Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಆರ್‌.ಎಸ್.‌ಎಸ್.‌ ಬುದ್ದಿಮಾತಿಗೆ ತಲೆಬಾಗಿದ ವಿಜಯೇಂದ್ರ, ಯತ್ನಾಳ್‌ : ಸಂಧಾನ ಸಭೆಯಲ್ಲಿ ಏನೇನಾಯ್ತು..?

SpeciallU by SpeciallU
September 13, 2024
in News, Politics
Reading Time: 1 min read
0 0
0
ಆರ್‌.ಎಸ್.‌ಎಸ್.‌ ಬುದ್ದಿಮಾತಿಗೆ ತಲೆಬಾಗಿದ ವಿಜಯೇಂದ್ರ, ಯತ್ನಾಳ್‌ : ಸಂಧಾನ ಸಭೆಯಲ್ಲಿ ಏನೇನಾಯ್ತು..?

ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿದ್ದ ಭಿನ್ನಮತ, ಆಕ್ರೋಶವನ್ನು ಒಂದು ಹಂತಕ್ಕೆ ಮಟ್ಟ ಹಾಕುವ ವಿಷಯದಲ್ಲಿ ಆರ್.‌ಎಸ್.‌ಎಸ್.‌ ಮೊದಲ ಹಂತದ ಗೆಲುವು ಸಾಧಿಸಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಆರ್‌ಎನ್‌ಎಸ್ ಪ್ರಮುಖರ ಜೊತೆಗೆ ಬಿಜೆಪಿ ಎರಡು ಬಣಗಳ ನಾಯಕರ ಸಭೆ ಬಹುತೇಕ ಯಶಸ್ವಿಯಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್‌, ಸಂಘದ ಪ್ರಮುಖರಾದ ಸಿ. ಆರ್ ಮುಕುಂದ ಮತ್ತು ತಿಪ್ಪೇಸ್ವಾಮಿ, ಹಿರಿಯ ಪ್ರಚಾರಕ ಸುಧೀರ್ ಕುಮಾರ್ ಉಪಸ್ಥಿತಿಯಲ್ಲಿ ಬಿಜೆಪಿ ಎರಡು ಬಣದ ನಾಯಕರ ಮಾತುಗಳನ್ನು ಕೇಳಿ, ಬುದ್ದಿವಾದ ಹೇಳಲಾಗಿದೆ.

ವಿಜಯೇಂದ್ರ ವಿರೋಧಿ ಗುಂಪಿನಿಂದ ಬಂದಿದ್ದವರು : ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಅರವಿಂದ ಬೆಲ್ಲದ, ಪ್ರತಾಪ್‌ ಸಿಂಹ ಮೊದಲಾದವರಿದ್ದರ. ಭಿನ್ನರ ಬಣದಲ್ಲಿದ್ದೂ ಒಂದು ರೀತಿ ತಟಸ್ಥ ಧೋರಣೆ ಅನುಸರಿಸಿದವರು ಸಿಟಿ ರವಿ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ವಿಜಯೇಂದ್ರ ವಿರುದ್ಧ ಆರೋಪಗಳು ಏನೇನು…?

ಯತ್ನಾಳ್‌ ಹೊರತು ಪಡಿಸಿದರೆ ಉಳಿದ ಯಾವ ನಾಯಕರೂ ನೇರಾನೇರ ಆರೋಪ ಮಾಡಲಿಲ್ಲ. ಪ್ರತಾಪ್‌ ಸಿಂಹ ಅವರು ಪಕ್ಷ ಮುನ್ನಡೆಸೋರು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬೇಕೇ ಹೊರತು, ಹಿತ್ತಾಳೆ ಕಿವಿ ಹೊಂದಿರಬಾರದು. ಪಕ್ಷದಲ್ಲಿ ನಡೆಯುತ್ತಿರುವ ಕೆಲ ವಿಚಾರಗಳ ಬಗ್ಗೆ ಪ್ರಶ್ನೆ ಮಾಡಿದರೆ ನಮ್ಮನ್ನೇ ಬೇರೆ ರೀತಿಯಾಗಿ ನೋಡೋದು ಏಕೆ ಎಂದು ಪ್ರಶ್ನಿಸಿದವರ ಮಾತಿನಲ್ಲಿ ತಮಗೆ ಟಿಕೆಟ್‌ ತಪ್ಪಿದ್ದರ ಹಿಂದಿನ ಆಕ್ರೋಶವೇ ಎದ್ದು ಕಾಣುತ್ತಿತ್ತು.

ಕೆಲವು ನಾಯಕರ ಮಾತಿನಲ್ಲಿ ವಿಜಯೇಂದ್ರ ಇನ್ನೂ ಚಿಕ್ಕ ಹುಡುಗ. ಅನುಭವಿಯಲ್ಲ, ಅನುಭವಿ ಹಿರಿಯ ರಾಜಕಾರಣಿಗಳ ಮಾತು ಕೇಳೋದಿಲ್ಲ ಎಂಬ ಮಾತುಗಳಿದ್ದರೆ, ಇನ್ನೂ ಕೆಲವರು ವಿಜಯೇಂದ್ರ ತಮ್ಮ ವಿರೋಧಿಗಳನ್ನು ಯಡಿಯೂರಪ್ಪ ಅವರ ಮೂಲಕ ಮಾತನಾಡಿಸ್ತಾರೆ ಎಂದರು. ಕೆಲವರ ಜೊತೆಯಲ್ಲಷ್ಟೇ ಮಾತನಾಡಿ, ನಿರ್ಧಾರ ತೆಗೆದುಕೊಳ್ತಾರೆ. ಹಿರಿಯ ನಾಯಕರಿಗೆ ಜವಾಬ್ದಾರಿ, ಕೆಲಸ ಎರಡೂ ಇಲ್ಲ ಎಂ ದು ಆರೋಪಿಸಿದರು.

ಹಿರಿಯ ನಾಯಕರನ್ನು ಒಟ್ಟಿಗೇ ತೆಗೆದುಕೊಳ್ಳದ ಕಾರಣದಿಂದಲೇ ಮೂರ್ನಾಲ್ಕು ಲೋಕಸಭೆ ಸ್ಥಾನಗಳನ್ನು ಕಳೆದುಕೊಂಡೆವು ಎನ್ನುವುದು ಹಲವು ನಾಯಕರ ಆರೋಪವಾಗಿತ್ತು. ಪಕ್ಷದ ಸಂಘಟನೆಯ ಕೆಲವು ನಾಯಕರು, ಪದಾಧಿಕಾರಿಗಳನ್ನು ಬದಲಿಸಬೇಕು ಎಂಬ ಒತ್ತಾಯವೂ ಕೇಳಿ ಬಂತು.

ಆರ್‌. ಎಸ್.‌ ಎಸ್.‌ ಹೇಳಿದ್ದೇನು..?

ಸಂಘದ ಪ್ರಮುಖರು ಬಿಜೆಪಿಯನ್ನು ರಾಜಕೀಯದಲ್ಲಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣವೇ ನೀವು ಬೇರೆ ಪಕ್ಷಗಳಿಗಿಂತ ಭಿನ್ನ ಎಂಬ ಕಾರಣಕ್ಕೆ. ಈಗ ನೀವು ನಡೆದುಕೊಳ್ಳುತ್ತಿರುವ ರೀತಿಗೂ, ಕಾಂಗ್ರೆಸ್‌ ಮತ್ತಿತರ ಪಕ್ಷಗಳಿಗೂ ಯಾವ ವ್ಯತ್ಯಾಸವೂ ಇಲ್ಲ. ಹೀಗಾಗಿಯೇ ನಾವು ಪಕ್ಷದಿಂದ ಕೆಲ ಚುನಾವಣೆಗಳಲ್ಲಿ ಅಂತರ ಕಾಯ್ದುಕೊಂಡೆವು. ಈಗಲೂ ಕಾಲ ಮಿಂಚಿಲ್ಲ. ತಿದ್ದಿಕೊಳ್ಳುವ ಹಂತದಲ್ಲಿದೆ. ಪಕ್ಷ ಹಿಂದುತ್ವದ ಕಾರಣಕ್ಕಾಗಿ ಒಂದಾಗಬೇಕು. ಸಂಘ ಬಿಜೆಪಿಯನ್ನು ಬೆಂಬಲಿಸುತ್ತದೆ. ಆದರೆ ಸಂಘದ ಅಪೇಕ್ಷೆಗೆ ಶೇ.೫೦ರಷ್ಟೂ ನಡೆದುಕೊಳ್ಳುತ್ತಿಲ್ಲ. ತತ್ವ ಸಿದ್ಧಾಂತಗಳನ್ನೆಲ್ಲ ಬಿಟ್ಟು ಮಾಧ್ಯಮಗಳಲ್ಲಿ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಸಮಸ್ಯೆ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿಯೇ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದ ಸಂಘದ ಪ್ರಮುಖರು, ಆಗಾಗ ಪಕ್ಷದ ನಾಯಕರ ಜೊತೆ ಅನೌಪಚಾರಿಕವಾಗಿ ಸಭೆಗಳು ನಡೆಯಬೇಕು. ಒಳ್ಳೆಯ ಬಾಂಧವ್ಯ ಬೆಳೆಸಿಕೊಳ್ಳಬೇಕು.ಎಲ್ಲದಕ್ಕೂ ಹೈಕಮಾಂಡ್‌ ಕಡೆ ನೋಡುತ್ತಾ ಕೂರುವುದಾದರೆ, ಸ್ಥಳೀಯವಾಗಿ ಪಕ್ಷ ಮತ್ತು ನಾಯಕರು ಏಕೆ ಬೇಕು ಎಂದು ಪ್ರಶ್ನೆ ಮಾಡಿದರು.

ಅಷ್ಟೇ ಅಲ್ಲ, ಎಲ್ಲ ನಾಯಕರೂ ಮಾತನಾಡಿ. ಆದರೆ, ಭಾಷೆ ಹಿಡಿತದಲ್ಲಿರಲಿ. ಯಾರಿಗೂ ಮುಜುಗರವಾಗದಂತೆ ಎಂದು ಸೂಚನೆ ನೀಡಿದ್ದ ಕಾರಣ, ಎಲ್ಲರೂ ಕೂಡಾ ಮೃದುವಾಗಿಯೇ ಅಭಿಪ್ರಾಯ ಹೇಳಿದ್ದಾರೆ.

ವಿಜಯೇಂದ್ರ ಹೇಳಿದ್ದೇನು..?

ಈ ಹಿಂದೆಯೂ ಪಕ್ಷಕ್ಕೆ ಸಂಬಂಧಿಸಿದಂತೆ ಒಬ್ಬನೇ ನಿರ್ಣಯ ತೆಗೆದುಕೊಂಡಿಲ್ಲ. ಇನ್ನು ಮುಂದೆಯೂ ನಡೆದುಕೊಳ್ಳುತ್ತೇನೆ. ಪಕ್ಷದ ವರಿಷ್ಠರು, ನಾಯಕರು ಹಾಗೂ ಸಂಘದ ಪ್ರಮುಖರ ಜೊತೆ ಮಾತನಾಡಿಯೇ ನಿರ್ಧಾರ ತೆಗೆದುಕೊಳ್ಳುತ್ತೇನೆ ಅನ್ನೋ ಭರವಸೆ ಕೊಟ್ಟರು.

ಸಭೆ ಬಳಿಕ ಯತ್ನಾಳ್‌ ಹೇಳಿದ್ದು :

ನಮ್ಮ ಭಾವನೆಗಳನ್ನು ಕೇಳುವಂತಹ ವೇದಿಕೆ ಸಿಕ್ಕಿತ್ತು, ನಮಗೆ‌ ಬಹಳ ಸಂತೋಷವಾಗಿದೆ. ಎಲ್ಲ ವಿಚಾರಗಳೂ ಒಳ್ಳೆಯ ವಾತಾವರಣದಲ್ಲಿ ಚರ್ಚೆ ಆಗಿದೆ. ಎಲ್ಲರ ಮನಸ್ಸಲ್ಲಿ ಇರುವುದನ್ನು ಹೇಳುವುದಕ್ಕೆ ಅವಕಾಶ ಸಿಕ್ಕಿತು. ಎಲ್ಲರೂ ಕೂಡ ಒಟ್ಟಾಗಿ ಹೋಗುತ್ತೇವೆ. ಪಕ್ಷ ಹೇಳಿದ ಕಡೆ ಹೋಗುತ್ತೇವೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಪಾದಯಾತ್ರೆಯು ಪಕ್ಷದ ವೇದಿಕೆಯ ಒಳಗೆಯೇ ಇದೆ, ನೀವೇ ತಪ್ಪು ತಿಳಿದುಕೊಂಡಿದ್ದೀರಿ. ನಾವು ನಿಷ್ಠಾವಂತ ಬಿಜೆಪಿಯವರು, ಭಾಜಪ ಅಂತಾ ನಮ್ಮದು ಒಂದು ಗುಂಪು ಇದೆ. ಪಕ್ಷಕ್ಕೆ ನಿಷ್ಠೆ, ದೇಶಕ್ಕೆ ನಿಷ್ಠೆ, ಸನಾತನ ಹಿಂದೂ ಧರ್ಮಕ್ಕೂ ನಿಷ್ಠೆ ಇದೆ. ಪಕ್ಷದ ನಿರ್ಣಯಕ್ಕೆ ನಾವೆಲ್ಲರೂ ಬದ್ಧ. ತಲೆ ಬಾಗುತ್ತೇವೆ.

ಅಲ್ಲಿಗೆ ವಿವಾದ, ಭಿನ್ನಮತ ಮುಗಿದ ಅಧ್ಯಾಯವಾ..? ಸಾಧ್ಯವೇ ಇಲ್ಲ.

Tags: #ವಿಜಯೇಂದ್ರ #ಯತ್ನಾಳ್‌ #ಸಂಧಾನಸಭೆ #ಆರ್‌.ಎಸ್.‌ಎಸ್ #Vijayendra #Yatnal #Conference #R.S.S
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.