ಉಪೇಂದ್ರ ಪೋಸ್ಟರ್ ರಿಲೀಸ್ ಮಾಡಿದ್ರೆ, ಟೀಸರ್ ಕೊಟ್ರೆ, ಟ್ರೇಲರ್ ಬಿಟ್ರೆ.. ಅವುಗಳನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು. ಯಾಕಂದ್ರೆ ಅವರು ಅಲ್ಲೆಲ್ಲೋ ಕ್ಲೂ ಕೊಟ್ಟಿರ್ತಾರೆ. ಈ ಬಾರಿಯೂ ಅಷ್ಟೆ, ಯುಐ ಟೀಸರ್ ಬಿಡ್ತೀವಿ, ಡೇಟ್ ಫಿಕ್ಸ್ ಆಗಿದೆ, ಆ ಡೇಟ್ ಯಾವ್ದು ಅಂಥಾ ಹೇಳಿ ಒಂದು ಟೀಸರ್ ಬಿಟ್ರಲ್ಲ.. ಅದರ ಕ್ಲೂ ಎಲ್ಲಿತ್ತು ಗೊತ್ತಾ..? ಕುದುರೆಗಳ ಕುರಪುಟದ ಸದ್ದಿನಲ್ಲಿತ್ತು.
ಉಪೇಂದ್ರ ಎಲ್ಲೆಲ್ಲಿಯೋ ಏನೋನೋ ಕ್ಲೂ ಕೊಡ್ತಾರೆ. ಆದರೆ ಯುಐ ಟೀಸರ್ʻನ ಡೇಟ್ ಕ್ಲೂ ಕುದುರೆಯ ಕುರಪುಟದ ಸದ್ದಿನಲ್ಲಿತ್ತು. ಕುದುರೆಯ ಓಟವನ್ನು ಕುರಪುಟ ಎನ್ನುತ್ತಾರೆ. ಆ ಕುರಪುಟದ ಸದ್ದು 8 ಬಾರಿ ಕೇಳಿಸಿತ್ತು. ಹಾಗೆಯೇ ಜನವರಿ 8ರಂದು ಯುಐ ಟೀಸರ್ ರಿಲೀಸ್ ಆಗುತ್ತಿದೆ.
ಉಪ್ಪಿ 2’ ರಿಲೀಸ್ ಆಗಿ ಎಂಟು ವರ್ಷಗಳ ಬಳಿಕ ಉಪೇಂದ್ರ ಡೈರೆಕ್ಟರ್ ಕ್ಯಾಪ್ ಧರಿಸಿದ್ದು, ಯುಐ ಮೇಲೆ ಭಾರಿ ನಿರೀಕ್ಷೆ ಇದೆ. ವಿಭಿನ್ನ ಶೀರ್ಷಿಕೆ, ಪೋಸ್ಟರ್‌ಗಳಿಂದ ಯುಐ ಗಮನ ಸೆಳೆದಿದ್ದು, ಈ ಹಿಂದೆ ದೃಶ್ಯಗಳೇ ಇಲ್ಲದ ವಿಭಿನ್ನ ಟೀಸರ್ ರಿಲೀಸ್ ಮಾಡಲಾಗಿತ್ತು. ಹೊಸ ಪ್ರಯತ್ನಗಳನ್ನು ಮಾಡುವ ಉಪೇಂದ್ರ ನೋಡುವ ಟೀಸರ್ ಬದಲು ಕೇಳಿಸಿಕೊಳ್ಳುವ ಟೀಸರ್ ಬಿಡುಗಡೆ ಮಾಡಿದ್ದರು. ಅದೇ ರೀತಿ ಟೀಸರ್ ಬಿಡುಗಡೆಗೂ ಪ್ರೇಕ್ಷಕರಿಗೆ ಟಾಸ್ಕ್ ಕೊಟ್ಟು ಗೆದ್ದಿದ್ದಾರೆ ಉಪ್ಪಿ. ಈ ಕ್ಲೂವನ್ನೂ ಕೂಡಾ ಅಭಿಮಾನಿಗಳು ಡಿಕೋಡ್ ಮಾಡಿದ್ದಾರಂತೆ. ಅವರ ಡೀಟೈಲ್ಸ್ ಟೀಸರ್ ರಿಲೀಸ್ ಆದ ಬಳಿಕ ಸಿಗಲಿದೆ.
ಚಿತ್ರದಲ್ಲಿ ಉಪೇಂದ್ರ ಅವರಿಗೆ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದು, ತಾಂತ್ರಿಕವಾಗಿಯೂ ವಿಶೇಷತೆಗಳಿಂದ ಕೂಡಿರಲಿದೆ. ಅಮೆರಿಕದ ವ್ಯಾಂಕೋವರ್ ಫಿಲಂ ಸ್ಕೂಲ್‌ನಲ್ಲಿ ವಿಎ್ಎಕ್ಸ್ ಕಲಿತಿರುವ ನುರಿತ ತಂತ್ರಜ್ಞರಾದ ನಿರ್ಮಲ್ ಕುಮಾರ್ ಹಾಗೂ ನವೀನ್ ಮನೋಹರ್ ಚಿತ್ರದ ವಿಎ್ಎಕ್ಸ್‌ನ ಜವಾಬ್ದಾರಿ ಹೊತ್ತಿದ್ದಾರೆ. ವಿಆರ್ ಮೊಕೊಬಾಟ್, ಥ್ರೀಡಿ ಸ್ಕಾೃನಿಂಗ್, ವರ್ಚುವಲ್ ಪೈಪ್‌ಲೈನ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ. ಚಿತ್ರೀಕರಣ ಈಗಾಗಲೇ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
‘ಯುಐ’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಮೂಡಿಬರುತ್ತಿದೆ. ಲಹರಿ ಫಿಲಂಸ್‌ನ ಮನೋಹರನ್ ಮತ್ತು ವೀನಸ್ ಎಂಟರ್‌ಟೇನರ್ಸ್‌ನ ಕೆ.ಪಿ. ಶ್ರೀಕಾಂತ್ ಜಂಟಿಯಾಗಿ ಈ ಮೆಗಾ ಬಜೆಟ್ ಸಿನಿಮಾ ನಿರ್ಮಿಸುತ್ತಿದ್ದಾರೆ.
ಉಪೇಂದ್ರ ತಮ್ಮ ಹುಟ್ಟುಹಬ್ಬಕ್ಕೆ ಒಂದು ಕತ್ತಲಲ್ಲೇ ಕರಡಿ ಬಿಟ್ಟಂತೆ ಆಡಿಯೋ ಟೀಸರ್ ಬಿಟ್ಟಿದ್ದರು. ತಲೆ ಕೆಳಗಾಗಿ ಪೋಸ್ಟರ್ ಮಾಡೋದು, ಸಿಂಪಲ್ ಸಿಂಬಲ್ಲುಗಳನ್ನೇ ಅಕಟಕಟಾ ಎನ್ನಿಸುವಂತೆ ಮಾಡೋದು.. ಉಪ್ಪಿ ಸ್ಟೈಲ್. ಈ ಟೀಸರ್ʻನಲ್ಲಿ ಏನ್ ಬಿಡ್ತಾರೋ.. ಹೇಳ್ತಾರೋ.. ತೋರಿಸ್ತಾರೋ.. ಕೇಳಿಸ್ತಾರೋ.. ಏನೋ.. ಗೊತ್ತಿಲ್ಲ. ನೋಡಿದವರ ತಲೆಗೆ ಹುಳ ಬಿಡೋದಂತೂ ಗ್ಯಾರಂಟಿ..



