ಕಷ್ಟ ಅಂತಾ ಬಂದಾಗ ಸ್ನೇಹಿತರು ದೂರವಾಗುತ್ತಾರೆ. ನೆಂಟರಂತೂ ನೆನಪೇ ಆಗೋದಿಲ್ಲ. ಸಂಬಂಧಿಕರು ಹತ್ತಿರ ಸೇರಿಸೋದಿಲ್ಲ. ಜಗತ್ತಿನಲ್ಲಿ ಎಲ್ಲರೂ ವಿಲನ್ನುಗಳಂತೆಯೇ ಕಾಣಿಸುತ್ತಾರೆ. ಆದರೆ ವೈದಿಕ ಶಾಸ್ತ್ರದ ಪ್ರಕಾರ ಈ 7 ರಾಶಿಯವರು ಕಷ್ಟ ಎಂದಾಗ ಮಿಡಿಯುತ್ತಾರೆ. ಇವರ ಹೃದಯ ಕಣ್ಣೀರು ಹಾಕುತ್ತದಂತೆ. ಕಷ್ಟ ಅಂತ ಬಂದಾಗ ಇವರು ಹೆಗಲು ಕೊಡ್ತಾರಂತೆ.
ಮೇಷ ರಾಶಿ : ಯಾರಿಗೆ ಸಹಾಯ ಬೇಕಾದರೂ ಕೂಡ ಮೇಷ ರಾಶಿಯವರು ಅನಿರೀಕ್ಷಿತವಾಗಿ ಕೂಡ ಬಂದಂತಹ ಪರಿಸ್ಥಿತಿಗಳಲ್ಲಿ ಸಹಾಯ ಮಾಡುವುದಕ್ಕೆ ಹಿಂದೆ ಮುಂದೆ ನೋಡೋದಿಲ್ಲ. ಇವರು ಉದಾರಿಗಳು. ಅಪರಿಚಿತರಿಗೂ ಕೂಡ ಹಿಂದೆ ಮುಂದೆ ನೋಡದೆ ತಮ್ಮ ಕೈಲಾದಷ್ಟು ಮಾಡುತ್ತಾರೆ. ಸಹಾಯ ಮಾಡುವಾಗ ಮುಂದಾಲೋಚನೆ ಮಾಡುವುದು ಕಡಿಮೆ.
ಕಟಕ ರಾಶಿ : ಅತ್ಯಂತ ಹೀನವಾದಂತಹ ಪರಿಸ್ಥಿತಿಯಲ್ಲಿ ಇರುವಂತಹ ಜನರಿಗೂ ಕೂಡ ಕರ್ಕ ರಾಶಿಯವರು ಸಹಾಯ ಮಾಡೋದಕ್ಕೆ ಹಿಂದೆ ಮುಂದೆ ಯೋಚನೆ ಮಾಡೋದಿಲ್ಲ. ಅದರಲ್ಲೂ ಪ್ರಾಣಿಗಳ ವಿಚಾರದಲ್ಲಿ ಈ ಕಟಕದವರು ಒಂದು ಹೆಜ್ಜೆ ಮುಂದೇ ಇರುತ್ತಾರೆ.
ಸಿಂಹ ರಾಶಿ : ಇವರು ಉದಾರಿಗಳು. ಕಷ್ಟ, ತೊಂದರೆ ಎಂದು ಕಂಡರೆ ಸಾಕು, ಹುಡುಕಿಕೊಂಡು ಹೋಗಿ ಸಹಾಯ ಮಾಡುವ ವ್ಯಕ್ತಿತ್ವದವರು. ಕಷ್ಟ ಎಂದವರಿಗೆ ಉತ್ತಮ ಜೀವನವನ್ನು ಕಲ್ಪಿಸಿ ಕೊಡುವಂತಹ ನಿಟ್ಟಿನಲ್ಲಿ ಇವರು ಸದಾ ಮುಂದು. ಸಮಾಜದಲ್ಲಿ ಒಂದೊಳ್ಳೆ ಬದಲಾವಣೆಯನ್ನು ತರಬೇಕು ಎನ್ನುವಂತಹ ಮನೋಭಾವನೆ ಅವರಲ್ಲಿ ಇರುತ್ತದೆ.
ತುಲಾ ರಾಶಿ : ಉಳ್ಳವರಿಂದ ಇಲ್ಲದವರಿಗೆ ಯಾವುದಾದರೂ ಅನ್ಯಾಯ ಆಗಿದ್ದರೆ ಅದಕ್ಕೆ ನ್ಯಾಯವನ್ನು ಒದಗಿಸುವುದಕ್ಕಾಗಿ ಯಾವ ಹಂತಕ್ಕೆ ಬೇಕಾದರೂ ತುಲಾ ರಾಶಿಯವರು ಹೋಗ್ತಾರಂತೆ. ಸಮಾಜದಲ್ಲಿ ಇರುವಂತಹ ಮೇಲು ಕೀಳು ಬಡವ ಬಲಿದ ಶ್ರೀಮಂತ ಬಡವ ಎನ್ನುವಂತ ವಿಭಾಗಿಕರಣವನ್ನ ಇಷ್ಟ ಪಡೋದಿಲ್ಲ.
ಧನುಸ್ಸು ರಾಶಿ : ಸಮಾಜದ ಆರ್ಥಿಕವಾಗಿ ಹಿಂದುಳಿದಿರುವಂತಹ ವರ್ಗಗಳ ಧ್ವನಿಯಾಗಿ ಕಾಣಿಸಿಕೊಳ್ಳುವುದಕ್ಕೆ ಧನು ರಾಶಿಯವರು ಇಷ್ಟಪಡುತ್ತಾರೆ. ಎಂತವುದೇ ಪರಿಸ್ಥಿತಿಯಲ್ಲಿ ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡೋದಕ್ಕೆ ಧನು ರಾಶಿಯವರು ಯಾವತ್ತೂ ಕೂಡ ಎದೆಗುಂದುವುದಿಲ್ಲ.
ವೃಷಭ ರಾಶಿ : ಒಬ್ಬರಿಗೆ ಸಹಾಯ ಮಾಡಬೇಕು ಅನ್ನುವಂತಹ ನಿರ್ಧಾರ ಬಂದ ಮೇಲೆ ಅದನ್ನು ಬದಲಾಯಿಸಲು ಯಾರಿಂದಲೂ ಕೂಡ ಸಾಧ್ಯವಿಲ್ಲ. ಅತ್ಯಂತ ಕಷ್ಟದ ಪರಿಸ್ಥಿತಿಗಳಲ್ಲಿ ನೀವು ಯಾರನ್ನ ಸಹಾಯಕ್ಕಾಗಿ ಕೇಳಬಹುದು ಇಲ್ಲವೋ ಗೊತ್ತಿಲ್ಲ ಆದರೆ ವೃಷಭ ರಾಶಿಯವರು ಖಂಡಿತವಾಗಿ ನೀವು ಕೇಳಿದ ತಕ್ಷಣ ನಿಮಗೆ ಬೇಕಾಗಿರುವಂತಹ ಸಹಾಯವನ್ನು ಒದಗಿಸುವುದರಲ್ಲಿ ತತ್ಪರಾಗುತ್ತಾರೆ.
ಕನ್ಯಾ ರಾಶಿ : ಕೇವಲ ಹಣವನ್ನು ನೀಡಿ ಸಹಾಯ ಮಾಡಿ ಅಂತ ಬೇರೆಯವರಿಗೆ ಹೇಳೋದಷ್ಟೇ ಅಲ್ಲ ಕನ್ಯಾ ರಾಶಿಯವರು, ತಾವೇ ಖುದ್ದಾಗಿ ನಿಂತು ಆ ಹಣ ಸರಿಯಾದ ರೀತಿಯಲ್ಲಿ ಸರಿಯಾದ ಜನರ ವಿಚಾರದಲ್ಲಿ ಬಳಕೆ ಆಗುತ್ತಿದೆ ಅನ್ನೋದನ್ನ ಖಚಿತಪಡಿಸಿಕೊಳ್ಳುತ್ತಾರೆ. ತಾವು ನೀಡಿರುವಂತಹ ಹಣ ಸಮಾಜದ ಸರಿಯಾದ ವರ್ಗಕ್ಕೆ ಸಿಕ್ತಾ ಇದೆ ಅನ್ನೋದನ್ನ ಕೂಡ ಅವರು ಇಲ್ಲಿ ಪ್ರಮುಖವಾಗಿ ಗಮನಿಸುತ್ತಾರೆ.



