ಅವನೊಬ್ಬ ಕಳ್ಳ ಸ್ವಾಮೀಜಿ. ಅವನ ಮಾತನ್ನು ಸೀರಿಯಸ್ ಆಗಿ ತಗೋಬೇಡಿ. ಬಿಜೆಪಿಗೆ ವೋಟ್ ಹಾಕಬೇಡ ಎಂದು ಇವರಿಗೆ ಯಾರ ಪರ್ಮಿಷನ್ ಕೊಟ್ಟಿದ್ದಾರೆ ಇಂತಾದ್ದೊಂದು ಪ್ರಶ್ನೆ ಹಾಕುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಮತ್ತೊಮ್ಮೆ ಆ ಸ್ವಾಮೀಜಿ ವಿರುದ್ಧ ಬಹಿರಂಗ ಸಮರ ಸಾರಿದ್ಧಾರೆ.
ಯತ್ನಾಳ್ ಹೇಳುತ್ತಿರುವ ಆ ಸ್ವಾಮೀಜಿ ಯಾರು..? ಆ ಸ್ವಾಮೀಜಿ ಪಂಚಮಸಾಲಿ ಲಿಂಗಾಯತ ಸಮುದಾಯದ ಸಮುದಾಯದವರು ಎನ್ನುವುದಂತೂ ನಿಶ್ಚಿತ. ಇತ್ತೀಚೆಗಷ್ಟೇ ಯತ್ನಾಳ್ ಬುಕ್ಕಿಂಗ್ ಸ್ವಾಮೀಜಿ ಕಾಂಗ್ರೆಸ್ ಗೆ ಮತ ಹಾಕಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾನೆ. ಬೊಮ್ಮಾಯಿಗೆ ಹೇಳಿದೆ ಇವನು ಬದ್ಮಾಶ್ ಅದಾನ ಇವನನ್ನ ನಂಬಬೇಡಿ ಅಂತಾ. ಬೊಮ್ಮಾಯಿ, ಯಡಿಯೂರಪ್ಪ ಸೇರಿ 15 ಕೋಟಿ ಕೊಟ್ಟಿದ್ದಾರೆ. ಕೊಡಬೇಡ ಎಂದ್ರೂ ಕೇಳಲಿಲ್ಲ. ಮೊನ್ನೆ ಪಿಡಿಓ ನಕಲಿ ಸಹಿ ಮಾಡಿ ಹಣ ತೆಗೆದಿದ್ದಾರೆ. ಇಂತಹ ಕಾವಿ ಹಾಕೊಂಡು ಓಡಾಡುವ ನಾಟಕ ಕಂಪನಿಯ ಸ್ವಾಮಿಗಳು ಇದ್ದಾರೆ. ಸ್ವಾಮೀಗಳಿಗಿಂತ ರಾಜಕಾರಣಿಗಳು ಉತ್ತಮ ಎಂದು ಹೇಳಿದ್ದರು. ಆದರೆ.. ಸ್ವಾಮೀಜಿ ಹೆಸರು ಹೇಳಿರಲಿಲ್ಲ.
ದಾವಣಗೆರೆಯಲ್ಲಿ ನಡೆದ ಪಂಚಮಸಾಲಿ ಸಮಾಜದ ಸಭೆಯಲ್ಲಿ ಮತ್ತೊಮ್ಮೆ ಆಕ್ರೋಶ ಹೊರಹಾಕಿದ ಯತ್ನಾಳ್ ನಿನ್ನ ಬಾಯಿ ಸರಿ ಇದ್ದರೆ ನೀನೆ ಮುಖ್ಯಮಂತ್ರಿ ಆಗ್ತಿದ್ದೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ಹೇಳ್ತಾ ಇದ್ರು. ನಾನು ಆಸ್ತಿ ಮಾಡಿಲ್ಲ, ಐಟಿ, ಇಡಿ ರೇಡ್ ಮಾಡಿದರೆ ಏನೂ ಸಿಗಲ್ಲ. ಇಡೀ ರಾಜ್ಯದಲ್ಲಿ ಮೂರು ಕುಟುಂಬಗಳು ವೀರಶೈವ ಲಿಂಗಾಯತ ಕಪಿಮುಷ್ಠಿಯಲ್ಲಿದೆ. ಇವ್ರು ಎಲ್ಲಾದರು ಹಾಸ್ಟೇಲ್ ಕಟ್ಟಿದ್ದಾರಾ?. ಎಲ್ಲಾ ರಾಜಕೀಯ ಪಕ್ಷದವರು ಪಂಚಮಸಾಲಿ ಸಮಾಜವನ್ನ ತುಳಿದಿದ್ದಾರೆ ಎಂದು ಟೀಕಿಸಿದ್ದಾರೆ.
ಪಂಚಮಸಾಲಿ ಲಿಂಗಾಯತರ ಸ್ವಾಮೀಜಿಗಳೆಂದರೆ.. ಹಲವರಿದ್ಧಾರೆ. ಆದರೆ.. ರಾಜಕೀಯವಾಗಿ ಆಕ್ಟಿವ್ ಆಗಿರುವುದು ಇಬ್ಬರು. ಒಬ್ಬರು ವಚನಾನಂದ ಸ್ವಾಮೀಜಿ. ಮತ್ತೊಬ್ಬರು ದಿಂಗಾಲೇಶ್ವರ ಸ್ವಾಮೀಜಿ. ದಿಂಗಾಲೇಶ್ವರರಂತೂ.. ಹುಬ್ಬಳ್ಳಿಯಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ, ಬಿಜೆಪಿ ವಿರುದ್ಧ ಸಮರ ಸಾರಿ.. ಕಾಂಗ್ರೆಸ್ಸಿಗೆ ವೋಟ್ ಹಾಕಿ ಎಂದು ಹೇಳಿದವರು. ಈಗ ನಾಮಪತ್ರ ವಾಪಸ್ ತೆಗೆದುಕೊಂಡಿದ್ದರೂ.. ಅದರ ಹಿಂದೆ ನೇಹಾ ಹಿರೇಮಠ್ ಹತ್ಯೆ ನಂತರ ಲಿಂಗಾಯತ ಮತಗಳು ಬಿಜೆಪಿಯತ್ತ ವಾಲುತ್ತವೆ. ಕಾಂಗ್ರೆಸ್ ಸೋಲಲಿದೆ ಎಂಬುದೇ ಕಾರಣ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಹುಬ್ಬಳ್ಳಿ ಧಾರವಾಡದವರ ಪ್ರಕಾರ ದಿಂಗಾಲೇಶ್ವರ ಸ್ವಾಮೀಜಿ ಅಖಾಡಕ್ಕೆ ಧುಮುಕಿದ್ಧೇ.. ಬಿಜೆಪಿಗೆ ಹೋಗುವ ಲಿಂಗಾಯತರ ಮತಗಳನ್ನು ವಿಭಜನೆ ಮಾಡುವುದಕ್ಕೆ.
ಇನ್ನು ವಚನಾನಂದರು ವೇದಿಕೆಯಲ್ಲೇ ಯಡಿಯೂರಪ್ಪರನ್ನು (ಸಿಎಂ ಆಗಿದ್ಧಾಗ) ಅವಮಾನ ಮಾಡುವುದಕ್ಕೆ ಯತ್ನಿಸಿದ್ದನ್ನು ಜನ ನೋಡಿದ್ಧಾರೆ. ರಾಜಕೀಯವಾಗಿ ಎಚ್ಚರಿಕೆಯ ಹೆಜ್ಜೆ ಇಡುವ ಸ್ವಾಮೀಜಿ, ಈಗ ಬಿಜೆಪಿಗೆ ವೋಟ್ ಹಾಕಬೇಡಿ, ಕಾಂಗ್ರೆಸ್ಸಿಗೆ ವೋಟ್ ಮಾಡಿ ಎನ್ನುತ್ತಿದ್ದಾರಂತೆ.
ಇಬ್ಬರೂ ಸ್ವಾಮೀಜಿಗಳು ಮೇಲ್ನೋಟಕ್ಕೆ ಕಾಂಗ್ರೆಸ್ ಪರವೇ ಇರುವಂತೆ ಕಾಣುತ್ತಿದೆ. ಯತ್ನಾಳ್ ಅವರು ಈ ಇಬ್ಬರಲ್ಲಿ ಯಾರನ್ನು ಗುರಿಯಾಗಿರಿಸಿಕೊಂಡು ಈ ಮಾತು ಹೇಳಿರಬಹುದು..? ಬಹುತೇಕರ ಪ್ರಕಾರ ಯತ್ನಾಳ್ ಅವರ ಟಾರ್ಗೆಟ್ ವಚನಾನಂದರೇ ಹೊರತು, ದಿಂಗಾಲೇಶ್ವರ ಸ್ವಾಮೀಜಿ ಅಲ್ಲ. ಮುಂದಿನದ್ದು ನಿರ್ಧಾರವಾಗುವುದು ಮೇ 7ಕ್ಕೆ.ಅದು ಏನಾಗಿದೆ ಎಂದು ಗೊತ್ತಾಗುವುದು ಜೂನ್ 4ಕ್ಕೆ.



