Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

2014 & 2019ರ ಸಮೀಕ್ಷೆ ಏನಿತ್ತು.. ರಿಸಲ್ಟ್‌ ಏನಾಯ್ತು..? 2024ರ ಫಲಿತಾಂಶ ಏನಾಗಲಿದೆ..?

SpeciallU by SpeciallU
June 1, 2024
in News, Politics
Reading Time: 1 min read
0 0
0
2014 & 2019ರ ಸಮೀಕ್ಷೆ ಏನಿತ್ತು.. ರಿಸಲ್ಟ್‌ ಏನಾಯ್ತು..? 2024ರ ಫಲಿತಾಂಶ ಏನಾಗಲಿದೆ..?

2024ರ ಚುನಾವಣೆ ಮತದಾನ ಅಂತಿಮ ಹಂತದಲ್ಲಿದೆ. ಅದು ಮುಗಿಯುತ್ತಿದ್ದಂತೆಯೇ ಎಲ್ಲರ ಕಣ್ಣು ಜೂನ್‌ 4ರ ಫಲಿತಾಂಶದ ಮೇಲೆ ನೆಟ್ಟಿದೆ. ಅದಕ್ಕೆ ಮಂಗಳವಾರದವರೆಗೆ ಕಾಯಬೇಕು. ಮಂಗಳವಾರ ಸಂಜೆಯ ಹೊತ್ತಿಗೆ ಸ್ಪಷ್ಟಾತಿಸ್ಪಷ್ಟ ಚಿತ್ರಣ ಸಿಗಲಿದೆ. ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟವಾದ ಟ್ರೆಂಡ್‌ ಸಿಗಲಿದೆ. ಈ ಚುನಾವಣೆಗೂ ಹಲವು ಸಮೀಕ್ಷೆಗಳು ನಡೆದಿವೆ. ಯಾವ ಫಲಿತಾಂಶ ನಿಜವಾಗಲಿದೆ.. ಎಂಬ ಕುತೂಹಲ ಎಲ್ಲರಲ್ಲೂ ಇದೆ. ಅದು ಗೊತ್ತಾಗುವುದು ಮಂಗಳವಾರವೇ ಆದರೂ.. ಈ ಹಿಂದಿನ ಚುನಾವಣೆ ಸಮೀಕ್ಷೆಗಳು ಏನು ಹೇಳಿದ್ದವು.. ಏನು ಫಲಿತಾಂಶ ಬಂದಿತ್ತು ಎಂಬ ಕುತೂಹಲಕ್ಕೆ ಉತ್ತರ ಹುಡುಕೋಣ.

2014ರಲ್ಲಿ ನಡೆದ ಚುನಾವಣೆಯಲ್ಲಿ ಎನ್‌ʻಡಿಎ ಅಧಿಕಾರಕ್ಕೆ ಬರುತ್ತದೆ ಎಂದು ಎಲ್ಲ ಸಮೀಕ್ಷೆಗಳೂ ಹೇಳಿದ್ದವು. ಆದರೆ, ಬಿಜೆಪಿ ಒಂದೇ ಪಕ್ಷಕ್ಕೆ 272+ ಅಂದ್ರೆ ಸ್ಪಷ್ಟ ಬಹುಮತ ಗಳಿಸುತ್ತದೆ ಎಂದು ಲೆಕ್ಕ ಹಾಕಿದ್ದ ಏಕೈಕ ಸಮೀಕ್ಷೆ ಟುಡೇಸ್‌ ಚಾಣಕ್ಯ ಮಾತ್ರ. ಉಳಿದಂತೆ ಎನ್‌ʻಡಿಎ ಒಕ್ಕೂಟ 257-300+ ಎಂದು ಭವಿಷ್ಯ ನುಡಿದಿದ್ದವು. ಆದರೆ, ಫಲಿತಾಂಶ ಬಂದಾಗ ಅತ್ಯಂತ ಸ್ಪಷ್ಟವಾಗಿ ಏಕಾಂಗಿಯಾಗಿ ಅಧಿಕಾರ ನಡೆಸುವಷ್ಟು ಸ್ಪಷ್ಟ ಬಹುಮತ ಗಳಿಸಿತ್ತು. 2014ಕ್ಕಿಂತ 2019ರ ಸಮೀಕ್ಷೆ ಮತ್ತು ರಿಸಲ್ಟ್‌ ಎರಡೂ ಇಂಟ್ರೆಸ್ಟಿಂಗ್.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಇನ್ನು 2019ರಲ್ಲಿ ಸಮೀಕ್ಷೆಗಳು ಎನ್‌ʻಡಿಎ ಒಕ್ಕೂಟದ ಸಮ್ಮಿಶ್ರ ಸರ್ಕಾರಕ್ಕೇ ಹೆಚ್ಚು ಮತ ನೀಡಿದ್ದವು. ಯುಪಿಎ ಒಕ್ಕೂಟ ಅಧಿಕಾರಕ್ಕೆ ಬರುತ್ತದೆ ಎಂದು ಯಾವ ಸಮೀಕ್ಷೆಗಳೂ ಹೇಳಲಿಲ್ಲವಾದರೂ.. ಏಕಾಂಗಿಯಾಗಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದ್ದು ಕೆಲವೇ ಕೆಲವು ಸಮೀಕ್ಷೆಗಳು.‌

ಸಮೀಕ್ಷೆಗಳ ಲೆಕ್ಕವನೂ ಮೀರಿ ಒಟ್ಟು 543 ಸ್ಥಾನಗಳಲ್ಲಿ ಬಿಜೆಪಿ ಏಕಾಂಗಿಯಾಗಿ 303 ಸ್ಥಾನ ಗಳಿಸಿದ್ದರೆ, ಕಾಂಗ್ರೆಸ್ ನೇತೃತ್ವದ ಯುಪಿಎ 90 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕೇಂದ್ರದಲ್ಲಿ ಸರ್ಕಾರ ರಚಿಸಲು, ಒಂದು ಪಕ್ಷ ಅಥವಾ ಪಕ್ಷಗಳ ಒಕ್ಕೂಟ ಲೋಕಸಭೆಯಲ್ಲಿ ಕನಿಷ್ಠ 272 ಸ್ಥಾನಗಳಲ್ಲಿ ಗೆದ್ದಿರಬೇಕು.

ಯಾವ ಸಮೀಕ್ಷೆ ಪಕ್ಕಾ ರಿಸಲ್ಟ್‌ ಕೊಟ್ಟಿತ್ತು..?

1. ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ
ಬಿಜೆಪಿ ನೇತೃತ್ವದ ಎನ್‌ಡಿಎಗೆ 339 ರಿಂದ 365 ಸ್ಥಾನಗಳನ್ನು ನೀಡಿತ್ತು.
ಯುಪಿಎ 77-108 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಿತ್ತು.

2. ನ್ಯೂಸ್ 24-ಟುಡೇಸ್ ಚಾಣಕ್ಯ
ಎನ್‌ಡಿಎ ಸುಮಾರು 350 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿತ್ತು (+/- 14). ಇದೇ ವೇಳೆ ಯುಪಿಎ – 95 (+/-9) ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿತ್ತು. ಬಿಜೆಪಿಗೆ 300+ ಸ್ಥಾನಗಳನ್ನು ನೀಡಿದ್ದ ಏಕೈಕ ಸಮೀಕ್ಷೆ ಇದು.

3. ನ್ಯೂಸ್‌ 18- ಐಪಿಎಸ್‌ಒಎಸ್‌
ಎನ್‌ಡಿಎಗೆ 336 ಸ್ಥಾನಗಳು ಸಿಗಲಿವೆ ಎಂದು ಭವಿಷ್ಯ ನುಡಿದಿತ್ತು. ಯುಪಿಎಗೆ 82 ಸ್ಥಾನಗಳು ಹಾಗೂ ಇತರ ಪಕ್ಷಗಳಿಗೆ 124 ಸ್ಥಾನಗಳನ್ನು ನೀಡಿತ್ತು.

4. ಟೈಮ್ಸ್ ನೌ-ವಿಎಂಆರ್
ಎನ್‌ಡಿಎಗೆ ಸುಮಾರು 306 ಸ್ಥಾನ ಹಾಗೂ ಯುಪಿಎ 132 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿತ್ತು. 3 ಸ್ಥಾನಗಳು ಆಚೀಚೆ ಆಗಬಹುದು ಎಂದು ತಿಳಿಸಿತ್ತು.

5. ಇಂಡಿಯಾ ಟಿವಿ-ಸಿಎನ್‌ಎಕ್ಸ್
ಎನ್‌ಡಿಎಗೆ 300 ಸ್ಥಾನಗಳು (+/- 10 ಸೀಟುಗಳು) ಮತ್ತು ಯುಪಿಎಗೆ 120 ಸ್ಥಾನಗಳು (+/-5) ಬರಲಿವೆ ಎಂದು ಅಂದಾಜಿಸಿತ್ತು

6. ಎಬಿಪಿ-ಸಿಎಸ್‌ಡಿಎಸ್
ಎನ್‌ಡಿಎಗೆ 277 ಸ್ಥಾನಗಳು ಮತ್ತು ಯುಪಿಎಗೆ 130 ಸ್ಥಾನಗಳನ್ನು ಊಹಿಸಿತ್ತು.

7. ಇಂಡಿಯಾ ನ್ಯೂಸ್-ಪೋಲ್‌ಸ್ಟ್ರಾಟ್
ಎನ್‌ಡಿಎಗೆ 287 ಮತ್ತು ಯುಪಿಎಗೆ 128 ಸ್ಥಾನಗಳನ್ನು ಕೊಟ್ಟಿತ್ತು.

8. ಸಿವೋಟರ್
ಎನ್‌ಡಿಎಗೆ 287, ಯುಪಿಎಗೆ 128 ಸ್ಥಾನಗಳನ್ನು ನೀಡಿತ್ತು.

ಕೊನೆಗೆ ಫಲಿತಾಂಶ ಬಂದಾಗ ಬಿಜೆಪಿ 303 ಹಾಗೂ ಬಿಜೆಪಿ ನೇತೃತ್ವದ ಎನ್‌ʻಡಿಎ 330+ ಸ್ಥಾನಗಳನ್ನು ಗಳಿಸಿತ್ತು. ವಿಶೇಷವೆಂದರೆ ಒಕ್ಕೂಟದಲ್ಲಿದ್ದ ಶಿವಸೇನೆ ಹಾಗೂ ಜೆಡಿಯು ಒಕ್ಕೂಟದಿಂದ ಹೊರಹೋದರೂ.. ಎನ್‌ʻಡಿಎ ಸರ್ಕಾರ ಅಲುಗಾಡಲಿಲ್ಲ.

Tags: #ಸಮೀಕ್ಷೆ #ಕಾಂಗ್ರೆಸ್ #ಚುನಾವಣಾಫಲಿತಾಂಶ #ಬಿಜೆಪಿ #Survey #Congress #ElectionResult #BJP
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.