Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಬಿಪಿಎಲ್‌ ಕಾರ್ಡ್‌ ರದ್ದು ಯಾಕೆ..? ಹೇಗೆ..? ಸರ್ಕಾರಕ್ಕೆ ಅದೆಲ್ಲ ಹೇಗೆ ಗೊತ್ತಾಗುತ್ತೆ..?

SpeciallU by SpeciallU
November 21, 2024
in News, Politics
Reading Time: 1 min read
0 0
0
ಬಿಪಿಎಲ್‌ ಕಾರ್ಡ್‌ ರದ್ದು ಯಾಕೆ..? ಹೇಗೆ..? ಸರ್ಕಾರಕ್ಕೆ ಅದೆಲ್ಲ ಹೇಗೆ ಗೊತ್ತಾಗುತ್ತೆ..?

ಕರ್ನಾಟಕದಲ್ಲಿ ಈಗ ಬಿಪಿಎಲ್‌ ಕಾರ್ಡುದಾರರಿಗೆ ಟೆನ್ಷನ್‌ ಟೈಂ. ಏಕೆ ಅಂದ್ರೆ ಬಿಪಿಎಲ್‌ ಕಾರ್ಡುಗಳು ಇದ್ದಕ್ಕಿದ್ದಂತೆ ರದ್ದಾಗ್ತಾ ಇವೆ. ಗ್ಯಾರಂಟಿ ಘೋಷಣೆ ಮಾಡಿರೋ ಸಿದ್ಧರಾಮಯ್ಯ ಅವರನ್ನ ಬಿಜೆಪಿ ಅಟ್ಯಾಕ್‌ ಮಾಡ್ತಿದೆ. ಇದೆಲ್ಲ ಸಿದ್ದರಾಮಯ್ಯ ಸರ್ಕಾರ ಮಾಡ್ತಿರೋ ಕೆಲ್ಸ ಅಂತಿದ್ದಾರೆ. ಆದರೆ ಈ ಬಿಪಿಎಲ್‌ ಕಾರ್ಡ್‌ ಕ್ಯಾನ್ಸಲ್‌ ಮಾಡ್ತಿರೋದು ಸಿದ್ದರಾಮಯ್ಯ ಸರ್ಕಾರ ಮಾತ್ರ ಅಲ್ಲ, ಸೆಂಟ್ರಲ್‌ ಗೌರ್ನಮೆಂಟ್‌ ಕೂಡಾ ಮಾಡ್ತಿದೆ. ದೇಶಾದ್ಯಂತ 5 ಕೋಟಿ 80 ಲಕ್ಷಕ್ಕೂ ಹೆಚ್ಚು ಬಿಪಿಎಲ್‌ ಕಾರ್ಡ್‌ ಕ್ಯಾನ್ಸಲ್‌ ಆಗಿವೆ. ಯಾಕ್‌ ಕ್ಯಾನ್ಸಲ್‌ ಆಗಿದೆ ಗೊತ್ತಾ.. ಡಿಜಿಟಲೈಸೇಷನ್..‌ ಆಧಾರ್‌ ಕಾರ್ಡ್‌ ವೆರಿಫಿಕೇಷನ್‌ ಆಯ್ತಲ್ಲ, ಅದ್ರಿಂದ ಆಗಿರೋ ಎಫೆಕ್ಟ್‌ ಇದು.

ಆಧಾರ್‌ ಕಾರ್ಡ್‌ ಲಿಂಕ್‌ ಆಗ್ತಿದ್ದಂತೆಯೇ ಇ-ಕೆವೈಸಿ ಆಗುತ್ತೆ. ನೀವು ಟ್ಯಾಕ್ಸ್‌ ಕಟ್ತಾ ಇದ್ದೀರ, ಇಲ್ವಾ ಅನ್ನೋದು ಗೊತ್ತಾಗುತ್ತೆ. ಒಂದು ಲೆಕ್ಕದಲ್ಲಿ ಕಂಪ್ಲೀಟ್‌ ಆರ್ಥಿಕ ಜಾತಕ ಸಿಕ್ಕಿಬಿಡುತ್ತೆ.
ಅಷ್ಟೇ ಅಲ್ಲ, ಈಗ ಬಿಪಿಎಲ್‌ ಕಾರ್ಡ್‌ ಇದ್ದೋವ್ರಿಗೆ ಯಾವ್ಯಾವ ಕಾರಣಕ್ಕೆ ಬಿಪಿಎಲ್‌ ಕಾರ್ಡ್‌ ಕ್ಯಾನ್ಸಲ್‌ ಆಗುತ್ತೆ ಅನ್ನೋದನ್ನ ನೋಡ್ತಾ ಹೋದ್ರೆ..

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಯಾರಿಗೆ BPL ಕಾರ್ಡ್‌ ಕ್ಯಾನ್ಸಲ್..?

ಸರ್ಕಾರಿ ಕೆಲಸದಲ್ಲಿದ್ರೆ ಕಾರ್ಡ್‌ ಕ್ಯಾನ್ಸಲ್‌ ಆಗುತ್ತೆ..!

ನಿಮ್ಮ ಕುಟುಂಬ ಸದಸ್ಯರಲ್ಲಿ ಯಾರಾದರು ಸರ್ಕಾರಿ ನೌಕರರು ಇದ್ದರೆ ಅಂದರೆ ರೇಷನ್ ಕಾರ್ಡಿನಲ್ಲಿರೊ ಸದಸ್ಯರ ಪೈಕಿ ಯಾರಾದರೂ ಒಬ್ರು ಸರ್ಕಾರಿ ನೌಕರ ಆಗಿದ್ರೂ, ಅವರಿಗೆ ಕೊಟ್ಟಿದ್ದ ಕಾರ್ಡ್ ರದ್ದಾಗುತ್ತೆ.

ಯಾರಿಗೆ BPL ಕಾರ್ಡ್‌ ಕ್ಯಾನ್ಸಲ್..?

ಸರ್ಕಾರಿ ಸ್ವಾಮ್ಯ ಸಂಸ್ಥೆಗಳ ನೌಕರರಾಗಿದ್ದರೂ ರದ್ದು..!

ಸರ್ಕಾರಿ ಅನುದಾನವನ್ನು ಪಡೆಯುತ್ತಿರೋ ಸಂಸ್ಥೆಗಳಲ್ಲಿ, ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ,ನಿಗಮ  ಮಂಡಳಿಗಳಲ್ಲಿ, ಸ್ವಾಯತ್ತ ಸಂಸ್ಥೆಗಳಲ್ಲಿ ನೌಕರಿ ಮಾಡ್ತಾ ಇರೋವ್ರು ಬಿಪಿಎಲ್ ಕಾರ್ಡ್‌ ಸದಸ್ಯರ ಪಟ್ಟಿಯಲ್ಲಿದ್ದರೆ ಅಂತಹವರ ಕಾರ್ಡ್ ಕೂಡಾ ಅನರ್ಹವಾಲಿದೆ.

ಯಾರಿಗೆ BPL ಕಾರ್ಡ್‌ ಕ್ಯಾನ್ಸಲ್..?

ಟ್ಯಾಕ್ಸ್‌ ಕಟ್ಟುತ್ತಿದ್ದರೆ.. ಬಿಪಿಎಲ್‌ ಸಿಕ್ಕಲ್ಲ..!

ಆದಾಯ ತೆರಿಗೆ ಅಥವಾ ಸೇವಾ ತೆರಿಗೆ ಅಥವಾ ವ್ಯಾಟ್ ಅಥವಾ ವೃತ್ತಿ ತೆರಿಗೆ.. ಯಾವುದಾದರೂ ಒಂದು ಟ್ಯಾಕ್ಸ್‌ ಕಟ್ತಾ ಇದ್ರೂ, ಅವರಿಗೆ ಬಿಪಿಎಲ್‌ ಕಾರ್ಡ್‌ ಸಿಕ್ಕಲ್ಲ. ಇದ್ದರೆ ಕ್ಯಾನ್ಸಲ್‌ ಆಗುತ್ತೆ.ಅಂದರೆ ಉದ್ಯಮಿಗಳು, ತೆರಿಗೆ ಪಾವತಿ ಮಾಡುತ್ತಿರುವವರು ರೇಷನ್ ಕಾರ್ಡಿನಲ್ಲಿದ್ದರೆ ಅವರ ಬಿಪಿಎಲ್ ಕಾರ್ಡ್ ಕೂಡಾ ರದ್ದಾಗಲಿದೆ.

ಯಾರಿಗೆ BPL ಕಾರ್ಡ್‌ ಕ್ಯಾನ್ಸಲ್..?

3 ಹೆಕ್ಟೇರ್ ಭೂಮಿ ಇದ್ದವರಿಗೆ ರದ್ದು

ಇದು ಗ್ರಾಮೀಣ ಪ್ರದೇಶಗಳ ಭೂಮಾಲೀಕರಿಗೆ ಸಂಬಂಧ ಪಟ್ಟಿದ್ದು. ಹಳ್ಳಿಗಳಲ್ಲಿ 3 ಹೆಕ್ಟೇರ್ ಅಂದ್ರೆ ಏಳೂವರೆ ಎಕರೆ ಜಮೀನು ಇದ್ದರೆ, ಅದು ಒಣಭೂಮಿಯಾದ್ರೂ ಆಗಿರಲಿ, ನೀರಾವರಿ ಭೂಮಿಯಾದ್ರೂ ಆಗಿರಲಿ ಕಾರ್ಡ್‌ ಕ್ಯಾನ್ಸಲ್‌ ಆಗುತ್ತೆ. ಆಧರೆ ಈಗೇನೋ ಸಿದ್ದರಾಮಯ್ಯ ಅದನ್ನ ತೆಗೀರಿ ಅಂದಿದ್ಧಾರಂತೆ. ಆಧರೆ ಅಧಿಕೃತ ಆದೇಶ ಬಂದಿಲ್ಲ. ಸಿಕ್ಕಿಲ್ಲ.

ಯಾರಿಗೆ BPL ಕಾರ್ಡ್‌ ಕ್ಯಾನ್ಸಲ್..?

ಸಿಟೀನಲ್ಲಿ ಸ್ವಂತ ಮನೆ ಇದ್ದವರಿಗೂ ಟೆನ್ಷನ್..!‌

ನಗರ ಪ್ರದೇಶಗಳಲ್ಲಿ ಸಾವಿರ ಚದರ ಅಡಿ ಮನೆ ಇದ್ದರೆ, ಅದೂ ಸ್ವಂತ ಮನೆಯಾಗಿದ್ದರೆ, ಅವರಿಗೆ ಬಿಪಿಎಲ್‌ ಕಾರ್ಡ್‌ ಇಲ್ಲ. ಆದರೆ ಇಲ್ಲಿ ಒಂದು ಕನ್‌ ಫ್ಯೂಷನ್‌ ಇದೆ. ಏನಂದ್ರೆ ಕೆಲವರು ಡುಪ್ಲೆಕ್ಸ್‌ ಮನೆ ಕಟ್ಟಿಕೊಂಡಿರ್ತಾರೆ. ಟೋಟಲ್‌ ಮನೆ ಸಾವಿರ ಚದರ ಅಡಿಗಿಂತ ಜಾಸ್ತಿ ಇರುತ್ತೆ. ಆದರೆ ನೆಲ ಸಾವಿರ ಚದರ ಅಡಿ ಇರಲ್ಲ. ಇದರ ಬಗ್ಗೆ ಸರ್ಕಾರದಿಂದ ಕ್ಲಾರಿಫಿಕೇಷನ್‌ ಸಿಕ್ಕಿಲ್ಲ.

ಯಾರಿಗೆ BPL ಕಾರ್ಡ್‌ ಕ್ಯಾನ್ಸಲ್..?

ಸ್ವಂತ ಕಾರ್ ಹೊಂದಿದ್ದರೆ ಅನರ್ಹ

ಸ್ವಂತಕ್ಕೆ ಕಾರ್ ಇದ್ರೆ ಅಂತಹವರ ಬಿಪಿಎಲ್ ಕಾರ್ಡ್ ಕೂಡಾ ರದ್ದಾಗಲಿದೆ. ಆದರೆ ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನ ಇದ್ದರೆ, ಜೀವನೋಪಾಯಕ್ಕಾಗಿ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಹೊಂದಿದ್ದರೆ ಅಂತಹವರಿಗೆ ಕಾರ್ಡ್ ರದ್ದಾಗುವುದಿಲ್ಲ.

ಯಾರಿಗೆ BPL ಕಾರ್ಡ್‌ ಕ್ಯಾನ್ಸಲ್..?

ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಹೆಚ್ಚಿದ್ದರೆ..

ಕುಟುಂಬದ ವಾರ್ಷಿಕ  ಆದಾಯ ವರ್ಷಕ್ಕೆ 1.20 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿದ್ದರೆ ಅವರಿಗೆ ನೀಡಲಾಗಿರುವ ಬಿಪಿಎಲ್ ಕಾರ್ಡ್ ಅನರ್ಹಗೊಳ್ಳಲಿದೆ.

ಯಾರಿಗೆ BPL ಕಾರ್ಡ್‌ ಕ್ಯಾನ್ಸಲ್..?

ಮನೆ ಬಾಡಿಗೆ ಕೊಟ್ಟು ಬದುಕುತ್ತಿದ್ದರೆ..

ಅಂದ್ರೆ ಮನೆ ಬಾಡಿಗೆ ತಗೊಂಡು, ಜೀವನ ನಡೆಸ್ತಾ ಇದ್ರೆ, ಆಗ ಕೂಡಾ ರೇಷನ್‌ ಕಾರ್ಡ್‌ ಸಿಕ್ಕಲ್ಲ. ಅವರಿಗೆ ಎಪಿಎಲ್‌ ಕಾರ್ಡ್‌ ಕೂಡಾ ಸಿಕ್ಕಲ್ಲವಂತೆ.

ಅದು ಹೇಗೆ ಗೊತ್ತಾಗುತ್ತೆ ಅಂತೀರಾ. ಮನೆ ಓನರ್‌ ಗೃಹ ಜ್ಯೋತಿ ಸ್ಕೀಮಿಗೆ ಲಿಂಕ್‌ ಮಾಡಿರ್ತಾರಲ್ಲ, ಅಲ್ಲಿ ಗೊತ್ತಾಗುತ್ತೆ. ಯಾಕಂದರೆ ಒಂದು ಮನೆಯ ಆರ್‌ ಆರ್‌ ನಂಬರನ್ನ ಓನರ್‌ ಇಟ್ಕೊಂಡಿರ್ಥಾರೆ. ಉಳಿದ ಮನೆಗಳ ಆರ್‌ ಆರ್‌ ನಂಬರನ್ನ  ಬಾಡಿಗೆ ಬಂದವರಿಗೆ ಕೊಟ್ಟಿರ್ತಾರೆ. ಓನರ್‌ ಹೆಸರು ಸೇಮ್‌ ಇರುತ್ತೆ. ಅಷ್ಟು ಸಾಕಲ್ವಾ.. ಸಾಫ್ಟ್‌ವೇರ್‌ ಹುಡುಕಾಡಿ ತಡಕಾಡಿ ಬ್ರೇಕ್‌ ಹಾಕುತ್ತೆ. ಟ್ಯಾಕ್ಸ್‌ ಲೆಕ್ಕ ಇದ್ಯಲ್ಲ, ಅದೆಲ್ಲ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿದ್‌ ಕೂಡ್ಲೇ ಸಿಗುತ್ತೆ. ಯಾಕಂದ್ರೆ ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ & ಬ್ಯಾಂಕ್‌ ಅಕೌಂಟ್‌ ಲಿಂಕ್‌ ಆಗಿ ಯಾವ್ದೋ ಕಾಲ ಆಗಿದೆ.

ಎಷ್ಟು ಬ್ಯಾಂಕ್‌ ಅಕೌಂಟ್‌ ಇದ್ರೂ ಅಷ್ಟೇ, ಆಧಾರ್‌ ಕೊಟ್ರೆ ಪ್ಯಾನ್‌ ಕಾರ್ಡ್‌ ಬರುತ್ತೆ. ಪ್ಯಾನ್‌ ನಂಬರ್‌ ಕೊಟ್ರೆ ಎಷ್ಟು  ಬ್ಯಾಂಕ್‌ ಅಕೌಂಟ್‌ ಇದ್ದಾವೋ.. ಅಷ್ಟೂ ಬ್ಯಾಂಕಿನ ಲೆಕ್ಕ ಸಿಗುತ್ತೆ. ಹಿಂಗೆಲ್ಲ ಆಗಿ ತಪ್ಪಿಸ್ಕೊಳ್ಳೋಕೆ ಆಗುತ್ತಾ..? ಕಾರ್ಡ್‌ ಕ್ಯಾನ್ಸಲ್‌ ಆಗುತ್ತೆ.

ಇಷ್ಟೆಲ್ಲ ಆಗಿ, ಗೊತ್ತಾಗಿ.. ಅಂತಹವರು ವರ್ಷಗಟ್ಟಲೆಯಿಂದ ಬಿಪಿಎಲ್‌ ಕಾರ್ಡ್‌ ಇಟ್ಕೊಂಡು ರೇಷನ್‌ ತಗೊಂಡಿದ್ರೆ, ಏನಾಗುತ್ತೆ ಅಂದ್ರೆ ದಂಡ ಕಟ್ಟಬೇಕಾಗುತ್ತೆ. ನೀವು ಇದೂವರೆಗೆ, ಇಷ್ಟು ವರ್ಷ ತೆಗೆದುಕೊಂಡಿರೋ ಒಂದೊಂದು ಕೆಜಿ ಅಕ್ಕಿಗೂ 33 ರೂಪಾಯಿಯಂತೆ ದಂಡ ಕಟ್ಬೇಕು. ಇಲ್ಲಾಂದ್ರೆ ಕಾನೂನು ಕ್ರಮ ಫೇಸ್‌ ಮಾಡ್ಬೇಕು. ಅಷ್ಟೇ.

Tags: #ಬಿಪಿಎಲ್‌ಕಾರ್ಡ್‌ #ಕ್ಯಾನ್ಸಲ್‌ #ಲಕ್ಷ್ಮೀಹೆಬ್ಬಾಳ್ಕರ್‌ #ಗೃಹಲಕ್ಷ್ಮಿ #bplcard #cancel #lakshmihebbalkar #gruhalakshmi
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.