ಹೊಡಿರಲೆ ಹಲಗಿ.. ಹೊಡಿರಲೆ ಹಲಗಿ..
ನಾ ನಿಮ್ಮ ಕಡೆ ಹುಡಗಿ.. ತೆಗಿರಲೆ ನೆಟಗಿ..
ನಿಶ್ವಿಕಾ ನಾಯ್ಡು ಕುಪ್ಪಳಿಸಿ ಕುಪ್ಪಳಿಸಿ ಕುಣಿದಿದ್ದಾರೆ. ಈಗಾಗಲೇ ಭಟ್ರು ಸಾಕಷ್ಟು ಎಣ್ಣೆ ಸಾಂಗ್ಸ್ ಬರೆದಿದ್ದಾರೆ. ಆದರೆ ಉತ್ತರ ಕರ್ನಾಟಕ ಶೈಲಿಯ ಭಾಷೆಯಲ್ಲಿ ಈ ಸಾಂಗ್ ಲಿರಿಕ್ಸ್ ಸಖತ್ ಮಜವಾಗಿದೆ. ಪದೇ ಪದೇ ಗುನುಗುವಂತಿದೆ. ಅಪ್ಪಟ್ಟ ಉತ್ತರ ಕರ್ನಾಟಕದ ಸೊಗಡಿನ ಪದಗಳೇ ಮೇಳೈಸಿರುವ ಹಾಡನ್ನು ಯೋಗರಾಜ್ ಭಟ್ಟರ ಸಾಹಿತ್ಯದಲ್ಲಿ ಗರಡಿ ಚಿತ್ರತಂಡ ಕೊಡುಗೆಯಾಗಿ ಕೊಟ್ಟಿದೆ. ಯೋಗರಾಜ್ ಭಟ್ಟರ ನಿರ್ದೇಶನದ ಹಾಡಿಗೆ ಅವರದ್ದೇ ಸಾಹಿತ್ಯ. ಅಷ್ಟು ಸಭ್ಯ ಪೋಲಿ ಭಾಷೆಯ ಪದಗಳು ಅವರ ಪೆನ್ನಿನಲ್ಲೇ ಬರೋದು.
ಹರಿ- ಭಟ್ರ ಕಾಂಬೋ ಸೂಪರ್ ಎಂದು ಕೆಲವರು ರಿಪೀಟ್ ಮೋಡ್ನಲ್ಲಿ ‘ಹೊಡಿರೆಲೆ ಹಲಗಿ’ ಸಾಂಗ್ ಕೇಳ್ತಿದ್ದಾರೆ. ಮೇಘನಾ ಹಲಿಯಾಲ್ ವಾಯ್ಸ್ ಮತ್ತಷ್ಟು ಖದರ್ ತಂದುಕೊಟ್ಟಿದೆ. ನಿಶ್ವಿಕಾ ನಾಯ್ಡು ಅವರಂತೂ ಕುಣಿದು ಕುಪ್ಪಳಿಸಿದ್ದಾರೆ.
ನಾನು ಮೂಲತಃ ಡಾನ್ಸರ್. ಆದರೆ ಯಾವ ಚಿತ್ರದಲ್ಲಿಯೂ ನನ್ನ ನೃತ್ಯಪ್ರತಿಭೆಯನ್ನು ತೋರಿಸಲು ಅವಕಾಶ ಸಿಗಲೇ ಇಲ್ಲ. ಬಹಳ ವರ್ಷಗಳಿಂದ ವಿಶೇಷ ಹಾಡಿನಲ್ಲಿ ನರ್ತಿಸಬೇಕು ಎಂದು ಕಾಯುತ್ತಿದ್ದೆ. ಈಗ ಯೋಗರಾಜ್ ಭಟ್ಟರ ನಿರ್ದೇಶನದ ‘ಗರಡಿ’ಯಲ್ಲಿ ಅಂತಹದ್ದೊಂದು ಅವಕಾಶ ಸಿಕ್ಕಿದ್ದು ಖುಷಿಯ ವಿಚಾರ. ಭಟ್ಟರ ವಿಷನ್ ಮತ್ತು ಅವರ ಸಿನಿಮಾ ಬರವಣಿಗೆ ಎಲ್ಲವೂ ನನಗೆ ಮೊದಲಿನಿಂದಲೂ ಇಷ್ಟ. ಹಾಗಾಗಿ ಅವರು ಕರೆ ಮಾಡಿ ಹೇಳಿದ ತಕ್ಷಣ ಈ ಹಾಡಿನಲ್ಲಿ ಕಾಣಿಸಿಕೊಳ್ಳಲು ಒಪ್ಪಿಕೊಂಡೆ ಎಂದಿದ್ದಾರೆ ನಿಶ್ವಿಕಾ ನಾಯ್ಡು.
ಸೌಮ್ಯ ಫಿಲ್ಮ್ಸ್ ಬ್ಯಾನರ್ನಡಿ ಈ ಸಿನಿಮಾವನ್ನು ವನಜಾ ಪಾಟೀಲ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಸೂರ್ಯ, ಸೋನಲ್ ಮೊಂಥೆರೋ, ಧರ್ಮಣ್ಣ ಕಡೂರು, ರವಿಶಂಕರ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಬಿ.ಸಿ. ಪಾಟೀಲ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.



