ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿದೆ. ದರ್ಶನ್ ಜೈಲಿಗೆ ಹೋಗಿ 45 ದಿನ ಕಳೆದಿದೆ. ಇದೀಗ ಆರ್ ಟಿ ಐ ಅರ್ಜಿಯಲ್ಲಿ ದರ್ಶನ್ ಭೇಟಿ ಮಾಡಿದವರ ಲಿಸ್ಟ್ ಬಹಿರಂಗವಾಗಿದೆ. ಒಂದು ತಿಂಗಳಲ್ಲಿ ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಆದವರು ಯಾರು. ಅವರು ಹೋಗಲಿಲ್ಲ.. ಇವರು ಯಾಕೆ ಹೋಗಲಿಲ್ಲ ಎಂದು ಅಭಿಮಾನಿಗಳು ಪ್ರಶ್ನೆ ಕೇಳುವುದೇ ಬೇರೆ. ವಾಸ್ತವವೇ ಬೇರೆ. ಹಾಗೆ ನೋಡಿದರೆ.. ಆರ್ʻಟಿಐ ಮೂಲಕ ಬಂದಿರುವ ಮಾಹಿತಿ ಕಾನೂನು ಉಲ್ಲಂಘನೆಯಾಗಿರುವ ಬಗ್ಗೆ ಪ್ರಶ್ನೆ ಎತ್ತುತ್ತಿದೆ.
ಒಟ್ಟು 30 ಜನ ಭೇಟಿ ಮಾಡಿದ್ದಾರೆ. ಈ 30 ಭೇಟಿಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಾಲ್ಕು ಬಾರಿ ಭೇಟಿ ಮಾಡಿದ್ದಾರೆ. ಅಫ್ʻಕೋರ್ಸ್ ಈ ಮಾಹಿತಿ ಬಂದ ದಿನ ಕೂಡ ವಿಜಯಲಕ್ಷ್ಮಿ ದರ್ಶನ್ ಬನಶಂಕರಿ ದೇವಸ್ಥಾನದಿಂದ ಪ್ರಸಾದ ತೆಗೆದುಕೊಂಡು ಹೋಗಿ ಮತ್ತೆ ಭೇಟಿ ಮಾಡಿದ್ದಾರೆ. ಆರ್ʻಟಿಐ ಅರ್ಜಿ ಪ್ರಕಾರ 4 ಸಲ, ಆದರೆ.. ಆರ್ʻಟಿಐ ಅರ್ಜಿ ಜುಲೈ 25ಕ್ಕೇ ಮುಗಿಯುತ್ತದೆ. ಹೀಗಾಗಿ ವಿಜಯಲಕ್ಷ್ಮಿ ಒಟ್ಟು 6 ಸಲ ಭೇಟಿ ಮಾಡಿದ್ಧಾರೆ. ದರ್ಶನ್ ಅವರ ತಾಯಿ ಮೀನಾ ಒಮ್ಮೆ ಭೇಟಿ ಮಾಡಿದ್ದಾರೆ. ತಮ್ಮ ದಿನಕರ್ 3 ಸಲ ಭೇಟಿ ಮಾಡಿದ್ದಾರೆ. ಮೂರೂ ಸಲ ಅತ್ತಿಗೆ ವಿಜಯಲಕ್ಷ್ಮಿ ಅವರೊಂದಿಗೇ ಭೇಟಿ ಮಾಡಿದ್ದಾರೆ.
ಜೂನ್ 24 : ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿದ್ದಾರೆ. ಈ ಭೇಟಿಯಲ್ಲಿ ವಿಜಯಲಕ್ಷ್ಮಿ ಜೊತೆ ಮತ್ಯಾರೂ ಇರುವುದಿಲ್ಲ.
ಜೂನ್ 29 : ನಟಿ ರಕ್ಷಿತಾ ಭೇಟಿ, ಸ್ನೇಹಿತೆ ಎಂದು ನಮೂದಿಸಿ ಭೇಟಿ ಮಾಡ್ತಾರೆ. ರಕ್ಷಿತಾ ಅವರ ಜೊತೆ ಜೋಗಿ ಪ್ರೇಮ್ ಕೂಡಾ ಇರ್ತಾರೆ.
ಜುಲೈ 1 : ದರ್ಶನ್ ತಾಯಿ ಮೀನಾ ತೂಗುದೀಪ್ ಹಾಗೂ ತಮ್ಮ ದಿನಕರ್ ಭೇಟಿ ಮಾಡುತ್ತಾರೆ. ಈ ಭೇಟಿಯ ನಂತರ ಮೀನಾ ಮತ್ತೊಮ್ಮೆ ಜೈಲಿಗೆ ಬಂದಿಲ್ಲ.
ಜುಲೈ 2 : ಸಮತಾ ಭೇಟಿ, ಪುಸ್ತಕದಲ್ಲಿ ತಂಗಿ ಎಂದು ನಮೂದಿಸಿ ಭೇಟಿಯಾಗಿರುವ ಸಮತಾ. ಹೌದು, ಸಮತಾ ಅವರು ತಂಗಿ ಎಂದು ನಮೂದಿಸಿರುವುದು ಕುತೂಹಲ ಹುಟ್ಟಿಸಿದೆ. ಏಕೆಂದರೆ ಸಮತಾ ಅವರು ಎ1 ಪವಿತ್ರಾ ಗೌಡ ಅವರ ಗೆಳತಿ. ಪವಿತ್ರಾ ಗೌಡ ಅವರನ್ನು ಭೇಟಿ ಮಾಡಿದ್ಧಾರೆ ಎನ್ನಲಾಗಿತ್ತು. ಆದರೆ, ಆಕೆ ದ್ಶನ್ ಅವರನ್ನೇ ಭೇಟಿ ಮಾಡಿರುವುದು ಕುತೂಹಲ.
ಜುಲೈ 10 : ಪತ್ನಿ ವಿಜಯಲಕ್ಷ್ಮಿ, ಮಗ, ಸುಶಾಂತ್, ಚಂದ್ರಶೇಖರ್ ಅಳಿಯ ಭೇಟಿ
ಜುಲೈ 11 : ನಟ ಧನ್ವಿರ್, ಚಂದ್ರಶೇಖರ್, ನಾಗೇಶ್, ಸುನೀಲ್, ಶಿವಕುಮಾರ್ ಭೇಟಿ
ಜುಲೈ15 : ಪತ್ನಿ ವಿಜಯಲಕ್ಷ್ಮಿ, ನಿತಿನ್ , ದಿನಕರ್, ಅನುಶ್ ಶೆಟ್ಟಿ
ಜುಲೈ 19 : ಶಾಸಕ ದರ್ಶನ್ ಪುಟ್ಣಣ್ಣಯ್ಯ ಅವರೂ ದರ್ಶನ್ ಅವರನ್ನು ಭೇಟಿ ಮಾಡಿದ್ಧಾರೆ. ರಾಘವ, ನಿರ್ದೇಶಕ ತರುಣ್ ಕಿಶೋರ್, ಹೇಮಂತ್, ನವೀನ, ಕಿರ್ತನ್, ಕುಮಾರ್ ಭೇಟಿ ನೀಡಿದ್ದಾರೆ.
ಜುಲೈ 22 : ವಿನೋದ್ ಪ್ರಭಾಕರ್ , ದಿನಕರ್, ಸುಶಾಂತ ನಾಯ್ಡು, ಶ್ರೀನಿವಾಸ್, ವಿಜಯಲಕ್ಷ್ಮಿ ಭೇಟಿ
ಜುಲೈ 25 : ಸಾಧುಕೋಕಿಲ, ಸಚ್ಚಿದಾನಂದ, ಹರಿಕೃಷ್ಣ, ರಾಮಮೂರ್ತಿ, ಭೋಜರಾಜ್ ಭೇಟಿ ಮಾಡಿದ್ದಾರೆ. ಜೂನ್ 24 ರಿಂದ ಜುಲೈ 25ರ ಒಂದು ತಿಂಗಳ ಅವಧಿಯಲ್ಲಿ ಒಟ್ಟು 30 ಮಂದಿ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ.
ಆದ್ರೆ ಜೈಲು ಅಧಿಕಾರಿಗಳು ಜೈಲು ನಿಯಮಗಳನ್ನ ಗಾಳಿಗೆ ತೂರಿ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರ ಜೊತೆಗೆ ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಜೈಲು ವಿಸಿಟರ್ಸ್ ಡೈರಿ ಕೇಳಿದ್ವಿ. ಆಗ ವಿಸಿಟರ್ ಡೈರಿ ಕಂಪ್ಯೂಟರೈಸ್ಡ್ ಆಗಿದೆ ಅನ್ನೋ ಉತ್ತರ ನೀಡಿದ್ರು. ಆದ್ರೆ ದರ್ಶನ್ ಪ್ರಕರಣದಲ್ಲಿ ಭೇಟಿಗೆ ತೆರಳುವ ವಿಸಿಟರ್ಸ್ ಡೈರಿ ನೀಡಿದ್ದಾರೆ ಎಂಬ ಆರೋಪ, ಅರ್ಜಿದಾರರದ್ದು. ಹೀಗಾಗಿ ಕಾನೂನು ಉಲ್ಲಂಘನೆಯಾಗುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ.



