ಕಸ್ಟಡಿಯಲ್ಲಿದ್ದ ದರ್ಶನ್ ಅವರನ್ನು ರಕ್ಷಿಸಲು ರಾಜಕಾರಣಿಗಳು ನಾ ಮುಂದು.. ತಾ ಮುಂದು ಎಂದು ಬರುತ್ತಿದ್ದಾರಾ.. ಅನುಮಾನ ಮೂಡುತ್ತಿದೆ. ದರ್ಶನ್ ಅವರನ್ನು ಮೀಡಿಯಾಗಳಿಂದ ರಕ್ಷಿಸಲು ಶಾಮಿಯಾನ, ಶಾಮಿಯಾನ ಮರೆಯಲ್ಲಿ ಸಿಗರೇಟು, ಜೊತೆಗೆ ಮೊಬೈಲ್ ಫೋನು.. ಎಲ್ಲವೂ ಸಿಗುತ್ತಿದೆ. ಕರ್ನಾಟಕದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಒಂದು ಪೊಲೀಸ್ ಠಾಣೆಯ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಾಗಿದೆ. ಇನ್ವೆಸ್ಟಿಗೇಷನ್ ಆಫೀಸರ್ ಚೇಂಜ್ ಆಗಿದ್ದಾರೆ. ಆದರೆ.. ಈ ಎಲ್ಲದರ ಮಧ್ಯೆ ಸಿಎಂ ಸಿದ್ದರಾಮಯ್ಯನವರ ರಿಯಾಕ್ಷನ್ ಇಂಟ್ರೆಸ್ಟಿಂಗ್.
ನಟ ದರ್ಶನ್ ಸ್ಟಾರ್ ನಟ ಅಷ್ಟೇ ಅಲ್ಲ, ಪ್ರಭಾವಿಗಳ ಜೊತೆ ಒಳ್ಳೆ ಸಂಪರ್ಕವೂ ಇದೆ. ಹಲವು ರಾಜಕಾರಣಿಗಳ ಜೊತೆ ಸಂಪರ್ಕದಲ್ಲಿರುವ ದರ್ಶನ್ ರಕ್ಷಣೆಗೆ ಎಲ್ಲ ಪಕ್ಷಗಳಲ್ಲೂ ಫ್ರೆಂಡ್ಸ್ ಇದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಈಗ ದರ್ಶನ್ ಅವರನ್ನು ರಕ್ಷಿಸಲು ಹಲವು ನಾಯಕರು ಪ್ರಯತ್ನಿಸಿದ್ದಾರೆ. ಕಾಂಗ್ರೆಸ್ಸಿನ ಇಬ್ಬರು ಹಾಗೂ ಬಿಜೆಪಿಯ ಒಬ್ಬ ನಾಯಕರು ಪದೇ ಪದೇ ಡ್ಯೂಟಿಯಲ್ಲಿದ್ದ ಪೊಲೀಸ್ ಆಫೀಸರ್ʻಗೆ ಫೋನ್ ಮಾಡಿದ್ದಾರಂತೆ. ಒಬ್ಬರಂತೂ ೧೨೮ ಕಾಲ್ ಮಾಡಿದ್ದರಂತೆ. ಹಾಗೆ ಕರೆ ಮಾಡಿರುವುದು ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವ ಎನ್ನಲಾಗಿದೆ.
128 ಬಾರಿ ಕರೆ ಮಾಡಿದ್ರೂ ಅಧಿಕಾರಿ ಸ್ವೀಕರಿಸದ ಕಾರಣ, ಅವರ ಜೂನಿಯರ್ ಆಫೀಸರಿಗೆ ಕರೆ ಮಾಡಿದ್ದರಂತೆ.ರಾತ್ರಿ ವೇಳೆ ನಟ ದರ್ಶನ್ ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಪ್ರಭಾವಿ ರಾಜಕಾರಣಿ ಕೇಳಿದ್ರಂತೆ. ಪೊಲೀಸರು ನೋ ಎಂದಿದ್ದಾರಂತೆ. ಅಷ್ಟೇ ಅಲ್ಲ, ದರ್ಶನ್ ರಕ್ಷಣೆಗೆ ಸಂಬಂದಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಹೋದವರಿಗೆ ಬೈದು ಕಳಿಸಿದ್ದಾರೆ ಎಂಬ ಮಾಹಿತಿ ಇದೆ.
ಹೋಗ್ ಹೋಗ್ರಿ.. ಇಂತಹ ವಿಷ್ಯಗಳಲ್ಲೆಲ್ಲ ಎಂಟ್ರಿ ಆಗೋಕ್ ಹೋದ್ರೆ, ನಮಗೆ ಮಾನ ಮರ್ಯಾದೆ ಇರಲ್ಲ. ಇಂತಹ ವಿಷ್ಯಗಳನ್ನೆಲ್ಲ ನನ್ ಹತ್ತಿರ ತರಬೇಡಿ. ಇಂತಹ ಪ್ರಕರಣಗಳಲ್ಲೂ ರಕ್ಷಣೆ ಸಿಕ್ ಬಿಟ್ರೆ ಕಾನೂನಿಗೆ ಜನ ಗೌರವ ಕೊಡೋದಿಲ್ಲ ಎಂದು ಬೈದು ಕಳಿಸಿದ್ರಂತೆ ಸಿದ್ದರಾಮಯ್ಯ. ಆದರೆ.. ಇಷ್ಟೆಲ್ಲದರ ಮಧ್ಯೆಯೂ ದರ್ಶನ್ ಅವರ ಪರ ಬೆಳವಣಿಗೆಗಳು ಸರ್ಕಾರದ ಮಟ್ಟದಲ್ಲಿ ನಡೆಯುತ್ತಲೆ ಇವೆ.
ಆರೋಪಿ ದರ್ಶನ್‌ಗಾಗಿ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಸಿಗರೇಟ್ ಜೋನ್ ಸೃಷ್ಟಿ ಮಾಡಲಾಗಿದ್ಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಹೈಪ್ರೊಫೈಲ್ ಕೇಸ್ ಆಗಿರುವ ಕಾರಣ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಠಾಣೆಯಲ್ಲಿಯೇ ಸಿಗರೇಟ್ ಸೇದೋಕೆ ಅವಕಾಶ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಮೀಡಿಯಾಗಳನ್ನು ಈ ವಿಷಯದಲ್ಲಿ ದೂರ ಇಡುವುದಕ್ಕಾಗಿಯೇ ಶಾಮಿಯಾನ ಹಾಕಿ ಮರೆ ಮಾಡಲಾಗಿದೆ ಎನ್ನುವುದು ಆರೋಪ.ಸ್ಟೇಷನ್‌ನ ಮೊದಲನೇ ಮಹಡಿಯ ಬಾಲ್ಕನಿಯಲ್ಲೂ ಶಾಮಿಯಾನ ಹಾಕಿರುವುದನ್ನು ನೋಡಿದರೆ, ದರ್ಶನ್ ಅವರಿಗಾಗಿ ಸ್ಮೋಕಿಂಗ್ ಝೋನ್ ಸೃಷ್ಟಿಸಲಾಗಿದೆ ಎಂಬ ಅನುಮಾನಗಳಿವೆ. ಅಲ್ಲದೆ ದರ್ಶನ್ ಹಲವರ ಜೊತೆ ಫೋನ್ʻನಲ್ಲಿ ಮಾತನಾಡುತ್ತಿರುವ ಫೋಟೋ/ವಿಡಿಯೋಗಳು ಕೂಡಾ ಬಂದಿವೆ. ಇದೆಲ್ಲವನ್ನೂ ನೋಡಿದರೆ ದರ್ಶನ್ ಸೇವೆಗೆ ಸರ್ಕಾರವೇ ನಿಂತಿದ್ಯಾ ಅನ್ನೋ ಅನುಮಾನ ಮೂಡದೇ ಇರೋದಿಲ್ಲ.
ಅಲ್ಲದೆ ಕೊಲೆ ಕೇಸಿನ ತನಿಖೆ ನಡೆಸುತ್ತಿದ್ದ ಕಾಮಾಕ್ಷಿಪಾಳ್ಯ ಇನ್ಸ್‌ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ಟ್ರಾನ್ಸ್ʻಫರ್ ಮಾಡಿದ್ದು ಇದೂ ಕೂಡಾ ಸರ್ಕಾರದ ಕೈವಾಡದ ಬಗ್ಗೆ ಪುಷ್ಠಿ ನೀಡುತ್ತಿದೆ. ಗಿರೀಶ್ ನಾಯ್ಕ್ ಅವರ ಜಾಗಕ್ಕೆ ನೂತನ ತನಿಖಾಧಿಕಾರಿಯಾಗಿ ವಿಜಯನಗರ ಉಪವಿಭಾಗ ಎಸಿಪಿ ಚಂದನ್ ನೇಮಕವಾಗಿದ್ದಾರೆ.
ಇಷ್ಟಕ್ಕೂ ಆ ಪ್ರಭಾವಿ ರಾಜಕಾರಣಿ ಯಾರಿರಬಹುದು..? ದರ್ಶನ್ ಅವರು ಸಚಿವ ಜಮೀರ್ ಅಹ್ಮದ್, ಶಾಮನೂರು ಮಲ್ಲಿಕಾರ್ಜುನ್ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದಾರೆ. ಬಿಜೆಪಿಯ ಮುನಿರತ್ನ, ಬಿಸಿ ಪಾಟೀಲ್ ಸೇರಿದಂತೆ ಹಲವರ ಜೊತೆ ಒಳ್ಳೆಯ ಸಂಪರ್ಕ ಇದೆ. ಸುಮಲತಾ ಅವರಂತೂ ದರ್ಶನ್ ಅವರ ಅಮ್ಮನಂತೆ. ಕೇಸಿನಲ್ಲಿ ಅರೆಸ್ಟ್ ಆಗಿರುವ ನಾಗ, ಕಾಂಗ್ರೆಸ್ ಕಾರ್ಪೊರೇಟರ್ ಟಿಕೆಟ್ ಆಕಾಂಕ್ಷಿ. ಲಿಸ್ಟು ದೊಡ್ಡದು. ಆದರೆ.. ಯಾರು ಅನ್ನೋದು ಗೊತ್ತಿಲ್ಲ.



