ಅಣ್ಣ ತಂಗಿಯರ ಹಬ್ಬ. ಕರ್ನಾಟಕದಲ್ಲಿ ಈ ಅಣ್ಣ ತಂಗಿ (Anna thangi) ಹಬ್ಬವನ್ನ ನಾಗರಪಂಚಮಿಯಂದೇ (nagara panchami) ಆಚರಿಸುತ್ತಾರೆ. ಆದರೆ ಅದು ಉತ್ತರ ಕರ್ನಾಟಕಕ್ಕೆ (North karnataka) ಸೀಮಿತ. ಪಂಚಮಿ ಹಬ್ಬ ಉಳಿದಾವ ದಿನ ನಾಲ್ಕ.. ಅಣ್ಣ ಬರಲಿಲ್ಲ ಯಾಕ ಕರೆಯಾಕ.. ಹಾಡು ನೆನಪಿದೆಯೇ.. ಆದರೆ ಈ ರಕ್ಷಾ ಬಂಧನ (Raksha Bandhan) ಹಬ್ಬ ಇದೆಯಲ್ಲ, ಇದರ ಮೂಲ ಇರುವುದು ಉತ್ತರ ಭಾರತದಲ್ಲಿಯಾದರೂ, ಬಾಂಧವ್ಯಕ್ಕೆ ಗಡಿ ಇಲ್ಲ. ಹೀಗಾಗಿಯೇ ಅಣ್ಣ ತಂಗಿ ಬಾಂಧವ್ಯ ಸಾರುವ ಹಬ್ಬ ಈಗ ಯುನಿವರ್ಸಲ್ ಆಗುತ್ತಿದೆ.
ಅಣ್ಣ ತಂಗಿಯರ ಈ ಬಂಧ.. ಜನುಮ ಜನುಮಗಳ ಅನುಬಂಧ..
ಜೀವಕ್ಕೆ ಕೊರಳು.. ದೇಹಕ್ಕೆ ನೆರಳು.. ನಾವಾಗಲೆಂದು ಹರಸುತಿದೆ..
ಈ ರಕ್ಷಾ ಬಂಧನ..
ರಾಖಿ ಹಬ್ಬ (Rakhi festival) ಬಂತೆಂದರೆ ರಾಜ್ಯಾದ್ಯಂತ ಮೊಳಗುವ.. ಗುನುಗುವ.. ಹಾಡುಗಳಲ್ಲಿ ಈ ಹಾಡು ನಂ.1. ರಕ್ಷಾಬಂಧನ (Raksha Bandhan) ಹಬ್ಬಕ್ಕೆ ಇಂತಾದ್ದೊಂದು ಹಾಡು ಕೊಟ್ಟ ಚಿತ್ರರಂಗದಲ್ಲಿಯೂ ರಾಖಿ ಹಬ್ಬ ಸಂಭ್ರಮ ಇದ್ದೆ ಇರುತ್ತದೆ.
ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ (Rishabh Shetty and Pragagthi Shetty) ಮನೆಯಲ್ಲಿ ರಕ್ಷಾ ಬಂಧನ (Raksha Bandhan) ಹಬ್ಬ. ರಣ್ವಿತ್ ಶೆಟ್ಟಿ ದೊಡ್ಡವ. ರಾಧ್ಯಾ ಶೆಟ್ಟಿ ತಂಗಿ. ಅಣ್ಣನಿಗೆ ರಾಖಿ ಕಟ್ಟಿ ಕಾಲಿಗೆ ನಮಸ್ಕರಿಸುತ್ತಿರುವ ಫೋಟೋ.. ಮುದ್ದು ಮುದ್ದಾಗಿ ಗಮನ ಸೆಳೆಯಿತು.
ಅಣ್ಣ-ತಂಗಿಯ ಶಾಶ್ವತ ಬಂಧದ ಸಡಗರಕ್ಕೆ ಸಾಕ್ಷಿಯಾಗುವ ರಕ್ಷಾ ಬಂಧನದ ಶುಭಾಶಯಗಳು ಎಂದು ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ (Rishabh Shetty and Pragagthi Shetty) ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಯಶ್ ಮತ್ತು ರಾಧಿಕಾ ಪಂಡಿತ್ (Yash and Radhika Pandith) ಮನೆಯಲ್ಲಿ ಐರಾ ಅಕ್ಕ. ಯಥರ್ವ್ ತಮ್ಮ. . ಇಬ್ಬರು ಒಂದೇ ರೀತಿಯ ಬಟ್ಟೆ ಧರಿಸಿ ಮರದ ಕಟ್ಟೆಯ ಮೇಲೆ ಕುಳಿತು ಐರಾ ಯಥರ್ವ್ಗೆ ಆರತಿ ಮಾಡಿ ಬೆಳಗಿ, ರಾಖಿ (Yash and Radhika Pandith) ಕಟ್ಟಿದ್ದಾರೆ. ಮುದ್ದಾದ ತಮ್ಮನಿಗೆ ಸಿಹಿ ತಿನ್ನಿಸಿದ ಐರಾ ಪ್ರೀತಿಯ ಅಪ್ಪುಗೆ ನೀಡಿದ್ದಾರೆ. ರಾಧಿಕಾ ಪಂಡಿತ್ ಮಕ್ಕಳ ರಕ್ಷಾ ಬಂಧನ ಸಂಭ್ರಮಾಚರಣೆಯ ವಿಡಿಯೋ ಪೋಸ್ಟ್ ಮಾಡಿ ಕೆಲವೊಮ್ಮೆ ಜೊತೆಗಾರರು, ಕೆಲವೊಮ್ಮೆ ಪ್ರತಿಸ್ಪರ್ಧಿಗಳು, ಕೆಲವೊಮ್ಮೆ ರಕ್ಷಕರು, ಆದರೆ ಯಾವಾಗಲೂ ಒಬ್ಬರಿಗೊಬ್ಬರು… ಎಲ್ಲಾ ಒಡಹುಟ್ಟಿದವರಿಗೆ ರಕ್ಷಾಬಂಧನದ ಶುಭಾಶಯಗಳು ಎಂದಿದ್ದಾರೆ.
ಇನ್ನು ನಟ ರಕ್ಷಿತ್ ಶೆಟ್ಟಿ (Rakshith Shetty) ಅವರಿಗೆ ರಿಷಬ್ ಶೆಟ್ಟಿ (Rishab Shetty ) ಅವರ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ರಾಖಿ ಕಟ್ಟಿ ಆಶೀರ್ವಾದ ಪಡೆದಿದ್ದಾರೆ. ರಕ್ಷಿತ್ ಶೆಟ್ಟಿ ತಂಗಿಗೆ ಆಶೀರ್ವಾದ ಮಾಡುತ್ತಿರುವ ಫೋಟೋ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ.
ನಟ ರಾಕ್ಷಸ ಡಾಲಿ ಧನಂಜಯ್ಗೆ (Dolly Dhananjaya) ರಾಖಿ ತಂಗಿ ನಟಿ ತನುಜಾ ವೆಂಕಟೇಶ್ (Thanuja Venkatesh) ರಾಖಿ ಕಟ್ಟಿ ಹಬ್ಬ ಆಚರಿಸಿದ್ದಾರೆ.
ರಕ್ಷಿತಾ ಪ್ರೇಮ್ (Rakshitha Prem ) ಸಹ ತಮ್ಮ ನಟ ರಾಣಾಗೆ (Rana) ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ. ರಾಣಾಗೆ ರಾಖಿ ಕಟ್ಟಿದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟ ದರ್ಶನ್ (Actor Darshan) ಅವರಿಗೆ ನಟಿ ಸೋನಲ್ ಮಂಥೆರೋ (Actres Sonal Manthero) ರಾಖಿ ಕಟ್ಟಿದ್ದಾರೆ. ಅವರು ರಾಖಿ ಕಟ್ಟುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.



