ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ ಸುಪ್ರೀಂಕೋರ್ಟ್ ಹಂತಕ್ಕೆ ಹೋಗಿದೆ. ಆರೋಪಿಗಳಾಗಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿದ್ದು ಆ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟಿನಲ್ಲಿ ಶುರುವಾಗಿದೆ. ದರ್ಶನ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ ಹಾಗೂ ಸರ್ಕಾರದ ಪರ ಸಿದ್ಧಾರ್ಥ್ ಮಲ್ಹೋತ್ರಾ ವಾದ ಮಂಡಿಸುತ್ತಿದ್ಧಾರೆ.
ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಸರ್ಕಾರದ ಪರ ವಕೀಲರಿಗೆ ಪವಿತ್ರಾ ಗೌಡ ದರ್ಶನ್ ಅವರ ಪತ್ನಿಯೇ ಎಂದು ಪ್ರಶ್ನಿಸಿದರು. ಅದಕ್ಕೆ ವಕೀಲರು, ಅಲ್ಲಾ ಅವರು ಮಿಸ್ಟ್ರೆಸ್ ಎಂದು ಹೇಳಿದ್ದಾರೆ.
ಹಾಗಿದ್ದರೆ ದರ್ಶನ್ ಅವರಿಗೆ ಮದುವೆಯಾಗಿಯೇ ಎನ್ನುವ ಪ್ರಶ್ನೆಗೆ ವಕೀಲರು ಹೌದು ಎಂದಿದ್ದಾರೆ. ದರ್ಶನ್ ಅವರು ಏನು.. ರಾಜಕಾರಣಿಯೇ ಎಂದು ಪ್ರಶ್ನಿಸಿದಾಗ.. ಇಲ್ಲ, ಅವರು ನಟ ಎಂದು ಉತ್ತರ ಕೊಟ್ಟಿದ್ದಾರೆ. ಆರೋಪಿಗಳ ಬಂಧನಕ್ಕೆ ಕಾರಣ ಏನು ಎಂದು ಕೇಳಿದಾಗ ಘಟನೆಯ ವಿವರವನ್ನು ಸುಪ್ರೀಂಕೋರ್ಟ್ ಎದುರು ಬಿಚ್ಚಿಡಲಾಗಿದೆ.
ಅಭಿಷೇಕ್ ಮನು ಸಿಂಗ್ವಿ ಅವರು ದರ್ಶನ್ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಇಲ್ಲ. ಯಾವ ಜಾಗದಲ್ಲಿ ಈ ಘಟನೆ ನಡೆದಿದೆ ಎಂಬುದಕ್ಕೆ ಸರಿಯಾದ ಸಾಕ್ಷ್ಯಾಧಾರಗಳೂ ಇಲ್ಲ. ಘಟನೆ ನಡೆದ ಸಂದರ್ಭದಲ್ಲಿನ ಮೂರು ಸೆಕೆಂಡ್ ವಿಡಿಯೋ ಇದೆ ಎನ್ನಲಾಗುತ್ತಿದೆ. ಆದರೆ ಅದರಲ್ಲಿ ಎಲ್ಲಿಯೂ ದರ್ಶನ್ ಕಾಣಿಸಿಕೊಂಡಿಲ್ಲ ಎಂದು ವಾದಿಸಿದರು. ಹಾಗೂ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅವರು ಕಳುಹಿಸುತ್ತಿದ್ದ ಮೆಸೇಜ್ಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಅಲ್ಲದೆ ಐ ವಿಟ್ನೆಸ್ ಹೇಳಿಕೆಗಳನ್ನು ದರ್ಶನ್ ಅವರನ್ನು ಅರೆಸ್ಟ್ ಮಾಡಿದ ಮೇಲೆ ಪಡೆಯಲಾಗಿದೆ. ಕೊಲೆ ನಡೆದ ಸ್ಥಳವೂ ದರ್ಶನ್ ಅವರದ್ದಲ್ಲ. ಕೊಲೆ ನಡೆದ ಜಾಗದಲ್ಲಿ ದರ್ಶನ್ ಅವರಾಗಲೀ, ಅವರ ಕೆಲಸಗಾರರಾಗಲೀ ಇರಲಿಲ್ಲ. ಆ ಜಾಗದ ಮಾಲೀಕ ನಾನು ಅಲ್ಲ. ಆ ಜಾಗಕ್ಕೂ ನನಗೂ ಏನೂ ಸಂಬಂಧ ಇಲ್ಲ ಪಾರ್ಕಿಂಕ್ ಪ್ಲೇಸ್ ನಲ್ಲಿ ಹತ್ಯೆಯಾಗಿದೆ ಎನ್ನುತ್ತಿದ್ದಾರೆ ಎಂದು ವಾದಿಸಿರುವ ಸಿಂಗ್ವಿ, ದರ್ಶನ್ ಬಂಧನಕ್ಕೆ ಕಾರಣಗಳೇ ಇರಲಿಲ್ಲ ಎಂದು ವಾದಿಸಿದ್ದಾರೆ.
ವಾದ, ಪ್ರತಿವಾದ ಆಲಿಸಿರುವ ಸುಪ್ರಿಂಕೋರ್ಟ್ ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಿದೆ.