ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ನಾಯಕರು ಧರ್ಮಸ್ಥಳ ಯಾತ್ರೆ ಮಾಡಿದ್ದಾರೆ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ವಿರೋಧಿಸಿ ಹಾಸನದಿಂದ ಆರಂಭವಾಗಿದ್ದ ಜೆಡಿಎಸ್ ಸತ್ಯಯಾತ್ರೆ, ಯಶಸ್ವಿಯಾಗಿ ಮುಗಿದಿದೆ. ಯಾತ್ರೆಗೂ ಮೊದಲು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ ಕೂಡಾ ಬೆಂಬಲ ಘೋಷಿಸಿದ್ದರು. ನಿಖಿಲ್ ಧರ್ಮಸ್ಥಳಕ್ಕೆ ಹೋಗಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದಾರೆ. ಹೆಗ್ಗಡೆ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ.
ಈ ವೇಳೆ ಮಾತನಾಡಿರುವ ನಿಖಿಲ್ ಹಾಲಿ ಮತ್ತು ಮಾಜಿ ಎಂಎಲ್‌ಎ, ಎಂಎಲ್‌ಸಿಗಳು ಸತ್ಯಯಾತ್ರೆಗೆ ಬಂದಿದ್ದಾರೆ. ಚಿಕ್ಕವಯಸ್ಸಿನಿಂದಲೂ ಮಂಜುನಾಥ ಸ್ವಾಮಿ ದರ್ಶನ ಪಡೆದಿದ್ದೇವೆ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಆಗುತ್ತಿದೆ. ಧರ್ಮಾಧಿಕಾರಿಗಳ ಮನಸ್ಸಿಗೆ ಬೇಸರ, ನೋವಾಗಿದ್ದರೂ ತೋರಿಸಿಕೊಟ್ಟಿಲ್ಲ. ಭಗವಂತ ಅವರಿಗೆ ಆ ಶಕ್ತಿ ಕೊಟ್ಟಿದ್ದಾನೆ ಕ್ಷೇತ್ರದ ಗೌರವ ಕಳೆಯುವ ಕೆಲಸ ಸರ್ಕಾರ ಮಾಡುತ್ತಿದೆ. ಬುರುಡೆ ತಂದಾಗ ಅವನನ್ನು ತನಿಖೆ ಮಾಡಬೇಕಿತ್ತು. ಅದನ್ನು ಸರ್ಕಾರ ಮಾಡಿಲ್ಲ ಇದನ್ನು ನೋಡಿದರೆ ಇದ ಹಿಂದೆ ಒಬ್ಬರು ಇಬ್ಬರು ಅಲ್ಲ. ದೊಡ್ಡ ಸಂಸ್ಥೆಗಳೇ ಇವೆ. ಕೆಲವು ಯೂಟ್ಯೂಬ್ ಚಾನೆಲ್‌ಗಳಿಗೆ ವಿದೇಶದಿಂದ ಹಣ ಬಂದಿದೆ. ಕೇಂದ್ರದ ತನಿಖಾ ಸಂಸ್ಥೆ ಎನ್‌ಐಎ ಮೂಲಕ ತನಿಖೆ ಆಗಬೇಕು ಹೇಳಿದ್ಧಾರೆ.
ಹೆಗ್ಗಡೆಯವರೂ ಕೂಡಾ ಎಸ್‌ಐಟಿ ತನಿಖೆಯಿಂದ ಅನೇಕ ವಿಷಯಗಳು ಹೊರಗೆ ಬರ್ತಾ ಇದೆ. ಆ ಎಲ್ಲಾ ತನಿಖೆಯ ವಿಷಯಗಳು ನಮಗೆ ಪೂರಕವಾಗಿರಲಿ. ಮಂಜುನಾಥ ಸ್ವಾಮಿಯ ಅನುಗ್ರಹ ಎಲ್ಲರ ಮೇಲೆ ಹೀಗೆಯೇ ಇರಲಿ ಎಂದಿದ್ದಾರೆ.
ಹೆಚ್ ಡಿ ರೇವಣ್ಣ ಏಕೆ ಬರಲಿಲ್ಲ..?
ಪ್ರಜ್ವಲ್ ರೇವಣ್ಣ ಅವರಿಗೆ ಜೈಲು ಶಿಕ್ಷೆ ಆದ ಬಳಿಕ ರೇವಣ್ಣ ಹೊರಗೆ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಅಣ್ಣನನ್ನು ಮತ್ತೆ ಆಕ್ಟಿವ್ ಮಾಡಲು ಕುಮಾರಸ್ವಾಮಿ ಮುಂದಾಗಿದ್ದಾರೆ. ನಿಖಿಲ್ ನೇತೃತ್ವದಲ್ಲಿ ಯಾತ್ರೆ ಹೊರಟಿದೆ. ಆತನ ಜೊತೆ ನಿಂತು ಸಪೋರ್ಟ್ ಮಾಡು. ಹೊರಗೆ ಓಡಾಡ್ತಾ ಇರು. ಮನೆಯಲ್ಲಿ ಕೂರಬೇಡ ಎಂದು ಹೇಳಿದ್ದಾರೆ. ತಮ್ಮನ ಮಾತಿಗೆ ಯೆಸ್ ಎಂದರೂ.. ಆಮೇಲೆ ರೇವಣ್ಣ ಮಿಸ್ ಆಗಿದ್ದಾರೆ. ಹಾಸನದಿಂದಲೇ ಹೊರಟ ಯಾತ್ರೆಯಲ್ಲೂ ರೇವಣ್ಣ ಅನುಪಸ್ಥಿತಿ ಎದ್ದು ಕಂಡಿದೆ.
ಧರ್ಮಸ್ಥಳ ಸತ್ಯಯಾತ್ರೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಲೋಕಸಭಾ ಸದಸ್ಯರಾದ ಮಲ್ಲೇಶ್ ಬಾಬು, ಶಾಸಕರಾದ ಹರೀಶ್ ಗೌಡ, ಸ್ವರೂಪ್ ಪ್ರಕಾಶ್, ದೇವದುರ್ಗ ಶಾಸಕರಾದ ಕರೇಯಮ್ಮ ನಾಯಕ್, ಶಾಸಕಿ ಶಾರದಾ ಪೂರ್ಯನಾಯ್ಕ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ , ಕೆ.ಆರ್. ಪೇಟೆ ಶಾಸಕ ಶ್ರೀ ಮಂಜುನಾಥ್, ಶಾಸಕ ನೇಮಿರಾಜ್ ನಾಯಕ್, ರಾಜ್ಯ ಕೋರ್ ಕಮಿಟಿ ಸದಸ್ಯರಾದ ವೆಂಕಟರಾವ್ ನಾಡಗೌಡ, ವಿಧಾನಪರಿಷತ್ ಸದಸ್ಯರಾದ ಬೋಜೆಗೌಡ, ಮಾಜಿ ಶಾಸಕರಾದ ಸುರೇಶ್ ಗೌಡ, ಎಚ್.ಕೆ. ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಇಂಚರಾ ಗೋವಿಂದರಾಜು, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ರಶ್ಮಿ ರಾಮೇಗೌಡ, ಹರಿಹರ ಮಾಜಿ ಶಾಸಕರಾದ ಎಚ್. ಸಿದ್ದಲಿಂಗೇಶ್, ಬಾದಾಮಿಯ ಹನಮಂತಪ್ಪ ಮಾವಿನಮರದ, ಅಪ್ಪುಗೌಡ, ಶಾರದಾ ಅಪ್ಪಾಜಿಗೌಡ, ಮಾಜಿ ವಿಧಾನಪರಿಷತ್ ಸದಸ್ಯರಾದ ತೂಪಲ್ಲಿ ಚೌಡರೆಡ್ಡಿ, ಸಿ.ವಿ. ಚಂದ್ರಶೇಖರ, ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಮಾಜಿ ವಿಧಾನಪರಿಷತ್ ಸದಸ್ಯರಾದ ರಮೇಶ್ ಗೌಡ, ಮನ್ ಮುಲ್ ಮಾಜಿ ಅಧ್ಯಕ್ಷರಾದ ರಾಮಚಂದ್ರ, ಮೈಮುಲ್ ಮಾಜಿ ಅಧ್ಯಕ್ಷರಾದ ಪ್ರಸನ್ನ ಕುಮಾರ್, ಮುಖಂಡರಾದ ಎನ್.ಆರ್. ಸಂತೋಷ, ಸಿರಾ ಉಗ್ರೇಶ್, ಹಿರಿಯೂರು ಮಹಿಂದ್ರಪ್ಪ ಸೇರಿ ಮಾಜಿ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಪಕ್ಷದ ಮುಖಂಡರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳಿದ್ದರೂ, ಹೆಚ್ ಡಿ ರೇವಣ್ಣ ಮಾತ್ರ ಇರಲಿಲ್ಲ.
ಮಗ ಸಂಸದನಾಗಿದ್ದು, ಲೈಂಗಿಕ ದೌರ್ಜನ್ಯ ಕೇಸಿನಲ್ಲಿ ಜೈಲು ಸೇರಿರುವ ಕಾರಣ ಪಕ್ಷದ ಕಾರ್ಯಕರ್ತರ ಎದುರು ಬರಲು ಹೆಚ್ ಡಿ ರೇವಣ್ಣ ಅವರಿಗೆ ಆಗುತ್ತಿಲ್ಲ ಎನ್ನಲಾಗಿದೆ.



