ಸಿದ್ದರಾಮಯ್ಯ ಪರವಾಗಿ ಒಂದಷ್ಟು ಶಾಸಕರು, ಸಚಿವರ ಬ್ಯಾಟಿಂಗ್ ನಡೆಯುತ್ತಿದ. ಡಿಕೆ ಶಿವಕುಮಾರ್ ಪರವಾಗಿಯೂ ಒಂದಷ್ಟು ಶಾಸಕರಿದ್ದಾರೆ. ಸಾಮಾನ್ಯವಾಗಿ ವೋಟಿಂಗ್ ವೇಳೆ ಕ್ಷೇತ್ರಗಳಲ್ಲಿ ನಡೆಯುವಂಥದ್ದೇ ಪರಿಸ್ಥಿತಿ, ಈಗ ಸಿಎಂ ವಿಷಯದಲ್ಲಿಯೂ ಆಗಿದ. ವಿಶೇಷ ಏನೆಂದರೆ.. ಡಿಕೆ ಶಿವಕುಮಾರ್ ಪರ ಯಾರಿರ್ತಾರೆ.. ಮೂರೂ ಮತ್ತೊಂದು.. ಶಾಸಕರಷ್ಟೇ ಎಂದಿದ್ದವರಿಗೆ ಶಾಕ್ ಆಗುವಂತೆ ಈ ಬಾರಿ ದೊಡ್ಡ ಲಿಸ್ಟ್ ಹೊರಬಿದ್ದಿದೆ. ಸಿದ್ದರಾಮಯ್ಯ ಜನಪ್ರಿಯರಾಗಿದ್ದಾರೇನೋ ಹೌದು.. ಆದರೆ.. ಡಿಕೆ ಶಿವಕುಮಾರ್.. ಪರ ಹೈಕಮಾಂಡ್ ಮಾತ್ರವೇ ಅಲ್ಲ.. ಶಾಸಕರೂ ಇದ್ದಾರೆ ಎನ್ನುವುದು ಗೊತ್ತಾಗುತ್ತಿದೆ.
ಡಿಕೆ ಶಿವಕುಮಾರ್ ಪರ ಇರುವ ಶಾಸಕರ ಪಟ್ಟಿ
- ಬಾಲಕೃಷ್ಣ : ಮಾಗಡಿ
- ರಾಮನಗರ : ಇಕ್ಬಾಲ್ ಹುಸೇನ್
- ಸಿಪಿ ಯೋಗೇಶ್ವರ್ : ಚನ್ನಪಟ್ಟಣ
- ಶರತ್ ಬಚ್ಚೇಗೌಡ : ಹೊಸಕೋಟೆ
- ಶ್ರೀನಿವಾಸ್ : ನೆಲಮಂಗಲ
- ನಂಜೇಗೌಡ : ಮಾಲೂರು
- ಪುಟ್ಟಸ್ವಾಮಿಗೌಡ : ಗೌರಿಬಿದನೂರು ( ಸ್ವತಂತ್ರ )
- ಸುಬ್ಬಾರೆಡ್ಡಿ : ಬಾಗೇಪಲ್ಲಿ
- ಡಾ. ರಂಗನಾಥ್ : ಕುಣಿಗಲ್
- ಶ್ರೀನಿವಾಸ್ : ಗುಬ್ಬಿ
- ಹ್ಯಾರಿಸ್ : ಶಾಂತಿನಗರ
- ಶಿವಣ್ಣ : ಆನೇಕಲ್
- ಎ.ಸಿ. ಶ್ರೀನಿವಾಸ್ : ಪುಲಿಕೇಶಿ ನಗರ
- ರಾಮಲಿಂಗಾ ರೆಡ್ಡಿ : ಬಿಟಿಎಂ ಲೇಔಟ್
- ಉದಯ್ ಕದಲೂರು : ಮದ್ದೂರು
- ದರ್ಶನ್ ಪುಟ್ಟಣ್ಣಯ್ಯ : ಮೇಲುಕೋಟೆ
- ರವಿ ಕುಮಾರ್ ಗಣಿಗ : ಮಂಡ್ಯ
- ರಮೇಶ್ ಬಂಡಿಸಿದ್ದೇಗೌಡ : ಶ್ರೀರಂಗಪಟ್ಟಣ
- ಚೆಲುವರಾಯಸ್ವಾಮಿ : ನಾಗಮಂಗಲ
- ಅಶೋಕ್ ರೈ : ಪುತ್ತೂರು
- ಮಂಥರ್ ಗೌಡ : ವಿರಾಜಪೇಟೆ
- ರಾಜೇಗೌಡ : ಶೃಂಗೇರಿ
- ನಯನ ಮೋಟಮ್ಮ : ಮೂಡಿಗೆರೆ
- ಮಧು ಬಂಗಾರಪ್ಪ : ಸೊರಬ
- ಸಂಗಮೇಶ್ವರ್ : ಭದ್ರಾವತಿ
- ಶಿವಗಂಗಾ ಬಸವರಾಜು : ಚನ್ನಗಿರಿ
- ವೀರೇಂದ್ರ ಪಪ್ಪಿ : ಚಿತ್ರದುರ್ಗ
- ಪ್ರಕಾಶ್ ಕೋಳಿವಾಡ : ರಾಣೆಬೆನ್ನೂರು
- ಭೀಮಣ್ಣ ನಾಯ್ಕ್ : ಶಿರಸಿ
- ಲಕ್ಷ್ಮಣ ಸವದಿ : ಅಥಣಿ
- ಲಕ್ಷ್ಮೀ ಹೆಬ್ಬಾಳ್ಕರ್ : ಬೆಳಗಾವಿ ಗ್ರಾ.
- ಶಿವಾನಂದ ಪಾಟೀಲ್ : ಬಸವನಬಾಗೇವಾಡಿ
- ದರ್ಶನ್ ಧ್ರುವನಾರಾಯಣ: ನಂಜನಗೂಡು
- ತಿಮ್ಮಯ್ಯ : ಚಿಕ್ಕಮಗಳೂರು
- ಶರಣ್ ಪ್ರಕಾಶ್ ಪಾಟೀಲ್ : ಸೇಡಂ
- ರಾಜು ಕಾಗೆ : ಕಾಗವಾಡ
- ಮಹೇಂದ್ರ ತಮ್ಮಣ್ಣ : ಕುಡಚಿ
- ವಿಶ್ವಾಸ ವೈದ್ಯ : ಸವದತ್ತಿ
- ವಿನಯ ಕುಲಕರ್ಣಿ : ಧಾರವಾಡ
ಇವರಲ್ಲಿ ಕೆಲವರ ಹೆಸರು ಅಚ್ಚರಿ ಹುಟ್ಟಿಸುತ್ತಿರುವುದು ನಿಜ. ಆದರೆ.. ಸತ್ಯವೂ ಹೌದು. ಇನ್ನು ಸಿದ್ದರಾಮಯ್ಯ ಪರ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಮಹದೇವಪ್ಪ, ಜಮೀರ್ ಅಹ್ಮದ್.. ಮೊದಲಾದವರಿದ್ದಾರೆ. ಬಹುತೇಕರು ಜೆಡಿಎಸ್‌ನಿಂದ ಬಂದವರು ಎನ್ನುವುದು ವಿಶೇಷ. ಆದರೆ..ಈಗಲೂ ನಂಬರ್ಸ್ ಲೆಕ್ಕದಲ್ಲಿ ನೋಡಿದರೆ.. ಸಿದ್ದರಾಮಯ್ಯ ಅವರೇ ಮುಂದಿದ್ದಾರೆ.



