ಡಿಕೆ ಶಿವಕುಮಾರ್ (DK Shivakumar) ಸಿಎಂ ಆಗೋದಾದ್ರೆ ನಾವೇ ಬೆಂಬಲ ಕೊಡುತ್ತೇವೆ, ಎಲ್ಲ ಶಾಸಕರೂ ಡಿಕೆ ಶಿವಕುಮಾರ್ ಅವರಿಗೆ ಸಪೋರ್ಟ್ ಮಾಡ್ತಾರೆ. ಕುಮಾರಸ್ವಾಮಿ (HD Kumaraswamy) ಅವರ ಈ ವ್ಯಂಗ್ಯವನ್ನು ಆಡು ಮಾತಿನಲ್ಲಿಯೇ ಕೇಳಬೇಕು. ಟಿವಿಗಳಲ್ಲಿ ಬರೋ ಬ್ರೇಕಿಂಗ್ ನ್ಯೂಸ್ (breaking news ) ಪಾಯಿಂಟ್ಸ್‌ನಲ್ಲಿ ಅಲ್ಲ. ಈ ಬ್ರೇಕಿಂಗ್ ನ್ಯೂಸ್ ನೋಡಿದ ಕೆಲವು ನಾಯಕರಿಗೆ ವ್ಯಂಗ್ಯ ಅರ್ಥವಾಗಲಿಲ್ಲ. ಹೀಗಾಗಿ ಡಿಕೆ ಶಿವಕುಮಾರ್, ಪರಮೇಶ್ವರ್ ಸೇರಿದಂತೆ ಬಹುತೇಕ ಕಾಂಗ್ರೆಸ್ ನಾಯಕರು ವಿಷಯದ ಬಗ್ಗೆ ಘನಗಂಭೀರವಾಗಿ ರಿಯಾಕ್ಟ್ ಮಾಡೋಕೆ ಶುರು ಮಾಡಿದರು. ಇಷ್ಟಕ್ಕೂ ಕುಮಾರಸ್ವಾಮಿ ಈ ಮಾತು ಹೇಳಿದ್ದೇಕೆ ಎಂದರೆ..
CM Siddaramiah hints more than 50 MlA/MLCs coming to congress from bjp and jds
ಕಾಂಗ್ರೆಸ್‌ನ ನಾಯಕರೆಲ್ಲರೂ ಜೆಡಿಎಸ್ ಶಾಸಕರೆಲ್ಲರನ್ನೂ ಕಾಂಗ್ರೆಸ್ಸಿಗೆ ಕರೆತರುತ್ತೇವೆ ಎನ್ನುತ್ತಿದ್ಧಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಕೆಎನ್ ರಾಜಣ್ಣ, ಸಂಸದ ಡಿಕೆ ಸುರೇಶ್.. ಎಲ್ಲರೂ ಜೆಡಿಎಸ್ ಶಾಸಕರನ್ನು ಕರೆತರುತ್ತೇವೆ ಎನ್ನುತ್ತಿದ್ಧಾರೆ. ಇದಕ್ಕೆ ಉತ್ತರ ಕೊಟ್ಟ ಕುಮಾರಸ್ವಾಮಮಿ ವ್ಯಂಗ್ಯವಾಗಿಯೇ ನಾವೇ ಸಪೋರ್ಟು ಕೊಡ್ತೇವೆ ಬಿಡಿ ಎಂದಿದ್ದರು. ಅದರ ಮುಂದುವರಿದ ಭಾಗವಾಗಿ..
ರಾಜ್ಯದಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಪ್ರತಿನಿತ್ಯ ನೀವು ಬನ್ನಿ ನೀವು ಬನ್ನಿ.. ಅಂತ ಎಲ್ಲರನ್ನೂ ಕರಿತಿದಾರೆ. ನಿನ್ನೆ ನಡೆದ ಕಾಂಗ್ರೆಸ್ ಸಭೆಯಲ್ಲಿ ಕನಿಷ್ಠ 50 ಜನರನ್ನಾದರೂ ಪಕ್ಷಕ್ಕೆ ಕರೆತರಬೇಕು ಎಂದು ಮುಖ್ಯಮಂತ್ರಿಗಳೇ ಶಾಸಕರಿಗೆ ಟಾರ್ಗೆಟ್ ನೀಡಿದ್ದರು. ಹೀಗಾಗಿ ಪ್ರತಿನಿತ್ಯ ಕಾಂಗ್ರೆಸ್‌ನವರು ನಮ್ಮ ಶಾಸಕರ ಮನೆ ಬಾಗಿಲು ಕಾಯೋದು ಬೇಡ. ಅವರು ಒಳ್ಳೆಯ ಕೆಲಸ ಮಾಡಿದ್ರೆ, ನಾನೇ ಎಲ್ಲರನ್ನೂ ಕಳಿಸಿಕೊಡ್ತೇನೆ ಎಂದಿದ್ದಾರೆ ಕುಮಾರಸ್ವಾಮಿ.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದರೆ ನಮ್ಮ ಬೆಂಬಲವಿದೆ ಎಂದು ನಾನು ವ್ಯಂಗ್ಯ ಮಾಡಿದ್ದೇನೆ. ಅವರು ದಿನ ನೀವು ಬನ್ನಿ.. ನೀವು ಬನ್ನಿ ಅಂತ ಎಲ್ಲರನ್ನೂ ಕರಿತಾ ಇದಾರೆ. ನಿನ್ನೆ ಮುಖ್ಯಮಂತ್ರಿಗಳೆ ಹೇಳಿದ್ದಾರಲ್ವಾ.? ಕನಿಷ್ಠ 50 ಜನನನ್ನಾದ್ರು ಪಕ್ಷ ಕರೆ ತರಬೇಕು ಅಂತ ಅವರ ಪಕ್ಷದ ಶಾಸಕರಿಗೆ ಹೇಳಿದ್ದಾರೆ. ಹೀಗಾಗಿ, ಪ್ರತಿ ನಿತ್ಯ ನಮ್ಮ ಶಾಸಕರ ಮನೆ ಮುಂದೆ ಯಾಕೆ ಹೋಗ್ತೀರಾ. ಒಳ್ಳೆ ಕೆಲಸ ಮಾಡ್ತೀರಾ ಅಂದ್ರೆ ಎಲ್ಲರನ್ನು ಕಳುಹಿಸುತ್ತೇನೆ ಕರೆದುಕೊಂಡು ಹೋಗಿ ಅಂತ ಹೇಳಿದ್ದೀನಿ ಎಂದಿದ್ದಾರೆ.
ಮುಖ್ಯಮಂತ್ರಿಯ ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ಏನ್ಮಾಡಿದ್ರು? ಆ ಮೀಟಿಂಗ್ ನಲ್ಲಿ ಏನು ಚರ್ಚೆ ಆಗಿದೆ ಗೊತ್ತಾ.. ಲೋಕಸಭಾ ಚುನಾವಣೆಗೂ ಮುನ್ನ ಜೆಡಿಎಸ್, ಬಿಜೆಪಿಯವರನ್ನ ಕಾಂಗ್ರೆಸ್ ಗೆ ಕರೆತರುವ ಬಗ್ಗೆ ಚರ್ಚೆ ಆಗಿದೆ. ಅವರಿಗೆ ನಾಡಿನ ಜನತೆ ಬಗ್ಗೆ ಚರ್ಚೆ ಮಾಡೋದಕ್ಕೆ ಮೀಟಿಂಗ್ ಮಾಡಿಲ್ಲ. ಕೇವಲ ರಾಜಕೀಯಕ್ಕೆ ಮೀಟಿಂಗ್ ಮಾಡಿದ್ದಾರೆ. ಲೋಕಸಭಾ ಚುನಾವಣೆ ಗೆಲ್ಲಲು ಮೀಟಿಂಗ್ ಮಾಡಿದ್ದಾರೆ. ಅವರಿಗೆ ರೈತರ ಸಮಸ್ಯೆ ಗಳು ಬೇಕಿಲ್ಲ. ತಮ್ಮ ಖುರ್ಚಿ ಉಳಿಸಿಕೊಳ್ಳುವ ಹಾಗೂ ರಾಜಕೀಯ ಮಾಡುವುದೇ ಮುಖ್ಯವಾಗಿದೆ ಎಂದು ಕಿಡಿಕಾರಿದ್ದಾರೆ.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗೋದನ್ನ ಕಾಂಗ್ರೆಸ್ ಅವರು ಹೇಳಬೇಕು. ಲೋಕ ಸಭೆ ಚುನಾವಣೆ ಆದ ಮೇಲೆ ಬಿಜೆಪಿ- ಜೆಡಿಎಸ್ ಈ ರಾಜ್ಯದಲ್ಲಿ ಇರೋದೆ ಇಲ್ಲ ಅಂತ ಪ್ರಿಯಾಂಕ್ ಖರ್ಗೆ ಮೊನ್ನೆ ಹೇಳಿದ್ದಾರೆ. ಆದರೆ, ಈಗ ನಾನು ಪ್ರಿಯಾಂಕಾ ಖರ್ಗೆ ಹೇಳಲು ಭಯಸುತ್ತೇನೆ. ಪಾರ್ಲಿಮೆಂಟ್ ಚುನಾವಣೆ ಆದ ಮೇಲೆ ಈ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಕಾಂಗ್ರೆಸ್ ಇರುತ್ತಾ ಯೋಚನೆ ಮಾಡಲಿ ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.



