Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಹೊಸ ಪಕ್ಷ ಕಟ್ತಾರಂತೆ ಯತ್ನಾಳ್‌ : ಗೆದ್ದವರು ದೇವೇಗೌಡ ಮಾತ್ರ..!

SpeciallU by SpeciallU
March 31, 2025
in News, Politics
Reading Time: 1 min read
0 0
0
ಹೊಸ ಪಕ್ಷ ಕಟ್ತಾರಂತೆ ಯತ್ನಾಳ್‌ : ಗೆದ್ದವರು ದೇವೇಗೌಡ ಮಾತ್ರ..!

ಜನರು ಬಿಜೆಪಿಯಿಂದ ಹಿಂದೂಗಳ ರಕ್ಷಣೆ ಆಗಲ್ಲ ಎನ್ನುತ್ತಿದ್ದಾರೆ. ಹಿಂದೂ ಪರವಾದ ಪಕ್ಷ ಬೇಕು ಎಂದು ಹೇಳುತ್ತಿದ್ದಾರೆ. ಹಿಂದೂಗಳು ಸಹನೆ ಉಳ್ಳವರು, ಕಾಂಗ್ರೆಸ್ ಒಂದು ಮುಸ್ಲಿಂ ಪಕ್ಷ. ಬಿಜೆಪಿ ಹಿಂದೂ ಪಕ್ಷವಾಗದಿದ್ರೆ ಐತಿಹಾಸಿಕ ನಿರ್ಧಾರ ಮಾಡುತ್ತಾರೆ. BSY ಕುಟುಂಬಕ್ಕೆ ನಾಯಕತ್ವ ಕೊಟ್ರೆ ಬಿಜೆಪಿ ಹೀನಾಯವಾಗಿ ಸೋಲುತ್ತೆ/ ಬಿಎಸ್​ವೈ ಕುಟುಂಬ ಉತ್ತರ ಕರ್ನಾಟಕಕ್ಕೆ ಮಹಾಮೋಸ ಮಾಡಿದೆ. ಆಲಮಟ್ಟಿ ಡ್ಯಾಂಗೆ 25 ಸಾವಿರ ಕೋಟಿ ರೂ. ಕೊಡುವೆ ಎಂದು ಮೋಸ ಮಾಡಿದ್ದಾರೆ. ವಿಜಯಪುರ ನಗರಕ್ಕೆ ಬಂದಿದ್ದ 125 ಕೋಟಿ ರೂ. ಹಿಂಪಡೆದು ವಂಚಿಸಿದ್ದಾರೆ. ಬಿಎಸ್​ವೈ ಬಿಟ್ಟರೆ ಲಿಂಗಾಯತರು ಕೈಬಿಡುತ್ತಾರೆ ಎನ್ನುವ ಭಯ ಬಿಡಲಿ.. ಹೀಗೆ ಹೇಳುತ್ತಿರುವ ಯತ್ನಾಳ್‌, ಹೊಸ ಹಿಂದುತ್ವದ ಪಕ್ಷ ಕಟ್ಟುವ ಸುಳಿವು ಕೊಟ್ಟಿದ್ದಾರೆ. ಆದರೆ ಹೊಸ ಪಕ್ಷ ಕಟ್ಟಲ್ಲ ಎಂದು ಕೂಡಾ ಬಹಿರಂಗವಾಗಿ ಹೇಳಿದ್ದ ಯತ್ನಾಳ್‌ ‘ರಾಜ್ಯದಲ್ಲಿ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ ಹೀಗಾಗಿ ನಾನು ಹೊಸ ಪಕ್ಷ ಕಟ್ಟುತ್ತೇನೆ. ವಿಜಯದಶಮಿಯಂದು ಹೊಸ ಪಕ್ಷ ಸ್ಥಾಪನೆ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ಯತ್ನಾಳ್‌ ಅವರು ಈಗ ಸ್ವತಂತ್ರ ಶಾಸಕರಾಗಿರುವುದರಿಂದ ತಮ್ಮದೇ ಆದ ರಾಜಕೀಯ ಪಕ್ಷ ಸ್ಥಾಪಿಸುತ್ತಾರೆ ಎಂಬ ವದಂತಿ ಹಬ್ಬಿದ್ದರೂ ಅದನ್ನು ಅವರ ಆಪ್ತರು ಬಲವಾಗಿ ಅಲ್ಲಗಳೆಯುತ್ತಿದ್ದರೆ, ಸೋಷಿಯಲ್‌ ಮೀಡಿಯಾದಲ್ಲಿ ಮಾತ್ರ ಹೊಸ ಪಕ್ಷ ಕಟ್ಟಿ, ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಪರಾಕುಗಳು ಜೋರಾಗಿವೆ. ರಾಜ್ಯ ರಾಜಕಾರಣದ ಅತಿರಥ ಮಹಾರಥರು ಸ್ವಂತ ರಾಜಕೀಯ ಪಕ್ಷ ಸ್ಥಾಪಿಸಿ ಮುಂದೇನು ಮಾಡಿದರು ಎಂಬುದು ಗೊತ್ತಿರುವ ಸಂಗತಿಯೇ. ಹೀಗಾಗಿ, ಆ ಸಾಹಸಕ್ಕೆ ಕೈಹಾಕುವುದಿಲ್ಲ  ಎನ್ನಲಾಗುತ್ತಿದ್ದರೂ, ತಳ್ಳಿ ಹಾಕುವಂತಿಲ್ಲ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದೇವರಾಜ ಅರಸು : ಕ್ರಾಂತಿರಂಗ ಫೇಲ್

ಇಂದಿರಾ ಗಾಂಧಿ ಅವರಿಂದ ಉಚ್ಚಾಟನೆಯಾಗಿದ್ದ ದೇವರಾಜ ಅರಸು ಅರಸು ಕಾಂಗ್ರೆಸ್‌ ಎಂಬ ಪಕ್ಷವನ್ನು ಮುನ್ನಡೆಸಿದ್ದರು. ಆದರೆ ಅರಸು ಪಕ್ಷ ಯಾವುದೇ ಪ್ರಭಾವ ಬೀರಲಿಲ್ಲ. ಕೇವಲ ಒಂದು ಸೀಟು ಗೆದ್ದು, ಅರಸು ಕ್ಯಾಂಪಿನಲ್ಲಿದ್ದ ಶಾಸಕರೆಲ್ಲ ಇಂದಿರಾ ಕಾಂಗ್ರೆಸ್ಸಿಗೆ ಸೇರಿದರು. ಅದಾದ ನಂತರ ಅರಸು 1979ರಲ್ಲಿ ಕರ್ನಾಟಕ ಕ್ರಾಂತಿರಂಗ ಎಂಬ ಇನ್ನೊಂದು ಪಕ್ಷ ಸ್ಥಾಪಿಸಿದರು. ಆದರೆ, ಯಾವುದೇ ದೊಡ್ಡ ಪ್ರಭಾವ ಬೀರಲಿಲ್ಲ. ಮುಂದೆ ಅದು ಜನತಾ ಪಕ್ಷದಲ್ಲಿ ವಿಲೀನವಾಯ್ತು.

ಎಸ್. ಬಂಗಾರಪ್ಪ ಕ್ರಾಂತಿರಂಗ ವೈಫಲ್ಯ

ಇನ್ನು ಅರಸು ಅವರು ಕಾಂಗ್ರೆಸ್‌ ಪಕ್ಷದಿಂದ ಉಚ್ಚಾಟನೆಯಾಗುವುದಕ್ಕೆ ಕಾರಣವಾಗಿದ್ದ ಸಾರೆಕೊಪ್ಪ ಬಂಗಾರಪ್ಪ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ವೀರಪ್ಪ ಮೊಯ್ಲಿ ಅವರ ತಂತ್ರದಿಂದಾಗಿ ಪದವಿ ಕಳೆದುಕೊಳ್ಳಬೇಕಾಯ್ತು. ಕ್ಲಾಸಿಕ್‌ ಕಂಪ್ಯೂಟರ್‌ ಹಗರಣದ ಹೆಸರಿನಲ್ಲಿ ಅಧಿಕಾರ ಕಳೆದುಕೊಂಡ ಬಂಗಾರಪ್ಪ, ಕರ್ನಾಟಕ ಕ್ರಾಂತಿರಂಗ ಪಕ್ಷವನ್ನು ಸ್ಥಾಪಿಸಿದರು. ಇದರಲ್ಲಿ ಇನ್ನೂ ಒಂದು ವಿಶೇಷ ಇದೆ. ಅರಸು ಅವರನ್ನು ಕಾಂಗ್ರೆಸ್ಸಿಂದ ಉಚ್ಚಾಟನೆ ಮಾಡಬೇಕು ಎಂದು ವರದಿ ಕೊಟ್ಟಿದ್ದ ಬಂಗಾರಪ್ಪ, ಅದೇ ಅರಸು ಅವರ ಕ್ರಾಂತಿರಂಗದ ಹೆಸರನ್ನೇ ತಮ್ಮ ಪಕ್ಷಕ್ಕೆ ಇಟ್ಟುಕೊಂಡರು.
ಶೇ.8ರಷ್ಟು ವೋಟು ಪಡೆದಿದ್ದೇ ಕ್ರಾಂತಿರಂಗದ ದೊಡ್ಡ ಸಾಧನೆ. ಗೆದ್ದವರು ಕಾಂಗ್ರೆಸ್‌ ಸೇರಿದ್ದರು. ಅದಾದ ಮೇಲೆ ಕರ್ನಾಟಕ ಕಾಂಗ್ರೆಸ್‌ ಪಕ್ಷ ಮತ್ತು ಕರ್ನಾಟಕ ವಿಕಾಸ ಪಕ್ಷಗಳನ್ನು ಕಟ್ಟಿದ್ದರು. ಕೆಸಿಪಿ ಮೂಲಕ 6 ಶಾಸಕರನ್ನೂ ಗೆಲ್ಲಿಸಿಕೊಂಡ ಬಂಗಾರಪ್ಪ, ಅದಾದ ಮೇಲೆ ಸಮಾಜವಾದಿ, ಬಿಜೆಪಿ, ಜೆಡಿಎಸ್‌ ಪಕ್ಷಗಳನ್ನು ಸುತ್ತುವಂತಾಯ್ತು.

2013 ಯಡಿಯೂರಪ್ಪ ಕೆಜೆಪಿ :

2013ರಲ್ಲಿ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ಯಡಿಯೂರಪ್ಪ, ಕರ್ನಾಟಕ ಜನತಾ ಪಕ್ಷ ಸ್ಥಾಪಿಸಿದರು. ಆ ಚುನಾವಣೆಯಲ್ಲಿ ಶೇ.10ರಷ್ಟು ಮತ ಪಡೆದ ಕೆಜೆಪಿಯಿಂದ 6 ಶಾಸಕರು ಗೆದ್ದಿದ್ದರು. ಅದಾದ ನಂತರ 2014ರಲ್ಲಿ ಯಡಿಯೂರಪ್ಪ ತಮ್ಮ ಪಕ್ಷದ ಅಷ್ಟೂ ಜನ ಶಾಸಕರ ಜೊತೆ ಬಿಜೆಪಿಯಲ್ಲಿ ವಿಲೀನವಾದರು.

ಇನ್ನು ಶ್ರೀರಾಮುಲು, ಜನಾರ್ದನ ರೆಡ್ಡಿ, ವಿಜಯ ಸಂಕೇಶ್ವರ, ಜೆಹೆಚ್‌ ಪಟೇಲ್‌, ರಾಮಕೃಷ್ಣ ಹೆಗಡೆ, ನಿಜಲಿಂಗಪ್ಪ, ವಾಟಾಳ್ ನಾಗಾರಾಜ್‌, ವಿಜಯ್‌ ಮಲ್ಯ.. ಹೀಗೆ ಹಲವು ನಾಯಕರು ಪಕ್ಷ ಕಟ್ಟಿದ್ದಾರೆ. ಆದರೆ.. ಯಾವ ಪಕ್ಷವೂ ಗುರುತರ ಸಾಧನೆ ಮಾಡಿಲ್ಲ. ಈ ಹೋರಾಟದಲ್ಲಿ ಗೆದ್ದವರು ಒಬ್ಬರು ಮಾತ್ರ. ಅದು ಹೆಚ್‌ ಡಿ ದೇವೇಗೌಡ.

ಜಾತ್ಯತೀತ ಜನತಾ ದಳ ಮತ್ತು ದೇವೇಗೌಡ :

ಜನತಾ ದಳವನ್ನು ಇಬ್ಭಾಗ ಮಾಡಿ ಜಾತ್ಯತೀತ ಜನತಾ ದಳ ಸ್ಥಾಪನೆಯಾಯ್ತು. ರಾಮಕೃಷ್ಣ ಹೆಗಡೆ ಅವರನ್ನು ಪಕ್ಷದಿಂದ ಆಚೆ ಹಾಕಿದ್ದ ಪರಿಣಾಮ, ಜನತಾ ದಳದಲ್ಲಿ ದೇವೇಗೌಡರ ವಿರುದ್ಧ ಒಂದು ಬಣ ಎದ್ದು ನಿಂತಿತ್ತು. ಪ್ರಧಾನಿ ಹುದ್ದೆಯಲ್ಲಿರುವವರೆಗೂ ತಟಸ್ಥವಾಗಿದ್ದ ಹೆಗಡೆ ಬಣದ ನಾಯಕರು ಬಂಡಾಯ ಎದ್ದಾಗ ದೇವೇಗೌಡ ಜೆಡಿಎಸ್‌ ಹುಟ್ಟುಹಾಕಿದರು. ಮಾಜಿ ಪ್ರಧಾನಿ, ಪ್ರಧಾನಿ ಹುದ್ದೆಗೇರಿದ ಏಕೈಕ ಕನ್ನಡಿಗ ಎಂಬ ಹೆಗ್ಗಳಿಕೆಯಿಂದಾಗಿ ಸೃಷ್ಟಿಯಾಗಿದ್ದ ಲೆಜೆಂಡ್‌ ಪಟ್ಟ ಮತ್ತು ಜೊತೆಗೆ ಒಕ್ಕಲಿಗ ಸಮುದಾಯದ ಪ್ರಾಬಲ್ಯದಿಂದಾಗಿ ಜೆಡಿಎಸ್‌ ಅಸ್ಥಿತ್ವದಲ್ಲಿದೆ. ಕಡಿಮೆ ಸೀಟು ಗೆದ್ದರೂ ಕೂಡಾ ಅಧಿಕಾರದ ಗದ್ದುಗೆ ಏರಿದೆ. ಆದರೆ ಆ ಪಕ್ಷದ ಪ್ರಭಾವವೂ ಕ್ಷೀಣಿಸುತ್ತಿದೆ.

ಇದು ಯತ್ನಾಳ ಅವರಿಗೂ ಗೊತ್ತಿದೆ. ಒಂದು ಪಕ್ಷವನ್ನು ಸ್ಥಾಪಿಸಿ, ಮುನ್ನಡೆಸುವುದು ಸುಲಭದ ಮಾತಲ್ಲ. ಆರ್ಥಿಕ ಸಂಪನ್ಮೂಲ, ಜನಪ್ರಿಯತೆ ಮತ್ತು ಜಾತಿ ಬಲ ಮೂರೂ ಬೇಕು. ಆ ಮೂರೂ ಕೂಡಾ ಯತ್ನಾಳ್‌ ಅವರಲ್ಲಿ ಸಾಕಾಗುವಷ್ಟಿಲ್ಲ ಎನ್ನುವುದೇ ಯತ್ನಾಳ್‌ ಹಿಂದೇಟಿಗೆ ಕಾರಣ.

Tags: #ಯತ್ನಾಳ್‌ #ಹೊಸಪಕ್ಷ #ಬಿಜೆಪಿ #Yatnal #NewParty #BJPಹೊಸ ಪಕ್ಷ ಕಟ್ತಾರಂತೆ ಯತ್ನಾಳ್‌
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.