ಒಬ್ಬ ಮಹಿಳೆ ತನ್ನ ಮಗಳ ಮೇಲೆ ಲೈಂಗಿಕ ಕಿರುಕುಳ ಆಗಿದೆ ಎಂದು ದೂರು ಕೊಟ್ಟ ಪ್ರಕರಣ, ರಾಜಕೀಯ ಷಡ್ಯಂತ್ರದ ಭಾಗವಾಗಿ ಬಳಕೆ ಆಗ್ತಿದೆಯಾ..? ಹೀಗೊಂದು ಪ್ರಶ್ನೆ ಉದ್ಭವವಾಗಿದೆ. ಏಕೆಂದರೆ ತಮ್ಮ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪ ಎರಡು ಬಾರಿ ತಾವಾಗಿಯೇ ಖುದ್ದು ವಿಚಾರಣೆಗೆ ಹಾಜರಾಗಿದ್ದರು. ಒಮ್ಮೆ ಇವತ್ತು ಬೇಡ, ನಾಳೆ ಬನ್ನಿ ಎಂದಿದ್ದ ಪೊಲೀಸರು, ಮಾರನೇ ದಿನ ಹೋದಾಗಲೂ ಅಷ್ಟೇ.. ವಾಯ್ಸ್ ಸ್ಯಾಂಪಲ್ ತೆಗೆದುಕೊಂಡು ವಿಚಾರಣೆ ಮಾಡದೆ ಕಳಿಸಿದ್ದರು. ಈಗ ಇದ್ದಕ್ಕಿದ್ದಂತೆ ಯಡಿಯೂರಪ್ಪ ದೆಹಲಿಯಲ್ಲಿದ್ದಾರೆ ಎಂಬ ಮಾಹಿತಿ ಇಟ್ಟುಕೊಂಡು ನಾಳೆಯೇ ವಿಚಾರಣೆಗೆ ಬನ್ನಿ ಎಂದು ಹೇಳಿರುವುದು ಹಾಗೂ ಸಾಕ್ಷ್ಯ ನಾಶದ ಹೆಸರಿನಲ್ಲಿ ಕೋರ್ಟ್ ಮೂಲಕ ಎನ್ʻಬಿಡಬ್ಲ್ಯು (ನಾನ್ ಬೇಲಬಲ್ ವಾರೆಂಟ್) ಪಡೆದುಕೊಂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯದ (ಪೋಕ್ಸೋ ವಿಶೇಷ ಕೋರ್ಟ್) ನ್ಯಾಯಾಧೀಶ ಎನ್.ಎಂ. ರಮೇಶ್ ಆದೇಶ ನೀಡಿದ್ದಾರೆ. ಬೆನ್ನಲ್ಲೇ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ಅವರ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.
ಘಟನೆ ನಡೆದಿದೆ ಎನ್ನಲಾಗಿದ್ದು ಫೆಬ್ರವರಿ 2ಕ್ಕೆ. ಕಂಪ್ಲೇಂಟ್ ಕೊಟ್ಟ ದಿನಾಂಕ ಮಾರ್ಚ್ 14. ಬಾಲಕಿಯ ಮೇಲೆ ಅತ್ಯಾಚಾರ ಯತ್ನ ಎಂಬ ದೂರು ಬಂದ ಕಾರಣ, ಯಡಿಯೂರಪ್ಪನವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು. ಸಿಐಡಿಗೆ ವರ್ಗಾವಣೇಯಾಗಿತ್ತು. ಈ ಪ್ರಕರಣದಲ್ಲಿ ಯಡಿಯೂರಪ್ಪನವರಿಗೆ ನೋಟಿಸ್ ಕೊಡಲಾಗಿತ್ತು. ನಾನು ವಿಚಾರಣೆಗೆ ಬರುತ್ತೇನೆ ಎಂದು ಏಪ್ರಿಲ್ 4ರಂದು ಹೊರಟ ಯಡಿಯೂರಪ್ಪನವರಿಗೆ ಇವತ್ತು ಬೇಡ ನಾಳೆ ಬನ್ನಿ ಎಂದು ಹೇಳಿದ್ದರು ಪೊಲೀಸರು. ಅದಾದ ಮೇಲೆ ಮರುದಿನ ಹೋದಾಗಲೂ ಅಷ್ಟೆ, ಧ್ವನಿ ಪರೀಕ್ಷೆಗೆ ವಾಯ್ಸ್ ಸ್ಯಾಂಪಲ್ ಕೊಡಿ ಎಂದು, ಅದನ್ನಷ್ಟೇ ಪಡೆದುಕೊಂಡು ಕಳಿಸಿದ್ದರು. ಆದರೆ ಯಡಿಯೂರಪ್ಪನವರ ಒಂದು ಹೇಳಿಕೆಯನ್ನೂ ದಾಖಲಿಸಿರಲಿಲ್ಲ.
ನನ್ನ ಹೇಳಿಕೆಯನ್ನೇ ದಾಖಲು ಮಾಡಿಲ್ಲ ಎಂದು ಅವತ್ತೂ ಕೂಡಾ ಹೇಳಿದ್ದರು ಯಡಿಯೂರಪ್ಪ. ಅಲ್ಲದೆ ಘಟನೆ ನಡೆದಿದೆ ಎನ್ನಲಾದ ಸ್ಥಳದ ಮಹಜರು ಕೂಡಾ ಮಾಡಲಾಗಿದ್ದು, ಆ ದಿನ ಅಲ್ಲಿಯೇ ಇದ್ದ 15 ಜನರ ವಿಚಾರಣೆ ಆಗಿದೆ. ಯಾರೊಬ್ಬರೂ ಕೂಡಾ ಯಡಿಯೂರಪ್ಪನವರಿಂದ ಕಿರುಕುಳ ಆಗಿದೆ ಎಂದು ಹೇಳಿಲ್ಲ.
ನೋಟಿಸ್ ಕೊಟ್ಟು, ವಿಚಾರಣೆಗೆ ಬಂದಾಗ ವಿಚಾರಣೆಯನ್ನೇ ಮಾಡದೆ.. ಈಗ ದೆಹಲಿಯಲ್ಲಿ ಬೇರೆ ಕೆಲಸಕ್ಕೆ ಹೋಗಿದ್ದ ವೇಳೆ ದಿಢೀರ್ ನೋಟಿಸ್ ಕೊಟ್ಟು, ಒಂದೇ ದಿನದ ಕಾಲಾವಕಾಶ ಕೊಟ್ಟಿರುವುದು ಏಕೆ ಎನ್ನುವುದು ಯಡಿಯೂರಪ್ಪನವರ ಪ್ರಶ್ನೆ. ಆದರೆ.. ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿ ಆಗಿದೆ. ಅರೆಸ್ಟ್ ಆಗ್ತಾರಾ ಯಡಿಯೂರಪ್ಪ..?



