ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತುಹಾಕಲಾಗಿದೆ. ಸಾವಿರಾರು ಮಹಿಳೆಯರ ಅತ್ಯಾಚಾರ ಆಗಿದೆ. ಎಲ್ಲವನೂ ಹಣ, ದರ್ಪ, ಅಧಿಕಾರದಿಂದ ಮುಚ್ಚಿ ಹಾಕಲಾಗಿದೆ ಎನ್ನುವುದು ಎಡಪಂಥೀಯರ ಆರೋಪ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ ಎನ್ನುವುದು ಅವರ ಹಿಂದೂಗಳ, ಧರ್ಮಸ್ಥಳ ಭಕ್ತರ ನೇರಾನೇರ ಆರೋಪ. ಇತ್ತೀಚೆಗೆ ದಿನೇಶ್ ಗುಂಡೂರಾವ್ (ಇವರು ಹಾಲಿ ಸಚಿವ ಹಾಗೂ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ) ಅವರ ʻಎಡಪಂಥೀಯರ ಒತ್ತಡಕ್ಕೆ ಮಣಿಯಬೇಕಾಯಿತುʼ ಎಂದು ಬಹಿರಂಗವಾಗಿಯೇ ಹೇಳಿದ್ದರು. ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅನುಮಾನಕ್ಕೆ ಆಸ್ಪದವೇ ಇಲ್ಲದಂತೆ ಹೇಳಿದ್ದಾರೆ.
ʻʻಈ ಪ್ರಕರಣ ಸಂಪೂರ್ಣ ಮಾಹಿತಿ ನನಗೂ ಗೊತ್ತಿದೆ. ಇದು ಖಾಲಿ ಟ್ರಂಕ್. ಹೀಗಾಗಿ ಸದ್ದು ಜಾಸ್ತಿ ಮಾಡುತ್ತಿದೆ ಅಷ್ಟೇ. ಯಾವುದೇ ಧರ್ಮದ ಭಾವನಗೆ ಚ್ಯುತಿ ಬರಬಾರದು. ಯಾರು ತಪ್ಪು ಮಾಡುತ್ತಾರೋ ಅವರಿಗೆ ಶಿಕ್ಷೆ ಆಗಬೇಕು. ತಪ್ಪುಮಾಡಿದವರ ರಕ್ಷಣೆ ಮಾಡುವುದಿಲ್ಲ. ಏನೂ ಇಲ್ಲದೇ ಈ ರೀತಿ ಸೃಷ್ಟಿ ಮಾಡಿದ್ದಾರೆ. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅವರದೇ ಆದ ವ್ಯಾಖ್ಯಾನ ಮಾಡಿದ್ದಾರೆ. ಈ ವಿಚಾರದಲ್ಲಿ ಧರ್ಮಾಧಿಕಾರಿಗಳಿಗೆ ಅನ್ಯಾಯ ಆಗಿದೆ. ಇದರ ಹಿಂದೆ ವೆಲ್ ಪ್ಲಾನ್ಡ್ ಅಂತಾರಾಷ್ಟ್ರೀಯ ಷಡ್ಯಂತ್ರ ಇದೆ. ಈಗಲೇ ಹೇಳೋಕೆ ಆಗಲ್ಲʼʼ ಎಂದೆಲ್ಲ ಹೇಳಿದ್ದಾರೆ.
ಷಡ್ಯಂತ್ರ ಎನ್ನುವುದಕ್ಕೆ ಏನು ಕಾರಣ..?
ಧರ್ಮಸ್ಥಳದಲ್ಲಿ ಏನೋ ನಡೆಯಬಾರದ್ದು ನಡೆಯುತ್ತಿದೆ ಎಂದು ಎಡಪಂಥೀಯರು ಬೊಬ್ಬೆ ಹಾಕಿದ್ರಲ್ಲ.. ಅದನ್ನು ಬಹುತೇಕ ಕನ್ನಡದ ಮಾಧ್ಯಮಗಳು ನಿರ್ಲಕ್ಷ್ಯ ಮಾಡಿದ್ದವು. ಆದರೆ.. ಇದ್ದಕ್ಕಿದ್ದಂತೆ ಎದ್ದ ಸಮೀರ್ ಎಂಬ ವ್ಯಕ್ತಿ, ತನ್ನ ದೂತ ಯೂಟ್ಯೂಬ್ ಚಾನೆಲ್ಲಿನಲ್ಲಿ ಹಾಕಿದ ವಿಡಿಯೋ ಕೋಟಿಗಟ್ಟಲೆ ವ್ಯೂವ್ಸ್ ಪಡೆದುಕೊಳ್ತು. ಅದು ಸಹಜವಾಗಿರಲಿಲ್ಲ. ಚಿಲ್ಲರೆ ವಿಡಿಯೋ ಮಾಡಿಕೊಂಡಿದ್ದವನನ್ನು ಇದ್ದಕ್ಕಿದ್ದಂತೆ ಕೆಲವು ಆಯ್ದ ವ್ಯಕ್ತಿಗಳು ಹೊಗಳೋಕೆ ಶುರು ಮಾಡಿದ್ರು. ಆತನ ಜೊತೆಗೆ ಮಹೇಶ್ ತಿಮ್ಮರೋಡಿ, ಗಿರೀಶ್ ಮಟ್ಟಣ್ಣವರ್ ಜೊತೆಯಾದರು.
ಅಗಲೂ ಕೂಡಾ ರಾಜ್ಯದ ಮಾಧ್ಯಮಗಳು ನಿರ್ಲಕ್ಷ್ಯ ಮಾಡಿದ್ದವು. ಆದರೆ, ಆ ಸುದ್ದಿ ಬಿಬಿಸಿ ಹಾಗೂ ಅಲ್‌ಜಜೀರಾ ಚಾನೆಲ್ಲುಗಳಲ್ಲಿ ದೊಡ್ಡದಾಗಿ ಸುದ್ದಿಯಾಯ್ತು. ಪಹಲ್‌ಗಾಂ ಭಯೋತ್ಪಾದಕ ದಾಳಿಯನ್ನೇ ಸಣ್ಣ ಸುದ್ದಿಯಾಗಿ ಪ್ರಸಾರ ಮಾಡಿದ್ದ, ಪಾಕಿಸ್ತಾನದ ಕೈವಾಡ ಇಲ್ಲ ಎಂದು ಷರಾ ಬರೆದು, ಕ್ಲೀನ್ ಚಿಟ್ ಕೊಟ್ಟಿದ್ದ, ಪಹಲ್ಗಾಂ ಉಗ್ರರನ್ನು ಬಂಡುಕೋರರು ಎಂದು ಕರೆದಿದ್ದ ಚಾನೆಲ್ಲುಗಳು ಇದ್ದಕ್ಕಿದ್ದಂತೆ ಧರ್ಮಸ್ಥಳ ಕಾಂಟ್ರವರ್ಸಿಗೆ ಎಂಟ್ರಿ ಕೊಟ್ಟಾಗಲೇ ಇದೊಂದು ಅಂತಾರಾಷ್ಟ್ರೀಯ ಸಂಚು ಎಂದು ಅರ್ಥವಾಗುತ್ತದೆ.
ಇನ್ನು ತಾವು ಧರ್ಮಸ್ಥಳ, ಮಂಜುನಾಥ, ಅಣ್ಣಪ್ಪ ಸ್ವಾಮಿಯ, ಕ್ಷೇತ್ರದ ವಿರುದ್ಧ ಇಲ್ಲ ಎನ್ನುತ್ತಲೇ.. ನಾಜೂಕು ಮಾತುಗಳಿಂದ ಇನ್ ಡೈರೆಕ್ಟ್ ಆಗಿ ಹೆಗ್ಗಡೆಯವರನ್ನು, ಕ್ಷೇತ್ರವನ್ನು ನಂಬುವ ಜನರ ಭಕ್ತಿಯನ್ನು ಪ್ರಶ್ನೆ ಮಾಡುತ್ತಾರೆ. ಜನ ದಡ್ಡರಲ್ಲ. ಸರಳವಾಗಿ ಅರ್ಥ ಮಾಡ್ಕೊಂಡು ಬಿಡ್ತಾರೆ.
ಯಾರದು ಷಡ್ಯಂತ್ರ..?
ಕಾಂಗ್ರೆಸ್ ರಾಜಕೀಯ ಗೋಡೆಗಳು ಹೇಳ್ತಿರೋ ಪ್ರಕಾರ ರಾಜ್ಯದಿಂದ ಆಯ್ಕೆಯಾಗಿ ದೆಹಲಿಗೆ ಹೋಗಿರುವ ಪ್ರಮುಖ ನಾಯಕರೊಬ್ಬರು ಇದಕ್ಕೆ ಸಾಥ್ ಕೊಟ್ಟಿದ್ದಾರಂತೆ. ಅವರೂ ಕೂಡಾ ಧರ್ಮಸ್ಥಳದ ಸುತ್ತಮುತ್ತಲಿನವರೇ. ಇನ್ನೊಬ್ಬರು ಪಕ್ಕದ ರಾಜ್ಯದಿಂದ ಬಂದು, ರಾಜ್ಯದಲ್ಲಿ ಪ್ರಮುಖ ಹುದ್ದೆಯಲ್ಲಿರುವ ನಾಯಕರಂತೆ. ಇನ್ನೊಬ್ಬರು ರಾಜ್ಯದಲ್ಲಿ ಕೆಲಸ ಮಾಡಿ, ಪಕ್ಕದ ರಾಜ್ಯಕ್ಕೆ ಹೋಗಿ ದಿಢೀರ್ ಸ್ಥಾನಮಾನ ಗಳಿಸರುವವರಂತೆ. ಹೀಗಾಗಿ, ಈ ಮೂವರೂ ಸಿಎಂ ಸಿದ್ಧರಾಮಯ್ಯ ಅವರ ಮೇಲೆ ಒತ್ತಡ ತಂದು, ಎಸ್‌ಐಟಿ ರಚನೆಯಾಗುವುದಕ್ಕೆ ಕಾರಣರಾಗಿದ್ದಾರೆ. ಎಸ್‌ಐಟಿ ಘೋಷಣೆಯಾದ ದಿನ ಬೆಳಗ್ಗೆಯಷ್ಟೇ ಕೇಳಿದ್ದಕ್ಕೆಲ್ಲ ಎಸ್‌ಐಟಿ ಮಾಡೊಕ್ ಆಗುತ್ತೇನ್ರೀ ಅಂತಿದ್ದ ಸಿದ್ಧರಾಮಯ್ಯನವರೇ, ಸಂಜೆಯ ಹೊತ್ತಿಗೆ ಎಸ್‌ಐಟಿ ಟೀಂನ್ನೇ ಪ್ರಕಟಿಸಿಬಿಟ್ಟರು. ಎಸ್‌ಐಟಿ ಟೀಂನಲ್ಲಿ ಇಂತಿಂತಹವರೇ ಇರಬೇಕು ಎಂದು ಕೂಡಾ ದೊಡ್ಡ ಲಾಬಿಯೇ ನಡೆದಿತ್ತು ಎನ್ನಲಾಗಿದೆ.



