕದ ಸಿಎಂ ಸಿದ್ಧರಾಮಯ್ಯನವರ ಬಗ್ಗೆ ಸಿನಿಮಾ ಮಾಡುವುದಾಗಿ ಪ್ರಚಾರ ತೆಗೆದುಕೊಳ್ಳಲಾಯಿತೇ ಹೊರತು, ಸಿನಿಮಾ ಒಂದು ಹೆಜ್ಜೆಯೂ ಮುಂದೆ ಹೋಗಲಿಲ್ಲ. ಅಂತಿಮವಾಗಿ ಅದು ಪಬ್ಲಿಸಿಟಿ ಸ್ಟಂಟ್ ಆಗಿಯೇ ಉಳಿದುಕೊಂಡಿದೆ. ಆದರೆ ಅತ್ತ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜೀವನ ಚರಿತ್ರೆ ಸಿನಿಮಾ ಆಗುತ್ತಿದೆ. ಈ ಚಿತ್ರದಲ್ಲಿ ಯೋಗಿ ಆದಿತ್ಯನಾಥ್ ಲವ್ ಸ್ಟೋರಿ ಎಂದರೆ ಧರ್ಮ ಮತ್ತು ಯೋಗಿಯ ಕಥೆ ಇರಲಿಲ್ಲ. ಆದರೆ ಈ ಸಿನಿಮಾದಲ್ಲಿ ಯೋಗಿ ಆದಿತ್ಯನಾಥ್ ಸಿಎಂ ಆದ ಮೇಲೆ ತಂದಂತಹ ಬದಲಾವಣೆಗಳ ಕಥೆ ಇರೋದಿಲ್ಲ. ಕೇವಲ ಯೋಗಿ ಸಿಎಂ ಆಗುವವರೆಗಿನ ಕಥೆ ಮಾತ್ರ ಇರುತ್ತದೆ.
ಯೋಗಿ ಆದಿತ್ಯನಾಥ್ ಅವರ ಜೀವನ ಕುರಿತು ನಿರ್ಮಾಣ ಆಗಲಿರುವ ಸಿನಿಮಾದ ಹೆಸರು ʻಅಜಯ್ : ದಿ ಅನ್ಟೋಲ್ಡ್ ಸ್ಟೋರಿ ಆಫ್ ಯೋಗಿʼ. ಸಿನಿಮಾದ ಪೋಸ್ಟರ್ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಶಂತನು ಗುಪ್ತಾ ಬರೆದಿರುವ ‘ದಿ ಮಾಂಕ್ ಹೂ ಬಿಕೇಮ್ ಚೀಫ್ ಮಿನಿಸ್ಟರ್’ ಪುಸ್ತಕ ಆಧರಿಸಿ ಸಿನಿಮಾ ಮಾಡಲಾಗುತ್ತಿದ್ದು, ಸಿನಿಮಾದ ಮುಖ್ಯ ಪಾತ್ರದಲ್ಲಿ ಅಂದರೆ ಯೋಗಿ ಆದಿತ್ಯನಾಥ್ ಪಾತ್ರದಲ್ಲಿ ಅನಂತ ವಿಜಯ್ ಜೋಶಿ ನಟಿಸಿದ್ದಾರೆ.
ಈಗ ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿ ಅಜಯ್ ಜೋಶಿ ಸಿಟ್ಟಿನಿಂದ ಎಚ್ಚರಿಕೆ ಕೊಡುತ್ತಿರುವ ಚಿತ್ರ ಇದೆ. ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಆಗಸ್ಟ್ 1 ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಭೋಜ್ಪುರಿ ಚಿತ್ರರಂಗದ ಸ್ಟಾರ್ ನಟ ನಿರಹುವ, ಪ್ಯಾನ್ ಇಂಡಿಯಾ ನಟ ಪರೇಶ್ ರಾವಲ್, ರಾಜೇಶ್ ಖಟ್ಟರ್ ಸೇರಿದಂತೆ ಹಲವರು ನಟಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಬಾಲ್ಯದಿಂದ ಸಿಎಂ ಆಗುವವರೆಗಿನ ಕತೆ ಈ ಸಿನಿಮಾದಲ್ಲಿ ಇರಲಿದೆ.



