ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ನ ಪ್ರೋಮೋ ಅದು. ಜಗ್ಗಪ್ಪ ಮತ್ತು ತಂಡ ಟೈಮ್ ಮಷೀನ್ ಕುರಿತು ಸ್ಕಿಟ್ ಮಾಡಿದ್ದರು. ಈ ಸ್ಕಿಟ್ʻನಲ್ಲಿ ಜಗ್ಗಪ್ಪ ಟೈಮ್ ಮಷೀನ್ (Time machine) ಗೆ 2021ಕ್ಕೆ ಟ್ರಾವೆಲ್ ಮಾಡುವಂತೆ ಹೇಳ್ತಾರೆ. ಆಗ.. ಆ ಟೈಂ ಮಷೀನ್ʻನಲ್ಲಿ ಪುನೀತ್ ರಾಜ್ ಕುಮಾರ್ ಬರ್ತಾರೆ. ಅಲ್ಲಲ್ಲ.. ಪುನೀತ್ ಅವರನ್ನೇ ಹೋಲುವ ವ್ಯಕ್ತಿಯ ಆಗಮನವಾಗುತ್ತೆ. ಎಲ್ಲರೂ ಅಚ್ಚರಿಯಿಂದ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿರುವಾಗಲೇ.. ಎಲ್ಲರೂ ಭಾವುಕರಾಗ್ತಾರೆ.
ಪುನೀತ್ ಹೋಲಿಕೆಯ ವ್ಯಕ್ತಿಯನ್ನು ನೋಡುತ್ತಿದ್ದಂತೆ ನಿರೂಪಕಿ ಅನುಶ್ರೀ ಕಣ್ಣಾಲಿಗಳು ತುಂಬಿ ಬರುತ್ತವೆ. ಕಣ್ಣೀರು ಧುಮುಕುವಂತಾಗುತ್ತೆ. ಸ್ಟೇಜ್ ಮೇಲೆ ಪುನೀತ್ ರಾಜ್ ಕುಮಾರ್ ಅವರಂತೆ ಸೂಟ್ ಬೂಟ್ ಧರಿಸಿದ ವ್ಯಕ್ತಿಯ ಆಗಮನ ಆಗುತ್ತಿದ್ದಂತೆ, ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿದೆ ಎಂದು ಪುನೀತ್ ಅವರೇ ಹಾಡಿರುವ ಹಾಡು ಬ್ಯಾಕ್ ಗ್ರೌಂಡ್ ನಲ್ಲಿ ಪ್ಲೇ ಆಗುತ್ತೆ. , ನಿರ್ದೇಶಕ ತರುಣ್ ಸುದೀರ್ ಎದ್ದು ನಿಂತರೆ, ಕುರಿ ಪ್ರತಾಪ್ ತಮ್ಮ ಕನ್ನಡಕ ತೆಗೆದು ನಿಜವಾಗಿಯೂ ತಾನು ಏನ್ ನೋಡ್ತಿದ್ದಿನಿ ಎನ್ನುವಂತೆ ಶಾಕ್ ಆಗಿರೋವಂತೆ ನೋಡ್ತಾರೆ.
ಇನ್ನು ಜಗ್ಗಪ್ಪ ಸರ್ ನಾನು ನಿಮ್ಮ ಅಭಿಮಾನಿ, ನಿಮ್ಮ ಎಲ್ಲಾ ಸಿನಿಮಾ ನೋಡಿದಿನಿ, ನಿಮ್ಮ ಜೊತೆ ಫೋಟೋನೆ ಇಲ್ಲ, ಒಂದು ಫೋಟೋ ತೆಗಿಲಾ ಎಂದು ಕೇಳಿದ್ದಕ್ಕೆ, ಆ ವ್ಯಕ್ತಿ ಥೇಟ್ ಪುನೀತ್ ರಾಜ್ ಕುಮಾರ್ ಅವರ ಧ್ವನಿಯಲ್ಲಿಯೇ ಜಗ್ಗು ಅವರೇ ಮೊದಲು ಅಳೋದು ನಿಲ್ಲಿಸ್ತೀರಾ ಎಂದು ಹೇಳುತ್ತಿದ್ದಂತೆ, ಅನುಶ್ರೀ ಜೋರಾಗಿ ಅತ್ತರೆ, ನಯನಾ ಕೂಡ ಕಣ್ಣೀರಿಡ್ತಾರೆ. ಪುನೀತ್ ವಾಯ್ಸ್ ಕೇಳಿ ಶ್ವೇತಾ ಚೆಂಗಪ್ಪ ರೋಮಾಂಚನಗೊಳ್ತಾರೆ. ನಂತರ ಪುನೀತ್ ರಾಜಕುಮಾರ್ ಡೂಪ್ ಅಣ್ಣಾಬಾಂಡ್ ಹಾಡಿಗೆ ಹೆಜ್ಜೆ ಹಾಕ್ತಾರೆ.
ಇದಾದ ಬಳಿಕ ನಿರೂಪಕಿ ಅನುಶ್ರೀ ಕಣ್ಣಿರಿಡುತ್ತಲೇ ಮಾತನಾಡಿ, ಪ್ರತಿಯೊಬ್ಬರು ಇಲ್ಲಿ ಹುಟ್ಟೋದೆ ದೇವರಾಗೋಕೆ, ಆದರೆ ಎಲ್ಲರೂ ದೇವರಾಗಲ್ಲ. ಒಬ್ಬ ಪುನೀತ್ ರಾಜ್‌ಕುಮಾರ್ ಮಾತ್ರ ದೇವರಾಗ್ತಾರೆ ಎಂದು ಹೇಳಿದ್ದಾರೆ.
ಪ್ರೋಮೋ ಪ್ರಸಾರವಾಗುತ್ತಿದ್ದಂತೆ, ಅಭಿಮಾನಿಗಳು ಸಹ ಕಣ್ಣಿರಿಟ್ಟಿದ್ದಾರೆ. ಮರೆಯಾದರು ಮರೆಯಲಾಗದ ಮಿನುಗುವ ಮಾಣಿಕ್ಯ, ದೇವರೆ ಇದು ಒಂದು ಬಾರಿ ನಿಜ ಆಗಿ ಬಿಡಲಿ ದೇವರೆ ಎಂದು ಸಹ ಕೇಳಿಕೊಂಡಿದ್ದಾರೆ ಫ್ಯಾನ್ಸ್. ಅಷ್ಟೇ ಅಲ್ಲ ಜೊತೆಗಿರದ ಜೀವ ಎಂದಿಗೂ ಜೀವಂತ, ಪರಮಾತ್ಮ ಮತ್ತೆ ಧರೆಗಿಳಿದ ಪುನೀತ ಅನುಭವ, ಅಪ್ಪು ಕೇವಲ ಹೆಸರಲ್ಲ, ನಿನ್ನ ನೆನೆಯದ ಕ್ಷಣವಿಲ್ಲ, ಅಷ್ಟೇ ಏಕೆ ನಿನ್ನ ನೆನೆಯದವರೂ ಇಲ್ಲ, ನಗುವಿನ ಒಡೆಯ ನಿನ್ನ ನೆನೆಯದೆ ದಿನವೂ ಸಾಗುವುದಿಲ್ಲ ಎಂದು ಜನ ಕಾಮೆಂಟ್ ಮಾಡಿದ್ದಾರೆ.



