ರೇಣುಕಾಸ್ವಾಮಿ ಕೊಲೆಯಾಗಿದ್ದು ಜೂನ್ ೮ಕ್ಕೆ. ಶವ ವಿಲೇವಾರಿಯಾಗಿ, ಪೊಲೀಸರನ್ನೇ ಯಾಮಾರಿಸಲು ಯತ್ನಿಸಿ ಐವರು ಶರಣಾಗಿ, ದರ್ಶನ್ ಅರೆಸ್ಟ್ ಆದ ಮೇಲೆ ಪ್ರಕರಣ ತಿರುವು ಪಡೆದದ್ದೇ ಬೇರೆಯ ರೀತಿ. ಮಾಧ್ಯಮಗಳಲ್ಲಿ ಸುದ್ದಿ ಬರುವವರೆಗೆ ದರ್ಶನ್ ಅವರನ್ನು ರಕ್ಷಣೆ ಮಾಡುವುದಕ್ಕೆ ಹಲವು ರಾಜಾರಣಿಗಳು ಸಚಿವರು, ಶಾಸಕರು ಪ್ರಯತ್ನ ಪಟ್ಟರಾದರೂ, ಸುದ್ದಿ ಬ್ರೇಕ್ ಆದ ಮೇಲೆ ಒಂದು ಹಂತಕ್ಕೆ ಕೂಲ್ ಆಗಿದೆ. ಈ ಕೇಸಿನಲ್ಲಿ ವಿಲನ್ ಆಗಿರುವುದು ದರ್ಶನ್ & ಗ್ಯಾಂಗ್ ಆದರೆ, ಹೀರೋಗಳ ಲಿಸ್ಟಿನಲ್ಲಿರುವುದು ಪೊಲೀಸ್ ಆಫೀಸರುಗಳಾದ ಗಿರೀಶ್ ನಾಯ್ಕ್ ಮತ್ತು ಚಂದನ್ ಕುಮಾರ್. ಇಡೀ ತಂಡದ ನೇತೃತ್ವ ಕಮಿಷನರ್ ಬಿಕೆ ದಯಾನಂದ್ ಅವರದ್ದು. ಪ್ರಕರಣ ನಡೆದ ದಿನ ಮಾತನಾಡಿದ್ದ ಕಮಿಷನರ್, ಮತ್ತೊಮ್ಮೆ ಸುದ್ದಿಗೋಷ್ಟಿಯಲ್ಲಿ ವಿವರವಾಗಿ ಹೇಳಿದ್ದಾರೆ.
ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಕೊಲೆಯಾದ ರೇಣುಕಾಸ್ವಾಮಿ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಾ ಇದೆ.
ಈ ಕೇಸ್ ಅನ್ನು ಬಹಳ ಸೂಕ್ಷ್ಮವಾಗಿ ತನಿಖೆ ನಡೆಸುತ್ತಿರುವ ಪೊಲೀಸರು ಸಾಕಷ್ಟು ಸಾಕ್ಷಾಧಾರಗಳನ್ನು ಕಲೆ ಹಾಕಿದ್ದಾರೆ. ಸ್ವಲ್ಪವೇ ಸ್ವಲ್ಪ ನಿರ್ಲಕ್ಷ್ಯ ಮಾಡಿದ್ರೂ ಈ ಪ್ರಕರಣದಲ್ಲಿ ಯಡವಟ್ಟು ಆಗ್ತಾ ಇತ್ತು ಎಂದಿರುವ ದಯಾನಂದ್ ಕೊಲೆಯಾದ ವ್ಯಕ್ತಿಯ ಮರ್ಡರ್ ಹೀನ & ಹೇಯ ಕೃತ್ಯವಾಗಿದೆ. ಆರೋಪಿಗಳು ತೀರಾ ದೌರ್ಜನ್ಯ ಪೂರಕವಾಗಿ ಕೊಲೆ ಮಾಡಿದ್ದಾರೆ. ಕೃತ್ಯ ಮಾಡಿದವರಿಗೆ ತಕ್ಷ ಶಿಕ್ಷೆ ಆಗುತ್ತೆ ಎಂದು ಭರವಸೆ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಬೇರೆ ಬೇರೆ ಆಯಾಮದಲ್ಲಿ ನಡೆಯುತ್ತಿದೆ. ಆರಂಭದಲ್ಲಿ ತನಿಖಾ ತಂಡದಲ್ಲಿದ್ದ ಡಿಸಿಪಿ ಗಿರೀಶ್, ಪ್ರಕರಣದ ತನಿಖೆಗೆ ವಾಪಸ್ ಸೇರಿದ್ದಾರೆ. ಸಂಪೂರ್ಣ ಮೇಲುಸ್ತುವಾರಿ ಡಿಸಿಪಿ ಗಿರೀಶ್ ಅವರದ್ದೇ. ಮೃತ ವ್ಯಕ್ತಿಯ ಸಾವಿಗೆ ನ್ಯಾಯ ಸಿಗಬೇಕು ಕುಟುಂಬಕ್ಕೆ ಸಾಂತ್ವನ ಹೇಳಬೇಕು. ಆದಷ್ಟು ಶೀಘ್ರವೇ ನ್ಯಾಯಾಲಯಕ್ಕೆ ಕೊಲೆ ಪ್ರಕರಣದ ಸಮರ್ಪಕವಾದ ಸಾಕ್ಷಿಗಳನ್ನು ಒದಗಿಸುತ್ತೇವೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂಬ ಕಾನ್ಫಿಡೆನ್ಸ್ ಕಮಿಷನರ್ ದಯಾನಂದ್ ಮಾತಿನಲ್ಲಿತ್ತು.
ಸುದ್ದಿಗೋಷ್ಟಿ ವೇಳೆ ಶಾಮಿಯಾನ ಹಾಕಿದ್ದ ವಿಷಯವೂ ಪ್ರಸ್ತಾಪವಾಗಿದ್ದು, ಎಲ್ಲದಕ್ಕೂ ಒಂದು ಕಾರಣ ಇದೆ ಎಂದಷ್ಟೇ ದಯಾನಂದ್ ಉತ್ತರ ಕೊಟ್ಟಿದ್ದಾರೆ.
ರೇಣುಕಾಸ್ವಾಮಿಯನ್ನು ಚಿತ್ರದುರ್ಗದಲ್ಲಿ ಅಪಹರಿಸಿಕೊಂಡು ಬಂದು, ಹತ್ಯೆಯಲ್ಲಿ ಭಾಗಿಯಾದ ರವಿಶಂಕರ್, ಅನುಕುಮಾರ್, ಜಗದೀಶ್ ಅಲಿಯಾಸ್ ಜಗ್ಗು ಹಾಗೂ ಮೃತದೇಹ ವಿಲೇವಾರಿ ಮಾಡಿ ಶರಣಾಗತಿಯಾಗಿದ್ದ ಗಿರಿನಗರದ ನಿಖಿಲ್ ನಾಯಕ್, ಕಾರ್ತಿಕ್, ಕೇಶವಮೂರ್ತಿಗೆ ದರ್ಶನ್ ಅವರ ಪರಿಚಯ ಇರಲಿಲ್ಲ. ಈ ಹಿಂದೆ ಒಮ್ಮೆಯೂ ಭೇಟಿಯಾಗಿರಲಿಲ್ಲ. ಠಾಣೆಯಲ್ಲಿಯೇ ಮೊದಲ ಬಾರಿ ದರ್ಶನ್‌ರನ್ನು ಮುಖಾಮುಖಿಯಾಗಿದ್ದಾರೆ.ಕೇವಲ ನಟ ದರ್ಶನ್ ಹೆಸರು, ಅವರ ಜತೆ ಸಂಪರ್ಕ ಬೆಳೆಯಲಿದೆ ಎಂಬ ಕಾರಣಕ್ಕೆ ಈ ಕೊಲೆ ಅಪರಾಧದಲ್ಲಿ ಭಾಗಿಯಾದವರು ಎಂಬ ಮಾಹಿತಿ ಹೊರಬಿದ್ದಿದೆ.
ದಯಾನಂದ್ ಅವರ ಪ್ರಕಾರ ರೇಣುಕಾಸ್ವಾಮಿ ಕೊಲೆಗೆ ನ್ಯಾಯ ಸಿಗುವುದು ಗ್ಯಾರಂಟಿ.



