ನಟ ಯಶ್ ಅವರ ಸಿನಿಮಾಗಳು ಹಿಟ್ ಆಗುತ್ತಿವೆ. ಪ್ಯಾನ್ ವರ್ಲ್ಡ್ ಸ್ಟಾರ್ ಆಗಿರುವ ಯಶ್ ಕಾಂಟ್ರವರ್ಸಿ ಮಾಡಿಕೊಂಡಿದ್ದು ಇಲ್ಲವೇ ಇಲ್ಲ. ಇಂಡಸ್ಟ್ರಿಯಲ್ಲಾಗಲೀ, ತಮ್ಮ ಸಿನಿಮಾಗಳ ನಿರ್ಮಾಪಕ, ನಿರ್ದೇಶಕರ ಜೊತೆಗಾಗಲೀ, ಸಹ ಕಲಾವಿದರ ಜೊತೆಯಲ್ಲಾಗಲಿ.. ವಿವಾದ ಮಾಡಿಕೊಂಡವರಲ್ಲ. ಆದರೆ, ಯಶ್ ಅವರು ಕಾಂಟ್ರವರ್ಸಿಗೆ ಸಿಲುಕಿದ್ದೆಲ್ಲ ಅವರ ತಾಯಿಯಿಂದ. ಈಗ ಆ ಕಾಂಟ್ರವರ್ಸಿಗಳ ಹಿಸ್ಟರಿಗೆ ಇನ್ನೊಂದು ಸೇರ್ಪಡೆಯಾಗಿದೆ.
ಯಶ್ ಅವರ ತಾಯಿ ಪುಷ್ಪಾ ಅವರ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿ ಬಂದಿತ್ತು. ಹೌದು, ಅದು ಅಕ್ರಮ ಎಂದು ಕೋರ್ಟ್ ತೀರ್ಪು ನೀಡಿ, ಜಾಗವನ್ನು ತೆರವು ಮಾಡಿಸಿದ್ದಾರೆ ಸೈಟಿನ ಓನರ್. ಇದು ಹೊಸದೇನಲ್ಲ. ಯಶ್ ಅವರ ಹೆಸರು ಮೊದಲು ಕಾಂಟ್ರವರ್ಸಿ ಆಗಿದ್ದು ಯಶ್ ತಾಯಿಯ ಚೀಟಿ ವ್ಯವಹಾರದಲ್ಲಿ. ಯಶ್ ಅವರು ಚೀಟಿ ಕಟ್ಟಿಸಿಕೊಂಡು, ಚೀಟಿಯ ಹಣವನ್ನು ಕೊಡದೆ ವಂಚನೆ ಮಾಡಿದ್ದರು ಅನ್ನೋ ಆರೋಪ ಅದು. ಹಾಗೆ ತಮಗೆ ವಂಚನೆ ಆಗಿದೆ ಎಂದು ಮಾಧ್ಯಮಗಳಲ್ಲಿ ಹೇಳಿದ್ದವರು ಯಶ್ ಅವರಿಗೆ ಟೀಚರ್ ಕೂಡಾ ಆಗಿದ್ದರು.ಅದು ಯಶ್ ಸಿಲುಕಿದ ಮೊದಲ ವಿವಾದ. ಆಗಿನ್ನೂ ಯಶ್ ಬೆಳೀತಾ ಇದ್ದ ಹುಡುಗ.
2ನೇ ವಿವಾದ ಅಂತಾ ಬಂದ್ರೆ, ಬಾಡಿಗೆ ಮನೆಯಲ್ಲಿದ್ದಾಗ, ಬಾಡಿಗೆ ಕಟ್ಟಲಿಲ್ಲ ಅನ್ನೋ ಕಾಂಟ್ರವರ್ಸಿ. ಆಗಿನ್ನೂ ಯಶ್ ಅವರಿಗೆ ದೊಡ್ಡ ದೊಡ್ಡ ಸಿನಿಮಾಗಳು ಸಿಕ್ಕಿರಲೇ ಇಲ್ಲ. ರಾಜಾಹುಲಿ, ಕಿರಾತಕ ಎಲ್ಲ ಆಮೇಲೆ ಬಂದಿದ್ದು. ಆಗಲೂ ಅಷ್ಟೇ.. ತಾಯಿಯನ್ನ ಸಮರ್ಥನೆ ಮಾಡಿಕೊಂಡು ಹೋದ ಯಶ್, ಕೊನೆಗೆ ಬಾಡಿಗೆ ಮನೆ ಓನರ್‌ಗೆ 23 ಲಕ್ಷ ರೂಪಾಯಿ ಕೊಟ್ಟು ತಲೆತಗ್ಗಿಸಿದ್ರು. ಕೋರ್ಟಿನಲ್ಲಿ ಯಶ್ ತಾಯಿಯ ಸುಳ್ಳು ಪ್ರೂವ್ ಆಗುತ್ತೆ.
ಯಶ್ ತಾಯಿ ಪುಷ್ಪಾ ಅವರಿಗೆ, ಯಶ್ ಅವರೇ ಹಾಸನದಲ್ಲೊಂದು ಜಾಗ ಖರೀದಿ ಮಾಡಿಕೊಟ್ಟಿದ್ರು. ಹಾಸನದಲ್ಲಿ ವಿದ್ಯಾನಗರ ಅನ್ನೋ ಏರಿಯಾ ಇದೆ. ಅಲ್ಲಿ ಸತ್ಯಮಂಗಲ ಲೇಔಟಿನಲಿ ಯಶ್ ತಾಯಿ ಪುಷ್ಪಾ ಅವರ ಮನೆನೂ ಇದೆ. ಆಗಾಗ್ಗೆ ಹೋಗಿ ಬಂದು ಮಾಡ್ತಿದ್ದ ಯಶ್ ತಾಯಿ, ಪಕ್ಕದಲ್ಲೇ ಇದ್ದ ಒಂದೂವರೆ ಸಾವಿರ ಅಡಿ ಜಾಗದ ಮೇಲೆ ಕಣ್ ಹಾಕಿದ್ದಾರೆ. ಫಿಫ್ಟಿ ಬೈಟ್ 100 ಸೈಟ್‌ಗೆ ಬೇಲಿ ಹಾಕ್ಕೊಂಡಿದ್ದಾರೆ. ಆ ಜಾಗದ ಓನರ್ ಹೆಸರು ಲಕ್ಷ್ಮಮ್ಮ. ಅವರಿಗೆ ಈಗ 94 ವರ್ಷ ಅಂತೆ. ಫೈಟ್ ಮಾಡೋಕೆ ಆಗದೆ ಲಕ್ಷ್ಮಮ್ಮ ಅವರು, ದೇವರಾಜು ಅನ್ನೋವ್ರಿಗೆ ಜಿಪಿಎ ಬರೆದುಕೊಟಿದ್ದಾರೆ. ಅದೂ ನಮ್ಮದೇ ಜಾಗ ಅಂತಾ ಯಶ್ ಕೂಡಾ ತಾಯಿಯ ಮಾತು ನಂಬಿಕೊಂಡು ಫೈಟ್ ಮಾಡಿದ್ರು. ಈಗ ನೋಡಿದ್ರೆ, ಆ ಕೇಸಿನಲ್ಲಿ ಕೂಡಾ ಡ್ರಾಬ್ಯಾಕ್ ಆಗಿ, ಯಶ್ ತಾಯಿ ಪುಷ್ಪಾ ವಿರುದ್ಧನೇ ಕೋರ್ಟ್ ಆರ್ಡರ್ ಕೊಟ್ಟಿದೆ.
ಯಶ್ ತಾಯಿಯನ್ನ ಕೇಳಿದ್ರೆ, ಕೋರ್ಟ್ ಆರ್ಡರ್ ಕೊಟ್ಟಿರೋದೇ ಸುಳ್ಳು ಅಂತಾರೆ. ಯಶ್ ಅವರ ತಾಯಿ ಪುಷ್ಪಾಗೂ, ಕಿರಿಕ್ಕುಗಳಿಗೂ ಒಂತರಾ ಲವ್ ಸ್ಟೋರಿ ಇದ್ದಂತೆ. ಬಾಯಿ ಮೇಲೆ ಹಿಡಿತ ಇಲ್ಲ. ಇತ್ತೀಚೆಗೆ ಕೊತ್ತಲವಾಡಿ ಸಿನಿಮಾ ಮೂಲಕ ಪ್ರೊಡ್ಯೂಸರ್ ಆದ್ರಲ್ಲ, ಆಗ ತಮ್ಮದೇ ಸಂಬಂಧ ಹುಡುಗಿ, ನಾಗಿಣಿ ಖ್ಯಾತಿಯ ನಟಿ ದೀಪಿಕಾದಾಸ್ ಬಗ್ಗೆ ಬೇಕಾಬಿಟ್ಟಿ ಮಾತಾಡಿದ್ರು. ದೀಪಿಕಾದಾಸ್, ವರಸೆಯಲ್ಲಿ ಯಶ್ ಅವರಿಗೆ ತಂಗಿ ಆಗ್ಬೇಕು, ಅಷ್ಟು ಬಿಟ್ರೆ ಬೇರೇನಿಲ್ಲ. ದೀಪಿಕಾ ದಾಸ್ ತಿರುಗಿಬಿದ್ದು ಹೇಳಿಕೆ ಕೊಡ್ಬೇಕಾಯ್ತು.
ಇನ್ನು ಒಂದ್ ಸಿನಿಮಾ ಮಾಡಿದ್ರು. ಕೊತ್ತಲವಾಡಿ ಅಂತಾ. ಹಾಕಿದ ಬಂಡವಾಳನೂ ವಾಪಸ್ ಬರ್ಲಿಲ್ಲ. ಆದರೆ, ಸಿನಿಮಾ ಪ್ರಚಾರ ಮಾಡಿದವ್ರ ಮೇಲೇ ಕೇಸ್ ಹಾಕಿದ್ದಾರೆ. ಅವರೇ ಸಿನಿಮಾನ್ನ ಸೋಲಿಸಿದ್ರು ಅಂತಾ ವಾದಿಸ್ತಿದ್ದಾರೆ.
ಯಶ್ ಅವರ ತಾಯಿ ಪುಷ್ಪಾ ಅವರಿಗೆ ಕಾಂಟ್ರವರ್ಸಿಗಳು ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಇರ್ಬೇಕು. ಆದರೆ ಅದರಿಂದ ಡ್ಯಾಮೇಜ್ ಆಗ್ತಿರೋದು ಅವರ ಮಗನ ಖ್ಯಾತಿ. ತಮ್ಮ ಮಗ ಸೂಪರ್ ಸ್ಟಾರ್, ತಾನು ಮಾಡೋ ಒಂದೊಂದು ಕೆಲಸನೂ, ತರಲೆ ಕೆಲಸಾನೂ ತಮ್ಮ ಮಗನಿಗೆ ಡ್ಯಾಮೇಜ್ ಮಾಡುತ್ತೆ ಅನ್ನೋ ಸೆನ್ಸ್ ಇರ್ಬೇಕು. ಆದರೆ, ಪುಷ್ಪಾ ಅವರಿಗೆ ಹಾಗೆಲ್ಲ ಇದ್ದಂತೆ ಕಾಣ್ತಿಲ್ಲ.



