ನಟ ಯಶ್ ಹುಟ್ಟುಹಬ್ಬಕ್ಕೆ ಸಂಭ್ರಮ ಆಚರಣೆ ಮಾಡೋಕೆ ಹೋಗಿ ಮೂವರು ಅಭಿಮಾನಿಗಳು ದುರ್ಮರಣಕ್ಕೀಡಾಗಿದ್ಧಾರೆ. ಹನಮಂತ ಹರಿಜನ (21) ಮುರಳಿ ನಡವಿನಮನಿ(20), ನವೀನ್ ಗಾಜಿ(19) ಈ ಮೂವರೂ ಯಶ್ ಫ್ಯಾನ್ಸ್. ಗದಗ ಜಿಲ್ಲೆಯವರು. ಯಶ್ ಹುಟ್ಟುಹಬ್ಬಕ್ಕೆ ಕಟೌಟ್ ನಿಲ್ಲಿಸುತ್ತಿದ್ದರು. ಈ ಸಂದರ್ಭದಲ್ಲಿ ಕಟೌಟ್ʻಗೆ ವಿದ್ಯುತ್ ತಂತಿ ತಗುಲಿ ಅನಾಹುತ ಸಂಭವಿಸಿದೆ.
ಘಟನೆ ನಡೆದದ್ದು ಎಲ್ಲಿ?
ಗದಗ ಜಿಲ್ಲೆಯ ಸೂರಣಗಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಯಶ್ ಅವರ ಕಟೌಟ್ ನಿಲ್ಲಿಸಲು ಮುಂದಾಗಿದ್ದರು. ಬೃಹತ್ ಕಟೌಟ್ ನಿಲ್ಲಿಸುವಾಗ ಕಟೌಟ್ ವಿದ್ಯುತ್ ತಂತಿಗೆ ತಗುಲಿ ಶಾಕ್ ಹೊಡೀತು. ಶಾಕ್ ಹೊಡೆದ ನಂತರ ಒಬ್ಬರಿಂದ ಒಬ್ಬರಿಗೆ ಕರೆಂಟ್ ಪಾಸ್ ಆಗಿ ಮೂವರಿಗೂ ಶಾಕ್ ಹೊಡೀತು. ಇದರ ಪರಿಣಾಮ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟ ಮೂವರು ಯುವಕರು. ಘಟನಾವಳಿ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



