ರೇಣುಕಾಸ್ವಾಮಿ ಮೇಲಿನ ಕ್ರೌರ್ಯಕಾಂಡ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಇದೀಗ ದರ್ಶನ್ ಅವರನ್ನು ಕಾಪಾಡುವ ಏಕೈಕ ಶಕ್ತಿದೇವತೆ ಎಂದರೆ ಅದು ವಿಜಯಲಕ್ಷ್ಮಿ ದರ್ಶನ್ ಮಾತ್ರ.. ಏಕೆಂದರೆ ನ್ಯಾಯಾಲಯದ ಹೊರಗೆ ದರ್ಶನ್ ಅವರನ್ನು ರಕ್ಷಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವ ಹೆಣ್ಣು ಮಗಳು ವಿಜಯಲಕ್ಷ್ಮಿ. ಎರಡು ದಶಕಗಳನ್ನೂ ಮೀರಿದ ದಾಂಪತ್ಯದಲ್ಲಿ ವಿಜಯಲಕ್ಷ್ಮಿ, ದರ್ಶನ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಆದರೆ, ದರ್ಶನ್ ಈಗ ಜೈಲು ಸೇರಿರುವುದು ಪವಿತ್ರಾ ಗೌಡ ಅವರನ್ನು ರೇಣುಕಾಸ್ವಾಮಿ ಅಸಹ್ಯವಾಗಿ ಕಮೆಂಟ್ ಹಾಕಿ, ಮೆಸೇಜ್ ಮಾಡಿದ್ದಕ್ಕಾಗಿ ಕೊಲೆ ಮಾಡಿರುವ ಆರೋಪದಲ್ಲಿ.
ಪವಿತ್ರಾ ಗೌಡ ಅವರನ್ನು ಪೊಲೀಸರು ಆರಂಭದಲ್ಲಿ ದರ್ಶನ್ ಅವರ ಪತ್ನಿ ಎಂದೇ ಸಂಭೋದಿಸಿದ್ದರು. ಹೀಗಾಗಿ ವಿಜಯಲಕ್ಷ್ಮಿ ದರ್ಶನ್ ಬಹಿರಂಗವಾಗಿ ಹಾಗೂ ಪೊಲೀಸರಿಗೆ ಪತ್ರ ಬರೆದು, ಇದು ತಪ್ಪು. ದರ್ಶನ್ ಅವರ ಪತ್ನಿ ನಾನು, ಧರ್ಮಸ್ಥಳದಲ್ಲಿ ಮದುವೆಯಾಗಿದ್ದೇವೆ. ಪವಿತ್ರಾ ಗೌಡ ಅವರನ್ನು, ದರ್ಶನ್ ಅವರ ಪತ್ನಿ ಎಂದು ಕರೆಯಬೇಡಿ ಎಂದೆಲ್ಲ ಕೇಳಿಕೊಂಡಿದ್ದರು. ಇದೀಗ ಚಾರ್ಜ್‌ಶೀಟ್ ಹೊರಬಂದಿದೆ. ಚಾರ್ಜ್‌ಶೀಟ್‌ನಲ್ಲಿ ಏನಿದೆ ಎಂಬ ಕುತೂಹಲ ಎಲ್ಲರಿಗೂ ಇದೆ.
ಪೊಲೀಸ್ರು ಕೋರ್ಟ್‌ಗೆ ಸಲ್ಲಿಕೆ ಮಾಡಿರೋ 3991 ಪುಟಗಳ ಚಾರ್ಜ್‌ಶೀಟ್‌ನಲ್ಲಿ ದರ್ಶನ್‌ಗೆ ಪವಿತ್ರಾ ಫ್ರೆಂಡಾ? ಪ್ರಿಯತಮೆಯಾ? ಇಲ್ಲವೇ ಪತ್ನಿಯಾ? ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪ್ರತಿಯೊಬ್ಬ ಆರೋಪಿಯಿಂದಲೂ ಪ್ರತ್ಯೇಕ ಹೇಳಿಕೆಯನ್ನು ಪಡೆದಿರುವ ಪೊಲೀಸರು ದರ್ಶನ್‌ಗೆ ಪೊಲೀಸ್ ತನಿಖಾಧಿಕಾರಿಗಳು ನಿಮ್ಗೂ ಪವಿತ್ರಾಗೂ ಏನು ಸಂಬಂಧ? ಅಂತಾ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ದರ್ಶನ್ ಕೊಟ್ಟ ಉತ್ತರ ಏನು ಗೊತ್ತಾ?. ತಾನು ಮತ್ತು ಪವಿತ್ರಾ ಗೌಡ ಕೆಲವು ವರ್ಷಗಳಿಂದ ಲಿವಿಂಗ್ ಇನ್ ರಿಲೇಷನ್ ಶಿಪ್‌ನಲ್ಲಿದ್ದೇವೆ ಅಂದಿದ್ದಾರೆ. ಇಂತಾ ಒಂದು ಹೇಳಿಕೆಯನ್ನು ಸ್ವತಃ ದರ್ಶನ್ ಕೊಟ್ಟಿದ್ದಾರೆ. ಇದ್ರಿಂದ ದರ್ಶನ್‌ಗೂ ಪವಿತ್ರಾಗೌಡಗೂ ಏನ್ ಬಂಧ ಅನ್ನೋದು ಚಾರ್ಜ್‌ಶೀಟ್‌ನಲ್ಲಿ ಬಟಾಬಯಲಾಗಿದೆ.
ಅಷ್ಟೇ ಅಲ್ಲ, ರೇಣುಕಾಸ್ವಾಮಿಯ ಅಶ್ಲೀಲ ಸಂದೇಶ, ಫೋಟೋ ನೋಡಿದ ದರ್ಶನ್ ನನ್ ಹೆಂಡ್ತೀನೇ ಬೇಕೇನೋ.. ಸೂ.. ಮಗನೇ.. ಎಂದು ಬೈದು ಹಲ್ಲೆ ಮಾಡಿರುವುದು ಕೂಡಾ ಚಾರ್ಜ್‌ಶೀಟಿನಲ್ಲಿದೆ. ಪವಿತ್ರಾ ಗೌಡ ಅವರ ಜೊತೆಗಿನ ಈ ಸಂಬಂಧದ ಕಾರಣಕ್ಕಾಗಿಯೇ ದರ್ಶನ್ ಕ್ರುದ್ಧನಾಗಿ ರೇಣುಕಾಸ್ವಾಮಿಗೆ ಗತಿ ಕಾಣಿಸ್ಬೇಕು ಅಂತಾ ನಿರ್ಧಾರಕ್ಕೆ ಬಂದಿದ್ದು. ರೇಣುಕಾಸ್ವಾಮಿ ಮೇಲೆ ಭೀಕರ ಹಲ್ಲೆ ಮಾಡ್ಬೇಕು. ಸಾಯಿಸ್ಬೇಕು ಅನ್ನೋ ಪ್ಲಾನ್ ಇತ್ತೋ ಇಲ್ವೋ? ಆದ್ರೆ, ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿಯನ್ನು ಕರ್ಕೊಂಡ್ ಬರೋ ಪ್ಲಾನ್ ಮಾತ್ರ ಪಕ್ಕಾ ಆಗಿತ್ತು. ದರ್ಶನ್ ಏನ್ ಮಾಡ್ತಾರೆ ಅಂದ್ರೆ, ರೇಣುಕಾಸ್ವಾಮಿ ಎಲ್ಲಿಯವನು? ಏನ್ ಮಾಡ್ತಾನೆ? ಅನ್ನೋ ಮಾಹಿತಿ ತಿಳ್ಕೊತಾರೆ. ತಕ್ಷಣವೇ ಚಿತ್ರದುರ್ಗದ ದರ್ಶನ್ ಸಂಘದ ಅಧ್ಯಕ್ಷ ರಘುಗೆ ಕಾಲ್ ಮಾಡ್ತಾರೆ. ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡ್ಕೊಂಡ್ ಬೆಂಗಳೂರಿಗೆ ಬರುವಂತೆ ಆಜ್ಞೆ ಮಾಡ್ತಾರೆ. ಹೇ ತಮ್ ಬಾಸ್ ಹೇಳಿದ್ದಾರೆ ಅಂತಾ ರಘು ಸ್ವಾಮಿನಿಷ್ಠೆ ತೋರಿಸಲು ಮುಂದಾಗ್ತಾರೆ. ಹಾಗೇ ರಘು ಜೊತೆ ಅನುಕುಮಾರ್ ಮತ್ತು ಜಗ್ಗ ಸೇರಿಕೊಳ್ತಾರೆ. ಅವರೆಲ್ಲ ಸೇರಿ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡ್ಕೊಂಡ್ ಪಟ್ಟಣಗೆರೆ ಶೆಡ್ಗೆ ಕರ್ಕೊಂಡ್ ಬರ್ತಾರೆ. ಇದು ಪವಿತ್ರಾಗಾಗಿ ದರ್ಶನ್ ಮಾಡಿಸಿರೋ ಕಿಡ್ನಾಪ್. ಪೊಲೀಸ್ ತನಿಖೆಯಿಂದ ಇದು ಗೊತ್ತಾಗಿದೆ.
ಒಟ್ಟಿನಲ್ಲಿ ಪತ್ನಿಯಾಗಿ ವಿಜಯಲಕ್ಷ್ಮಿ ಇದ್ದರೂ, ಪವಿತ್ರಾ ಗೌಡ ಅವರ ಜೊತೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದೇ ಈ ಎಲ್ಲ ಪರಿಸ್ಥಿತಿಗೂ ಕಾರಣ ಎನ್ನುವುದು ಚಾರ್ಜ್‌ಶೀಟ್ ಹೇಳ್ತಿರೋ ಸತ್ಯ.



