ಕರ್ನಾಟಕ ಪೊಲೀಸರಿಗೆ (Karnatka Police) ಇಡೀ ದೇಶದಲ್ಲೇ ಅತ್ಯುತ್ತಮ ಹೆಸರಿದೆ. ಸಣ್ಣ ಕ್ಲೂ ಕೂಡಾ ಇಲ್ಲದ ಹಲವು ಕೇಸುಗಳನ್ನು ಬುದ್ದಿವಂತಿಕೆಯಿಂದ ಬಗೆಹರಿಸಿದ ಖ್ಯಾತಿ ನಮ್ಮ (Karnatka Police) ಪೊಲೀಸರದ್ದು. ದಕ್ಷತೆಗೆ ಹೆಸರುವಾಸಿಯಾಗಿರುವ ಕರ್ನಾಟಕ ಪೊಲಿಸರು, ಸಾರ್ವಜನಿಕರ ಜೊತೆ ಸೇವೆಯಲ್ಲಿಯೂ ಇರುತ್ತಾರೆ. ಅಲ್ಲೊಂದು ಇಲ್ಲೊಂದು ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಆದರೆ ಕರ್ನಾಟಕ ಪೊಲೀಸ್ (Karnatka Police) ಇಂಟೆಲಿಜೆನ್ಸ್, ಇಡೀ ದೇಶದಲ್ಲೇ ಫೇಮಸ್ ಎನಿಸಿದೆ. ಅಂತಹ ಪೊಲಿಸರ ಹೆಸರಿಗೆ ಮಸಿ ಬಳಿಯುವ ಪ್ರಕರಣವೊಂದು ಕೇರಳದಲ್ಲಿ ನಡೆದು ಹೋಗಿದೆ. ತನಿಖೆಗೆ ಹೋಗಿದ್ದ ಕರ್ನಾಟಕ ಪೊಲೀಸರನ್ನು ಕೇರಳ ಪೊಲೀಸರು (Kerala Police) ಅರೆಸ್ಟ್ ಮಾಡಿದ್ದಾರೆ. ಅದೂ ಲಂಚದ ಆರೋಪದಲ್ಲಿ.
ಬೆಂಗಳೂರಿನ ಸಾಫ್ಟ್ವೇರ್ ಉದ್ಯಮಿಗೆ 26 ಲಕ್ಷ ರೂ. ವಂಚನೆ ಮಾಡಿದ್ದ ಸೈಬರ್ ಕ್ರೈಮ್ (Cyber Crime) ಅಪರಾಧಿಯನ್ನು ಬಂಧಿಸಲು ತೆರಳಿದ್ದ ಬೆಂಗಳೂರು ಪೊಲೀಸರು, ಕಳ್ಳನ ಬಳಿಯೇ 3 ಲಕ್ಷ ಹಣಕ್ಕೆ ಬೇಡಿಕೆಯೊಡ್ಡಿ ಕೇರಳ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕರ್ನಾಟಕದಲ್ಲಿ 26 ಲಕ್ಷ ರೂ. ಹಣವನ್ನು ಕಳೆದುಕೊಂದ ಉದ್ಯಮಿಯ ದೂರು ಆಧರಿಸಿ, ತನಿಖೆ ವೇಳೆ ಅಪರಾಧಿ ಕೇರಳದಲ್ಲಿರುವುದನ್ನು ಪತ್ತೆಹಚ್ಚಿ ಬಂಧನಕ್ಕೆ ತೆರಳಿದ್ದು ಬೆಂಗಳೂರು ಪೊಲೀಸರು ಕಳ್ಳನೊಂದಿಗೆ ಶಾಮೀಲಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. 3 ಲಕ್ಷ ರೂ. ಕೊಟ್ಟರೆ ನಿಮ್ಮನ್ನು ಬಿಟ್ಟುಬಿಡುವುದಾಗಿ ಹೇಳಿ ಹಣ ಪಡೆಯುವಾಗ, ಅಲ್ಲಿನ ಕಳ್ಳ ಕೇರಳದ ಪೊಲೀಸರಿಗೆ (Kerala Police) ದೂರು ನೀಡಿದ್ದಾನೆ. ಲಂಚ ಪಡೆಯುತ್ತಿದ್ದ (Bengaluru Police) ಬೆಂಗಳೂರು ಪೊಲೀಸರನ್ನು ಕೇರಳದ ಪೊಲೀಸರು (Kerala Police) ಬಂಧಿಸಿದ್ದಾರೆ.
ಸಾಫ್ಟ್ ವೇರ್ ಇಂಜಿನಿಯರ್ ಚಂದಕ್ ಶ್ರೀಕಾಂತ್ ಎಂಬುವವರು ವೈಟ್ಫೀಲ್ಡ್ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಉದ್ಯೋಗ ಕೊಡಿಸುವುದಾಗಿ ಆನ್ ಲೈನ್ ಮೂಲಕ 26 ಲಕ್ಷ ಹಣ ವಂಚನೆಯಾಗಿದೆ ಎಂದು ದೂರಿದ್ದರು. ತನಿಖೆ ನಡೆಸುತ್ತಿದ್ದ ವೈಟ್ ಫೀಲ್ಡ್ ಸಿಇಎನ್ ಪೊಲೀಸರಿಗೆ ಮೊದಲಿಗೆ ಮಡಿಕೇರಿಯ ಐಸಾಕ್ ಬಗ್ಗೆ ಸುಳಿವು ಸಿಕ್ಕಿತ್ತು. ಅಲ್ಲಿ ಹೋಗಿ ಪರಿಶೀಲನೆ ನಡೆಸಿದಾಗ ಆರೋಪಿ ಬ್ಯಾಂಕ್ ಖಾತೆಯಲ್ಲಿ 2 ಕೋಟಿ ರೂ. ಹಣ ವರ್ಗಾವಣೆ ಆಗಿರೋದು ಪತ್ತೆಯಾಗಿತ್ತು.
ಅದರ ಜಾಡನ್ನು ಹಿಡಿದು ಕೇರಳಕ್ಕೆ ಹೊರಟಿದ್ದ ವೈಟ್ ಫೀಲ್ಡ್ ಸಿಇಎನ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಅವರ ತಂಡವು ನೌಶಾದ್ ಎಂಬುವನಿಂದ ಆನ್ ಲೈನ್ ಫ್ರಾಡ್ ಆಗಿದೆ ಎಂಬುದು ಸುಳಿವು ಸಿಕ್ಕಿತ್ತು. ಆರೋಪಿಯನ್ನು ಬಂಧಿಸಲು ಕೇರಳದ ಕೊಚ್ಚಿ ನಗರದ ಕಲ್ಲಂಚೇರಿಗೆ ತೆರಳಿದ್ದ ವೈಟ್ ಫೀಲ್ಡ್ ಸಿಇಎನ್ ಪೊಲೀಸರು, ಆರೋಪಿಯಿಂದಲೇ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಆರೋಪಿ ನೌಶಾದ್ ಕಲ್ಲಂಚೇರಿ ಪೊಲೀಸರಿಗೆ ದೂರು ನೀಡಿದ್ದಾನೆ.
ಆರೋಪಿ ನೌಶಾದ್ 3 ಲಕ್ಷದ 95 ಸಾವಿರ ಕೊಟ್ಟು, ಉಳಿದ 5 ಸಾವಿರ ಹಣ ಕೊಡುವ ವೇಳೆ ಪೊಲೀಸರಿಗೆ ಮಾಹಿತಿ ಕೊಟ್ಟು ಅರೆಸ್ಟ್ ಆಗುವಂತೆ ಮಾಡಿದ್ದಾನೆ. ಇನ್ಸ್`ಪೆಕ್ಟರ್ ಶಿವಕುಮಾರ್, ಹೆಡ್ ಕಾನ್ಸ್`ಟೇಬಲ್`ಗಳಾದ ವಿಜಯ್ ಕುಮಾರ್, ಶಿವಾನಿ, ಕಾನ್ಸ್`ಟೇಬಲ್ ಸಂದೇಶ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಆದರೆ, ಇದು ಕೇವಲ ಲಂಚದ ಕೇಸ್ ಅಲ್ಲ. ಪೊಲೀಸರನ್ನು ಬೇಕೆಂತಲೆ ಟ್ರ್ಯಾಪ್ ಮಾಡಿದ್ದಾರೆ ಎಂಬ ಸಂಶಯವೂ ಇದೆ. ಆದರೆ ಮೊದಲ ಹಂತವಾಗಿ ಕ್ರಮ ಜರುಗಿಸಲೇಬೇಕು. ಹೀಗಾಗಿ ಸಸ್ಪೆಂಡ್ ಮಾಡಲಾಗಿದೆ. ಮುಂದಿನ ವಿಚಾರಣೆ ನಡೆಯುತ್ತಿದೆ.



