ದರ್ಶನ್ ಮತ್ತು ಪವಿತ್ರಾ ಗೌಡ ಅವರು ಒಟ್ಟಿಗೇ ಇರುವ ಫೋಟೋ, ವಿಡಿಯೋಗಳು ಹೊಸದೇನಲ್ಲ. ಆದರೆ.. ಅಧಿಕೃತವಾಗಿ ಇಬ್ಬರೂ ಪತಿ ಪತ್ನಿ ಅಲ್ಲ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿಯೇ ಹೊರತು, ಪವಿತ್ರಾ ಗೌಡ ಅವರಲ್ಲ. ದರ್ಶನ್ ಮತ್ತು ಪವಿತ್ರಾ ಗೌಡ ಇಬ್ಬರೂ ಮದುವೆಯಾಗಿಲ್ಲ. ಆದರೆ.. ಒಟ್ಟಿಗೇ ಇದ್ದಾರೆ. ಆದರೆ.. ಈಗ ಇಬ್ಬರೂ ಒಟ್ಟಿಗೇ ಇದ್ದ ಹಳೆ ಫೋಟೋಗಳು ರಿಲೀಸ್ ಆಗಿವೆ. ವೈರಲ್ ಆಗಿವೆ. ಇದರ ಹಿಂದೆ ಒಂದು ಸಂಚೂ ಇದೆ ಎನ್ನಲಾಗುತ್ತಿದೆ.
ಇನ್ನು ದರ್ಶನ್ ಮತ್ತು ವಿಜಯಲಕ್ಷ್ಮಿ ಇಬ್ಬರ ಮದುವೆ ನಡೆದಿದ್ದು ಧರ್ಮಸ್ಥಳದಲ್ಲಿ.. ವಿಶೇಷ ಅಂದ್ರೆ.. ದರ್ಶನ್ ಮತ್ತು ವಿಜಯಲಕ್ಷ್ಮಿ ಅವರದ್ದು ಲವ್ ಮ್ಯಾರೇಜ್. ಆಮೇಲೆ ಮನೆಯವರೂ ಒಪ್ಪಿ ಮದುವೆ ಮಾಡಿಕೊಟ್ಟರು. ವಿಜಯಲಕ್ಷ್ಮಿ ಅವರನ್ನು ಮದುವೆಯಾದಾಗ ದರ್ಶನ್ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇರುತ್ತಿದ್ದರು. ದರ್ಶನ್ ಇವರು ಕೋಟ್ಯಧಿಪತಿಯೇ ಇರಬಹುದು, ಆಗ ದರ್ಶನ್ ಅವರ ಖರ್ಚು ವೆಚ್ಚ ನೋಡಿಕೊಂಡಿದ್ದವರು ವಿಜಯಲಕ್ಷ್ಮಿ ಅವರೇ. ವಿಜಯಲಕ್ಷ್ಮಿ ಅವರನ್ನು ಮದುವೆ ಆದ ನಂತರ ದರ್ಶನ್ ಅವರಿಗೆ ಸಿನಿಮಾ ಚಾನ್ಸ್ ಸಿಕ್ಕಿ, ಸ್ಟಾರ್ ಆಗಿ.. ಚಾಲೆಂಜಿಂಗ್ ಸ್ಟಾರ್ ಆದರು. ಅದು ಒಂದು ಕಥೆ. ಈಗ ಒಂದಿಷ್ಟು ಹಳೆ ಫೋಟೋಗಳು ಆಚೆ ಬಂದಿವೆ. ಆ ಫೋಟೋಗಳನ್ನು ನೋಡಿದವರಿಗೆ ದರ್ಶನ್ ಮತ್ತು ಪವಿತ್ರಾ ಗೌಡ ಅವರು ಮದುವೆಯಾಗಿದ್ದಾರಾ.. ಎಂಬ ಅನುಮಾನ ಮೂಡುತ್ತಿದೆ.
ವೈರಲ್ ಆಗಿರೋ ಫೋಟೋಗಳಲ್ಲಿ ದರ್ಶನ್ ಮತ್ತು ಪವಿತ್ರಾ ಇಬ್ಬರೂ ಪಕ್ಕಾ ಮದುಮಕ್ಕಳಂತೆ ಕಾಣುತ್ತಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ನೋಡಿದ ಯಾರಿಗಾದರೂ ಇದು ಇವರ ಮದುವೆಯದ್ದೇ ಫೋಟೋ ಇರಬೇಕು ಅಂತ ಅನ್ನಿಸುತ್ತದೆ. ಪವಿತ್ರಾ ಕೊರಳಲ್ಲಿ ಅರಿಶಿನದ ದಾರ ಇದೆ. ಇನ್ನೊಂದು ಫೋಟೋದಲ್ಲಿ ಮಲಗಿರುವ ದರ್ಶನ್ ಅವರಿಗೆ ಪವಿತ್ರಾ ಗೌಡ ಅವರಿಗೆ ಊಟ ಮಾಡಿಸುತ್ತಿರುವ ಫೋಟೋ ಇದೆ. ಇದೆಲ್ಲವನ್ನೂ ನೋಡಿದವರಿಗೆ ದರ್ಶನ್ ಮತ್ತು ಪವಿತ್ರಾ ಗೌಡ ಅವರ ನಡುವಿನ ಬಾಂಧವ್ಯ ಸ್ನೇಹವನ್ನು ಮೀರಿತ್ತು ಎನ್ನಿಸುವುದು ಸಹಜ. ಅಫ್ʻಕೋರ್ಸ್.. ವಿಜಯಲಕ್ಷ್ಮಿ ಮತ್ತು ಪವಿತ್ರಾ ಗೌಡ ಅವರ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ನಡೆದ ಬೀದಿ ಜಗಳ ನೋಡಿದವರಿಗೆ ಯಾವುದೇ ಅನುಮಾನವೂ ಬರೋದಿಲ್ಲ.
ಆದರೆ.. ಅಧಿಕೃತವಾಗಿ ಪವಿತ್ರಾ ಗೌಡ ಆತ್ಮೀಯ ಗೆಳತಿ ಅಷ್ಟೇ. ಅನಧಿಕೃತ ಕಥೆಗಳು ಬೇರೆಯೇ ಇವೆ. ಈ ಸಂಬಂಧದಿಂದಾಗಿಯೇ ರೇಣುಕಾಸ್ವಾಮಿ ಕೊಲೆಯಾದ. ಆ ಕೊಲೆಗೆ ದರ್ಶನ್ & ಗ್ಯಾಂಗ್ ಕಾರಣವಾಯ್ತು ಎನ್ನುವುದು ಒಂದು. ಇದ್ದಕ್ಕಿದ್ದಂತೆ ಈ ಫೋಟೋಗಳು ಈಗ ವೈರಲ್ ಆಗಿದ್ದರ ಹಿಂದೆ ಕೋರ್ಟಿನಲ್ಲಿ ಆರೋಪ ಪಟ್ಟಿ ಹೇಳುವ ಮೊದಲೇ ದರ್ಶನ್ ಕ್ಯಾರೆಕ್ಟರ್ ಕುರಿತು ಸುದ್ದಿ ಮಾಡುವ ಸಂಚು ಇರಬಹುದು ಎನ್ನಲಾಗ್ತಾ ಇದೆ.
ಅಂದರೆ ದರ್ಶನ್ ಮತ್ತು ಪವಿತ್ರಾ ಗೌಡ ಪತಿ ಪತ್ನಿಯಂತೆಯೇ ಇದ್ದರು. ಅವರಿಬ್ಬರ ಮಧ್ಯೆ ದೈಹಿಕ ಸಂಬಂಧವೂ ಇತ್ತು ಎಂದು ಬಿಂಬಿಸುವ ಪ್ರಯತ್ನ ನಡೆದಿದೆ.
ಅಂದಹಾಗೆ ಕೋರ್ಟಿನಲ್ಲಿ ಅಕ್ಟೋಬರ್ 31ರಂದು ಚಾರ್ಜ್‌ಶೀಟ್ ಫೈಲ್ ಮಾಡಿ, ಆರೋಪಪಟ್ಟಿ ಹೇಳಬೇಕಾಗಿತ್ತು. ಆದರೆ, ದರ್ಶನ್ ಪರ ವಕೀಲರು ʻದರ್ಶನ್‌ಗೆ ತಮ್ಮ ವಿರುದ್ಧ ಯಾವ ಯಾವ ಸೆಕ್ಷನ್ ಕೇಸ್ ದಾಖಲಾಗಿದೆ ಎಂಬ ವಿವರ ನೀಡುವುದಕ್ಕೆ ಸಾಧ್ಯವಾಗಿಲ್ಲ. ಅವರಿಗೆ ತಿಳಿಸುವುದಕ್ಕೆ ಕಾಲಾವಕಾಶ ಕೊಡಿʼ ಎಂದು ಕೇಳಿಕೊಂಡಿದ್ದಾರೆ. ಹೀಗಾಗಿ ನವೆಂಬರ್ 3ರಂದು ದೋಷಾರೋಪ ನಡೆಯಲಿದೆ.



