ಚುನಾವಣಾ ತಜ್ಞರ ಮಾತುಗಳಿಗೆ ವಿಶೇಷ ಅರ್ಥಗಳು ಇರುತ್ತವೆ. ಸದ್ಯಕ್ಕೆ ಯಾವ ಟಿವಿ ಚಾನೆಲ್, ಸಂಸ್ಥೆ ಸಮೀಕ್ಷೆ ಮಾಡುವಂತಿಲ್ಲ. ಹೀಗಾಗಿ.. ಚುನಾವಣೆ ಪರಿಣತರ ಮಾತುಗಳೇ ಮೌಲ್ಯ ಪಡೆದುಕೊಳ್ಳುತ್ತವೆ. ಇದೀಗ ಚುನಾವಣಾ ತಜ್ಞ ಎನ್ನಲಾಗಿರುವ ಯೋಗೀಂದ್ರ ಯಾದವ್ ಕೂಡಾ ನಂಬರ್ ಲೆಕ್ಕ ಕೊಟ್ಟಿದ್ಧಾರೆ. ಇವರ ನಂಬರ್ ಲೆಕ್ಕ ಪ್ರಶಾಂತ್ ಕಿಶೋರ್ ಕೊಟ್ಟಿರುವ ಲೆಕ್ಕಗಳಿಗಿಂತ ತುಸು ಭಿನ್ನ. ಒಂದರ್ಥದಲ್ಲಿ ವಿರುದ್ಧವಾಗಿವೆ.
ಪ್ರಶಾಂತ್ ಕಿಶೋರ್ ಪ್ರಕಾರ ಬಿಜೆಪಿ 300ಕ್ಕಿಂತ ಹೆಚ್ಚು ಹಾಗೂ ಎನ್ʻಡಿಎ ಒಕ್ಕೂಟ 350ರ ಸಮೀಪ ಸ್ಥಾನ ಗಳಿಸಲಿವೆ. ಕಾಂಗ್ರೆಸ್ ಸೀಟುಗಳ ಸಂಖ್ಯೆ 60 ದಾಟಬಹುದೇ ಹೊರತು, ಇಂಡಿ ಒಕ್ಕೂಟಕ್ಕೆ ಬಹುಮತ ಇಲ್ಲ. ಸಿಗುವುದೂ ಇಲ್ಲ. ಬಿಜೆಪಿ ಹೇಳಿಕೊಳ್ತಿರೋ ಹಾಗೆ 400ರ ಗಡಿಯನ್ನೂ ದಾಟಲ್ಲ ಎಂದಿದ್ದಾರೆ. ಆದರೆ.. ಯೋಗೇಂದ್ರ ಯಾದವ್ ಪ್ರಕಾರ.. ಬಿಜೆಪಿ ಈ ಬಾರಿ ಏಕಾಂಗಿಯಾಗಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ.
ಯಾದವ್ ಪ್ರಕಾರ, ಬಿಜೆಪಿ 240-260 ಸ್ಥಾನಗಳನ್ನು ಮತ್ತು ಅದರ ಮಿತ್ರಪಕ್ಷಗಳು 34-45 ಸ್ಥಾನಗಳನ್ನು ಗೆಲ್ಲುತ್ತವೆ. ಅಂದರೆ ಎನ್‌ಡಿಎ ಒಟ್ಟು 275 ಮತ್ತು 305 ಸ್ಥಾನಗಳನ್ನು ಗಳಿಸಬಹುದು. ದೇಶದಲ್ಲಿ ಸರ್ಕಾರ ರಚಿಸಲು 272 ಸ್ಥಾನಗಳ ಅಗತ್ಯವಿದೆ.
ಯೋಗೇಂದ್ರ ಯಾದವ್ ಅವರ ಮಾತನ್ನು ಪ್ರಶಾಂತ್ ಕಿಶೋರ್ ಬೆಂಬಲಸಿದ್ಧಾರೆ. ದೇಶದ ಚುನಾವಣೆಗಳು ಮತ್ತು ಸಾಮಾಜಿಕ-ರಾಜಕೀಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವವರಲ್ಲಿ ವಿಶ್ವಾಸಾರ್ಹವಾಗಿವೆ. ಯೋಗೇಂದ್ರ ಯಾದವ್ ಅವರು 2024 ರ ಲೋಕಸಭೆ ಚುನಾವಣೆಯ “ಅಂತಿಮ ಮೌಲ್ಯಮಾಪನ” ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಬಿಜೆಪಿ/ಎನ್‌ಡಿಎ 275-305 ಸ್ಥಾನ ಗಳಿಸಬಹುದು. ಈಗಿರುವ ಸರ್ಕಾರದಲ್ಲಿ ಬಿಜೆಪಿ/ಎನ್‌ಡಿಎ 303/323 ಸ್ಥಾನಗಳನ್ನು ಹೊಂದಿದೆ. (ಎನ್‌ಡಿಎ ಭಾಗವಾಗಿ ಶಿವಸೇನಾ 18 ಸ್ಥಾನಗಳನ್ನು ಗೆದ್ದುಕೊಂಡಿದೆ ಆದರೆ ಈಗ ಅವರೊಂದಿಗೆ ಇಲ್ಲ). ಈಗ ಯಾರ ಸರ್ಕಾರ ರಚನೆಯಾಗುತ್ತಿದೆ ಎಂದು ನೀವೇ ನಿರ್ಣಯಿಸಿ. ಯಾರು ಯಾರ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದು ಜೂನ್ 4 ರಂದು ತಿಳಿಯಲಿದೆ ಎಂದು ಪ್ರಶಾಂತ್ ಕಿಶೋರ್ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ಧಾರೆ.
2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳನ್ನು ಗೆದ್ದಿತ್ತು.ಆಗ ಯೋಗೇಂದ್ರ ಯಾದವ್ ಅವರು ಕಾಂಗ್ರೆಸ್ಸಿಗೆ 150ಕ್ಕೂ ಹೆಚ್ಚು ಸ್ಥಾನ ನೀಡಿದ್ದರು. ಈ ಬಾರಿ ಕಾಂಗ್ರೆಸ್ ಕಾಂಗ್ರೆಸ್ 85 ರಿಂದ 100 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಬಿಜೆಪಿ ಅಧಿಕಾರಕ್ಕೇರುವುದನ್ನು ತಡೆಯುವ ಆಶಯ ಹೊಂದಿರುವ ಇಂಡಿಯಾ ಬ್ಲಾಕ್ 120-135 ಸ್ಥಾನಗಳಿಗೆ ಇಳಿಯುವ ಸಾಧ್ಯತೆಯಿದೆ ಎಂದಿದ್ದಾರೆ ಯೋಗೇಂದ್ರ ಯಾದವ್.
ಅಮೆರಿಕದ ರಾಜಕೀಯ ವಿಜ್ಞಾನಿ ಇಯಾನ್ ಬ್ರೆಮ್ಮರ್ ಬಿಜೆಪಿ 295 ರಿಂದ 315 ಸ್ಥಾನಗಳನ್ನು ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಸಟ್ಟಾ ಬಜಾರ್ ಪ್ರಕಾರ ಈ ಬಾರಿ ಬಿಜೆಪಿ 300ಕ್ಕೂ ಹೆಚ್ಚು ಹಾಗೂ ಎನ್ʻಡಿಎ 350ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಸಟ್ಟಾ ಬಜಾರ್ ಬೆಟ್ಟಿಂಗ್ ಮಾರ್ಕೆಟ್ ಆಗಿದ್ದು, ಈ ಲೆಕ್ಕ ಸೋತ ಉದಾಹರಣೆ ಇಲ್ಲ.



