ಸುದೀಪ್ ಅವರಿಗೆ ಇರುವ ಕಾಂಟ್ರವರ್ಸಿಗಳ ಜೊತೆ ಇನ್ನೂ ಒಂದು ಕಾಂಟ್ರವರ್ಸಿ ಸೇರಿಕೊಳ್ಳುವಂತಿದೆ. ಈಗಾಗಲೇ ಸೀಕ್ರೆಟ್ ವಿಡಿಯೋ ಲೀಕ್ ಮಾಡ್ತೇನೆ ಎನ್ನುವ ಬೆದರಿಕೆ ಹಾಕಿದ್ದ ಪ್ರಕರಣ ಸ್ಟೇಷನ್ ಮೆಟ್ಟಿಲೇರಿದೆ. ಕುಮಾರ್ ಮಾಡಿದ್ದ ಆರೋಪ ಕೋರ್ಟ್ ಮೆಟ್ಟಿಲೇರಿದೆ. ಅತ್ತ ಫಿಲ್ಮ್ ಚೇಂಬರಿನಲ್ಲಿ ವಿವಾದ ಇತ್ಯರ್ಥವಾಗದೆ ರವಿಚಂದ್ರನ್ ಮಧ್ಯಪ್ರವೇಶ ಮಾಡಿದ್ದೂ ಆಗಿದೆ. ಆದರೆ ವಿವಾದ ಇನ್ನೂ ಇತ್ಯರ್ಥದ ಹಂತ ತಲುಪಿಲ್ಲ. ಈ ನಡುವೆ ರೆಹಮಾನ್, ಎನ್.ಎಂ.ಸುರೇಶ್ ಆರೋಪಗಳ ಜೊತೆ ಸೂರಪ್ಪ ಬಾಬು ಕೂಡಾ ಸೇರಿದ್ದಾರೆ. ಸುದೀಪ್ ಪರ ಜಾಕ್ ಮಂಜು, ವೀರಕಪುತ್ರ ಶ್ರೀನಿವಾಸ್ ಜೊತೆ ಚಂದ್ರಚೂಡ್ ಜೊತೆಯಾಗಿ, ದಿನಕ್ಕೊಂದು ಹಾದಿ ಬೀದಿ ರಂಪವಾಗುತ್ತಿದೆ. ಈ ಮಧ್ಯೆ 46 ಸಿನಿಮಾ ಶೂಟಿಂಗ್ ಶೀಘ್ರದಲ್ಲೇ ಶುರುವಾಗುತ್ತಿದೆ. ಅಲ್ಲೊಂದು ಟ್ವಿಸ್ಟ್ ಇದೆ
ಏ46 ಚಿತ್ರದ ಶೂಟಿಂಗ್ ಆಗಸ್ಟ್ ಮೊದಲ ವಾರದಿಂದ ಪ್ರಾರಂಭ ಆಗಲಿದೆ. 55 ದಿನಗಳ ಶೆಡ್ಯೂಲ್ನಲ್ಲಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಬಹುತೇಕ ಚಿತ್ರೀಕರಣ ನಡೆಯಲಿದೆ. ಸಿನಿಮಾ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎನ್ನುವ ಕುತೂಹಲ ಮೂಡಿದೆ. ವಿಜಯ್ ಕಾರ್ತಿಕೇಯ ಅವರು ‘ಏ46’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿ ಕ್ರಿಯೇಷನ್ಸ್ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇಲ್ಲೊಂದು ಟ್ವಿಸ್ಟ್ ಕೂಡಾ ಇದೆ. ತಮಿಳುನಾಡಿನ ಯಾವುದೇ ಚಿತ್ರ ನಿರ್ಮಾಣ ಸಂಸ್ಥೆ ಅಲ್ಲಿನ ಕಾರ್ಮಿಕರನ್ನೇ ಬಳಸಿಕೊಳ್ಳಬೇಕು ಎಂಬ ನಿಯಮ ಮಾಡಿಕೊಂಡಿದೆ. ಆ ನಿಯಮವಷ್ಟೇ ಅಲ್ಲದೆ ತಮಿಳುನಾಡಿನಲ್ಲೇ ಬಹುತೇಕ ಚಿತ್ರೀಕರಣ ಇರುವುದರಿಂದ ಈ ಚಿತ್ರದಲ್ಲಿ ಬೇರೆ ಚಿತ್ರರಂಗದ ಕಾರ್ಮಿಕರನ್ನು ಬಳಸುವಂತಿಲ್ಲ.
ಆದರೆ ತಂತ್ರಜ್ಞರು, ಕಲಾವಿದರ ವಿಷಯದಲ್ಲಿ ಸ್ವಲ್ಪ ರಿಲ್ಯಾಕ್ಸ್ ಇದೆ. ಈ ನಿಯಮದಂತೆಯೇ ಸಿನಿಮಾ ಶುರುವಾದರೆ, ಚಿತ್ರೀಕರಣ ನಡೆದರೆ ಇದೇ ಮೊದಲ ಬಾರಿಗೆ ಕರ್ನಾಟಕದ ಕಾರ್ಮಿಕರೇ ಇಲ್ಲದೆ ಸುದೀಪ್ ಸಿನಿಮಾ ರೆಡಿಯಾಗಲಿದೆ.



