ರಾಜ್ಯ ಸರ್ಕಾರದ ಗ್ಯಾರಂಟಿ 1..2..3..4..5..ಗೆ ಜನ ಏನು ಹೇಳಿದ್ದಾರೆ. ಈ ಬಗ್ಗೆ (edina.com) ಸಮೀಕ್ಷೆಯೊಂದು ಹೊರಬಿದ್ದಿದೆ. ಒಂದು ಕಡೆ ಟೀಕೆ ಎದುರಿಸುತ್ತಲೇ ಇರುವ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಕಾಂಗ್ರೆಸ್ ಸರ್ಕಾರದ ಬಗ್ಗೆ ಜನ ಏನು ಹೇಳಿದ್ದಾರೆ ಎಂಬ ಖಚಿತ ಸಮೀಕ್ಷೆ ಇದು. ಶಕ್ತಿ ಯೋಜನೆ ಪ್ರಶ್ನಿಸಿ ಖಾಸಗಿ ಬಸ್/ಆಟೋ/ಟ್ಯಾಕ್ಸಿ ಚಾಲಕರು ಮುಷ್ಕರಕ್ಕೆ ಇಳಿದಿದ್ದಾರೆ. ಗೃಹಜ್ಯೋತಿಯ ಬಗ್ಗೆಯೂ ಟೀಕೆಗಳಿವೆ. ಅನ್ನಭಾಗ್ಯದ ಅಕ್ಕಿ ವಿತರಣೆಯಂತೂ ರಂಪರಾಡಿಯಾಗಿ ಹೋಯ್ತು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಮಧ್ಯೆ ಜಟಾಪಟಿಯೇ ನಡೆದು ಹೋಯ್ತು.
ಹೀಗಿದ್ದರೂ.. ಜನ ಮಾತ್ರ ಗ್ಯಾರಂಟಿ ಯೋಜನೆಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಕನ್ನಡ ಡಿಜಿಟಲ್ ಮೀಡಿಯಾ (Digital media) ಈ ದಿನ ಡಾಟ್ ಕಾಂ (edina.com) ತಿಳಿಸಿದೆ. ?: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಡಳಿತ ಕಾರ್ಯಕ್ಷಮತೆ ಹೇಗಿದೆ? ಗ್ಯಾರಂಟಿ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಜಾರಿಗೆ ತರುವ ನಂಬಿಕೆ ಇದೆಯೇ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಮುಂದಿಟ್ಟು ಸಮೀಕ್ಷೆ ಮಾಡಲಾಗಿದೆ.
ರಾಜ್ಯದ 39 ವಿಧಾನಸಭಾ ಕ್ಷೇತ್ರದ 152 ಬೂತ್ಗಳಲ್ಲಿ 2455 ಜನರನ್ನು (edina.com randdom) ಆಗಿ ಆಯ್ಕೆ ಮಾಡಿ ಸಮೀಕ್ಷೆ ಮಾಡಲಾಗಿದೆ. ಪ್ರತಿ ಕ್ಷೇತ್ರದಲ್ಲಿ 60 ಜನರ ಪೈಕಿ ಶೇ.55.2 ಪುರುಷರು, ಶೇ.44.8 ಮಹಿಳೆಯರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಶೇ.81 ಗ್ರಾಮೀಣ ಪ್ರದೇಶ, ಶೇ.19ರಷ್ಟುನಗರ ಕ್ಷೇತ್ರಗಳಲ್ಲಿ ಸಮೀಕ್ಷೆ ಮಾಡಲಾಗಿದೆ. ಅನಕ್ಷರಸ್ಥರಿಂದ ಹಿಡಿದು ಸ್ನಾತಕೋತ್ತರ ಪದವೀಧರರು ಪ್ರತಿಕ್ರಿಯಿಸಿದ್ದಾರೆ. ಶೇ.22 ಇತರೆ ಹಿಂದುಳಿದ ವರ್ಗ, ಶೇ.18 ಪರಿಶಿಷ್ಟರು, ಶೇ.10 ಲಿಂಗಾಯತರು, ಶೇ.13 ಒಕ್ಕಲಿಗರು ಹಾಗೂ ಶೇ.11 ಮುಸ್ಲಿಮರು (edina.com) ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಇವರೆಲ್ಲರೂ ಕೊಟ್ಟಿರುವ ಉತ್ತರವನ್ನು ತೆಗೆದುಕೊಂಡು ಈ ಸಮೀಕ್ಷೆ ರೂಪಿಸಲಾಗಿದೆ.
ಈ ದಿನ ಸಮೀಕ್ಷೆ ಈ ಪ್ರಕಾರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಶೇ.69ರಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಶೇ.42ರಷ್ಟು ಜನ ಸಂಪೂರ್ಣ ತೃಪ್ತಿ, ಶೇ.27ರಷ್ಟು ಜನರು ಸ್ವಲ್ಪ ಮಟ್ಟಿಗೆ ತೃಪ್ತಿ ಹಾಗೂ ಶೇ.6ರಷ್ಟುಮಂದಿ ಸಂಪೂರ್ಣ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಒಟ್ಟು ಪ್ರತಿಕ್ರಿಯಿಸಿದ ಮಹಿಳೆಯರಲ್ಲಿ ಶೇ.70ರಷ್ಟು ಮಹಿಳೆಯರು ಸಿದ್ದರಾಮಯ್ಯಗೆ ಜೈ ಎಂದಿದ್ದಾರೆ.
ಇನ್ನೊಂದು ಮಾದರಿಯಲ್ಲಿ ಐದಕ್ಕೆ ಐದೂ ಗ್ಯಾರಂಟಿಗಳನ್ನು ಸರ್ಕಾರ ಜಾರಿಗೊಳಿಸುತ್ತದೆಯೇ ಎಂಬ ಪ್ರಶ್ನೆಗೆ ವಿಶ್ವಾಸವಿದೆ ಎಂದು ಶೇ.61 ಮಂದಿ ಹೇಳಿದರೆ, ಶೇ.16ರಷ್ಟು ಮಂದಿ ವಿಶ್ವಾಸ ಇಲ್ಲ ಎಂದಿದ್ದಾರೆ. ಶೇ.23ರಷ್ಟುಜನ ಈಗಲೇ ಹೇಳಲು ಅಸಾಧ್ಯ ಎಂದಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ಪುರುಷರಿಗಿಂತಲೂ ಮಹಿಳೆಯರಿಗೆ ಹೆಚ್ಚು ನಂಬಿಕೆ ಇರುವುದು ಸಮೀಕ್ಷೆಯಲ್ಲಿ ವ್ಯಕ್ತವಾದ ಅಂಶ.
ಇನ್ನು ಸರ್ಕಾರ ಯಾವುದಕ್ಕೆ ಆದ್ಯತೆ ನೀಡಬೇಕು ಎಂಬ ಪ್ರಶ್ನೆಗೆ ಸಮೀಕ್ಷೆಯಲ್ಲಿ ಭಾಗಿಯಾದ ಶೇ.50ರಷ್ಟುಜನರು ಗ್ಯಾರಂಟಿ ಕಾರ್ಯಕ್ರಮ ಈಡೇರಿಕೆಗೆ ಮೊದಲ ಆದ್ಯತೆ ನೀಡಬೇಕು, ನಂತರದ ಆದ್ಯತೆ ಬೆಲೆ ಏರಿಕೆ ನಿಯಂತ್ರಣಕ್ಕೆ ಕೊಡಬೇಕು ಎಂದು ಹೇಳಿದ್ದಾರೆ. ಮೂರನೇ ಆದ್ಯತೆ ಭ್ರಷ್ಟಾಚಾರ ತಡೆ, ನಾಲ್ಕನೆ ಆದ್ಯತೆ ಸರ್ಕಾರಿ ಶಾಲೆ, ಆಸ್ಪತ್ರೆಗಳ ಸುಧಾರಣೆ, ಐದನೇ ಆದ್ಯತೆ ಉದ್ಯೋಗ ಸೃಷ್ಟಿ, ಆರನೆ ಆದ್ಯತೆ ಕೋಮು ಸೌಹಾರ್ದತೆ ಕಾಪಾಡುವುದು ಹಾಗೂ 7ನೇ ಹಾಗೂ ಕೊನೆಯ ಆದ್ಯತೆಯಾಗಿ ಕಾನೂನು ಸುವ್ಯವಸ್ಥೆಯನ್ನು ಗುರುತಿಸಿದ್ದಾರೆ.
ಗ್ಯಾರಂಟಿ (Guranteee) ಯೋಜನೆಗಳ ಅಗತ್ಯ ಇತ್ತಾ ಎಂಬ ಪ್ರಶ್ನೆಗೆ ಗ್ಯಾರಂಟಿ ಯೋಜನೆ ಜಾರಿ ಅಗತ್ಯವಿತ್ತು ಎಂದಿರುವುದು ಶೇ.68ರಷ್ಟು ಜನ. ಶೇ.24ರಷ್ಟುಜನ ಗ್ಯಾರಂಟಿ ಯೋಜನೆ ವಿರೋಧಿಸಿದ್ದಾರೆ. ಶೇ.8ರಷ್ಟು ಜನ ಗೊತ್ತಿಲ್ಲ ಎಂದಿದ್ದಾರೆ. ಶೇ.70 ಸಣ್ಣ ಉದ್ಯಮಿಗಳು, ಆಟೋ ಚಾಲಕರು, ಅಂಗಡಿ ಮಾಲೀಕರು, ಉಬರ್/ಸ್ವಿಗ್ಗಿ ಚಾಲಕರಲ್ಲಿ ಶೇ.64 ಮಂದಿ ಯೋಜನೆಯನ್ನು ಸ್ವಾಗತ ಮಾಡಿದ್ದಾರೆ. ಯೋಜನೆ ಸ್ವಾಗತ ಮಾಡಿದವರಲ್ಲಿ ಹಿಂದೂಗಳಿಗಿಂತ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರೇ ಹೆಚ್ಚಿರುವುದು ವಿಶೇಷ.
ಯೋಜನೆ ಜಾರಿ ಮಾಡುತ್ತಿರುವ ಬಗ್ಗೆ, ಸರಿಯಾಗಿ ಮಾಡುತ್ತಿರುವ ಬಗ್ಗೆ ತೃಪ್ತಿ ಹಾಗೂ ಅತೃಪ್ತಿ ಎರಡೂ ಹೆಚ್ಚೂ ಕಡಿಮೆ ಸಮನಾಗಿದೆ. ಸರಿಯಾಗಿದೆ ಎನ್ನುತ್ತಿರುವವರು ಶೇ.42.56. ಸರಿಯಾಗಿಲ್ಲ ಎನ್ನುತ್ತಿರುವವರು ಶೇ.42.80. ಶೇ. 14.6 ಜನರ ಪ್ರಕಾರ ಗ್ಯಾರಂಟಿ ಕಲ್ಪನೆಯೇ ಒಂದು ವಿಕೃತಿ.
ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ನೀಡದೇ ಇದ್ದದ್ದು ತಪ್ಪು ಎನ್ನುವುದು ಶೇ.57 ಜನರ ಅಭಿಪ್ರಾಯವಾಗಿದೆ. ಶಕ್ತಿ ಯೋಜನೆಗೆ ಭರಪೂರ ಮೆಚ್ಚುಗೆ ಸಿಕ್ಕಿದೆ. ಶೇ.80ರಷ್ಟು ಮಹಿಳೆಯರು ಖುಷಿಯಾಗಿದ್ದರೆ, ಶೇ.16ರಷ್ಟು ಮಾತ್ರ ಸಹಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಸರ್ಕಾರ ಕೊಡುವುದು ಬಿಟ್ಟಿಯೂ ಅಲ್ಲ. ಉಚಿತವೂ ಅಲ್ಲ. ಇದು ನಮ್ಮ ಹಕ್ಕು ಎಂದವರ ಸಂಖ್ಯೆ ದೊಡ್ಡದಾಗಿದೆ.



