ವಿಜಯೇಂದ್ರ, ಯತ್ನಾಳ್ ಫೈಟಿನಲ್ಲಿ ವಿಜಯೇಂದ್ರ ಪರ ನಿಂತಿದೆಯಾ ಹೈಕಮಾಂಡ್ ಎನ್ನುವ ಪ್ರಶ್ನೆ ಕಾಡುತ್ತಿದೆ. ವಿಷಯ ಏನೆಂದರೆ ವಿಜಯೇಂದ್ರ V/S ಯತ್ನಾಳ್ ʻಬೀದಿ ಜಗಳʼದ ಮಧ್ಯೆ ಜಿಲ್ಲಾಧ್ಯಕ್ಷರ ನೇಮಕಕ್ಕೆ ಒಪ್ಪಿಗೆ ಕೊಟ್ಟಿದೆ. ಇಷ್ಟು ತಿಕ್ಕಾಟದ ಮಧ್ಯೆ ಹೈಕಮಾಂಡ್ ನೂತನ ಅಧ್ಯಕ್ಷರ ನೇಮಕಕ್ಕೆ ಒಪ್ಪಿದ್ದು ಹೇಗೆ ಎನ್ನುವುದು ಎಲ್ಲರ ಪ್ರಶ್ನೆ. ಏಕೆಂದರೆ ಹೈಕಮಾಂಡ್ ಒಪ್ಪಿಗೆ ಇಲ್ಲದೆ 23 ನೂತನ ಜಿಲ್ಲಾಧ್ಯಕ್ಷರ ನೇಮಕ ಸಾಧ್ಯವೇ ಇಲ್ಲ..! ಹಾಗಾದರೆ ಅಧ್ಯಕ್ಷರ ನೇಮಕಕ್ಕೆ ಹೈಕಮಾಂಡ್ ಒಪ್ಪಿದ್ದರ ಹಿಂದೆ ಇರುವ ಕಥೆ ಏನು..?
ಅಧ್ಯಕ್ಷರ ನೇಮಕದ ಹಿಂದೆ..
ಬಿಜೆಪಿ ರೂಲ್ಸ್ ಪ್ರಕಾರ ಕನಿಷ್ಠ ಶೇ.50ರಷ್ಟು ಜಿಲ್ಲೆಗಳಿಗೆ ಅಧ್ಯಕ್ಷರ ನೇಮಕ ಆಗಲೇಬೇಕು. ಚುನಾವಣೆಯಂತೂ ನಡೆಯುತ್ತದೆ. ಕರ್ನಾಟಕಕದಲ್ಲಿ ರಾಜ್ಯ ಬಿಜೆಪಿಯ ಒಟ್ಟು 39 ಸಂಘಟನಾನತ್ಮಕ ಜಿಲ್ಲೆಗಳಿವೆ. ಹೌದು, 39 ಸಂಘಟನಾತ್ಮಕ ಜಿಲ್ಲೆಗಳಿವೆ. ಹೀಗಾಗಿ ಆಂತರಿಕ ನೀತಿ ನಿಯಮಾವಳಿಗಳ ಪ್ರಕಾರ ನೂತನ ಅಧ್ಯಕ್ಷರ ನೇಮಕ. ಹೀಗಾಗಿ ದೆಹಲಿ ಚುನಾವಣೆ ನಂತರ ಆಂತರಿಕ ಚುನಾವಣೆ ನಡೆಸಲು ಸಿದ್ಧವಾದ ಬಿಜೆಪಿ ಹೈಕಮಾಂಡ್, ಚುನಾವಣೆಗೆ ರೆಡಿಯಾಗುತ್ತಿದೆ.
ಇನ್ನು ಸತತ 14 ತಿಂಗಳಿಂದ ವಿಜಯೇಂದ್ರ ವಿರುದ್ಧ ಬೆಂಕಿ ಉಗುಳುತ್ತಲೇ ಇರುವ ಯತ್ನಾಳ್ ಪಡೆ, ವಿಜಯೇಂದ್ರ ಜೊತೆ ಸಂಧಾನದ ಬಾಗಿಲು ಮುಚ್ಚಿಕೊಂಡಿದೆ. ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರು ಬಳಸಿರುವ ಪದಗಳೇ ಇದಕ್ಕೆ ಕಾರಣ. ಚುನಾವಣೆ ನಡೆದರೂ ಒಂದಾಗುವ ಸಾಧ್ಯತೆ ದೂರ ಮಾಡಿಕೊಂಡಿದೆ.
ಬಚ್ಚಾ, ಭ್ರಷ್ಟ, ಫೋರ್ಜರಿ.. ಪದಗಳ ಬಳಕೆಯಿಂದ ಸಂಧಾನದ ಬಾಗಿಲು ಶಾಶ್ವತವಾಗಿ ಬಂದ್ ಆಗಿದೆ. ಇದೆಲ್ಲದರ ನಡುವೆಯೂ ಚುನಾವಣೆಗೆ ಸಿದ್ಧವಾಗುತ್ತಿದೆ ಬಿಜೆಪಿ ಹೈಕಮಾಂಡ್.
ಯತ್ನಾಳ್ ಟೀಂ ʻ ಆ ಭಾಷೆʼಗೆ ʻಆ ಭಾಷೆʼಯಲ್ಲೇ ತಿರುಗೇಟು ಕೊಟ್ಟ ವಿಜಯೇಂದ್ರ ಟೀಂ..!
ಯತ್ನಾಳ್ ಟೀಂಗೆ ವಿಜಯೇಂದ್ರ ಟೀಂ ʻಯತ್ನಾಳ್ ಭಾಷೆʼಯಲ್ಲೇ ತಿರುಗೇಟು ಕೊಟ್ಟಿದೆ. ಇನ್ನೇನಿದ್ರೂ ಸಂಧಾನ.. ಸಮಾಧಾನ ಮುಗಿದ ಅಧ್ಯಾಯ ಎಂದು ನಿರ್ಧಾರ ಮಾಡಿಯೇ ಅಖಾಡಕ್ಕೆ ಇಳಿದಿದೆ ವಿಜಯೇಂದ್ರ ಟೀಂ. ವಾಗ್ದಾಳಿಗಳಿಗೆ ರಫ್ & ಟಫ್ ತಿರುಗೇಟು ಕೊಟ್ಟ ವಿಜಯೇಂದ್ರ ಟೀಂ ಕೊಟ್ಟಿದೆ. ಈ ಬಾರಿ ವಿಜಯೇಂದ್ರ ಪರ ರೇಣುಕಾಚಾರ್ಯ ಒಬ್ಬರೇ ಅಲ್ಲ.. ಇನ್ನಿಬ್ಬರು ಓಪನ್ ಫೈಟಿಗೆ ಎಂಟ್ರಿ ಕೊಟ್ಟಿದ್ದಾರೆ. ಹಾಸನದ ಪ್ರೀತಂ ಗೌಡ, ಯಲಹಂಕದ ಎಸ್ ಆರ್ ವಿಶ್ವನಾಥ್ ಬಹಿರಂಗ ಸಮರ ಸಾರಿದ್ದು, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕೂಡಾ ವಿಜಯೇಂದ್ ಪರ ಓಪನ್ ಬ್ಯಾಟಿಂಗ್ ಮಾಡುತ್ತಿದ್ಧಾರೆ.
ಯತ್ನಾಳ್ ವಿರುದ್ಧದ ಪಡೆಗೆ ಯತ್ನಾಳ್ ಭಾಷೆಯಲ್ಲೇ ತಿರುಗೇಟು ನೀಡುತ್ತಿರುವ ಟೀಂ, ನಿಮಗೇ ಗೆಲ್ಲುವ ಶಕ್ತಿ ಇಲ್ಲ, ಸೋತವರಿಗೆ ಅವಕಾಶ ಕೊಟ್ಟಿದೆ ಎಂದು ತಿರುಗೇಟು ಕೊಟ್ಟಿದೆ. ಸುಧಾಕರ್ ವಿರುದ್ಧ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಬಹಿರಂಗ ವಾಗ್ದಾಳಿ ನಡೆಸಿದ್ದು, ಪ್ರೀತಂ ಗೌಡರಿಂದಲೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪರ ಬಹಿರಂಗ ಸಮರ ನಡೆಯುತ್ತಿದೆ. ರಾಜೀನಾಮೆ ಕೊಟ್ಟು ಪುನಃ ಚುನಾವಣೆ ಎದುರಿಸಿ ಎಂದು ಸುಧಾಕರ್‌ಗೆ ಓಪನ್ ಚಾಲೆಂಜ್ ಹಾಕಿದ್ದಾರೆ ರೇಣುಕಾಚಾರ್ಯ. ಚಿಕ್ಕಬಳ್ಳಾಪುರ ಬಿಜೆಪಿ ಅಧ್ಯಕ್ಷರ ಬದಲಾವಣೆ ಇಲ್ಲ ಎಂದು ನೇರವಾಗಿಯೇ ಸುಧಾಕರ್‌ಗೆ ವಿಜಯೇಂದ್ರ ತಿರುಗೇಟು ಕೊಟ್ಟಿರುವ ವಿಜಯೇಂದ್ರ, ನಾನು ಅಧ್ಯಕ್ಷನಾಗಿರುವುದು ಯುದ್ಧ ಮಾಡೋದಕ್ಕೆ ಅಲ್ಲ ಎಂದಿದಾರೆ. ಯತ್ನಾಳ್ ಪಡೆಯ ವಾಗ್ದಾಳಿಗಳ ವಿರುದ್ಧ ಯತ್ನಾಳ್ ಟೀಂ ಮಾದರಿಯಲ್ಲೇ ಫೈಟ್ ನಡೆಯುತ್ತಿದೆ.



