ಜಿಂಕೆಮರಿ ಓಡ್ತಾ ಐತೆ ನೋಡ್ಲಮಗ.. (jinkemari odtha aithe) ಅನ್ನೋ ಹಾಡು ಕೇಳಿದರೆ ಜಿಂಕೆಮರಿಯಂತಾ ಹುಡುಗಿ ರೇಖಾ (Chithra Rekha) ನೆನಪಾಗ್ತಾರೆ. ಜಿಂಬೋಲೆ (jimbole jimbole) ಜಿಂಬೋಲೆಯ ಹಾಡಿನ ಗ್ಲಾಮರ್`ನ್ನ ಈಗಲೂ ಸಿನಿ ಪ್ರಿಯರು ಮರೆತಿಲ್ಲ.
ನಡೆದಾಡುವ ಕಾಮನಬಿಲ್ಲು..
ಹುಚ್ಚ (Huchcha) ಚಿತ್ರದ ಉಸಿರೇ ಉಸಿರೇ (Usire usire) ಹಾಡಿನಲ್ಲಿ ಕಂಡ ಮುಗ್ಧತೆಯನ್ನೂ ಮರೆತಿಲ್ಲ. ಕಣ್ಣಲ್ಲೇ ಕೊಲ್ಲುವಂತ ನೋಟ.. ಮನಮೋಹಕ ಮೈಮಾಟ.. ಮುಗ್ದ ನಟನೆಗೂ ಸೈ.. ರಗಡ್ ಪಾತ್ರಕ್ಕೂ ಜೈ. ಕಡಿಮೆ ಸಮಯ ಹೆಚ್ಚು ಸಿನಿಮಾ.. ಒಂದ್ ಟೈಮ್ಮಲ್ಲಿ ಈ ನಟಿ ಅಂದ್ರೇ ಹುಡುಗರಿಗೆ ಹುಚ್ಚು .. ಆದ್ರೀಗ ಈ ನಟಿಯ (Actress Rekha) ಸ್ಥಿತಿ ನಿಜಕ್ಕೂ ಆತಂಕ ಮತ್ತು ಆಘಾತಕಾರಿಯಾಗಿದೆ..
ರೇಖಾ (Chithra Rekha) ತಮ್ಮ ನಟನೆ ಹಾಗೂ ಮೋಹಕ ಸೌಂದರ್ಯದಿಂದ ಹುಡುಗರಿಗೆ ಹುಚ್ಚು ಹಿಡಿಸಿದ್ರು.. ಕಿಚ್ಚ ಸುದೀಪ್ (Kichcha sudeep) ನಟನೆಯ ‘ಹುಚ್ಚ’ ಸಿನಿಮಾದ ಆ ಹೋಮ್ಲಿ ಗರ್ಲ್, ಮುಗ್ದ ಹುಡುಗಿ ಅಭಿಷ್ಠಾ (Abheeshta) ಪಾತ್ರ ಈಗ್ಲೂ ಫೇವರೇಟ್. ಹುಡುಗಾಟ (hudugata), ಚೆಲ್ಲಾಟ, (Chellata) ತುಂಟಾಟ (tuntata), ಪರಿಚಯ (Parichaya), ಬಾಸ್ (Boss) ಸೇರಿ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲೂ ಮೋಡಿ ಮಾಡಿದ್ರು. ಆಮೇಲೆ ಅದೇನ್ ಆಯ್ತೋ 2014ರ ನಂತರ ಇದ್ದಕ್ಕಿದ್ದಂತೆ ರೇಖಾ ಬೆಳ್ಳಿತೆರೆಯಿಂದ ದೂರವಾದ್ರು. ಸುಮಾರು ವರ್ಷಗಳು ಕಾಣಿಸಲೇ ಇಲ್ಲ. ಇದೀಗ ತುಂಬಾ ದಿನಗಳ ನಂತರ ಮತ್ತೆ ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡುವ ಸುಳಿವು ಕೊಡ್ತಿದ್ದ ರೇಖಾ (Actress Rekha) ಕುರಿತು ಆಘಾತಕಾರಿ ವಿಷಯ ಹೊರಬಿದ್ದಿದ್ದು, ಅಭಿಮಾನಿಗಳು ಗಾಬರಿಯಿಂದ ನೋಡುವಂತಾಗಿದೆ..
ಏಕೆಂದರೆ ಫಳಫಳ ಹೊಳೆಯುತ್ತಿದ್ದ ಕಣ್ಣುಗಳಲ್ಲಿ ಮಿಂಚೇ ಇಲ್ಲ. ದುಂಡು ದುಂಡಾದ ಕೆನ್ನೆಗಳು ಸೊರಗಿ ಹೋಗಿವೆ. ಕಣ್ಣು ಒಣಗಿ ಹೋದಂತಿವೆ. ಮೇಕಪ್ ಇಲ್ಲದೆ ರೇಖಾ ಅವರನ್ನು ರೇಖಾ ಎಂದು ಗುರುತಿಸುವುದಕ್ಕೂ ಆಗುವುದಿಲ್ಲ. ದೈಹಿಕವಾಗಿ ದುರ್ಬಲತೆ ಎದ್ದು ಕಾಣುತ್ತಿದೆ. ಸಂಥಿಂಗ್ ಈಸ್ ರಾಂಗ್. ಒಂದ್ ಕಾಲದ ಟಾಪ್ ಮಾಡೆಲ್, ಸ್ಟಾರ್ ಹೀರೋಯಿನ್ ಆಗಿದ್ದ ರೇಖಾ ರೂಪ ಸಂಪೂರ್ಣವಾಗಿ ಬದಲಾಗಿದೆ. ಮುಖದಲ್ಲಿ ಮೊದಲಿನಂತೆ ಕಾಂತಿ ಇಲ್ಲ, ಸೌಂದರ್ಯ ಮಾಸಿದೆ, ದೈಹಿಕವಾಗಿ ಬಹಳಷ್ಟು ದುರ್ಬಲವಾಗಿದ್ದಾರೆ. ಇತ್ತೀಚೆಗಷ್ಟೇ ತೆಲುಗು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟಿಯ ರೂಪ ಕಂಡು ತೀರ್ಪುಗಾರರು, ಪ್ರೇಕ್ಷಕರು ಬೆರಗಾಗಿದ್ದಾರೆ. ರೇಖಾ ಅವರ ಆರೋಗ್ಯಕ್ಕೆ ಏನಾಗಿದೆ? ಯಾಕಿಷ್ಟು ವೀಕ್ ಆಗಿದ್ದಾರೆ? ಏನಾಯ್ತು ಅಂತ ಗಾಬರಿಯಿಂದ ನೋಡ್ತಿದ್ದಾರೆ..
ತೆಲುಗು ಬಿಗ್ ಬಾಸ್ ಶೋನಲ್ಲಿ (Big boss) ಕಾಣಿಸಿಕೊಂಡಿರುವ ರೇಖಾ ಅವರನ್ನು ನೋಡಿ ಶಾಕ್ ಅಂತೂ ಆಗಿದ್ದಾರೆ. ಆದರೆ ರೇಖಾ ಅವರಿಗೆ ಏನಾಯ್ತು ಅನ್ನೋದು ಮಾತ್ರ ನಿಗೂಢವೇ.



