Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಮಹಿಳಾ ಮೀಸಲಾತಿ : ದೇವೇಗೌಡರ ಕನಸು.. ನರೇಂದ್ರ ಮೋದಿಯಿಂದ ನನಸು

SpeciallU by SpeciallU
September 21, 2023
in News, Politics
Reading Time: 1 min read
0 0
0
ಮಹಿಳಾ ಮೀಸಲಾತಿ : ದೇವೇಗೌಡರ ಕನಸು.. ನರೇಂದ್ರ ಮೋದಿಯಿಂದ ನನಸು

ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ವಿಧೇಯಕ (Women reservation bill) ನಾರಿ ಶಕ್ತಿ ವಂದನ್ ಮಸೂದೆ (nari shakthi vandana) ಅಂಗೀಕಾರವಾಗಿದೆ. ಲೋಕಸಭೆಯಲ್ಲಿ (Loksabha) ಸ್ಲಿಪ್ ಮತದಾನದಲ್ಲಿ ಮಸೂದೆಯನ್ನು ಬೆಂಬಲಿಸಿ 454 ಹಾಗೂ ವಿರುದ್ಧವಾಗಿ 2 ಮತಗಳು ಚಲಾವಣೆಯಾದವು.  ರಾಜ್ಯಸಭೆಯಲ್ಲೂ (rajyasabha) ಮಸೂದೆಗೆ ಗ್ರೀನ್ಸಿಗ್ನಲ್ ಸಿಕ್ಕ ಬಳಿಕ ರಾಷ್ಟ್ರಪತಿಗಳ (president of bharath) ಅನುಮೋದನೆಗೆ ಹೋಗಲಿದೆ. ರಾಷ್ಟ್ರಪತಿಗಳ ಒಪ್ಪಿಗೆ ದೊರೆತ ಬಳಿಕ ಇದು ಕಾನೂನಾಗಿ ರೂಪುಗೊಳ್ಳಲಿದೆ.  ಮಸೂದೆ ಮೇಲಿನ ಚರ್ಚೆಯಲ್ಲಿ 60 ಸಂಸದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಂದಹಾಗೆ ಇದು ನನ್ನ ಪತಿ ಕನಸು ಕಂಡಿದ್ದ ಮಸೂದೆಯಾಗಿತ್ತು ಎಂದರು (Sonia gandhi) ಸೋನಿಯಾ ಗಾಂಧಿ.

ವಾಸ್ತವದಲ್ಲಿ ಸಂಸತ್ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಡುವ ಮಸೂದೆ ಮೊದಲ ಬಾರಿಗೆ ಮಂಡನೆಯಾಗಿದ್ದು ದೇವೇಗೌಡರು ಪ್ರಧಾನಿಯಾಗಿದ್ದಾಗ. ಹಾಗಾದರೆ ಸೋನಿಯಾ ಸುಳ್ಳು ಹೇಳಿದರಾ ಎನ್ನುವಂತಿಲ್ಲ. ಸೋನಿಯಾ ಗಾಂಧಿಯವರ ಪತಿ ರಾಜೀವ್ ಗಾಂಧಿ  (Rajeev gandhi) ತರಲು ಬಯಸಿದ್ದು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಕುರಿತಂತೆ. ರಾಜೀವ್ ಕಾಲದಲ್ಲಿ ಮಂಡನೆಯಾಗಿದ್ದ ಮಸೂದೆಯಲ್ಲಿ ವಿಧಾನಸಭೆ, ಲೋಕಸಭೆಗಳ ಪ್ರಸ್ತಾಪವೂ ಇರಲಿಲ್ಲ. ಆದರೆ ಸಂಪೂರ್ಣ ಪ್ರಚಂಡ ಬಹುಮತ ಇದ್ದರೂ, ಆ ಮಸೂದೆಗೆ ಗೆಲುವು ಸಿಗಲಿಲ್ಲ. ಕೊನೆಗೆ ಅದು ಜಾರಿಯಾಗಿದ್ದು ಪಿವಿ ನರಸಿಂಹರಾವ್ (PV Narasimha rao) ಪ್ರಧಾನಿ ಆಗಿದ್ದಾಗ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದೇವೇಗೌಡರು (HD Devegowda) ಪ್ರಧಾನಿಯಾಗಿದ್ದಾಗ ಈ ಮಸೂದೆ ಮೊದಲ ಬಾರಿ ಮಂಡನೆಯಾಯಿತಾದರೂ, ಅವರ ಜೊತೆಯಲ್ಲೇ ಇದ್ದ ಮುಲಾಯಂ ಸಿಂಗ್ ಯಾದವ್, ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್ ವಿರೋಧಿಸಿದ್ದರು. ಲಾಲೂ ಅವರಂತೂ ಇದು ಜಾರಿಯಾದರೆ ನನ್ನ ಹೆಣದ ಮೇಲೆ ಎಂದಿದ್ದರು. ಈಗ ಇವರೆಲ್ಲರೂ ಸ್ವಾಗತ ಮಾಡಿದ್ದಾರೆ, ಅದು ಬೇರೆಯ ವಿಷಯ.

ಕೊನೆಗೆ ದೇವೇಗೌಡರು ಮಂಡಿಸಿದ್ದ ಮಹಿಳಾ ಮೀಸಲಾತಿ ಸೋತು, ಅದನ್ನು ಮತ್ತೆ ಮಂಡಿಸಿದ್ದು ವಾಜಪೇಯಿ. ಸತತವಾಗಿ 4 ಬಾರಿ ಪ್ರಯತ್ನ ಪಟ್ಟರೂ, ವಾಜಪೇಯಿ ಅವರಿಗೂ ಗೆಲುವು ಸಿಗಲಿಲ್ಲ. ಏಕೆಂದರೆ ಮಸೂದೆ ಜಾರಿಗೆ ಮೂರನೇ ಎರಡರಷ್ಟು ಸಮ್ಮತಿ ಬೇಕಿತ್ತು. ದೇವೇಗೌಡರಿಗಾಗಲೀ, ವಾಜಪೇಯಿ ಅವರಿಗಾಗಲೀ ಸಂಪೂರ್ಣ ಬಹುಮತದ ಸರ್ಕಾರ ಸಿಕ್ಕಿರಲಿಲ್ಲ. ಬೇರೆಯವರ ಮರ್ಜಿಗೆ ಕಾಯಲೇಬೇಕಿತ್ತು.

ಆ ಕಾಲ ಮುಗಿದ ಮೇಲೆ ಮನಮೋಹನ್ ಸಿಂಗ್ ಎರಡು ಬಾರಿ ಪ್ರಧಾನಿಯಾದರಾದರು. ಎರಡು ಬಾರಿಯೂ ಪ್ರಯತ್ನ ಪಟ್ಟರು. ಆದರೆ ಆಗಲೂ ನಿತೀಶ್, ಲಾಲೂ, ಮುಲಾಯಂ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ವಿರೋಧಿಸಿದ್ದವು. ವಿಶೇಷವೆಂದರೆ ಆಗ ಪ್ರತಿಪಕ್ಷವಾಗಿದ್ದ ಬಿಜೆಪಿ ಅದಕ್ಕೆ ಬೆಂಬಲ ಕೊಟ್ಟಿತ್ತು. ಆದರೂ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಲೇ ಇಲ್ಲ. ಏಕೆಂದರೆ ಮೂರನೇ ಎರಡರಷ್ಟು ಮತ ಸಿಗುವ ನಂಬಿಕೆ ಕಾಂಗ್ರೆಸ್ಸಿಗೆ ಇರಲಿಲ್ಲ. ಇದೀಗ ದೇವೇಗೌಡರು ಪ್ರಧಾನಿಯಾಗಿದ್ದಾಗ ಮೊದಲ ಬಾರಿ ಮಂಡಿಸಿದ್ದ ಶೇ.33ರ ಮೀಸಲಾತಿ ಮಸೂದೆ ಅಂಗೀಕೃತವಾಗಿದೆ. ಆದರೆ ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಏಕೆಂದರೆ ಮೊದಲಿಗೆ ಇದು ಜಾರಿಯಾಗುವುದಕ್ಕೆ ಇನ್ನೂ ಪ್ರಕ್ರಿಯೆಗಳಿವೆ.

ಜಾರಿಯಾಗುವ ಮುನ್ನ ಏನೇನೆಲ್ಲ ಆಗಬೇಕು?

ಲೋಕಸಭೆಯಲ್ಲಷ್ಟೇ ಅಲ್ಲ, ರಾಜ್ಯಸಭೆಯಲ್ಲೂ ಮಸೂದೆ ಅಂಗೀಕಾರವಾಗಬೇಕು. ಆಗುವ ಸೂಚನೆ ಇದೆ. ಅದಾದ ಮೇಲೆ ಅದೇ ಮಸೂದೆಯನ್ನು ದೇಶದ 30 ರಾಜ್ಯಗಳ ಪೈಕಿ, ಶೇ.50ರಷ್ಟು ರಾಜ್ಯಗಳು ಒಪ್ಪಿಕೊಳ್ಳಬೇಕು. ಅಲ್ಲಿಯ ವಿಧಾನಸಭೆಗಳಲ್ಲಿ ಮಂಡನೆಯಾಗಿ ಅಂಗೀಕೃತವಾಗಬೇಕು. ಅದಾದ ಮೇಲೆ ಮಸೂದೆ ರಾಷ್ಟ್ರಪತಿಗಳ ಅಂಗೀಕಾರ ಪಡೆಯಬೇಕು. ಅದಾದ ಮೇಲೆಯೂ ಕೂಡಾ ಪ್ರಕ್ರಿಯೆಗಳಿವೆ. ಕ್ಷೇತ್ರ ಪುನರ್ ವಿಂಗಡಣೆ ಆಗುವ ಮೊದಲು ಮೀಸಲಾತಿ ಬದಲಿಸುವ ಹಾಗಿಲ್ಲ. ಅಕಸ್ಮಾತ್ ಹೋದರೆ ಯರಾದರೂ ಅದನ್ನು ಪ್ರಶ್ನಿಸಿ ಕೋರ್ಟಿಗೆ ಹೋದರೆ, ಸಂವಿಧಾನದ ಪ್ರಕಾರವೇ ಮೀಸಲಾತಿ ಕಾನೂನು ನಿಲ್ಲಲ್ಲ. ಅಮಿತ್ ಶಾ ಹೇಳಿದ್ದರಲ್ಲಿ ಸತ್ಯವಿದೆ. ಸ್ಸೋ.. ಮೀಸಲಾತಿ ಪ್ರಕ್ರಿಯೆ ನಡೆಯಬೇಕು ಎಂದರೆ ಈಗ ನಡೆಯುತ್ತಿರುವ ದೇಶದ ಜನಗಣತಿ ಮುಗಿಯಬೇಕು. ಅದು ಮುಗಿಯುವುದಕ್ಕೆ 2027 ಆಗಬಹುದು. ಆಗಿನ ಅಂಕಿ ಅಂಶ ಆಧರಿಸಿ ಹೊಸ ಮೀಸಲಾತಿ ಘೋಷಣೆಯಾಗಲಿದೆ. ಅಲ್ಲಿಯವರೆಗೂ.. ಇದು ಜಾರಿ ಅಸಾಧ್ಯ.

Tags: #ಮಹಿಳಾಮೀಸಲಾತಿ #ನರೇಂದ್ರಮೋದಿ #ಲೋಕಸಭೆ #ರಾಜೀವ್ ಗಾಂಧಿ #ಪಿವಿನರಸಿಂಹರಾವ್ #ದೇವೇಗೌಡ #ಸೋನಿಯಾಗಾಂಧಿ #WomenReservation #NarendraModi #LokSabha #RajivGandhi #PvnarasinhaRao #DeveGowda #SoniaGandhi
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.