ಮಾಜಿ ಸಿಎಂ ಬಂಗಾರಪ್ಪನವರಿಗೆ ಒಟ್ಟು ಐವರು ಮಕ್ಕಳು. ಅವರಲ್ಲಿ ಮೂವರು ಸದಾ ಸುದ್ದಿಯಲ್ಲಿರುತ್ತಾರೆ. ಗೀತಾ, ಶಿವ ರಾಜ್ ಕುಮಾರ್ ಅವರ ಪತ್ನಿ. ದೊಡ್ಮನೆಯ ಸೊಸೆ. ಕುಮಾರ್ ಬಂಗಾರಪ್ಪ, ಸದ್ಯಕ್ಕೆ ಬಿಜೆಪಿಯಲ್ಲಿದ್ಧಾರೆ. ಎಲೆಕ್ಷನ್ ಸೋತಿದ್ಧಾರೆ. ಮಧು ಬಂಗಾರಪ್ಪ, ಈಗ ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಣ ಸಚಿವ. ಆದರೆ.. ಐವರು ಮಕ್ಕಳಲ್ಲಿ ಉಳಿದಿಬ್ಬರ ಕಥೆ ಹೇಗಿದೆಯೋ.. ಗೊತ್ತಿಲ್ಲ. ಈ ಮೂವರಲ್ಲಿ ಗೀತಾ ಮತ್ತು ಮಧು ಒಂದು ಕಡೆಯಾದರೆ, ಕುಮಾರ್ ಬಂಗಾರಪ್ಪನವರೇ ಒಂದು ಕಡೆ. ಒಬ್ಬರನ್ನು ಕಂಡರೆ ಒಬ್ಬರಿಗಾಗಿ ಬರೋದಿಲ್ಲ.
ಶಿವಣ್ಣ ಅವರ ಪತ್ನಿ ಗೀತಾ ಅವರೀಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭೆ ಕಣದಲ್ಲಿ ಸ್ಪರ್ಧಿಸೋಕೆ ಸಿದ್ಧರಾಗಿದ್ಧಾರೆ. ಇದು ಅವರಿಗೆ ಎರಡನೇ ಬಾರಿ. ಗೀತಾ ಅವರಿಗೆ ಬಂಗಾರಪ್ಪನವರ ಮಗಳು ಎಂಬ ಪ್ಲಸ್ ಪಾಯಿಂಟ್ಸ್ ಇದೆ. ಆದರೆ.. ಬಂಗಾರಪ್ಪನವರ ಮಕ್ಕಳು ಒಂದೇ ರೀತಿ ಇಲ್ಲ. ಮಧು ಬಂಗಾರಪ್ಪ ಮತ್ತು ಗೀತಾ ಜೊತೆಯಲ್ಲಿದ್ದರೆ, ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲಿದ್ದಾರೆ. ಅಷ್ಟೇ ಅಲ್ಲ, ಕೇವಲ ರಾಜಕೀಯ ಪಕ್ಷದ ವಿಷಯ ಅಲ್ಲ, ಒಬ್ಬರ ಮುಖ ನೋಡಿದರೆ ಆಗಲ್ಲ ಎನ್ನುವಷ್ಟು ಆಕ್ರೋಶವಿದೆ. ಇದನ್ನು ಶಿವಣ್ಣ ಬಗೆಹರಿಸಬಾರದೇಕೆ ಎಂಬ ಪ್ರಶ್ನೆಗೆ ಶಿವಣ್ಣ ಕೊಟ್ಟಿರುವ ಉತ್ತರ ಇದು.
ಒಂದು ಮಾಡುವುದಕ್ಕೆ ನಾನ್ಯಾರು? ಅದಾಗೇ ಒಂದಾಗಬೇಕು ಹೊರತು ನಾನೇನು ಮಾಡುವುದಕ್ಕೆ ಆಗುವುದಿಲ್ಲ. ನಾನು ಅವರ ಅಳಿಯ, ಮಗ ಅಲ್ಲ ಎಂದಿದ್ದಾರೆ. ಬಂಗಾರಪ್ಪನವರು ಮೃತಪಟ್ಟಾಗಲೂ ಅಷ್ಟೆ, ಅಣ್ಣ ಮತ್ತು ತಮ್ಮ ಶರಂಪರ ಜಗಳವಾಡಿಕೊಂಡಿದ್ದರು. ಮಾಧ್ಯಮಗಳ ಮುಂದೆ ಬಂದು ಪರಸ್ಪರ ಆರೋಪ ಪ್ರ್ಯತ್ಯಾರೋಪ ಮಾಡಿದ್ದರು. ಈ ವೇಳೆ ಶಿವಣ್ಣ ಅವರ ಪತ್ನಿ ಗೀತಾ, ಮಧು ಪರ ನಿಂತಿದ್ದರು. ಆದರೆ, ಇಷ್ಟು ವರ್ಷಗಳಾದರೂ ಬಂಗಾರಪ್ಪನವರ ಇಬ್ಬರು ಮಕ್ಕಳು ಒಂದು ಕಡೆ ಇದ್ದರೆ, ಒಬ್ಬ ಮಗ ಕುಮಾರ್ ಪ್ರತ್ಯೇಕವಾಗಿಯೇ ನಿಂತಿದ್ದಾರೆ.
ಬಹುಶಃ ಶಿವಣ್ಣ ಮನಸ್ಸು ಮಾಡಿದರೆ, ಪತ್ನಿ ಮತ್ತವರ ಸೋದರರನ್ನೆಲ್ಲ ಒಂದು ಗೂಡಿಸಬಹುದು. ಆದರೆ, ಶಿವಣ್ಣ ಅವರಿಗೂ ಮನಸ್ಸಿಲ್ಲದಂತೆ ಕಾಣುತ್ತಿದೆ. ಬಹುಶಃ ಬಂಗಾರಪ್ಪನವರ ಕೊನೆಯ ದಿನಗಳಲ್ಲಿ ಅವರು ಅನುಭವಿಸಿದ ಅವಮಾನಗಳನ್ನು ಕಣ್ಣಾರೆ ಕಂಡ ಕಾರಣ ಇರಬೇಕು.



