ಗೀತಾ ಶಿವ ರಾಜ್ ಕುಮಾರ್, ಈ ಬಾರಿಯ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಅವರು ಎದುರಿಸುತ್ತಿರುವುದು 4 ಬಾರಿಯ ಸಂಸದ ಬಿ.ವೈ.ರಾಘವೇಂದ್ರ ಅವರನ್ನು. ರಾಘವೇಂದ್ರ, ರಾಜಾಹುಲಿ ಯಡಿಯೂರಪ್ಪ ಅವರ ಪುತ್ರ. ಅಷ್ಟೇ ಅಲ್ಲ, ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಅಣ್ಣ. ಈಶ್ವರಪ್ಪನವರೂ ಪಕ್ಷೇತರರಾಗಿ ಅಖಾಡಕ್ಕಿಳಿದರೆ.. ರಣರಂಗ ರಣರೋಚಕವಾಗುವುದರಲ್ಲಿ ಸಂಶಯವೇ ಇಲ್ಲ. ಆದರೆ.. ಗೀತಾ ಅವರ ಬಗ್ಗೆ ಹಲವು ಆಕ್ಷೇಪಗಳಿವೆ.
ಗೀತಾ, 2014ರಲ್ಲಿ ಸ್ಪರ್ಧೆ ಮಾಡಿದ್ದರು. ಆದರೆ.. ಸೋತ ಮೇಲೆ ಶಿವಮೊಗ್ಗವನ್ನು ಮರೆತೇಬಿಟ್ಟರು ಎನ್ನುವುದು ಆರೋಪ ನಂ.1. ಅಷ್ಟೇ ಅಲ್ಲ, 10 ತಿಂಗಳ ಹಿಂದೆ ಮಧು ಬಂಗಾರಪ್ಪ ಕಾಂಗ್ರೆಸ್ಸಿನಿಂದ ಸ್ಪರ್ಧೆ ಮಾಡುವವರೆಗೆ ಗೀತಾ ಅವರು ಶಿವಮೊಗ್ಗದಿಂದ ದೂರವೇ ಇದ್ದರು. ಈಗ ಬರೋಬ್ಬರಿ 10 ವರ್ಷಗಳ ನಂತರ ಗೀತಾ, ಲೋಕಸಭೆ ಅಭ್ಯರ್ಥಿಯಾಗಿದ್ದಾರೆ. ಇಂತಹ ಗೀತಾ ಅವರನ್ನು ಬಂಗಾರಪ್ಪನವರ ಮಗಳು, ಡಾ.ರಾಜ್ ಕುಮಾರ್ ಅವರ ಸೊಸೆ, ಶಿವರಾಜ್ ಕುಮಾರ್ ಹೆಂಡತಿ ಎಂಬ ಕಾರಣಕ್ಕೆ ವೋಟ್ ಹಾಕಬೇಕಾ..? ಈ ಪ್ರಶ್ನೆಗೆ ಸ್ವತಃ ಶಿವಣ್ಣ ಉತ್ತರ ಕೊಟ್ಟಿದ್ದಾರೆ.
ಎಲ್ಲಾ ಕೇಳ ಬಹುದು ಏನು ಎಕ್ಸ್‌ಪೀರಿಯನ್ಸ್ ಇದೆ ಅಂತ. 38 ವರ್ಷ ಸಂಸಾರ ಮಾಡಿದ್ದಾರೆ ಅದಕ್ಕಿಂತ ಎಕ್ಸ್‌ಪೀರಿಯನ್ಸ್ ಬೇಕಾ? ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ, ಶಕ್ತಿಧಾಮದಲ್ಲಿ ಇನ್ನೊಂದು ತಾಯಿಯಾಗಿ, ನಮ್ಮ ತಾಯಿ ಸ್ಥಾನದಲ್ಲಿ ತಾಯಿಯಾಗಿ, ರಾಜ್‌ಕುಮಾರ್ ಸೊಸೆಯಾಗಿ, ಶಿವರಾಜ್‌ಕುಮಾರ್ ಹೆಂಡತಿಯಾಗಿ, ಯಾಕಂದ್ರೆ ನನ್ನನ್ನು ಕಂಟ್ರೋಲ್ ಮಾಡುವುದು ತುಂಬಾನೇ ಕಷ್ಟ. ಅದು ಅವರಿಂದ ಮಾತ್ರ ಸಾಧ್ಯ. ಅದೆಲ್ಲದನ್ನೂ ತಡೆದುಕೊಂಡು ಮಾಡ್ತಾರೆ ಅಂದರೆ, ಇದಕ್ಕಿಂತ ಇನ್ನೇನು ಎಕ್ಸ್‌ಪೀರಿಯನ್ಸ್ ಬೇಕು ಎನ್ನುವುದು ಶಿವಣ್ಣ ಪ್ರಶ್ನೆ.
ಗೀತಾ ಅವರಿಗೀತ 58-59 ವರ್ಷ. ಮದುವೆಯಾಗಿಯೇ 38 ವರ್ಷವಾಯ್ತು. ಇವತ್ತು ಸ್ಟ್ರಾಂಗ್ ಆಗಿ ಇದ್ದೀವಿ ಅಂದರೆ, ಅದೇ ಗುರು ಬಾಂಡ್. ಯಾವ ಕುಟುಂಬದಲ್ಲಿ ಲೇಡಿ ಸ್ಟ್ರಾಂಗ್ ಆಗಿ ಇರುತ್ತಾಳೋ ಅವಳು ಸಮಾಜ ಸೇವೆ ಮಾಡುವುದಕ್ಕೆ ಪರ್ಫೆಕ್ಟ್. ಅವರಿಗೆ ಆ ತಕತ್ತು ಇರುತ್ತೆ. ಯಾಕಂದ್ರೆ, ಭೂಮಿ ತಾಯಿಯನ್ನು ಹೆಣ್ಣಿಗೆ ಹೋಲಿಸುತ್ತೇವೆ. ಇಡೀ ಭೂಮಿ ತಾಯಿ ನಮ್ಮೆಲ್ಲರ ಭಾರವನ್ನು ಹೊರುತ್ತಾಳೆ. ಒಂದು ಸಾರಿ ಅವಕಾಶ ಕೊಟ್ಟು ಆ ಭಾರನ ಹೊರೆಸಬಾರದ ನಾವು ಎನ್ನುತ್ತಾ ಮಾತು ಮುಂದುವರೆಸುವ ಶಿವಣ್ಣ, ಹೆಣ್ಣು ಮಕ್ಕಳು ತುಂಬಾನೇ ತ್ಯಾಗ ಮಾಡುತ್ತಾರೆ. ಇದು ಎಲ್ಲರಿಗೂ ಸೇರಬೇಕು. ಅವರು ಏನು ಕೆಲಸ ಮಾಡುವುದಿಲ್ಲ ಹೇಳಿ. ಬರೀ ಅಡುಗೆ ಮಾಡೋದು ಅಷ್ಟು ಸುಲಭ ಅಲ್ಲ ಸರ್.. ಅದಕ್ಕೆ ಸರಿಯಾಗಿ ಉಪ್ಪಿ ಹಾಕಬೇಕು. ಖಾರ ಹಾಕಬೇಕು. ಈರುಳ್ಳಿ ಕತ್ತರಿಸಬೇಕು. ಟೊಮ್ಯಾಟೋ ಹಾಕಬೇಕು. ತರಕಾರಿ ಹಾಕಬೇಕು. ಕಷ್ಟ ಪಟ್ಕೊಂಡು ಕೆಲಸ ಮಾಡಿಕೊಂಡು ಬರುತ್ತೇವೆ. ಏನು ಸರ್ ಬರೀ ಬೇಳೆ ಸಾರು ಅಂತೀವಿ. ಇಷ್ಟೆಲ್ಲ ನೆನಪು ಇಟ್ಕೊಂಡು ಗಂಡ ಕಷ್ಟ ಪಟ್ಕೊಂಡು ಬರುತ್ತಾನೆ. ಇಷ್ಟೆಲ್ಲ ಸಮಸ್ಯೆಗಳನ್ನು ಒಂದು ಹೆಣ್ಣು ಹೊರುತ್ತಾಳೆ ಅಂದ್ರೆ, ಖಂಡಿತಾ ಸಮಾಜದ ಎಲ್ಲಾ ಸಮಸ್ಯೆಗಳನ್ನು ಅವಳು ಹೊರಬಲ್ಲಳು ಎಂದಿದ್ದಾರೆ.



