ನಮ್ಮದೇ ಸರ್ಕಾರ ಎನ್ನುತ್ತಿದ್ದ ಬಿಜೆಪಿ ಮತ್ತು ಕಾಂಗ್ರೆಸ್`ಗಳಲ್ಲಿ ಇನ್ನೂ ಆತ್ಮವಿಶ್ವಾಸ ಉಳಿಸಿಕೊಂಡಿರೋ ಪಕ್ಷ ಕಾಂಗ್ರೆಸ್. ಸಿದ್ದರಾಮಯ್ಯನವರ ಪ್ರಕಾರ ಈ ಎಲ್ಲ ಸಮೀಕ್ಷೆಗಳನ್ನೂ ಮೀರಿ 150 ಸ್ಥಾನ ಬಂದರೂ ಆಶ್ಚರ್ಯ ಇಲ್ಲ. ಡಿಕೆಶಿವಕುಮಾರ್ ಪ್ರಕಾರ 130ಕ್ಕಿಂತಲೂ ಹೆಚ್ಚು ಸ್ಥಾನ ಕಾಂಗ್ರೆಸ್ಸಿಗೆ ಬರಲಿದೆ. ಎಲೆಕ್ಷನ್ ಮುಗಿದ ಮೇಲೆ ನಡೆದ ಮತಗಟ್ಟೆ ಸಮೀಕ್ಷೆಗಳು, ಎಕ್ಸಿಟ್ ಪೋಲ್`ಗಳು ಹೆಚ್ಚು ಹೆಚ್ಚು ಸ್ಥಾನ ನೀಡಿರುವುದು ಕಾಂಗ್ರೆಸ್ಸಿಗೆ. ಪಕ್ಕಾ ಕಾಂಗ್ರೆಸ್ಸೇ ಬರುತ್ತೆ ಎಂದು ಹೇಳಿರುವುದು ಕೆಲವೇ ಸಮೀಕ್ಷೆಗಳು. ಪ್ಲಸ್ ಮೈನಸ್ ಅಂದಾಜಿನಲ್ಲಿ ಕಾಂಗ್ರೆಸ್ ಮುಂದಿದೆ. ಕೆಲವು ಸಮೀಕ್ಷೆಗಳಲ್ಲಿ ಬಿಜೆಪಿಯೂ ಮುಂದಿದೆ.
ಈ ಎಲ್ಲ ಸಮೀಕ್ಷೆಗಳ ಒಟ್ಟಾರೆ ಸರಾಸರಿ ಹೇಗಿರುತ್ತೆ..? ಬೇಕಿರುವ ಮ್ಯಾಜಿಕ್ ನಂಬರ್ 113. ಸಮೀಕ್ಷೆಗಳೇನೋ ಹತ್ತಾರು ಇವೆ. ಅವುಗಳನ್ನೆಲ್ಲ ಒಟ್ಟಾಗಿ ಸರಾಸರಿ ತೆಗೆದರೆ.. ಅದೇನಿಲ್ಲ. ಎಲ್ಲ ಸಮೀಕ್ಷೆಗಳ ಒಟ್ಟಾರೆ ಫಲಿತಾಂಶವನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಗಳಿಸಿರುವ ಒಟ್ಟಾರೆ ಸೀಟುಗಳ ಸಂಖ್ಯೆಯನ್ನು ಕೂಡಿಸಿ. ನಂತರ ಅದನ್ನು 224ರಿಂದ ಡಿವೈಡ್ ಮಾಡಿ. ಅಷ್ಟೆಲ್ಲ ಲೆಕ್ಕಾಚಾರ ಏಕೆ..?
- ಸಮೀಕ್ಷೆ ಸಂಸ್ಥೆ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರೆ
ETG 85 113 23 03
ರಾಜನೀತಿ 100 92 31 01
ಸುವರ್ಣ ನ್ಯೂಸ್ 106 99 19 00
ಪೋಲ್ ಸ್ಟ್ರಾರ್ಟ್ 93 104 24 03
ನ್ಯೂಸ್ ನೇಷನ್ 114 86 21 03
ಟುಡೇಸ್ ಚಾಣಕ್ಯ 92 120 12 00
ಪಿ ಮಾರ್ಕ್ 92 101 28 03
ಇಂಡಿಯಾ ಟುಡೇ 71 131 22 00
========================================
POLL OF POLLS 94 106 22 02
ಇವುಗಳಲ್ಲಿ ಯಾವ ಸಮೀಕ್ಷೆ ನಂಬೋದು ಎಂದರೆ ಅಲ್ಲಿಯೂ ಗೊಂದಲಗಳಿವೆ. ಮೇಲೆ ಹೇಳಿರುವ ಎಲ್ಲ ಸಮೀಕ್ಷೆಗಳಲ್ಲಿ ಹೆಚ್ಚಿನ ಒಲವು ವ್ಯಕ್ತವಾಗುತ್ತಿರೊದು ಟುಡೇಸ್ ಚಾಣಕ್ಯ ಸಮೀಕ್ಷೆ ಮತ್ತು ಜನ್ ಕೀ ಬಾತ್ ಸಮೀಕ್ಷೆಗಳಿಗೆ. ಎರಡೂ ಸಂಸ್ಥೆಯ ಸಮೀಕ್ಷೆಗಳು ಇದುವರೆಗೆ ಸುಳ್ಳಾಗಿಲ್ಲ. ಎಲ್ಲ ಸಮೀಕ್ಷೆಗಳಿಗೆ ವ್ಯತಿರಿಕ್ತವಾಗಿಯೇ ಸಮೀಕ್ಷೆಗಳನ್ನು ಕೊಟ್ಟು, ಇದೆಲ್ಲ ಬಕ್ವಾಸ್ ಕಣ್ರೀ ಎಂದಾಗ, ಲೇವಡಿಯನ್ನೆಲ್ಲ ಎದುರಿಸಿದ್ದ ಈ ಸಂಸ್ಥೆಗಳು ರಿಸಲ್ಟ್ ಬಂದಾಗ ತಾವು ಮಾಡಿದ್ದೇ ಸರಿ ಎಂದು ಸಾಬೀತು ಮಾಡಿದ್ದವು. ಇವುಗಳಲ್ಲಿ ಸ್ವಲ್ಪ ಸೀನಿಯರ್ ಟುಡೇಸ್ ಚಾಣಕ್ಯ.
2014ರಲ್ಲಿ ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತ (ಎನ್‍ಡಿಎ ಅಲ್ಲ) ಎಂದು ಹೇಳಿದಾಗ ನಕ್ಕಿದ್ದವರೇ ಹೆಚ್ಚು. 2019ರಲ್ಲಿ ಬಿಜೆಪಿ 2014ಕ್ಕಿಂತ ಹೆಚ್ಚು ಸೀಟು ಗೆಲ್ಲಲಿದೆ ಎಂದಾಗಲೂ ನಕ್ಕಿದ್ದರು. ಫಲಿತಾಂಶವನ್ನು ಭಾರತೀಯರು ನೋಡಿದ್ದಾರೆ. ಅಷ್ಟೇ ಅಲ್ಲ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಪ.ಬಂಗಾಳ, ಮಹಾರಾಷ್ಟ್ರ.. ಹೀಗೆ ಹಲವು ರಾಜ್ಯಗಳಲ್ಲಿ ನಿಖರ ಎಕ್ಸಿಟ್ ಪೋಲ್ ನೀಡಿದ ಖ್ಯಾತಿ ಚಾಣಕ್ಯಕ್ಕೆ ಇದೆ. ಜನ್ ಕೀ ಬಾತ್ ಕೂಡಾ ಅಷ್ಟೆ, ಸಮೀಕ್ಷೆಗಳು ಉತ್ಪ್ರೇಕ್ಷೆ ಎಂದವರೇ ಹೆಚ್ಚು. ಆದರೆ ನಿಜವಾಗಿದೆ ಎನ್ನುವುದೂ ಅಷ್ಟೇ ನಿಜ. ಹಾಗೆಂದು ಬಿಜೆಪಿ ಸೋಲಿನ ಸಮೀಕ್ಷೆ ಹೇಳಿಲ್ಲ ಎಂದಲ್ಲ, ಬಿಜೆಪಿ ಸೋಲನ್ನೂ ನಿಖರವಾಗಿ ಗುರುತಿಸಿವೆ. ಹೀಗಾಗಿಯೇ ಬಿಜೆಪಿಗೆ ಹಾಗೂ ಕಾಂಗ್ರೆಸ್ಸಿಗೆ ಟೆನ್ಷನ್.
ಏಕೆಂದರೆ ಜನ್ ಕೀ ಬಾತ್ ಪ್ರಕಾರ ಬಹುಮತಕ್ಕೆ ಹತ್ತಿರ ಇರೋದು ಬಿಜೆಪಿ. ಅತಂತ್ರ ಸರ್ಕಾರ. ಟುಡೇಸ್ ಚಾಣಕ್ಯ ಪ್ರಕಾರ ಬಹುಮತದ ಹತ್ತಿರ ಇರೋದು ಕಾಂಗ್ರೆಸ್. ಕನ್`ಫ್ಯೂಸ್ ಆಗಲ್ವಾ ಮರ್ರೆ..



