ಜೆಡಿಎಸ್ (JDS) ಮುಖಂಡ, ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ. ಯೂರೋಪ್ (Europe) ಪ್ರವಾಸದಲ್ಲಿದ್ದಾರೆ. ಕುಮಾರಸ್ವಾಮಿ (Kumaraswamy) ಅವರಷ್ಟೇ ಅಲ್ಲ, ಪತ್ನಿ ಅನಿತಾ ( Anitha Kumaraswamy) , ಪುತ್ರ ನಿಖಿಲ್ (Nikhil Kumaraswamy) , ಸೊಸೆ ರೇವತಿ (Revathi) , ಮೊಮ್ಮಗ ಅವ್ಯಾನ್ ದೇವ್ (Avyan Dev).. ಎಲ್ಲರೂ ಹೋಗಿದ್ದಾರೆ. ಹೋಗಿರುವುದು ಯೂರೋಪ್`ಗೆ. ಯೂರೋಪ್ ಎನ್ನುವುದು ದೇಶವಲ್ಲ, ಖಂಡ. ಯಾವ್ಯಾವ ದೇಶ ಸುತ್ತುತ್ತಿದ್ದಾರೋ.. ಏನೊ..
ಇತ್ತ ಯಡಿಯೂರಪ್ಪ (BS Yeddyurappa) ಕೂಡಾ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ. ಯಡಿಯೂರಪ್ಪ (BS Yeddyurappa) ಕುಟುಂಬದವರೆಲ್ಲ ಯೂರೋಪಿನಲ್ಲಿದ್ದಾರೆ. ಪುತ್ರ ವಿಜಯೇಂದ್ರ (Vijayendra Yeddyurappa) ಸೇರಿದಂತೆ.. ಎಲ್ಲರೂ.. ಬಿಎಸ್‍ವೈ (BSY) ಆಪ್ತ ರುದ್ರೇಶ್ ಅವರೂ ಕೂಡಾ ಹೋಗಿದ್ದಾರಂತೆ. ಯಡಿಯೂರಪ್ಪ (BS Yeddyurappa) ಅವರೂ ಕೂಡಾ ಹೋಗಿರುವುದು ಯೂರೋಪ್ (Eruorpe) ಪ್ರವಾಸಕ್ಕೆ. ಟರ್ಕಿಯ (Turkey) ಇಸ್ತಾನ್`ಬುಲ್`ನಲ್ಲಿದ್ದಾರಂತೆ (Isthanbull). ಅಲ್ಲಿಂದ ಯಾವ ದೇಶಕ್ಕೆ ಹೋಗುತ್ತಾರೋ.. ಏನೋ.. ಗೊತ್ತಿಲ್ಲ.
ಒಂದು ಕಡೆ ಸಂಚಲನ ಸೃಷ್ಟಿಸಿದ್ದ ಬಿಜೆಪಿ ಜೆಡಿಎಸ್ ಮೈತ್ರಿಯ (BJP-JDS Coilation) ಮಾತುಕತೆಗೆ ಬ್ರೇಕ್ ಬಿದ್ದಿದೆ. ಅತ್ತ ದೇವೇಗೌಡರು (HD Devegowda) ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರೆ, ಇತ್ತ ಬಿಜೆಪಿಯ ಯಡಿಯೂರಪ್ಪ (BS Yeddyurappa) , ಬಿ.ಎಲ್. ಸಂತೋಷ್ (BL Santhosh) ಮೊದಲಾದವರು ವಿಲೀನವಾಗುವುದಾದರೆ ಸರಿ. ಆದರೆ ಮೈತ್ರಿ ಬೇಡ ಎಂದಿದ್ದಾರಂತೆ. ವಿಲೀನ ಆದರೆ ಓಕೆ. ಬಿಜೆಪಿಗೆ ಶೇ.4ರಿಂದ ಶೇ.7ರಷ್ಟು ವೋಟು ಹೆಚ್ಚಾಗುತ್ತದೆ. ಆಗ ಬಿಜೆಪಿಗೆ ಲಾಭ. ಆದರೆ ಮೈತ್ರಿಯಾದರೆ ಕಾಂಗ್ರೆಸ್ಸಿಗೆ (Congress) ಲಾಭ ಎಂದರಂತೆ. ಕಳೆದ ಲೋಕಸಭೆ ಚುನಾವಣೆಯ ಫಲಿತಾಂಶ ಮುಂದಿಟ್ಟು ತೋರಿಸಿದ ಲೆಕ್ಕ ಅಮಿತ್ ಶಾ (Amith Shah) ಅವರಿಗೂ ಒಪ್ಪಿಗೆಯಾಯ್ತಂತೆ. ಸದ್ಯಕ್ಕೆ ಬೇಡ ಬಿಡಿ ಎಂದು ಹೇಳಿ, ಮೈತ್ರಿ ಮಾತುಕತೆಗೆ ಬ್ರೇಕ್ ಹಾಕಿದ್ದಾರಂತೆ.
ಇದೆಲ್ಲದರ ಮಧ್ಯೆ ಕುಮಾರಸ್ವಾಮಿ (HD Kumaraswamy) ಕುಟುಂಬ ಯೂರೋಪ್ ಪ್ರವಾಸಕ್ಕೆ ಹೋಗಿರುವುದು, ಅದೇ ಖಂಡಕ್ಕೆ ಯಡಿಯೂರಪ್ಪ (BS Yeddyurappa) ಕುಟುಂಬ ಕೂಡಾ ವಿದೇಶ ಪ್ರವಾಸ ಹೋಗಿರುವುದು ಕೇವಲ ಕಾಕತಾಳೀಯ.



