ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ಆಕ್ಟಿವ್ ಆಗಿರುವ ನಟ ಪ್ರಕಾಶ್ ರೈ ಈ ಬಾರಿ ಪ್ರದಾನಿ ನರೇಂದ್ರ ಮೋದಿಯನ್ನು ಏಕವಚನದಲ್ಲಿ ಅಟ್ಯಾಕ್ ಮಾಡುತ್ತಿದ್ಧಾರೆ. ಅವನು, ಇವನು, ದೊಣ್ಣೆನಾಯಕ.. ಹೀಗೆ ಯಾವ ಮಾತಿನಲ್ಲೂ ಗೌರವಯುತ ಪದಗಳ ಬಳಕೆ ಮಾಡುವುದಿಲ್ಲ. ಮೋದಿಯನ್ನು ಟೀಕೆ ಮಾಡುವುದಕ್ಕಾಗಿಯೇ ಪ್ರೆಸ್ ಮೀಟ್ ನಡೆಸುವ ಪ್ರಕಾಶ್ ರೈ, ಸಿಕ್ಕ ಯಾವ ವೇದಿಕೆಗಳಲ್ಲೂ ಮೋದಿಯನ್ನು ಟೀಕೆ ಮಾಡುವುದು ಬಿಟ್ಟಿಲ್ಲ…
ಆದರೆ.. ಪ್ರಶ್ನೆ ಇರುವುದು ಪ್ರಕಾಶ್ ರೈ ಬಳಸುವ ಪದಗಳ ಬಗ್ಗೆ. ಒಂದಿಷ್ಟು ಸ್ಯಾಂಪಲ್ ನೋಡಬೇಕೆಂದರೆ..
ಥೂ.. ನಿನ್ನ ಜನ್ಮಕ್ಕೆ..
ನೇಹಾ ಹತ್ಯೆ ಪ್ರಕರಣ ಘಟನೆ ಬಗ್ಗೆ ಮಹಾಪ್ರಭು (ನರೇಂದ್ರ ಮೋದಿ) ಹೇಳ್ತಾನೆ, ರಾಜ್ಯಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಅಂತಾ. ಆದರೆ ಇದನ್ನು ನೀವು ಪರಿಗಣಿಸಿಕೊಂಡು ಕೋಮುವಾದಕ್ಕೆ ಬಳಸಿಕೊಳ್ಳುತ್ತಿದ್ದೀರಿ ಥೂ.. ನಿನ್ನ ಜನ್ಮಕ್ಕೆ
ಮೋದಿ ಜನರ ಜೀವನದ ಜೊತೆ ನಟನೆ ಮಾಡ್ತಾನೆ..
ಅವನಿಗೆ ರೈತರ ಬಗ್ಗೆ ಗೊತ್ತಿಲ್ಲ, ಹಳ್ಳಿಗಳ ಬಗ್ಗೆ ಗೊತ್ತಿಲ್ಲ. ಹಳ್ಳಿಗಳನ್ನು ದತ್ತು ತಗೊಂಡು ಮಾಡೆಲ್ ಮಾಡ್ತಿವಿ ಅಂದ್ರು. ನಿಮ್ಮ ಜನ್ಮಕ್ಕೆ, ಕರ್ಮಕ್ಕೆ ಒಂದಾದರೂ ಹಳ್ಳಿ ಡೆವೆಲಪ್ ಮಾಡಿದ್ದೀರಾ? ನಾನು ಕ್ಯಾಮೆರಾ ಮುಂದೆ ನಟನೆ ಮಾಡೋನು. ಆದರೆ ಇವನು ಜನರ ಜೀವನದ ಜೊತೆ ನಟನೆ ಮಾಡ್ತಾನೆ..
ಇವನನ್ನು ಉಳಿಸ್ಕೊಬೇಕಾ..?
ಇವನನ್ನು ನಾವು ಉಳಿಸಿಕೊಳ್ಳಬೇಕಾ? ಇವನೇ ಓದಿಲ್ಲ, ಅ ಆ ಇ ಈ ಬರಲ್ಲ. ರೈತರ ಮಹತ್ವ ಹೇಗೆ ಗೊತ್ತಾಬೇಕು ಇವನಿಗೆ? ಹೂವಿನ ಹತ್ತರ ಹೋದ್ರೆ ಪರಿಮಳ ಸುವಾಸನೆ ಬರುತ್ತೆ, ಇವನತ್ರ ಹೋದ್ರೆ ಗಬ್ಬು ನಾಥ ಬರುತ್ತೆ. ದೇಶದ ಇವತ್ತಿನ ಸ್ಥಿತಿಗೆ ಈ ಸರ್ಕಾರ ಮಾತ್ರವಲ್ಲ, ಈ ಹಿಂದಿನ ಸರ್ಕಾರಗಳು ಕಾರಣ.
ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ..
ಇದನ್ನ ನಾನು ಮಹಾಪ್ರಭುಗಳಿಗೆ ಕೇಳಬೇಕು ಅಂದುಕೊಂಡೆ. ನಿನ್ನ ಜೊತೆ ಮೈತ್ರಿ ಮಾಡಿಕೊಂಡ ಅಣ್ಣಾ ಇದಾನಲ್ಲ. ಆ ಅಣ್ಣ ಹೆಣ್ಣುಮಕ್ಕಳಿಗೆ ಉಚಿತ ಬಸ್ ಕೊಟ್ರೆ ದಾರಿ ತಪ್ಪಿದ್ದಾರೆ ಎಂದಿದ್ದ. ಆದರೆ ಆ ನಿನ್ನ ದಾರಿ ತಪ್ಪಿದ ಮಗ ಈಗ ಎಲ್ಲವ್ನೆ ವಸಿ ಹೇಳಪ್ಪ .. ನನ್ನ ಮಕ್ಕಳಾ ನಿಮ್ಮ ರಾಜಕಾರಣ ನಮಗೆ ಅರ್ಥಾಗೊಲ್ಲ ಅಂದುಕೊಂಡಿದ್ದೀರಾ?
ಯಾವ ಸೀಮೆ ದೊಣ್ಣೆನಾಯಕ..
ಪ್ರಧಾನಿಗಳು ಒಬ್ಬ ದೊಣ್ಣೆ ನಾಯಕನ ತರ ಆಡ್ತಿದ್ದಾರೆ. ಅದ್ಯಾವ ಸೀಮೆ ದೊಣ್ಣೆ ನಾಯಕನೋ ಗೊತ್ತಿಲ್ಲ. ತಮ್ಮ ಪ್ರಣಾಳಿಕೆ ಬಗ್ಗೆ ಮಾತಾಡಲ್ಲ ಆದರೆ ಕಾಂಗ್ರೆಸ್ ಪ್ರಣಾಳಿಕೆಯನ್ನ ಮೆನುಗೆ ಹೋಲಿಸ್ತಾರೆ. ಕಾಂಗ್ರೆಸ್ನದ್ದು ಮುಸ್ಲಿಂ ಪ್ರಣಾಳಿಕೆ ಅಂತಾರೆ. ಇವರ ಪ್ರಣಾಳಿಕೆಯಲ್ಲಿ ನಾವು ಏನು ತಿನ್ನಬೇಕು?
ಇವು ಕೇವಲ ಸ್ಯಾಂಪಲ್ ಅಷ್ಟೆ. ವಿಶೇಷ ಅಂದ್ರೆ.. ಎಲ್ಲಿಯೂ ಪ್ರಧಾನಿ ನರೇಂದ್ರ ಮೋದಿಗೆ ಬಹುವಚನ ಬಳಸಲ್ಲ. ಏಕವಚನವೇ. ಇಷ್ಟಕ್ಕೂ ಪ್ರಕಾಶ್ ರೈ ಈ ರೀತಿ ಬಯ್ಯುವುದು ಏಕೆ..?
ಕಟ್ಟರ್ ಬಿಜೆಪಿಯವರನ್ನು ಕೇಳಿದರೆ ಅವರು ಪ್ರಕಾಶ್ ರೈ ಅವರನ್ನು ಯಾರೂ ಸೀರಿಯಸ್ಸಾಗಿ ತಗೋಳ್ತಾ ಇಲ್ಲ. ಮೋದಿಯವರನ್ನು ಬಿಡಿ, ರಾಜ್ಯ ಮಟ್ಟದ ನಾಯಕರೂ ಕೇರ್ ಮಾಡಲ್ಲ. ಸಾಮಾನ್ಯ ಕಾರ್ಯಕರ್ತರೂ ರೈ ಮಾತುಗಳನ್ನು ಗಣನೆಗೆ ತಗೊಳ್ಳೋದಿಲ್ಲ. ಹೀಗಾಗಿ ಹೇಗಾದರೂ ಜನರ ಗಮನ ಸೆಳೆಯಬೇಕು ಅನ್ನೋ ಹಠಕ್ಕೆ ಬಿದ್ದು, ಈ ರೀತಿ ಏಕವಚನದಲ್ಲಿ ಮಾತಾಡ್ತಿದ್ಧಾನೆ ಅಂತಾರೆ.
ಅದೇ ಕಟ್ಟರ್ ಬಿಜೆಪಿ ವಿರೋಧಿಗಳ ಪ್ರಕಾರ ಪ್ರಕಾಶ್ ರೈ ಮಾತುಗಳು ಆಕ್ರೋಶದ ಪ್ರತೀಕ. ಈಗ ಭಾಷೆಯೂ ಒರಟಾಗಿದೆ ಎಂದು ಸಮರ್ಥನೆ ಮಾಡ್ತಾರೆ.



