ಲೋಕಸಭಾ ಚುನಾವಣೆ ಮುಗಿದು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತೋ ಅಂದಿನಿಂದ ಗ್ಯಾರಂಟಿ ಯೋಜನೆಗಳು ಹಳ್ಳ ಹಿಡಿದಿವೆ. ಲೋಕಸಭೆ ಚುನಾವಣೆ ಆದ್ಮೇಲೆ ಆ ವಿಶ್ವಾಸ ನಮ್ಮ ಗೃಹಿಣಿಯರಿಗೆ ಬರ್ತಾ ಇಲ್ಲ. ಚುನಾವಣೆ ಆದ ಒಂದು ತಿಂಗಳಾದ ಮೇಲೆ ಮನೆ ಯಜಮಾನಿಗೆ ಎರಡು ಸಾವಿರ ಬರಬೇಕಿತ್ತು ಆದ್ರೆ ಇನ್ನೂವರೆಗೆ ಬಂದಿಲ್ಲ. ಆದರಿಂದ ಎಲ್ಲ ಮಹಿಳೆಯರು ಆತಂಕದಲ್ಲಿದ್ದಾರೆ. ಚುನಾವಣೆಗೋಸ್ಕರ ಇಂತಹ ಯೋಜನೆ ಜಾರಿಗೆ ತಂದ್ರ ಎಂಬ ಭಾವನೆ ಗೃಹಿಣಿಯಲ್ಲಿ ಮನೆ ಮಾಡಿದೆ. ಕಳೆದೆರಡು ಮೂರು ತಿಂಗಳಿಂದ ಮಹಿಳೆಯರಿಗೆ ಹಣ ಬರುತ್ತಿಲ್ಲ.
ಕಳೆದ ಮೇ ನಾಲ್ಕರಂದು ಹಾಕಿದ್ದೆ ಕೊನೆ, ಬಳಿಕ ಯಾವುದೇ ರೀತಿಯ ಹಣ ಮಹಿಳೆಯರ ಪಾಸ್ ಬುಕ್ಕಿಗೆ ಬಂದಿಲ್ಲ. ಎರಡು ತಿಂಗಳಿಂದ ಹಣ ಹಾಕಿಲ್ಲ. ಈಗ ಹಾಕಿದ್ರೆ ಎರಡು ತಿಂಗಳ ಹಣ ಹಾಕಬೇಕಾಗುತ್ತದೆ. ಇದರಿಂದ ಸಿದ್ದರಾಮಯ್ಯ ಸರ್ಕಾರದ ಮೇಲೆ ಮಹಿಳೆಯರು ಆಕ್ರೋಶಗೊಂಡಿದ್ದಾರೆ. ಚುನಾವಣೆಗೆ ಮುನ್ನ ಎರಡು ತಿಂಗಳು ಅಡ್ವಾನ್ಸ್ ಗೃಹಲಕ್ಷ್ಮಿ ನೀಡಿದ್ದ ಸರ್ಕಾರ, ಎಲೆಕ್ಷನ್ ಆದ ಮೇಲೆ ಹಣ ಕೊಟ್ಟಿಲ್ಲ.
ಒಟ್ಟಾರೆ ಗೃಹಲಕ್ಷ್ಮಿ ಹಣ ಬರದಿರುವುದು ಒಂದು ಕಡೆಯಾದ್ರೆ, ಸರ್ಕಾರ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುತ್ತಿಲ್ಲ. ಎಲ್ಲಿ ನೋಡಿದರಲ್ಲಿ ಮಹಿಳೆಯರು ಸಿದ್ದು ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಗೃಹ ಲಕ್ಷ್ಮಿ ಹಣ ಬಂದ ಬಳಿಕ ಮಕ್ಕಳು ಹಾಗೂ ಪತಿ ಹಣ ಕೊಡುವುದು ನಿಲ್ಲಿಸಿದ್ದಾರೆ. ಇದೀಗ ಮನೆ ಖರ್ಚು ಆಸ್ಪತ್ರೆ ಹಾಗೂ ಔಷಧಿ ಖರ್ಚಿಗೆ ಹಣ ಇಲ್ಲದೆ ಪರದಾಡುವಂತಾಗಿದೆ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ಹಾಲಿನ ಮಾರಾಟ ದರ ಹೆಚ್ಚಿಸಿ, ಉತ್ಪಾದಕರಿಂದ ಖರೀದಿ ಹಣವನ್ನು ಕಡಿಮೆ ಮಾಡಲಾಗಿದೆ. ಮದ್ಯಪಾನದ ಮೇಲೆ ತೆರಿಗೆ ಹೆಚ್ಚಿಸಲಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಲಾಗಿದೆ. ಸ್ಟಾಂಪ್ ಡ್ಯೂಟಿ ಶುಲ್ಕ ಹೆಚ್ಚಳವಾಗಿದೆ.
ಆದರೆ.. ಹಲವು ಮೂಲಗಳಿಂದ ಬರುತ್ತಿದ್ದ ಹಣ ಹೆಚ್ಚಿಸಿಕೊಂಡಿದ್ದರೂ, ಗೃಹಲಕ್ಷ್ಮಿ ಯೋಜನೆಗೆ ಹಣ ನೀಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂಬ ಮಾತುಗಳು ಚಾಲ್ತಿಯಲ್ಲಿವೆ.
5 ಗ್ಯಾರಂಟಿ ಪೈಕಿ ಮಹಿಳೆಯರಿಗಾಗಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ಮಾಡಿತ್ತು. 1.28 ಕೋಟಿ ಕುಟುಂಬದ ಯಜಮಾನಿಯರಿಗೆ ‘ಗೃಹಲಕ್ಷ್ಮಿ’ ಭಾಗ್ಯ ನೀಡಿತ್ತು. ಸರ್ವರ್ ಡೌನ್ನಿಂದ ಮಹಿಳೆಯರು ಅರ್ಜಿ ಸಲ್ಲಿಕೆಗೆ ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು. ಇದಾದ ಬಳಿಕ ಗೃಹಲಕ್ಷ್ಮಿ ಮೂಲಕ ಪ್ರತಿ ತಿಂಗಳು ಮಹಿಳೆಯರ ಖಾತೆಗೆ 2,000 ರೂಪಾತಿ ಹೋಗುತ್ತಿತ್ತು. ಅಧಿಕಾರಕ್ಕೆ ಬಂದ ಬಳಿಕ ಸರ್ಕಾರ ಕೆಲ ತಿಂಗಳು ಹಣ ಜಮೆ ಮಾಡಿತ್ತು. ಈ ಬಳಿಕ ಹಲವು ಜಿಲ್ಲೆಗಳ ಮಹಿಳೆಯರಿಗೆ ಅಕೌಂಟ್ಗೆ ಹಣ ಬಂದಿರಲಿಲ್ಲ. ಹೀಗಾಗಿ ಗೃಹಲಕ್ಷ್ಮಿ ಹಣ ಬಾರದ ಕಾರಣ ನಾರಿಮಣಿಯರು ಕಂಗಾಲಾಗಿದ್ದರು. ಈಗ ಒಟ್ಟು 3 ತಿಂಗಳುಗಳಿಂದ ಮಹಿಳೆಯರ ಅಕೌಂಟ್ಗೆ 2 ಸಾವಿರ ಹಣ ಬಂದಿಲ್ಲ. ಸಿದ್ದರಾಮಯ್ಯ ಸರ್ಕಾರವು 5 ವರ್ಷವೂ ಗೃಹಲಕ್ಷ್ಮಿ ಯೋಜನೆ ಗ್ಯಾರಂಟಿ ಎಂದಿತ್ತು. ಆದರೆ, ವರ್ಷ ಪೂರೈಸುವುದರೊಳಗೆ ಗೃಹಲಕ್ಷ್ಮಿಗೆ ಬ್ರೇಕ್ ಹಾಕಿದೆ.
ಸರ್ಕಾರದ ಬಳಿ ಐದು ಗ್ಯಾರಂಟಿಗೆ ಕೊಡಲು ಹಣ ಇಲ್ಲ. ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಈಗ ಯಾವ ಹಣವೂ ಜನರ ಅಕೌಂಟ್ಗೆ ಹೋಗುತ್ತಿಲ್ಲ. ಅಧಿವೇಶನದಲ್ಲಿ ಸರ್ಕಾರ ಜನರಿಗೆ ಕ್ಷಮೆ ಕೇಳಬೇಕು. ಮೊದಲೇ ಹೇಳಿದ್ವಿ ಗ್ಯಾರಂಟಿ ಹೆಚ್ಚು ದಿನ ಇರಲ್ಲ ಅಂತ ಎಂದು ಹೇಳುತ್ತಿದ್ದಾರೆ.



