ಮೈಸೂರಿನ ಟಿ.ನರಸೀಪುರದಲ್ಲಿ ನಡೆದ ಹನುಮ ಜಯಂತಿಯಲ್ಲಿ ಯುವ ಬ್ರಿಗೇಡ್ (Yuva Brigade) ಕಾರ್ಯಕರ್ತರೊಬ್ಬರ ಕೊಲೆಯಾಗಿದೆ. ಕೊಲೆಗೆ ಕಾರಣ ಏನು ಎಂದು ಹುಡುಕುತ್ತಾ ಹೋದರೆ ಬೇರೆಯದೇ ಕಥೆಗಳು ಹೊರಬರುತ್ತಿವೆ. ಕೊಲೆಯಾದವರ ಹೆಸರು ವೇಣುಗೋಪಾಲ್ (Venugopal) . ಕೊಲೆಗಾರರು ಬಾಟಲಿಗಳಿಂದ ಚುಚ್ಚಿ ಚುಚ್ಚಿ ಇರಿದು ಕೊಂದಿದ್ದಾರೆ. ಟಿ. ನರಸೀಪುರ ಪಟ್ಟಣದ ಶ್ರೀರಾಂಪುರ ಕಲೋನಿಯ ನಿವಾಸಿಯಾಗಿದ್ದ ವೇಣುಗೋಪಾಲ್ ಯುವಬ್ರಿಗೇಡ್ನ (Yuva Brigade)ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಪೊಲೀಸ್ ಕೇಸ್ ದಾಖಲಿಸಿಕೊಂಡು ವಿಚಾರಣೆ ಆರಂಭ ಮಾಡುವ ಹೊತ್ತಿಗೆ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಆದರೆ ಇದೇ ವೇಳೆ ಪುನೀತ್ ರಾಜ್`ಕುಮಾರ್ (Puneeth Rajkumar) ಹೆಸರು ಬಂದಿರುವುದು ಇಡೀ ಪ್ರಕರಣಕ್ಕೆ ವಿಚಿತ್ರ ತಿರುವು ಕೊಟ್ಟಿದೆ. ಏಕೆಂದರೆ ಆರೋಪ ಮಾಡಿರುವುದು ಸ್ವತಃ ವೇಣುಗೋಪಾಲ್ (Poornima) ಪತ್ನಿ ಪೂರ್ಣಿಮ.
ಹನುಮ ಜಯಂತಿ (Hanuma Jayanthi) ಮೆರವಣಿಗೆಯಲ್ಲಿ ಭಾರತ ಮಾತೆ (Bharath matha) ಫೋಟೋ ಇಟ್ಟಿದ್ದರು. ಅದರ ಜೊತೆಗೆ ಪುನೀತ್ ರಾಜ್`ಕುಮಾರ್ (Puneeth Rajkumar) ಫೋಟೋವನ್ನೂ ಇಡಲಾಗಿತ್ತು. ಈ ವೇಳೆ ಕೊಲೆಯಾಗಿರುವ ವೇಣು ಗೋಪಾಲ್, ಪುನೀತ್ ರಾಜ್`ಕುಮಾರ್ ಫೋಟೋ ಇಡುವುದು ಬೇಡ. ದೇವರ ಹೆಸರಲ್ಲಿ ನಡೆಯುವ ಮೆರವಣಿಗೆಯಲ್ಲಿ ವ್ಯಕ್ತಿಗಳ ಫೋಟೋ ಬೇಡ ಎಂದು ತೆಗೆಸಿದ್ದರು. ಅದಾದ ಮೇಲೆ ಅದು ಗಲಾಟೆಯಾಗಿತ್ತು. . ನಂತರ ಭಾನುವಾರ ಮಧ್ಯಾಹ್ನ ಕೂಡ ಜಗಳವಾಗಿತ್ತು. ಬಳಿಕ ರಾತ್ರಿ ರಾಜಿ ಪಂಚಾಯಿತಿ ನೆಪದಲ್ಲಿ ಕರೆಸಿಕೊಂಡು ವೇಣುಗೋಪಾಲ್ ನನ್ನು ಕೊಲೆ ಮಾಡಲಾಗಿದೆ ಎಂದು ಮೃತನ ಪತ್ನಿ ಪೂರ್ಣಿಮ ಹೇಳಿದ್ದಾರೆ.
ಇದಷ್ಟೇ ಅಲ್ಲದೆ ಬೈಕ್ ನಿಲ್ಲಿಸೋ ವಿಚಾರದಲ್ಲಿ ಮಣಿಕಂಠ ಹಾಗೂ ವೇಣುಗೋಪಾಲ್ ನಡುವೆ ಕಿರಿಕ್ ಆಗಿದೆ ಎಂದು ಹೇಳಲಾಗಿದೆ. ಈ ವಿಚಾರವನ್ನು ಮಾತುಕತೆ ಮಾಡಿ ಸರಿ ಮಾಡಿಕೊಳ್ಳೋಣ ಎಂದು ಕರೆದು ವೇಣುಗೋಪಾಲ್ ಗೆ ಮಣಿಕಂಠ, ಸಂದೇಶ್, ಅನಿಲ್, ಹ್ಯಾರಿಸ್, ಶಂಕರ್, ಸುನಿಲ್, ಮಂಜು ಸೇರಿದಂತೆ ಆರು ಮಂದಿ ತಂಡ ಹಿಂಬದಿಯಿಂದ ತಲೆಗೆ ಬಾಟಲಿಯಿಂದ ಹೊಡೆದು ಡ್ರ್ಯಾಗನ್ ನಿಂದ ಚುಚ್ಚಿ ಕೊಲೆ ಮಾಡಿದ್ದಾರೆ ಅನ್ನೋ ಆರೋಪ ಇದೆ.
ಪ್ರಕರಣದಲ್ಲಿ ಮುಸ್ಲಿಂ ವ್ಯಕ್ತಿ ಕೈವಾಡ ಇಲ್ಲ. ಘಟನಾ ಸ್ಥಳದಲ್ಲಿ ಹ್ಯಾರಿಸ್ ಸರ್ವಿಸ್ ಸೆಂಟರ್ ಇತ್ತು. ಸಹಜವಾಗಿ ಘಟನೆ ನಡೆದಾಗ ಆತನು ಕೂಡ ಸ್ಥಳದಲ್ಲಿದ್ದ. ಘಟನೆಗೆ ಯಾವುದೇ ಕೋಮು ಸಂಬಂಧ ಇಲ್ಲ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸೀಮಾ ಲಾಟ್ಕರ್ ಹೇಳಿಕೆ ನೀಡಿದ್ದಾರೆ. ಯುವ ಬ್ರಿಗೇಡ್`ನ ಚಕ್ರವರ್ತಿ ಸೂಲಿಬೆಲೆ (Chakravarthi Sulibele) ಸೇರಿದಂತೆ ಹಲವರು ವೇಣುಗೋಪಾಲ್ ಪಾರ್ಥಿವ ಶರೀರ ದರ್ಶನ ಪಡೆದಿದ್ದಾರೆ. ಕೊಲೆಗಾರರನ್ನು ಶೀಘ್ರದಲ್ಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೊಲೆಯ ಆರೋಪಿ ಸಚಿವ ಎಚ್.ಸಿ.ಮಹದೇವಪ್ಪ (HC Mahadevappa) ಪುತ್ರ ಸುನಿಲ್ ಬೋಸ್ (Sunil bose) ಆಪ್ತ ಎನ್ನಲಾಗಿದೆ. ಸುನಿಲ್ ಬೋಸ್ ಜೊತೆ ಆರೋಪಿ ಇರುವ ಫೋಟೋವನ್ನು ಸಾಮಾಜಿಕ ಕಾರ್ಯಕರ್ತ, ಚಿಂತಕ ಹಾಗೂ ಹಿಂದೂ ಹೋರಾಟಗಾರ ಚಕ್ರವರ್ತಿ ಸೂಲಿಬೆಲೆ (Chakravarthi Sulibele) ಶೇರ್ ಮಾಡಿ ಆರೋಪಿಸಿದ್ದಾರೆ.



