ರಾಜ್ಯ ಬಿಜೆಪಿಯಲ್ಲಿ ಯತ್ನಾಳ್ ತಂಡ ಹಾಗೂ ವಿಜಯೇಂದ್ರ ತಂಡದ ನಡುವಿನ ತಿಕ್ಕಾಟ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಪಕ್ಷದ ನಾಯಕತ್ವದ ವಿರುದ್ಧ ನಿರಂತರವಾಗಿ ಬಂಡಾಯ ಸಾರಿಸುವ ಯತ್ನಾಳ್ ಟೀಂಗೆ ಲಗಾಮು ಹಾಕುವಲ್ಲಿ ಹೈಕಮಾಂಡ್ ನಾಯಕರು ವಿಫಲರಾಗಿದ್ದಾರೆ. ಬಿಜೆಪಿಯಲ್ಲೀಗ ಹೈಕಮಾಂಡ್ ಫನ್ನಿ ವಿಷಯವಾಗಿ ಹೋಗಿದೆ. ಈಗ ಯತ್ನಾಳ್ ಹೇಗೆಲ್ಲ ಟೀಕೆ ಮಾಡಿದ್ದಾರೆ ಎಂದರೆ ಅವರು ಯಾರನ್ನೂ ಬಿಟ್ಟಿಲ್ಲ. ಎಲ್ಲವೂ ಏಕವಚನಗಳೇ.
ವಿಜಯೇಂದ್ರ ಮೇಲ್ಯಾಕೆ ಕೇಸ್ ಇಲ್ಲ :
ಸಿ ಟಿ ರವಿ, ನನ್ನನ್ನು ಸೇರಿದಂತೆ ಹಿಂದೂಪರವಾಗಿ ಮಾತನಾಡುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅದೇ ವಿಜಯೇಂದ್ರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. ಇದನ್ನು ನೋಡಿದರೆ ಸರ್ಕಾರ ಮತ್ತು ವಿಜಯೇಂದ್ರ ನಡುವೆ ಉತ್ತಮ ಅಡ್ಜೆಸ್ಟ್ಮೆಂಟ್ ಇದೆ.
ಗಾಂಧೀಜಿಯನ್ನು ನೆಹರು ಕೊಲ್ಲಿಸಿದರಾ..?
ಗಾಂಧೀಜಿಗೆ ಗೋಡ್ಸೆ ಹೊಡೆದಿದ್ದು ಒಂದೇ ಗುಂಡು, ಇನ್ನೆರಡು ಗುಂಡುಗಳು ಎಲ್ಲಿಂದ ಬಂದವು?. ಒಂದು ಗುಂಡು ಗೋಡ್ಸೆ ಹೊಡೆದಿದ್ದು ಎಂದು ಕೋರ್ಟ್ನಲ್ಲಿ ವಾದ ಪ್ರತಿವಾದ ಆಗಿದೆ. ಇನ್ನೆರಡು ಗುಂಡುಗಳನ್ನು ನೆಹರು ಹೊಡೆಸಿದ್ದಾರಾ? ಎಂದು ನಮಗೆ ಸಂಶಯವಿದೆ. ಗಾಂಧಿ ಅವರನ್ನು ಕೊಲ್ಲಿಸಿದ್ದು ನೆಹರು ಅವರೇ. ನೆಹರು ಅವರಿಗೆ ಸರ್ವಾಧಿಕಾರಿ ಆಗುವ ಹಂಬಲವಿತ್ತು. ಅದಕ್ಕೆ ಅವರೇ ಗಾಂಧಿಯನ್ನು ಕೊಲ್ಲಿಸಿದ್ದಾರೆ
ರೇಣುಕಾಚಾರ್ಯ ಪಿಕ್ ಪಾಕೆಟರಾ..?
ನಮ್ಮ ವಿರೋಧಿ ಬಣ ದೆಹಲಿಗೆ ಹೋಗಲಿ, ವಾಷಿಂಗ್ಟನ್ಗೆ ಹೋಗಲಿ. ಎಲ್ಲಿ ಬೇಕಾದಲ್ಲಿ ಹೋಗಲಿ ಸತ್ಯ ಸತ್ಯವೇ. ಮಾಧ್ಯಮದವರು ಒಳ್ಳೆಯವರನ್ನು ಮಾತನಾಡಿಸಿ, ಕಿಸೆ ಕಳ್ಳರನ್ನು, ದಲಿತರ ಮೀಸಲಾತಿ ಕಸಿದುಕೊಂಡ ನಾಲಾಯಕರನ್ನು ಬಿಡಬೇಕು.
ವಿಜಯೇಂದ್ರನನ್ನು ಸಾಚಾ ಎನ್ನಬೇಕಾ..?
ತಮ್ಮ ತಂದೆಯ ಸಹಿ ನಕಲಿ ಮಾಡಿದ ವಿಜಯೇಂದ್ರ ಅವರಿಗೆ ರಮೇಶ್ ಜಾರಕಿಹೊಳಿ ನಾಲಾಯಕ ಅನ್ನದೇ ಸಾಚಾ ಅನ್ನಬೇಕಾ? ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತು ಇದ್ದರೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಎಷ್ಟು ಸಹಿ ಮಾಡಿದ್ದಾರೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲಿ. ಎಲ್ಲ ಸಹಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ಯಡಿಯೂರಪ್ಪ ಅವರ ಸಹಿ ಕಳುಹಿಸಿ ಪ್ರಯೋಗ ಮಾಡಿಸಿ. ಅದು ಸತ್ಯ ಆದಲ್ಲಿ ನಾಲಾಯಕ್ ಎನ್ನುವ ಪ್ರಶ್ನೆಯನ್ನು ವಾಪಸ್ ತೆಗೆದುಕೊಳ್ಳುತ್ತೇವೆ.
ಚುನಾವಣೆಗೆ ನಾವ್ ರೆಡಿ :
ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ನಾವು ಅಭ್ಯರ್ಥಿಯನ್ನು ಹಾಕಿದ್ದೇವೆ. ನಮ್ಮದೇ ಕೋರ್ ಕಮಿಟಿಯಿದೆ. ಅಲ್ಲಿ ತೀರ್ಮಾನ ಮಾಡುತ್ತೇವೆ. ಅಧ್ಯಕ್ಷರ ಚುನಾವಣೆ ನಡೆಸಲು ನಾವು ಸಿದ್ದ
ವಿಜಯೇಂದ್ರನಿಗೆ ಲೂಟಿ ಹೊಡೆಯುವ ಆಸೆ :
ಮತ್ತೊಂದು ಅವಧಿಗೆ ವಿಜಯೇಂದ್ರ ಅಧಿಕಾರ ನಡೆಸುವ ಆಸೆಯಿದೆ ಎಂದರೆ ಕರ್ನಾಟಕವನ್ನು ಲೂಟಿ ಹೊಡೆಯುವ ಆಸೆ ಇದೆ ಎಂದರ್ಥ. ಮತ್ತೊಮ್ಮೆ ನಕಲಿ ಸಹಿ ಮೂಲಕ ಕರ್ನಾಟಕವನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವ ಹುನ್ನಾರ. ನಿಮ್ಮ ತಂದೆ ಸಿಎಂ ಆಗಿದ್ದಾಗ ಖೊಟ್ಟಿ ಸಹಿ ಮಾಡಿದ್ದು ನಿನಲ್ಲವೇ ವಿಜಯೇಂದ್ರ? ನೀನು ಮಾಡಿರುವ ಎಲ್ಲ ಹಲ್ಕಾ ಕೆಲಸಗಳಿಗೆ ಇಟ್ಟ ಹೆಜ್ಜೆ ಮುಂದಿಡದೆ ಮನೆಗೆ ಹೋಗು, ಕೂಡಲಸಂಗಮದೇವಾ ಎಂದು ಹೇಳುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷನ ಚುನಾವಣೆಯಲ್ಲಿ ತಮ್ಮ ಬಣದಿಂದ ಒಬ್ಬ ಅಬ್ಯರ್ಥಿಯನ್ನು ಕಣಕ್ಕಿಳಿಸುವುದು ನಿಶ್ಚಿತ
ಹೈಕಮಾಂಡಿಗೆ ದೂರು ಕೊಟ್ಟರೆ ಹೆದರೋ ಮಗ ಅಲ್ಲ..
ನನ್ನ ವಿರುದ್ಧ ಬಿಜೆಪಿಯವರು ದೂರು ಕೊಟ್ಟು ಕೊಟ್ಟು ಬಿಜೆಪಿ ಕಾರ್ಯಾಲಯದ ಒಂದು ರೂಮ್ ತುಂಬಿದೆ. ಇದೊಂದು ದೂರು ಕೊಟ್ಟಲ್ಲಿ ಅದು ಹೋಗಿ ಬೀಳುತ್ತೆ. ಈಗಾಗಲೇ ನೋಟಿಸ್ಗೆ ಉತ್ತರ ಕೊಟ್ಟಿದ್ದೇನೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ . ನಮ್ಮ ವಿರೋಧಿ ಬಣ ದೆಹಲಿಗೆ ಹೋಗಲಿ, ವಾಷಿಂಗ್ಟನ್ಗೆ ಹೋಗಲಿ. ಎಲ್ಲಿ ಬೇಕಾದಲ್ಲಿ ಹೋಗಲಿ ಸತ್ಯ ಸತ್ಯವೇ.
ಸಿದ್ದರಾಮಯ್ಯ ಕ್ರಿಮಿನಲ್ :
ಮುಡಾ ಹಗರಣದಲ್ಲಿ ಯಾರೂ ಸಾಚಾ ಇಲ್ಲ, ಸಿದ್ದರಾಮಯ್ಯ ಅವರು ಅಪರಾಧಿ ಇದ್ದಾರೆ. ವಿಜಯೇಂದ್ರ, ಜಿ. ಟಿ ದೇವೇಗೌಡರ ಪಾಲು ಕೂಡಾ ಇದೆ.



