ಕನ್ನಡದ ಹಲವು ಖ್ಯಾತ ನಟಿಯರಂತೆ ರಮ್ಯಾ ಅವರನ್ನೂ ಚಿತ್ರರಂಗಕ್ಕೆ ಕರೆತಂದಿದ್ದು ದೊಡ್ಮನೆ. ಅಭಿ ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆ ಪ್ರವೇಶ ಮಾಡಿದ ರಮ್ಯಾಗೆ ಈಗ 42 ವರ್ಷ ವಯಸ್ಸು. ಆದರೆ.. ಇವತ್ತಿಗೂ ಯಂಗ್ ನಾಯಕಿಯರಿಗೆ ಸಡ್ಡು ಹೊಡೆಯುವಂತಿದ್ದಾರೆ ಮೋಹಕ ತಾರೆ. ರಮ್ಯಾ ಬೆಳ್ಳಿತೆರೆಯಿಂದ ದೂರ ಉಳಿದು ದಶಕಗಳೇ ಕಳೆದು ಹೋಗಿವೆ. ರಮ್ಯಾ ಸ್ಥಾನಕ್ಕೆ ಇನ್ನೂ ರೀಪ್ಲೇಸ್ ಸಿಕ್ಕಿಲ್ಲ.
ಇನ್ನು ವಿನಯ್ ರಾಜ್ ಕುಮಾರ್ ಅವರಿಗೆ 36 ವರ್ಷ ವಯಸ್ಸು. ಸಿನಿಮಾಗಳಿಗೆ, ನಟನೆಗೆ 100% ಮಾರ್ಕ್ಸ್ ಸಿಕ್ಕಿದೆ. ಆದರೆ.. ಅಷ್ಟೇ ದೊಡ್ಡ ಗೆಲುವು ಮಾತ್ರ ಸಿಕ್ಕಿಲ್ಲ.
ಹೀಗಿರುವಾಗ.. ಇವರಿಬ್ಬರೂ ಜೊತೆಯಾಗಿ ಫೋಟೋ ಶೂಟ್ ಮಾಡಿಸಿದರೆ.. ಸೆನ್ಸೇಷನ್ ಆಗೋದಿಲ್ವಾ.. ವಿನಯ್ ಚಿತ್ರದಲ್ಲಿ ರಮ್ಯಾ ಹೀರೋಯಿನ್ ಆಗ್ತಿದ್ದಾರಾ.. ಎಂಬ ಕುತೂಹಲ ಮೂಡದೇ ಇರದು. ಹಾಗೇನಾದರೂ ಆದರೆ.. ಅದು ಸೆನ್ಸೇಷನ್ ಆಗುವುದು ಖಚಿತ. ತಂದೆ ಮತ್ತು ಮಗ ಇಬ್ಬರಿಗೂ ಹೀರೋಯಿನ್ ಆದ ಹೊಸ ಇತಿಹಾಸ ಬರೆಯಲಿದ್ದಾರೆ ರಮ್ಯಾ.
ರಮ್ಯಾ ಈ ಮೊದಲು ಪುನೀತ್ ಮತ್ತು ಶಿವಣ್ಣ ಇಬ್ಬರಿಗೂ ನಾಯಕಿಯಾಗಿದ್ದಾರೆ, ಪುನೀತ್ ಜೊತೆ ಅತೀ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾದ ದಾಖಲೆ ಇರುವುದು ಇವತ್ತಿಗೂ ರಮ್ಯಾ ಹೆಸರಲ್ಲೇ.. ಅಭಿ, ಆಕಾಶ್, ಅರಸು.. ಮೂರಕ್ಕೆ ಮೂರೂ ಬ್ಲಾಕ್ ಬಸ್ಟರ್ ಹಿಟ್. ಇನ್ನು ಶಿವರಾಜ್ ಕುಮಾರ್ ಜೊತೆ ಆರ್ಯ ಎಂಬ ಚಿತ್ರದಲ್ಲಿ ನಟಿಸಿದ್ದರು ರಮ್ಯಾ. ಅದು ಅಟ್ಟರ್ ಫ್ಲಾಪ್ ಮೂವಿ. ಆದರೆ.. ಪೇರ್ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದಿದ್ದವು. ಹೀಗಿರುವಾಗಲೇ.. ರಮ್ಯಾ ಅವರು.. ವಿನಯ್ ಅವರಿಗೂ ನಾಯಕಿಯಾದರೆ.. ಕನ್ನಡದ ಮಟ್ಟಿಗೆ ಅದು ಹೊಸ ಇತಿಹಾಸವೇ..
ಏಕೆಂದರೆ ತಂದೆ ಮತ್ತು ಮಗ ಇಬ್ಬರಿಗೂ ನಾಯಕಿಯಾದ ಉದಾಹರಣೆ ಬೇರೆ ಚಿತ್ರರಂಗದಲ್ಲಿ ಇದೆ. ಕನ್ನಡದಲ್ಲಿ ಇಲ್ಲ. ಹಿಂದಿಯಲ್ಲಿ ಮಾಧುರಿ ದೀಕ್ಷಿತ್ (ವಿನೋದ್ ಖನ್ನಾ ಮತ್ತು ಅಕ್ಷಯ್ ಖನ್ನಾ)
ರವೀನಾ ಟಂಡನ್ (ಧರ್ಮೇಂದ್ರ, ಸನ್ನಿ ಡಿಯೋಲ್ ಮತ್ತು ವಿನೋದ್ ಖನ್ನಾ, ಅಕ್ಷಯ್ ಖನ್ನಾ)
ಶ್ರೀದೇವಿ (ಧರ್ಮೇಂದ್ರ ಮತ್ತು ಸನ್ನಿಡಿಯೋಲ್)
ಅಮೃತಾ ಸಿಂಗ್ (ಧರ್ಮೇಂದ್ರ, ಸನ್ನಿ ಡಿಯೋಲ್ ಮತ್ತು ಸುನಿಲ್ ದತ್, ಸಂಜಯ್ ದತ್ )
ಪೂನಂ ದಿಲ್ಲೋನ್ (ಧರ್ಮೇಂದ್ರ ಮತ್ತು ಸನ್ನಿಡಿಯೋಲ್)
ಹೇಮ ಮಾಲಿನಿ (ರಾಜ್ ಕಪೂರ್ ಹಾಗೂ ಮಕ್ಕಳಾದ ರಣಧೀರ್ ಕಪೂರ್ & ರಿಷಿ ಕಪೂರ್)
ಜಯಪ್ರದಾ (ಧರ್ಮೇಂದ್ರ ಮತ್ತು ಸನ್ನಿಡಿಯೋಲ್)
ಕಿಮಿ ಕಾತ್ಕರ್ (ಧರ್ಮೇಂದ್ರ ಮತ್ತು ಸನ್ನಿಡಿಯೋಲ್)
ರಾಣಿ ಮುಖರ್ಜಿ, ಶಿಲ್ಪಾ ಶೆಟ್ಟಿ (ಅಮಿತಾಭ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್)
ಡಿಂಪಲ್ ಕಪಾಡಿಯಾ (ಧರ್ಮೇಂದ್ರ ಮತ್ತು ಸನ್ನಿಡಿಯೋಲ್)
ತೆಲುಗಿನಲ್ಲಿ
ರಾಕುಲ್ ಪ್ರೀತ್ ಸಿಂಗ್ (ಅಕ್ಕಿನೇನಿ ನಾಗಾರ್ಜುನ ಮತ್ತು ನಾಗಚೈತನ್ಯ )
ಕಾಜಲ್ (ಚಿರಂಜೀವಿ, ಪವನ್ ಕಲ್ಯಾಣ್ ಮತ್ತು ರಾಮ್ ಚರಣ್)
ಸಮಂತಾ (ಪವನ್ ಕಲ್ಯಾಣ್ ಮತ್ತು ರಾಮ್ ಚರಣ್)
ತಮನ್ನಾ ಭಾಟಿಯಾ (ಚಿರಂಜೀವಿ, ಪವನ್ ಕಲ್ಯಾಣ್ ಮತ್ತು ರಾಮ್ ಚರಣ್)
ರಮ್ಯಕೃಷ್ಣ (ಎನ್ಟಿ ರಾಮರಾವ್ ಮತ್ತು ಹರಿಕೃಷ್ಣ, ಬಾಲಕೃಷ್ಣ ಮತ್ತು ಮೊಮ್ಮಗ ಜೂ.ಎನ್‌ಟಿರ್ )
ನಯನತಾರ (ವೆಂಕಟೇಶ್ ಮತ್ತು ಸೋದರಳಿಯ ರಾಣಾ ದಗ್ಗುಬಾಟಿ )
ಶೃತಿ ಹಾಸನ್ (ಪವನ್ ಕಲ್ಯಾಣ್ ಮತ್ತು ರಾಮ್ ಚರಣ್)
ತ್ರಿಷಾ (ಬಾಲಕೃಷ್ಣ, ಜೂ.ಎನ್‌ಟಿಆರ್)
ಆರತಿ ಅಗರ್ವಾಲ್ (ಬಾಲಕೃಷ್ಣ, ಜೂ.ಎನ್‌ಟಿಆರ್)
ತಮಿಳಿನಲ್ಲಿ
ಶ್ರೇಯಾ (ಮಾವ ರಜನಿಕಾಂತ್ ಮತ್ತು ಅಳಿಯ ಧನುಷ್)
ಹೀಗೆ ದೊಡ್ಡ ಪಟ್ಟಿಯೇ ಇದೆ. ಆದರೆ.. ಅಷ್ಟೆಲ್ಲ ಥ್ರಿಲ್ ಆಗುವುದು ಬೇಡ.
ಫೋಟೋ ಶೂಟ್ ಆಗಿರುವುದು ನಿಜ. ಆದರೆ.. ಸಿನಿಮಾಗೆ ಅಲ್ಲ. ರಮ್ಯಾ ಹಾಗೂ ವಿನಯ್ ರಾಜ್ಕುಮಾರ್ ‘ಸ್ವಾಸ ಲೈಫ್’ ಹೆಸರಿನ ಮ್ಯಾಗಜಿನ್ಗಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಅಷ್ಟೇ. ಇದು ಯಾವುದೇ ಹೊಸ ಸಿನಿಮಾದ ಫೋಟೋ ಶೂಟ್ ಅಲ್ಲ.



